ಪ್ರಭು ಶ್ರೀರಾಮನ ಜನ್ಮಭೂಮಿಯಾಗಿರುವ ಅಯೋಧ್ಯೆ ಹಾಗೂ ಸನಾತನದ ಮೂವರೂ ಗುರುಗಳ ನಡುವಿನ ಸಂಬಂಧ ಹಾಗೂ ಶ್ರೀಮನ್ನಾರಾಯಣನ ಈಶ್ವರೀ ಕೃಪೆ !

ಎಡದಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ, ಪರಾತ್ಪರ ಗುರು ಡಾ. ಆಠವಲೆ ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳ (ವರ್ಷ ೨೦೧೭)
ಶ್ರೀ. ವಿನಾಯಕ ಶಾನಭಾಗ

೧. ಸಪ್ತರ್ಷಿ ಜೀವನಾಡಿಯ ಮಾಧ್ಯಮದಿಂದ ಪೂ. ಡಾ. ಓಂ ಉಲಗನಾಥನ್‌ಜೀಯವರು ಹೇಳಿದ ಮಹತ್ವದ ಅಂಶಗಳು

‘೫.೧೧.೨೦೧೯ ರಂದು ಸಪ್ತರ್ಷಿ ಜೀವನಾಡಿಯ ಮಾಧ್ಯಮದಿಂದ ಪೂ. ಡಾ. ಓಂ ಉಲಗನಾಥನ್‌ರವರು, “೧೧.೧೧.೨೦೧೯ ರಂದು ಸದ್ಗುರು (ಸೌ.) ಅಂಜಲಿ ಗಾಡಗೀಳರು ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳರು ಅಯೋಧ್ಯೆಗೆ ಹೋಗಿ ಶ್ರೀರಾಮ ಜನ್ಮಭೂಮಿಯ ದರ್ಶನವನ್ನು ಪಡೆದುಕೊಳ್ಳಲಿ. ಇಬ್ಬರೂ ಸದ್ಗುರುಗಳು ಒಟ್ಟಾಗಿ ಅಯೋಧ್ಯೆಗೆ ಹೋಗುವುದರಿಂದ ಶ್ರೀಮನ್ನಾರಾ ಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೆಚ್ಚು ಆನಂದವಾಗಲಿದೆ. ಶ್ರೀ ಗುರುಗಳ ರಾಮರಾಜ್ಯದ ಕನಸು ನನಸಾಗಿಸುವ ಸಮಯ ಈಗ ಸನ್ನಿಹಿತವಾಗುತ್ತಿದೆ, ಎಂದರು.

೨. ಮಹರ್ಷಿಗಳ ವಾಕ್ಯವನ್ನು ಕೇಳಿದಾಗ ಮನಸ್ಸಿಗೆ ಬಂದ ವಿಚಾರ

‘ಇಬ್ಬರೂ ಸದ್ಗುರುಗಳು ಒಟ್ಟಾಗಿ ಅಯೋಧ್ಯೆಗೆ ಹೋಗುವುದರಿಂದ ಶ್ರೀಮನ್ನಾರಾಯಣ ಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೆಚ್ಚು ಆನಂದವಾಗಲಿದೆ ಎಂಬ ಮಹರ್ಷಿಗಳ ವಾಕ್ಯವನ್ನು ಕೇಳಿದಾಗ ಈಶ್ವರನ ಕೃಪೆಯಿಂದ ನನ್ನ ಮನಸ್ಸಿನಲ್ಲಿ ಮುಂದಿನ ವಿಚಾರ ಬಂದಿತು.

೨ ಅ. ತ್ರೇತಾಯುಗದಲ್ಲಿ ಶ್ರೀರಾಮ-ಸೀತೆಯ ಅವತಾರಿ ಕಾರ್ಯದ ಸಮಯದಲ್ಲಿ ಅಯೋಧ್ಯಾವಾಸಿಗಳ ಮನಸ್ಸಿನಲ್ಲಿ ನಿರ್ಮಾಣವಾದ ಸೀತೆಯ ಚಾರಿತ್ರ್ಯಯ ಮೇಲಿನ ಸಂದೇಹ ಹಾಗೂ ಅದರಿಂದ ಅಯೋಧ್ಯಾ ನಗರಕ್ಕೆ ತಗುಲಿದ ಶಾಪ ! : ‘ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ದಶರಥ ಮಹಾರಾಜನ ಅರಮನೆಯಲ್ಲಿ ಭಗವಾನ್ ಶ್ರೀವಿಷ್ಣುವು ‘ಶ್ರೀರಾಮನ ರೂಪದಲ್ಲಿ ಜನ್ಮ ಪಡೆದ ಬಳಿಕ ಸಂಪೂರ್ಣ ಅಯೋಧ್ಯೆಗೆ ಆನಂದವಾಯಿತು. ಶ್ರೀರಾಮನು ವನವಾಸಕ್ಕೆ ಹೊರಡುವಾಗ, ಅಯೋಧ್ಯೆಯ ಜನತೆಗೆ ತುಂಬಾ ದುಃಖವಾಯಿತು. ಮುಂದೆ ರಾವಣಾಸುರನನ್ನು ಸಂಹರಿಸಿ ಶ್ರೀರಾಮ ಹಾಗೂ ಸೀತಾಮಾತೆ ಅಯೋಧ್ಯೆಗೆ ಮರಳಿ ಬಂದರು. ಆಗ ಅಯೋಧ್ಯೆಯ ಜನತೆಯು ಹರ್ಷೋಲ್ಲಾಸದಿಂದ ಆ ದಿನವನ್ನು ಆಚರಿಸಿತು. ನಂತರ ಅದೇ ಅಯೋಧ್ಯೆಯ ಕೆಲವು ಜನರ ಮನಸ್ಸಿನಲ್ಲಿ ಸೀತೆಯ ಚಾರಿತ್ರ್ಯದ ವಿಷಯದ ಬಗ್ಗೆ ಸಂದೇಹ ಮೂಡಿದ್ದರಿಂದ ‘ರಾಜಧರ್ಮವನ್ನು ಪಾಲಿಸುತ್ತಾ ಶ್ರೀರಾಮನು ಸೀತೆಯನ್ನು ಕಾಡಿಗೆ ಕಳುಹಿಸಿದನು. ಲೋಕಾಪವಾದವನ್ನು ಸಹಿಸಿಕೊಂಡು ಸೀತಾ ಮಾತೆಯು ‘ಲವ-ಕುಶ’ರೆಂಬ ಇಬ್ಬರು ಮಕ್ಕಳಿಗೆ ಜನ್ಮ ನೀಡಿದರು ಹಾಗೂ ಶ್ರೀರಾಮನ ಅಖಂಡ ಭಕ್ತಿ ಮಾಡಿದಳು. ಮುಂದೆ ಭಗವಂತನ ಲೀಲೆಯಿಂದ ಸೀತಾ ಮಾತೆಯು ಶ್ರೀರಾಮನ ಆಜ್ಞೆಯಿಂದ ರಾಜನ ಆಸ್ಥಾನವನ್ನು ಪ್ರವೇಶಿಸಿದಳು. ಆಗ ‘ಲೋಕಾಪವಾದ ಹೋಯಿತು, ಎಂದು ಎಲ್ಲರಿಗೂ ಅನಿಸುತ್ತಿರುವಾಗಲೇ ರಾಜ ಸಭೆಯಲ್ಲಿ ಉಪಸ್ಥಿತರಿದ್ದ ಕೆಲವು ಅಯೋಧ್ಯಾವಾಸಿಗಳಲ್ಲಿ ದ್ವಿಮತ ನಿರ್ಮಾಣವಾಯಿತು ಹಾಗೂ ‘ಸೀತೆಯು ಅಗ್ನಿಪರೀಕ್ಷೆ ನೀಡಲಿ ಎಂದು ನಿರ್ಧಾರವಾಯಿತು. ಇದನ್ನು ಕೇಳಿ ಸೀತೆಯ ಕಣ್ಣಿನಲ್ಲಿ ನೀರು ಬಂತು ಹಾಗೂ ಅದೇ ಕ್ಷಣದಲ್ಲಿ ಅಯೋಧ್ಯಾವಾಸಿಗಳಿಗೆ ಸೀತೆಯ ಶಾಪ ತಟ್ಟಿತು. ಶ್ರೀರಾಮನ ಶಕ್ತಿಯಾಗಿರುವ ದೇವಿ ಸೀತೆಯು ಲೋಕಾಪವಾದವನ್ನು ಖಾಯಂ ಆಗಿ ತೊರೆಯಲು ಭೂದೇವಿಯ ಆಶ್ರಯವನ್ನು ಪಡೆದಳು. ಭೂದೇವಿಯು ಪ್ರಕಟಗೊಂಡು ಸೀತೆಯನ್ನು ತನ್ನ ಮಡಿಲಿಗೆ ಕರೆದುಕೊಂಡಳು ಹಾಗೂ ಅಯೋಧ್ಯೆಯ ಜನರ ವರ್ತನೆಯನ್ನು ನೋಡಿ ಅಯೋಧ್ಯೆಗೆ ಶಾಪ ನೀಡಿದಳು. ಭೂದೇವಿಯ ಈ ಶಾಪದಿಂದಲೇ ಶ್ರೀರಾಮನ ಅವತಾರ ಸಮಾಪ್ತಿಯ ಬಳಿಕ ಅಯೋಧ್ಯಾ ನಗರಕ್ಕೆ ಪುನಃ ಎಂದಿಗೂ ವೈಭವ ಪ್ರಾಪ್ತವಾಗಲಿಲ್ಲ. ಶ್ರೀ ಮಹಾಲಕ್ಷ್ಮಿಯ (ಶ್ರೀದೇವಿಯ) ಅವತಾರವಾಗಿರುವ ಸೀತೆಯ ಶಾಪದಿಂದಲೇ ಅಯೋಧ್ಯೆಯ ಮುಂದಿನ ಪೀಳಿಗೆ ದಾರಿದ್ರ್ಯ ಅನುಭವಿಸಿತು.

