ಬ್ರಿಟೀಷರು ಭಾರತವನ್ನು ಕೊಳ್ಳೆ ಹೊಡೆದು ಸಮೃದ್ಧರಾದರು !

ಬ್ರಿಟನ್ ಮೇಲೆ ಕಾಂಗ್ರೆಸ್ ಸಂಸದ ಶಶೀ ತರೂರ್ ಟೀಕೆ ಭಾರತವನ್ನು ಆಂಗ್ಲರಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ಸಿಗರು ಕೊಳ್ಳೆ ಹೊಡೆದಿದ್ದಾರೆ. ಆದ್ದರಿಂದ ಥರೂರರಂತೆ ಭಾರತೀಯರು ಕಾಂಗ್ರೆಸ್ಸಿನ ಬಗ್ಗೆ ವಿಚಾರ ಮಾಡಿದರೆ ಅದರಲ್ಲಿ ಆಶ್ಚರ್ಯವಿಲ್ಲ !

ನವದೆಹಲಿ – ಬ್ರಿಟೀಷರಿಗೆ ಔದ್ಯೋಗಿಕ ಕ್ರಾಂತಿ ಹಾಗೂ ಸಮೃದ್ಧಿಗೋಸ್ಕರ ಬೇಕಾದ ಸಂಪತ್ತನ್ನು ಅವರು ತಮ್ಮ ವಸಾಹತ್ತಿನಿಂದ ಕೊಳ್ಳೆಹೊಡೆದು ಪಡೆದುಕೊಂಡರು. ಬ್ರಿಟೀಷರು ತಮ್ಮ  ಈ ಇತಿಹಾಸವನ್ನು ಹೊಸ ಪೀಳಿಗೆಗೆ ಏಕೆ ಕಲಿಸಿ ಕೊಡುವುದಿಲ್ಲ ?, ಎಂದು ಕಾಂಗ್ರೆಸ್ಸಿನ ಸಂಸದರಾದ ಶಶಿ ತರೂರ್‌ರವರು ಟೀಕಿಸಿದ್ದಾರೆ. ಥರೂರ್‌ರವರು ತಮ್ಮ ಬರುವ ‘ಇನ್‌ಗ್ಲೋರಿಯಸ್ ಎಮ್‌ಪಾಯರ್ ಎಂಬ ಪುಸ್ತಕದ ಬಗ್ಗೆ ಮಾತನಾಡುವಾಗ ಹೇಳಿದರು, “೧೮ ನೇ ಶತಮಾನದ ಪ್ರಾರಂಭದಲ್ಲಿ ಬ್ರಿಟೀಷರು ಜಗತ್ತಿನಲ್ಲಿಯೇ ಶ್ರೀಮಂತ ದೇಶವಾದ ಭಾರತಕ್ಕೆ ಬಂದರು ಹಾಗೂ ೨೦೦ ವರ್ಷಗಳ ತನಕ ಕೊಳ್ಳೆ ಹೊಡೆದು ಅದನ್ನು ಜಗತ್ತಿನಲ್ಲಿಯೇ ಎಲ್ಲದ್ದಕ್ಕಿಂತ ಬಡದೇಶವನ್ನಾಗಿ ಮಾಡಿದರು. ಬ್ರಿಟೀಷರು ಅದರ ನಷ್ಟವನ್ನು ತುಂಬಿಸಿ ಕೊಡಲಿ. (ಅಧಿಕಾರವಿರುವಾಗ ಇದನ್ನು ಏಕೆ ಹೇಳಲಿಲ್ಲ ? ಆಗಿನ ಪ್ರಧಾನಮಂತ್ರಿಗಳಾದ ಡಾ. ಮನಮೋಹನ್ ಸಿಂಗ್‌ರವರು ಬ್ರಿಟನ್‌ಗೆ ಹೋಗಿ ಬ್ರಿಟೀಷರನ್ನು ಏಕೆ ಹಾಡಿ ಹೊಗಳಿದರು ? – ಸಂಪಾದಕರು) ಈ ವಿಷಯದಲ್ಲಿ ತರೂರ್‌ರವರು ಆಕ್ಸ್‌ಫರ್ಡ ವಿಶ್ವವಿದ್ಯಾಲಯದಲ್ಲಿ ಒಂದು ವಿಸ್ತೃತ ವ್ಯಾಖ್ಯಾನವನ್ನೂ ಮಾಡಿದ್ದಾರೆ. ‘ಈಗ ಪರಿಸ್ಥಿತಿ ಬದಲಾಗಿದ್ದು ಭಾರತದ ಅರ್ಥವ್ಯವಸ್ಥೆಯು ಬ್ರಿಟನ್‌ಗೆ ಸಮಾನವಾಗಿದೆ, ಎಂದೂ ತರೂರ್‌ರವರು ಹೇಳಿದ್ದಾರೆ.