ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ‘ಶ್ರೀರಾಮಲಲ್ಲಾನ ಮನಮೋಹಕ ದರ್ಶನ !

ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಶ್ರೀರಾಮಜನ್ಮಭೂಮಿಯ ದರ್ಶನ ಸುಲಭವಾಗಲು ಅಯೋಧ್ಯೆಯಲ್ಲಿನ ಶ್ರೀರಾಮಭಕ್ತ ವೈದ್ಯ ಶ್ರೀ. ರಾಮಪ್ರಕಾಶ ಪಾಂಡೆ ಇವರು ಮಾಡಿದ ಸಹಾಯ !

‘ಶ್ರೀರಾಮಭಕ್ತ ವೈದ್ಯ ಶ್ರೀ. ರಾಮಪ್ರಕಾಶ ಪಾಂಡೆ ಇವರು ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಅಯೋಧ್ಯೆಯಲ್ಲಿನ ಶ್ರೀರಾಮಮ ಜನ್ಮಭೂಮಿಯ ದರ್ಶನ ಮಾಡಲು ಸಹಾಯ ಮಾಡಿದರು. ಅವರು ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧೀಕ್ಷಕ, ಅಯೋಧ್ಯೆಯ ಪೊಲೀಸ್ ಆಯುಕ್ತ ಮತ್ತು ಅಯೋಧ್ಯೆಯ ಜಿಲ್ಲಾಧಿಕಾರಿ ಇವರಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಅಯೋಧ್ಯೆಗೆ ಬರುವ ವಿಷಯವನ್ನು ಮತ್ತು ಅವರಿಗೆ ಶ್ರೀರಾಮಲಲ್ಲಾನ ದರ್ಶನವನ್ನು ಪಡೆಯಲು ಸಾಧ್ಯವಾಗಬೇಕೆಂದು ಪತ್ರವನ್ನು ನೀಡಿದ್ದರು. ಶ್ರೀ. ಪಾಂಡೆಯವರು ಈ ಪತ್ರದಲ್ಲಿ, ‘ದೈವೀ ಆಜ್ಞೆಯ ಪ್ರೇರಣೆಯಿಂದ ಈ ಮಾತಾಜಿಯರು ಶ್ರೀರಾಮಲಲ್ಲಾನ ದರ್ಶನಕ್ಕಾಗಿ ಬರುತ್ತಿದ್ದಾರೆ. ಅವರಿಗೆ ಆಡಳಿತ ಮತ್ತು ಪೊಲೀಸರು ಸಹಕರಿಸಬೇಕು, ಎಂದು ಬರೆದಿದ್ದರು. – ಸಂಕಲನಕಾರರು : ಶ್ರೀ. ವಿನಾಯಕ ಶಾನಭಾಗ, ಅಯೋಧ್ಯೆ (೧೨.೧೧.೨೦೧೯)

‘೫.೧೧.೨೦೧೯ ರಂದು ಸಪ್ತರ್ಷಿ ಜೀವನಾಡಿಯ ಮೂಲಕ ಪೂ. (ಡಾ.) ಓಂ ಉಲಗನಾಥನ್‌ಜಿಯವರು, “೧೧.೧೧.೨೦೧೯ ರಂದು ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಅಯೋಧ್ಯೆಗೆ ಹೋಗಿ ‘ಶ್ರೀರಾಮಜನ್ಮಭೂಮಿಯ ದರ್ಶನ ಪಡೆಯಬೇಕು ಎಂದರು.