೨ ಅ ೧. ಆಗ ನಡೆದ ವಿಷಯ

ಅ. ಸೀತೆಯು ಲೋಕಾಪವಾದವನ್ನು ಸಹಿಸಿಕೊಳ್ಳಬೇಕಾದುದರಿಂದ ಭೂದೇವಿಯು ಶ್ರೀರಾಮನಿಗೆ ‘ಅಯೋಧ್ಯೆಯಲ್ಲಿ ಶ್ರೀರಾಮನ ಉಪಾಸನೆಯಲ್ಲಿ ಅಡಚಣೆಗಳು ನಿರ್ಮಾಣವಾಗು ವುದು !, ಎಂದು ಶಾಪ ನೀಡಿದಳು.

ಆ. ಶ್ರೀದೇವಿಸ್ವರೂಪ ಸೀತೆಯು ನೀಡಿದ ಶಾಪದಿಂದ ಇಂದಿನ ತನಕ ಅಯೋಧ್ಯಾ ನಗರಕ್ಕೆ ಸಮೃದ್ಧಿ ಹಾಗೂ ವೈಭವ ಪ್ರಾಪ್ತವಾಗಲಿಲ್ಲ.

೨ ಆ. ದ್ವಾಪರಯುಗದಲ್ಲಿ ಅಯೋಧ್ಯೆ : ಮಹಾ ಭಾರತದಲ್ಲಿ ಅಯೋಧ್ಯೆಯ ಬಗ್ಗೆ ವಿಶೇಷ ಉಲ್ಲೇಖವಿಲ್ಲ ಅಥವಾ ಪಾಂಡವರು ಅಥವಾ ಶ್ರೀಕೃಷ್ಣನು ಅಯೋಧ್ಯೆಗೆ ಹೋಗಿರುವ ಹೆಚ್ಚಿನ ಉಲ್ಲೇಖವಿಲ್ಲ.

೨ ಇ. ಕಲಿಯುಗದಲ್ಲಿ ಅಯೋಧ್ಯೆ : ಮೊಗಲ್ ರಾಜ ಬಾಬರನು ಅಯೋಧ್ಯೆಯ ಮೇಲೆ ಆಕ್ರಮಣ ಮಾಡಿ ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿದನು. ಈ ಮಸೀದಿಗೆ ‘ಬಾಬರಿ ಮಸೀದಿ ಎಂಬ ಹೆಸರು ಬಂದಿತು. ಅನೇಕ ವರ್ಷಗಳ ಬಳಿಕ ಹಿಂದೂಗಳು ಜಾಗೃತಗೊಂಡರು. ಅವರು ಎಷ್ಟೋ ಬಾರಿ ಬಾಬರಿ ಮಸೀದಿಯನ್ನು ಕೆಡವಲು ಪ್ರಯತ್ನಿಸಿದರು; ಆದರೆ ಅದು ೬ ಡಿಸೆಂಬರ್ ೧೯೯೨ ರಂದು ಘಟಿಸಿತು ! ಅಯೋಧ್ಯೆಯಲ್ಲಿ ‘ಬಾಬರಿ ಕಟ್ಟಡವನ್ನು ಕೆಡವಲಾಯಿತು ಹಾಗೂ ಭಾರತದ ರಾಜಕಾರಣದಲ್ಲಿ ಒಂದು ವಿಶೇಷ ಶಕ್ತಿಯ ಸಂಚಲನವಾಯಿತು.

ಈಶ್ವರೀ ಲೀಲೆಯಂತೆ ೬.೧೨.೧೯೯೨ ರ ನಂತರ ‘ಕಮಲ’ದ ಚಿಹ್ನೆಯಿರುವ ಭಾರತೀಯ ಜನತಾ ಪಕ್ಷಕ್ಕೆ ಮುಖ್ಯತ್ವ ಸಿಕ್ಕಿತು ಹಾಗೂ ಹಿಂದೂಗಳಿಗೆ ಈ ಚಿಹ್ನೆಯು ಆಧಾರವೆನಿಸತೊಡಗಿತು. ವಿಶೇಷವೆಂದರೆ ‘ಕಮಲ’ ಇದು ಭಾರತದ ರಾಷ್ಟ್ರೀಯ ಹೂವಾಗಿದೆ. ೧ ಸಾವಿರ ವರ್ಷಗಳ ತನಕ ಬೀಜಗಳು ಉಳಿಯುವ ಏಕೈಕ ಹೂವೆಂದರೆ ‘ಕಮಲ’ ಹಾಗೂ ೧ ಸಾವಿರ ವರ್ಷಗಳ ಬಳಿಕ ಕೂಡ ಕಮಲ ಹೂವು ಪುನಃ ಅರಳುತ್ತದೆ. ಈ ಹಿಂದೆ ಸಪ್ತರ್ಷಿ ನಾಡಿಪಟ್ಟಿಯ ಮಾಧ್ಯಮದಿಂದ, ‘ಸದ್ಗುರು (ಸೌ.) ಅಂಜಲಿ ಗಾಡಗೀಳರವರು ಸಾಕ್ಷಾತ್ ಶ್ರೀವಿಷ್ಣುವಿನ ಶಕ್ತಿಯಾಗಿರುವ ಶ್ರೀದೇವಿಯ ಅವತಾರವಾಗಿದ್ದಾರೆ ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳರು ಭೂದೇವಿಯ ಅವತಾರವಾಗಿದ್ದಾರೆ’, ಎಂದು ಹೇಳಿದ್ದಾರೆ. ‘ಶ್ರೀದೇವಿ ಹಾಗೂ ಭೂದೇವಿ ಇವರಿಬ್ಬರೂ ಕಮಲಪೀಠದ ಮೇಲೆ ಆಸೀನರಾಗಿದ್ದಾರೆ ಎಂಬ ಉಲ್ಲೇಖವು ನಮಗೆ ಪುರಾಣದಲ್ಲಿ ನೋಡಲು ಸಿಗುತ್ತದೆ.

