ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಪ್ರಾಚೀನ ಮೂರ್ತಿಯನ್ನು ಪುರಾತತ್ತ್ವ ಇಲಾಖೆಯು ಸಂರಕ್ಷಿಸಲು ಅಸಮರ್ಥವಾಗಿದ್ದರೆ, ಆ ವಿಭಾಗವನ್ನು ವಿಸರ್ಜಿಸಿ !

ಉತ್ತರ ಪ್ರದೇಶದಲ್ಲಿ ಕೋಟಿಗಟ್ಟಲೆ ಮೌಲ್ಯದ ಪುರಾತನ ಮೂರ್ತಿಗಳು ಹಾಗೂ ಹಲ್ಲಿಗಳ ಕಳ್ಳ ಸಾಗಾಣಿಕೆ ಬೆಳಕಿಗೆ ಬಂದಿದೆ !

ನವದೆಹಲಿ – ಶ್ರೀ ವಿಷ್ಣುವಿನ ೨ ಕೋಟಿ ರೂಪಾಯಿ ಮೌಲ್ಯದ ೧ ಸಾವಿರ ವರ್ಷ ಪುರಾತನ ಮೂರ್ತಿ ಹಾಗೂ ದುರ್ಲಭ ಜಾತಿಯ ೩ ಗೀಕೋ ಹಲ್ಲಿಗಳನ್ನು ಪೊಲೀಸರು ಜಪ್ತಿ ಮಾಡಿದರು. ಈ ಪ್ರಕರಣದಲ್ಲಿ ಇಮೈನುಯಲ್ ಎಂಬ ಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಯಿತು. ಒಂದು ಗೌಪ್ಯ ಮಾಹಿತಿಯ ಆಧಾರದ ಮೇಲೆ ಬಂಗಾಲದ ಪೊಲೀಸರು ಹಾಗೂ ಗಡಿರೇಖಾ ದಳವು ಕಿಶನ್‌ಗಂಜ್‌ನಲ್ಲಿ ಸಂಯುಕ್ತ ಅಭಿಯಾನವನ್ನು ನಡೆಸಿತು. ಆ ಸಮಯದಲ್ಲಿ ಒಂದು ಟಾಟಾ ಸುಮೋ ವಾಹನದ ತಪಾಸಣೆ ಮಾಡಲಾಯಿತು. ಈ ವಾಹನದಿಂದ ಅವರು ೨ ಕೋಟಿ ರೂಪಾಯಿ ಮೌಲ್ಯದ ೪ ಕಿಲೋ ತೂಕದ ಶ್ರೀ ವಿಷ್ಣುವಿನ ಮೂರ್ತಿಯನ್ನು ಹಾಗೂ ಅಪರೂಪ ಜಾತಿಯ ೩ ಗೀಕೋ ಹಲ್ಲಿಯನ್ನು ಜಪ್ತಿ ಮಾಡಿದರು. ಈ ಹಲ್ಲಿಯ ಮೌಲ್ಯ ಒಂದುವರೆ ಕೋಟಿ ರೂಪಾಯಿಗಳಾಗಿವೆ. ಈ ಹಲ್ಲಿಯನ್ನು ಔಷಧಿ ತಯಾರಿಸಲು ಬಳಸುತ್ತಾರೆ. ದಕ್ಷಿಣ ಪೂರ್ವ ಏಷ್ಯಾದಲ್ಲಿ ಈ ಹಲ್ಲಿಯ ಮಾಂಸವನ್ನು ಮಧುಮೇಹ, ಏಡ್ಸ್ ಹಾಗೂ ಅರ್ಬುದರೋಗದಂತಹ ರೋಗಗಳ ಔಷಧಿ ನಿರ್ಮಾಣಕ್ಕಾಗಿ ಉಪಯೋಗಿಸಲಾಗುತ್ತದೆ, ಜೊತೆಗೆ ಏಷ್ಯಾ ಖಂಡದ ಹಲವಾರು ದೇಶಗಳಲ್ಲಿ ಅದು ಒಂದು ಬಗೆಯ ಆಹಾರವೂ ಆಗಿದೆ.