೧. ಮಹರ್ಷಿಗಳು ಪೂ. (ಡಾ.) ಓಂ ಉಲಗನಾಥನಜೀಯವರ ಮೂಲಕ ಹೇಳಿದಂತೆಯೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಶ್ರೀರಾಮಜನ್ಮಭೂಮಿಯ ಮತ್ತು ಶ್ರೀರಾಮಲಲ್ಲಾ ಇವರ ದರ್ಶನವಾಗುವುದು

ಮಹರ್ಷಿಗಳು ಹೇಳಿದಂತೆಯೆ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ೧೧.೧೧.೨೦೧೯ ರಂದು ಅಯೋಧ್ಯೆಗೆ ಹೋಗಿ ಅಲ್ಲಿ ಬೆಳಗ್ಗೆ ೮.೧೫ ಕ್ಕೆ ಶ್ರೀರಾಮಲಲ್ಲಾನ ದರ್ಶನ ಪಡೆದರು. ಅವರು ದರ್ಶನಕ್ಕೆ ಹೋಗುವಾಗ ಪೂ. (ಡಾ.) ಓಂ ಉಲಗನಾಥನ್ ಇವರು ಸಂಚಾರಿವಾಣಿಯ ಮೂಲಕ, “ಸದ್ಗುರುದ್ವಯರಿಗೆ ಇಂದು ಶ್ರೀರಾಮನ ಸುಂದರ ದರ್ಶನವಾಗಲಿದೆ, ಎಂದರು. ಮಹರ್ಷಿಗಳು ಹೇಳಿದಂತೆಯೆ ಸದ್ಗುರುದ್ವಯರಿಗೆ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ಮತ್ತು ಶ್ರೀರಾಮಲಲ್ಲಾನ ಸುಂದರ ದರ್ಶನವಾಯಿತು. ಅದಕ್ಕಾಗಿ ಅಯೋಧ್ಯೆಯಲ್ಲಿನ ಶ್ರೀರಾಮಭಕ್ತ ವೈದ್ಯ ಶ್ರೀ. ರಾಮಪ್ರಕಾಶ ಪಾಂಡೆ ಇವರು ಸಹಾಯ ಮಾಡಿದರು.

೨. ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಅಯೋಧ್ಯೆಯಲ್ಲಿನ ‘ಕನಕ ಭವನಕ್ಕೆ ಹೋಗಿ ಶ್ರೀರಾಮ ಮತ್ತು ಸೀತಾಮಾತೆಯ ದರ್ಶನ ಪಡೆಯುವುದು

ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಎಲ್ಲೆಡೆ ಸಾವಿರಾರು ಪೊಲೀಸರಿದ್ದರು. ಅವರು ಎಲ್ಲರನ್ನೂ ನಿರ್ಧಿಷ್ಟ ದೂರದಲ್ಲಿ ತಪಾಸಣೆ ಮಾಡುತ್ತಿದ್ದರು. ಶ್ರೀರಾಮಜನ್ಮಭೂಮಿಯ ದರ್ಶನವನ್ನು ಪಡೆದ ನಂತರ ಸದ್ಗುರುದ್ವಯರು ಅಯೋಧ್ಯೆಯಲ್ಲಿನ ‘ಕನಕ ಭವನಕ್ಕೆ ಹೋಗಿ ಶ್ರೀರಾಮ ಮತ್ತು ಸೀತಾಮಾತೆಯ ದರ್ಶನ ಪಡೆದರು. ಸೀತಾ ಸ್ವಯಂವರವಾದ ನಂತರ ಸೀತಾಮಾತೆ ಅಯೋಧ್ಯೆಗೆ ಬಂದಾಗ ಕೈಕೆಯಿಮಾತೆಯು ಈ ‘ಕನಕ ಭವನವನ್ನು ಸೀತೆಗೆ ಉಡುಗೊರೆಯಾಗಿ ಕೊಟ್ಟಿದ್ದಳು.

೩. ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ‘ಶರಯೂ ನದಿಯಲ್ಲಿ ದೀಪದಾನ ಮಾಡುವುದು

ಅನಂತರ ಸದ್ಗುರುದ್ವಯರು ಅಯೋಧ್ಯೆಯಲ್ಲಿನ ‘ಶರಯೂ ನದಿಯ ತೀರಕ್ಕೆ ಹೋಗಿ ಶರಯೂ ನದಿಗೆ ಪ್ರಾರ್ಥನೆ ಮಾಡಿದರು. ಶರಯೂ ನದಿಯಲ್ಲಿ ದೀಪದಾನ ಮಾಡುವ ಪದ್ಧತಿಯಿದೆ. ಒಂದು ದೋಣಿಯಲ್ಲಿ ಶರಯೂ ನದಿಯ ಮಧ್ಯ ಭಾಗಕ್ಕೆ ಹೋದಾಗ ಸದ್ಗುರುದ್ವಯರು ಶರಯೂ ನದಿಯಲ್ಲಿ ದೀಪದಾನ ಮಾಡಿದರು.

೪. ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ‘ಕರಸೇವಕಪುರಮ್ಗೆ ಹೋಗಿ ಅಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯಕ್ಕಾಗಿ ಅರ್ಪಣೆ ಮಾಡಿರುವ ‘ಶ್ರೀರಾಮ ಎಂದು ಬರೆದಿರುವ ಇಟ್ಟಿಗೆಗಳನ್ನು ಸ್ಪರ್ಷ ಮಾಡಿ ಭಾವಪೂರ್ಣ ಪ್ರಾರ್ಥನೆ ಮಾಡುವುದು

ನಂತರ ಸದ್ಗುರುದ್ವಯರು ‘ಕರಸೇವಕಪುರಮ್ ಹೋದರು. ವಿಶ್ವ ಹಿಂದೂ ಪರಿಷತ್ತು ಶ್ರೀರಾಮಮಂದಿರವನ್ನು ನಿರ್ಮಿಸಲು ಕಳೆದ ಅನೇಕ ವರ್ಷಗಳಿಂದ ಆವಶ್ಯಕವಾಗಿರುವ ಕಲ್ಲುಗಳನ್ನು, ಕಂಬಗಳನ್ನು ಇಲ್ಲಿ ನಿರ್ಮಾಣ ಮಾಡಿದೆ. ಸಂತ-ಮಹಂತರು, ಭಕ್ತರು ಮತ್ತು ವ್ಯಾಪಾರಿಗಳು ಮಂದಿರದ ನಿರ್ಮಾಣಕ್ಕಾಗಿ ಅರ್ಪಣೆ ಮಾಡಿರುವ ‘ಶ್ರೀರಾಮ ಎಂದು ಬರೆದಿರುವ ಇಟ್ಟಿಗೆಗಳು ಈ ಸ್ಥಳದಲ್ಲಿವೆ. ‘ಕರಸೇವಕಪುರಮ್ ಗೆ ಎಂದರೆ ‘ಶ್ರೀರಾಮಮಂದಿರ ನಿರ್ಮಾಣದ ಕಾರ್ಯಾಗಾರವಾಗಿದೆ. ಈ ಸಂದರ್ಭದಲ್ಲಿ ಸದ್ಗುರುದ್ವಯರು ‘ಶ್ರೀರಾಮ ಎಂದು ಬರೆದಿರುವ ಇಟ್ಟಿಗೆಗಳನ್ನು ಸ್ಪರ್ಷ ಮಾಡಿ ಭಾವಪೂರ್ಣ ಪ್ರಾರ್ಥನೆ ಮಾಡಿದರು.

