ಶಾಂತಿ ವಿಧಿಗಳನ್ನು ಏಕೆ ಮಾಡಬೇಕು?

ಇಳಿವಯಸ್ಸಿನಲ್ಲಿ ಇಂದ್ರಿಯಗಳ ಕ್ಷಮತೆ ಕಡಿಮೆಯಾಗತೊಡಗುತ್ತದೆ, ಉದಾ. ಕಿವಿಗಳು ಕೇಳಿಸುವುದು ಕಡಿಮೆಯಾಗುವುದು, ಕಣ್ಣು ಸರಿಯಾಗಿ ಕಾಣಿಸದಿರುವುದು, ವಿವಿಧ ರೋಗಗಳು ನಿರ್ಮಾಣವಾಗುವುದು. ದೇವತೆಗಳ ಕೃಪೆಯಿಂದ ಇವುಗಳ ನಿವಾರಣೆಯಾಗಿ ಉಳಿದ ಆಯುಷ್ಯ ಸುಖಕರವಾಗಬೇಕೆಂದು ೫೦ ರಿಂದ ೧೦೦ ವರ್ಷದ ವರೆಗೆ ಪ್ರತಿ ೫ ವರ್ಷಕ್ಕೊಮ್ಮೆ ಶಾಂತಿ ವಿಧಿ ಮಾಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.