೨ ಇ ೧. ಅಯೋಧ್ಯೆಯನ್ನು ಶಾಪಮುಕ್ತಗೊಳಿಸಲು ಮಹರ್ಷಿಗಳು ಶ್ರೀದೇವಿಸ್ವರೂಪ ಸದ್ಗುರು (ಸೌ.) ಅಂಜಲಿ ಗಾಡಗೀಳ ಹಾಗೂ ಭೂದೇವಿಸ್ವರೂಪ ಸದ್ಗುರು (ಸೌ.) ಬಿಂದಾ ಸಿಂಗಬಾಳರನ್ನು ಒಟ್ಟಾಗಿ ಅಯೋಧ್ಯೆಗೆ ಹೋಗಲು ಹೇಳುವುದು : ‘೧೧.೧೧.೨೦೧೯ ರಂದು ಸದ್ಗುರು (ಸೌ.) ಅಂಜಲಿ ಗಾಡಗೀಳರು ಹಾಗೂ ಸದ್ಗುರು (ಸೌ.) ಬಿಂದಾ ಸಿಂಗಬಾಳರು ಅಯೋಧ್ಯೆಗೆ ಹೋಗಿ ಶ್ರೀರಾಮ ಜನ್ಮಭೂಮಿಯ ದರ್ಶನವನ್ನು ಪಡೆಯಲಿ’, ಎಂದು ಮಹರ್ಷಿಗಳು ನುಡಿದರು. ಇವರಿಬ್ಬರೂ ಸದ್ಗುರುಗಳು ಅಯೋಧ್ಯೆಗೆ ಒಟ್ಟಾಗಿ ಪ್ರವೇಶಿಸಿದ್ದರಿಂದ ಅಯೋಧ್ಯೆಗೆ ತಟ್ಟಿದ ಶಾಪವು ದೂರವಾಗಿ ಅಯೋಧ್ಯೆಗೆ ಹಾಗೂ ಶ್ರೀರಾಮನ ಉಪಾಸನೆಗೆ ಗತವೈಭವ ಪ್ರಾಪ್ತವಾಗಲಿದೆ’, ಎಂದು ನನಗೆ ಅನಿಸುತ್ತದೆ. ಅಯೋಧ್ಯೆ ಇದು ಶ್ರೀರಾಮನಿಗೆ ಸಂಬಂಧಪಟ್ಟದ್ದಾಗಿರುವುದರಿಂದ ‘ಇಬ್ಬರೂ ಸದ್ಗುರುಗಳು ಅಲ್ಲಿಗೆ ಹೋಗಿದ್ದರಿಂದ ಪರಾತ್ಪರ ಗುರು ಡಾಕ್ಟರರಿಗೆ ತುಂಬಾ ಆನಂದವಾಗಲಿದೆ’, ಎಂದು ಮಹರ್ಷಿಗಳು ನುಡಿದರು. ಇದರ ಗರ್ಭಿತಾರ್ಥ ವೆಂದರೆ, ಇದೆಲ್ಲ ಶ್ರೀಮನ್ನಾರಾಯಣಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಡೆಯುತ್ತಿದೆ. – ಶ್ರೀ. ವಿನಾಯಕ ಶಾನಭಾಗ (೭.೧೧.೨೦೧೯)