ವೈಕುಂಠ ಚತುರ್ದಶಿಯ ಶುಭಮುಹೂರ್ತದಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಅಯೋಧ್ಯೆಯಲ್ಲಿನ ಪ್ರಭು ಶ್ರೀರಾಮನ (ರಾಮಲಲ್ಲಾನ) ಮೂರ್ತಿಯ ದರ್ಶನ ಪಡೆಯುವಾಗ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

ಕು. ಮಧುರಾ ಭೋಸಲೆ

‘ಚೆನ್ನೈ (ತಮಿಳುನಾಡು) ಇಲ್ಲಿನ ನಾಡಿವಾಚಕ ಪೂ. ಡಾ. ಓಂ ಉಲಗನಾಥನ್ ಇವರ ಮೂಲಕ ಸಪ್ತರ್ಷಿಗಳು ನೀಡಿದ ಆಜ್ಞೆಗನುಸಾರ ೧೧.೧೧.೨೦೧೯ ರಂದು ವೈಕುಂಠ ಚತುರ್ದಶಿಯ ಶುಭಮುಹೂರ್ತದಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ಬೆಳಗ್ಗೆ ೮ ರಿಂದ ೮.೧೫ ಈ ಅವಧಿಯಲ್ಲಿ ಅಯೋಧ್ಯೆಯಲ್ಲಿ ಪ್ರತ್ಯಕ್ಷ ಪ್ರಭು ಶ್ರೀರಾಮನ (ರಾಮಲಲ್ಲಾನ) ದರ್ಶನವನ್ನು ಪಡೆದರು. ದೇವರ ಕೃಪೆಯಿಂದ ಕು. ಮಧುರಾ ಭೋಸಲೆಯವರು ಮಾಡಿದ ಈ ಘಟನೆಯ ಸೂಕ್ಷ್ಮ-ಪರೀಕ್ಷಣೆಯನ್ನು ಇಲ್ಲಿ ಕೊಡುತ್ತಿದ್ದೇವೆ.

೧. ರಾಮಜನ್ಮಭೂಮಿ ಖಟ್ಲೆಯ ತೀರ್ಪು ಹಿಂದೂಗಳ ಪರವಾಗಿ ಬಂದ ನಂತರ ಪ್ರಭು ಶ್ರೀರಾಮನ ತತ್ತ್ವವು ಪುನಃ ಕಾರ್ಯನಿರತವಾಗುವುದು

೯.೧೧.೨೦೧೯ ರಂದು ಸರ್ವೋಚ್ಚ ನ್ಯಾಯಾಲಯವು ರಾಮಜನ್ಮಭೂಮಿಯ ಖಟ್ಲೆಯ ತೀರ್ಪು ನೀಡಿ ಅಯೋಧ್ಯೆಯಲ್ಲಿನ ವಿವಾದಾತ್ಮಕ ಸ್ಥಳವು ಹಿಂದೂಗಳದ್ದಾಗಿದ್ದು ಅಲ್ಲಿ ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸಲು ಅನುಮತಿ ನೀಡಿದೆ. ಈ ಘಟನೆಯಿಂದ ಕಲಿಯುಗದಲ್ಲಿ ಧರ್ಮಸಂಸ್ಥಾಪನೆ ಮಾಡಲು ಪ್ರಭು ಶ್ರೀರಾಮನ ತತ್ತ್ವವು ಪುನಃ ಕಾರ್ಯನಿರತವಾಗಿದೆ, ಎಂಬುದರ ಅನುಭವವಾಗುತ್ತಿದೆ. ಪ್ರಭು ಶ್ರೀರಾಮನ ಅವತಾರಿ ಶಕ್ತಿಯು ಸುದೀರ್ಘಕಾಲ ಸುಪ್ತಾವಸ್ಥೆಯಲ್ಲಿದ್ದ ಕಾರಣ ಈಗ ಪುನಃ ಕಾರ್ಯನಿರತವಾಗಿದೆ.

೨. ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ೧೧.೧೧.೨೦೧೯ ರ ವೈಕುಂಠ ಚತುರ್ದಶಿಯಂದು ಬೆಳಗ್ಗೆ ೮ ರಿಂದ ೮.೧೫ ಈ ಅವಧಿಯಲ್ಲಿ ಅಯೋಧ್ಯೆಯಲ್ಲಿನ ಪ್ರಭು ಶ್ರೀರಾಮನ (ರಾಮಲಲ್ಲಾನ) ಮೂರ್ತಿಯ ದರ್ಶನ ಪಡೆಯುವುದು

