ಅಯೋಧ್ಯಾನಗರವು ಆನಂದಗೊಂಡಿತು, ಶರಯೂಮಾತೆಯೂ ಪುಳಕಿತಗೊಂಡಳು | ರಾಮಲಲ್ಲಾನ ದರ್ಶನವಿದು ಭಾವಪೂರ್ಣ, ನಾಂದಿಯಿದು ರಾಮರಾಜ್ಯದ ಭಕ್ತಿಪೂರ್ಣ ||

ಅಯೋಧ್ಯೆಯ ಭೂಮಿಯು ರಾಮಲಲ್ಲಾನ ಭವ್ಯ ದೇವಸ್ಥಾನವನ್ನು ನೋಡಲು ಆತುರಗೊಂಡಿದೆ. ಅನೇಕ ಶಿಲೆ, ಇಟ್ಟಿಗೆ, ಸುಂದರ ಕೆತ್ತನೆ ಕೆಲಸ ಮಾಡಿದ ಕಂಬಗಳು ಇಂತಹ ಸಾಹಿತ್ಯಗಳು ರಾಮಮಂದಿರದ ನಿರ್ಮಿತಿಯ ಕಾರ್ಯದಲ್ಲಿ ಸಮರ್ಪಿತಗೊಳ್ಳಲು ಉತ್ಸುಕವಾಗಿವೆ. ಅಯೋಧ್ಯೆಯಲ್ಲಿನ ಕಾರಸೇವಕಪುರಮ್ ಎಂದರೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯದ ಕಾರಖಾನೆಯಾಗಿದೆ. ಅಲ್ಲಿ ಅನೇಕಾನೇಕ ವರ್ಷಗಳಿಂದ ರಾಮರಾಯನ ಆಗಮನದ ದಾರಿಯನ್ನು ನೋಡುವ ಶಿಲೆಗಳಿಗೆ ಭಕ್ತಿಭಾವದಿಂದ ಸ್ಪರ್ಶ ಮಾಡುತ್ತಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ! ಈ ಅತ್ಯಂತ ಪ್ರೀತಿಯ ಸ್ಪರ್ಶ, ಕಳೆದ ಅನೇಕ ವರ್ಷ ಈ ಭೂಮಿಯನ್ನು ಮುಕ್ತ ಮಾಡಲು ಹೋರಾಡಿದ ರಾಮಭಕ್ತರು, ‘ರಾಮಮಂದಿರ ಖಂಡಿತ ನಿರ್ಮಾಣವಾಗಲಿದೆ’, ಎಂಬ ಶ್ರದ್ಧೆಯಿಂದ ಶಿಲೆಗಳನ್ನು ರೂಪಿಸುವ ಮುಂತಾದ ಎಲ್ಲರ ಪರಿಶ್ರಮಗಳಿಗೆ ಮಾಡಿದ ಅಭಿನಂದನೆಯೇ ಆಗಿದೆ ! ಈ ರಾಮನಾಮವುಳ್ಳ ಶಿಲೆಯು ‘ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸುವುದರೊಂದಿಗೆ ಸಾಧಕರ ಮನಸ್ಸಿನಲ್ಲಿ ಆತ್ಮಾರಾಮನ ಸ್ಥಾಪನೆಯಾಗಿ ಇಡೀ ಭಾರತಭೂಮಿಯು ರಾಮಮಯವಾಗಲಿ’, ಎಂಬ ಸಂಕಲ್ಪದ ವಾಹಕವಾಗಿದೆ. ಈ ಸಂಕಲ್ಪದ ಪೂರ್ತಿಗಾಗಿ ಈ ಅಯೋಧ್ಯೆಯ ಯಾತ್ರೆಯು ಭಗವಂತನ ದೊಡ್ಡ ಆಶೀರ್ವಾದವಾಗಿದೆ !

ರಾಮರಾಜ್ಯವನ್ನು ಅನುಭವಿಸಿದ ಶರಯೂ ಮಾತೆ ಮತ್ತು ರಾಮರಾಜ್ಯವನ್ನು ಸಾಕಾರಗೊಳಿಸಲು ಆಧ್ಯಾತ್ಮಿಕ ಸ್ತರದಲ್ಲಿ ಪ್ರಯತ್ನಿಸುತ್ತಿರುವ ಸದ್ಗುರುದ್ವಯರು, ಇಂತಹ ಈ ರಾಮಭಕ್ತಿಯ ಸಂಗಮವಾಗಿದೆ ! ಶರಯೂಮಾತೆಗೆ ಭಾವಪೂರ್ಣವಾಗಿ ಪ್ರಾರ್ಥನೆ ಮಾಡುತ್ತಿರುವ ಸದ್ಗುರುದ್ವಯರು ! ಈ ಛಾಯಾಚಿತ್ರದಲ್ಲಿನ ಸದ್ಗುರುಗಳ ಮುಖದ ಮೇಲಿನ ಭಾವದಿಂದ ‘ಶರಯೂಮಾತೆಯು ಪ್ರತ್ಯಕ್ಷ ಎದುರಿಗೆನಿಂತಿರುವಳು’, ಎಂದು ಅನುಭವಿಸಲು ಸಿಗುತ್ತದೆ.