೫. ಅನುಭೂತಿ

೫ ಅ. ‘ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಶ್ರೀರಾಮಲಲ್ಲಾನ ದರ್ಶನ ಪಡೆಯುವವರೆಗೆ ಯಾವ ಭಕ್ತರೂ ದರ್ಶನಕ್ಕೆ ಬರದಿರುವುದು, ಇದು ಪ್ರಭು ಶ್ರೀರಾಮನ ಲೀಲೆಯಾಗಿದೆ ! : ಸದ್ಗುರುದ್ವಯರು ಶ್ರೀರಾಮಜನ್ಮಭೂಮಿಯನ್ನು ಪ್ರವೇಶ ಮಾಡುವಾಗ ಅಲ್ಲಿ ಪೊಲೀಸರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಮುಖ್ಯ ಪ್ರವೇಶದ್ವಾರದಿಂದ ಶ್ರೀರಾಮಲಲ್ಲಾನ ಮೂರ್ತಿಯನ್ನು ಇಟ್ಟಿರುವ ಡೇರೆಗೆ ಹೋಗುವವರೆಗೆ ೫ ಬಾರಿ ಪೊಲೀಸರ ತಪಾಸಣೆಗೊಳಗಾಗಬೇಕಾಗುತ್ತದೆ. ಇದಕ್ಕೆ ೧೫ ನಿಮಿಷ ಬೇಕಾಯಿತು. ಅಲ್ಲಿಯವರೆಗೆ ಯಾವುದೇ ಭಕ್ತರು ದರ್ಶನ ಪಡೆಯಲು ಬರಲಿಲ್ಲ. ಅನಂತರ ಸದ್ಗುರುದ್ವಯರು ಶ್ರೀರಾಮಲಲ್ಲಾನ ಮೂರ್ತಿಯನ್ನಿಟ್ಟಿರುವ ಡೇರೆಯ ಸಮೀಪ ತಲುಪಿದರು. ಅವರು ಬೆಳಗ್ಗೆ ೮.೧೫ ಕ್ಕೆ ಶ್ರೀರಾಮಲಲ್ಲಾನ ಭಾವಪೂರ್ಣ ದರ್ಶನ ಪಡೆದರು. ಅಲ್ಲಿನ ಪುರೋಹಿತರು ಸದ್ಗುರುದ್ವಯರಿಗೆ ಮಂದಿರದ ಮೂರ್ತಿ ಮತ್ತು ಸಾಲಿಗ್ರಾಮದ ವಿಷಯದಲ್ಲಿ ಮಾಹಿತಿಯನ್ನು ನೀಡಿ ಪ್ರಸಾದವನ್ನು ಕೊಟ್ಟರು. ಸದ್ಗುರುದ್ವಯರು ದೇವರ ದರ್ಶನ ಪಡೆಯುವುದು, ಮೂರ್ತಿಯ ವಿಷಯದ ಮಾಹಿತಿಯನ್ನು ಕೇಳುವುದು ಹಾಗೂ ಪ್ರಾರ್ಥನೆ ಮಾಡುವುದು ಇತ್ಯಾದಿ ಮುಗಿದ ನಂತರ ಒಬ್ಬೊಬ್ಬರೇ ಭಕ್ತರು ಬರಲು ಆರಂಭವಾಯಿತು. (ನಿಜ ನೋಡಿದರೆ, ಈ ದಿನ ಅಯೋಧ್ಯೆಯಲ್ಲಿ ಕಾರ್ತಿಕ ಯಾತ್ರೆ (ಜಾತ್ರೆ) ಆರಂಭವಾಗಿರುವುದರಿಂದ ಸಾವಿರಾರು ಭಕ್ತರು ಬಂದಿದ್ದರು. ‘ಸದ್ಗುರುದ್ವಯರು ದರ್ಶನ ಪಡೆಯುವ ತನಕ ಒಬ್ಬ ಭಕ್ತನೂ ಬರದಿರುವುದೆಂದರೆ, ಇದೊಂದು ತರಹದ ‘ಶ್ರೀರಾಮನ ಲೀಲೆಯೇ ಆಗಿದೆ, ಎಂಬುದು ಅರಿವಾಯಿತು. ಅಂದರೆ ಶ್ರೀರಾಮನಿಗೇ ಸದ್ಗುರುದ್ವಯರಿಗೆ ದರ್ಶನ ನೀಡಲಿಕ್ಕಿತ್ತು ಎನ್ನುವ ಹಾಗೆ. – ಸಂಕಲನಕಾರರು)