ಈ ಹಿನ್ನೆಲೆಯಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ೧೧.೧೧.೨೦೧೯ ರ ವೈಕುಂಠ ಚತುರ್ದಶಿಯಂದು ಬೆಳಗ್ಗೆ ೮ ರಿಂದ ೮.೧೫ ಈ ಅವಧಿಯಲ್ಲಿ ಅಯೋಧ್ಯೆಯಲ್ಲಿನ ಪ್ರಭು ಶ್ರೀರಾಮನ ಮೂರ್ತಿಯ ದರ್ಶನ ಪಡೆದರು. ಆಗ ಇವರಿಬ್ಬರ ರೂಪ ಸಹ ಸೀತಾಮಾತೆಯ ಹಾಗೆಯೇ ಕಾಣಿಸುತ್ತಿತ್ತು. ಆದ್ದರಿಂದ ಅವರಿಗೆ ಶ್ರೀರಾಮನ ಸಗುಣ-ನಿರ್ಗುಣ ತತ್ತ್ವದ ಮತ್ತು ವಿಷ್ಣುತತ್ತ್ವದ ನಿರ್ಗುಣ-ಸಗುಣ ತತ್ತ್ವದ ಕೃಪಾಶೀರ್ವಾದ ಸಿಕ್ಕಿತು. ಆಗ ಸದ್ಗುರು (ಸೌ.) ಬಿಂದಾ ಸಿಂಗಬಾಳರ ರೂಪವು ಶ್ರೀದೇವಿಯ ಹಾಗೆ ಹಾಗೂ ಸದ್ಗುರು (ಸೌ.) ಅಂಜಲಿ ಗಾಡಗೀಳರ ರೂಪವು ಭೂದೇವಿಯ ಹಾಗೆ ಕಾಣಿಸುತ್ತಿತ್ತು.

೩. ಶ್ರೀರಾಮನ ಮೂರ್ತಿಯಿಂದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರಿಗೆ ಸಿಕ್ಕಿದ ದೈವೀ ಘಟಕಗಳು

ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳರು ಪ್ರಭು ಶ್ರೀರಾಮಚಂದ್ರನ ಮೂರ್ತಿಯ ಪ್ರತ್ಯಕ್ಷ ಭಾವಪೂರ್ಣ ದರ್ಶನ ಪಡೆಯುತ್ತಿರುವಾಗ ಶ್ರೀರಾಮನ ಮೂರ್ತಿಯಲ್ಲಿನ ವಿವಿಧ ಘಟಕಗಳ ಲಹರಿಗಳು ಸದ್ಗುರುದ್ವಯರ ಸಹಸ್ರಾರಚಕ್ರ ಮತ್ತು ಆಜ್ಞಾಚಕ್ರಗಳ ಮೂಲಕ ಅವರ ದೇಹದೊಳಗೆ ಪ್ರವೇಶಿಸಿದವು ಮತ್ತು ಸದ್ಗುರುದ್ವಯರು ಭಾವಸಮಾಧಿಯನ್ನು ಅನುಭವಿಸಿದರು. ಆಗ ಸದ್ಗುರುದ್ವಯರ ಸ್ಥೂಲ ದೇಹ ಮತ್ತು ಎಲ್ಲ ಸೂಕ್ಷ್ಮ ದೇಹಗಳು ಸೂಕ್ಷ್ಮದಲ್ಲಿ ವಿಷ್ಣುಮಯವಾಗಿರುವುದರಿಂದ ಅವರ ಬಣ್ಣ ನೀಲಿಯಾಗಿ ಕಾಣಿಸುತ್ತಿತ್ತು.

೪. ಪ್ರಭು ಶ್ರೀರಾಮನ ಮೂರ್ತಿಯಿಂದ ಸದ್ಗುರುದ್ವಯರಿಗೆ ಸಿಕ್ಕಿದ ದೈವೀ ಘಟಕಗಳಿಂದಾಗುವ ಪರಿಣಾಮ

ಕೃತಜ್ಞತೆ

‘ದೇವರ ಕೃಪೆಯಿಂದಲೇ ಈ ಸೂಕ್ಷ್ಮ ಪರೀಕ್ಷಣೆಯಾಗಿದೆ ಹಾಗೂ ಸದ್ಗುರುದ್ವಯರು ಪ್ರಭು ಶ್ರೀರಾಮನ ಮೂರ್ತಿಯ ಪ್ರತ್ಯಕ್ಷ ದರ್ಶನ ಪಡೆದಾಗ ಆಗಿರುವ ಸೂಕ್ಷ್ಮ ಪ್ರಕ್ರಿಯೆಯನ್ನು ಅನುಭವಿಸಲು ಸಿಕ್ಕಿತು. ಅದಕ್ಕಾಗಿ ನಾನು ಶ್ರೀರಾಮನ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ. (೧೧.೧೧.೨೦೧೯)