೫ ಆ. ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಸಾವಿರಾರು ವಾನರರಿದ್ದರೂ ಒಂದು ವಾನರ ಕೂಡ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸಮೀಪ ಬರದಿರುವುದು : ಶ್ರೀರಾಮಜನ್ಮಭೂಮಿಯ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾನರರಿದ್ದಾರೆ. ಯಾರ ಕೈಯಲ್ಲಿ ಏನೇ ವಸ್ತು ಕಾಣಿಸಿದರೂ, ವಾನರರು ಆ ವ್ಯಕ್ತಿಯ ಸಮೀಪ ಬಂದು ಆ ವಸ್ತುವನ್ನು ಕಸಿದುಕೊಂಡು ಹೋಗುತ್ತಾರೆ. ಯಾರ ಕೈಯಲ್ಲಿ ಯಾವುದೇ ವಸ್ತು ಇಲ್ಲದಿದ್ದರೂ ‘ಭಕ್ತರ ಸಮೀಪ ಬಂದು ಅವರಿಗೆ ಬೆದರಿಸುವುದು ಅಥವಾ ಅವರಲ್ಲಿ ತಿನ್ನುವ ಪದಾರ್ಥ ಏನೂ ಇಲ್ಲವೆಂದು ಖಚಿತಪಡಿಸಿಕೊಳ್ಳುವುದು, ಇತ್ಯಾದಿ ಮಾಡುತ್ತವೆ. ಸದ್ಗುರುದ್ವಯರು ದರ್ಶನಕ್ಕೆ ಹೋಗುವಾಗ ಮತ್ತು ದರ್ಶನ ಮಾಡಿ ಬರುವಾಗ ಒಂದು ವಾನರ ಕೂಡ ಅವರ ಸಮೀಪ ಬರಲಿಲ್ಲ. ಆಗ ‘ಆ ವಾನರರಿಗೆ ಸದ್ಗುರುದ್ವಯರು ಕಾಣಿಸುವುದೇ ಇಲ್ಲವೇ, ಎಂದು ಅನಿಸುತ್ತಿತ್ತು. ಶ್ರೀರಾಮಲಲ್ಲಾನ ದರ್ಶನ ಪಡೆದ ನಂತರ ಹೊರಗೆ ಬರುವಾಗ ೧೫ ನಿಮಿಷ ನಡೆಯಲಿಕ್ಕಿದೆ. ಆ ಸಮಯದಲ್ಲಿ ‘ವಾನರ ಸೇನೆಯು ಭಕ್ತರ ಸಮೀಪ ಬರುತ್ತದೆ, ಎನ್ನುವ ಅನುಭವವಿದೆ. ಸದ್ಗುರುದ್ವಯರ ಹಿಂದೆ ಇರುವ ಒಂದು ಕುಟುಂಬದ ಮೇಲೆ ವಾನರರು ಹಾರಿತು; ಆದರೆ ಸದ್ಗುರುದ್ವಯರ ಸಮೀಪ ಒಂದು ವಾನರ ಕೂಡ ಬರಲಿಲ್ಲ.

೫ ಇ. ‘ವಾನರರು ಶ್ರೀರಾಮನ ಸೈನಿಕರಾಗಿದ್ದಾರೆ ಹಾಗೂ ಶ್ರೀರಾಮಜನ್ಮಭೂಮಿಯ ರಕ್ಷಣೆಗಾಗಿ ಅವರು ನಿರಂತರ ಅಲ್ಲಿದ್ದಾರೆ, ಎಂಬುದು ಅರಿವಾಗುತ್ತದೆ.

೫ ಈ. ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮಲಲ್ಲಾನ ದರ್ಶನ ಪಡೆಯುವಾಗ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರಿಗೆ ಬಂದಿರುವ ಅನುಭೂತಿ !

೫ ಈ ೧. ‘ಸಾಕ್ಷಾತ್ ಶ್ರೀರಾಮನೇ ದರ್ಶನ ನೀಡುತ್ತಿದ್ದಾನೆ, ಎಂದು ಅರಿವಾಯಿತು. – ಸದ್ಗುರು (ಸೌ.) ಅಂಜಲಿ ಗಾಡಗೀಳ

೫ ಇ ೨. ‘ಶ್ರೀರಾಮನ ದಿವ್ಯ ದರ್ಶನವಾಯಿತು. ಇಷ್ಟರವರೆಗೆ ಇಂತಹ ದರ್ಶನ ಎಲ್ಲಿಯೂ ಆಗಿರಲಿಲ್ಲ. – ಸದ್ಗುರು (ಸೌ.) ಬಿಂದಾ ಸಿಂಗಬಾಳ