ಹಿಂದೂ ವಿಶ್ವವಿದ್ಯಾಲಯದ ಹಿಂದೂದ್ವೇಷ !

ಹಿಂದೂಗಳ ಸರ್ವೋಚ್ಚ ತೀರ್ಥಕ್ಷೇತ್ರವಾಗಿರುವ ಕಾಶಿಯಲ್ಲಿನ ‘ಕಾಶಿ (ಬನಾರಸ್) ಹಿಂದೂ ವಿಶ್ವವಿದ್ಯಾಲಯದಲ್ಲಿ ಕಳೆದ ಕೆಲವು ದಿನಗಳಿಂದ ಹಿಂದೂವಿರೋಧಿ ಘಟನೆಗಳು ನಡೆಯುತ್ತಿವೆ. ೧೦೩ ವರ್ಷಗಳಷ್ಟು ಹಳೆಯದಾಗಿರುವ ಈ ಜಗತ್ಪ್ರಸಿದ್ಧ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇಂತಹ ಘಟನೆ ಘಟಿಸಿರುವುದು ಕಂಡು ಬಂದಿರಲಿಲ್ಲ. ಈ ವಿಶ್ವ ವಿದ್ಯಾಲಯದ ಸಂಸ್ಕೃತಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರೆಂದು ಡಾ. ಫಿರೋಜ್ ಖಾನ್ ಇವರನ್ನು ನೇಮಕ ಮಾಡಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳಿಂದ ಕಳೆದ ಕೆಲವು ವಾರಗಳಿಂದ ಅದಕ್ಕೆ ವಿರೋಧವಾಗುತ್ತಿದೆ. ಈ ಪ್ರಕರಣ ನಡೆಯುತ್ತಿರುವಾಗಲೇ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದಲ್ಲಿ ನಿಲ್ಲಿಸಿದ್ದ ಸ್ವಾತಂತ್ರ್ಯವೀರ ಸಾವರ್ಕರರ ಪ್ರತಿಮೆಯನ್ನು ಕೆಳಗಿಳಿಸಿ ಅದರ ಮೇಲೆ ಮಸಿ ಬಳಿಯಲಾಗಿದೆ. ಈ ಘಟನೆ ಬೆಳಕಿಗೆ ಬರುವಾಗಲೇ ಇತಿಹಾಸ ವಿಭಾಗವು ಅದರ ಪಠ್ಯಕ್ರಮದಿಂದ ರಾಮಾಯಣ, ಮಹಾಭಾರತ ಮತ್ತು ವೈದಿಕ ಕಾಲ ಇತ್ಯಾದಿಗಳ ವಿಷಯದ ಅಧ್ಯಾಯಗಳನ್ನು ತೆಗೆದುಹಾಕಿರುವ ಘಟನೆ ನಡೆದಿದೆ. ಈ ಮೂರೂ ಘಟನೆಗಳು ಹಿಂದೂವಿರೋಧಿಯಾಗಿವೆ, ಎಂಬುದು ಸ್ಪಷ್ಟವಾಗಿದೆ. ಇಂತಹ ಘಟನೆಗಳು ಈ ಹಿಂದೂ ವಿಶ್ವವಿದ್ಯಾಲಯದಲ್ಲಿ ಘಟಿಸುವುದು ಹಿಂದೂಗಳಿಗೆ ಆಘಾತಕಾರಿಯಾಗಿದೆ. ‘ಸಂಸ್ಕೃತ ಕಲಿಸಲು ಮುಸಲ್ಮಾನ ಪ್ರಾಧ್ಯಾಪಕರನ್ನು ನೇಮಕ ಮಾಡುವುದು ಅಯೋಗ್ಯವಲ್ಲ, ಎಂದು ಕೆಲವರ ಅಭಿಪ್ರಾಯವಾಗಿದೆ. ಮುಸಲ್ಮಾನರು ಸಂಸ್ಕೃತ ಮತ್ತು ಹಿಂದೂಗಳ ಧರ್ಮಗ್ರಂಥಗಳನ್ನು ಅಧ್ಯಯನ ಮಾಡುತ್ತಾರೆ, ಆದ್ದರಿಂದ ಅವರನ್ನು ಹೀಗೆ ವಿರೋಧಿಸುವುದು ಸರಿಯಲ್ಲ. ‘ಔರಂಗಜೇಬನ ಸಹೋದರ ದಾರಾ ಶಿಕೋವನು ಹಿಂದೂಗಳ ಧರ್ಮಗ್ರಂಥಗಳ ಅಧ್ಯಯನ ಮಾಡಿದ್ದನು ಹಾಗೂ ಅವನು ಹಿಂದೂ ಧರ್ಮದ ಅಭಿಮಾನಿಯಾಗಿದ್ದನು. ಅವನ ವಿಷಯದಲ್ಲಿ ಹಿಂದೂಗಳಿಗೆ ಅಭಿಮಾನವಿದೆ, ಎನ್ನುತ್ತಾರೆ. ಆದ್ದರಿಂದ ‘ಫಿರೋಜ್ ಖಾನ್‌ಗೆ ವಿರೋಧವೇಕೆ ?, ಎಂದು ಪ್ರಶ್ನಿಸಲಾಗುತ್ತಿದೆ. ಸತ್ಯಸಂಗತಿಯೇನೆಂದರೆ, ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅವರ ಧಾರ್ಮಿಕ ಭಾವನೆಗೆ ಅವಮಾನವಾಗುತ್ತಿರುವುದರಿಂದ ಅವರು ವಿರೋಧಿಸುತ್ತಿದ್ದಾರೆ. ತಾರ್ಕಿಕ ದೃಷ್ಟಿಯಲ್ಲಿ ಎಷ್ಟೇ ತರ್ಕವಿತರ್ಕ ಮಾಡಿದರೂ, ಭಾವನೆಯನ್ನು ಕೂಡ ಗೌರವಿಸಬೇಕಲ್ಲವೇ ?, ‘ಇಷ್ಟರವರೆಗೆ ಈ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಹೀಗೆ ಯಾವತ್ತೂ ನಡೆದಿರಲಿಲ್ಲ; ಹಾಗಾದರೆ ಈಗ ಹೀಗೇಕೆ ?, ಎನ್ನುವ ಪ್ರಶ್ನೆ ನಿರ್ಮಾಣವಾಗುತ್ತಿದೆ. ಇದನ್ನು ಹೀಗೆ ಅರ್ಥೈಸಬಹುದೇ, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಲ್ಲಿ ಢೋಂಗಿ ಜಾತ್ಯತೀತರು ನುಸುಳಿದ್ದಾರೆ ಹಾಗೂ ಅವರು ಇಂತಹ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ ? ಒಂದು ವೇಳೆ ಹಾಗೆ ಏನಾದರೂ ಇದ್ದರೆ ಈ ವಿಶ್ವವಿದ್ಯಾಲಯ ಕೂಡ ಜೆ.ಎನ್.ಯು. ವಿಶ್ವವಿದ್ಯಾಲಯದ ದಾರಿಯಲ್ಲಿಯೇ ಸಾಗುತ್ತಿದೆ, ಎಂದೇ ಹೇಳ ಬೇಕಾಗುತ್ತದೆ. ಇಂತಹ ಸ್ಥಿತಿ ಬರಬಾರದೆಂದು ಧರ್ಮಾಭಿಮಾನಿ ಹಿಂದೂಗಳು ಈಗಲೇ ಜಾಗರೂಕರಾಗಿ ಪ್ರಯತ್ನಿಸಬೇಕು.

ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕು !

ಬನಾರಸ ವಿಶ್ವವಿದ್ಯಾಲಯವನ್ನು ೧೯೧೬ ರಲ್ಲಿ ಪಂಡಿತ ಮದನ ಮೋಹನ ಮಾಳವೀಯರವರು ಸ್ಥಾಪಿಸಿದ್ದಾರೆ. ಇದಕ್ಕೆ ದರಭಂಗಾದ ರಾಜ ರಾಮೇಶ್ವರ ಸಿಂಹ ಇವರು ಸಹಾಯ ಮಾಡಿದ್ದಾರೆ. ಡಾ. ಅನಿಬೆಸೆಂಟ್ ಇವರಿಂದ ಈ ವಿಶ್ವವಿದ್ಯಾಲಯದ ಪಠ್ಯಕ್ರಮದ ರಚನೆಯಲ್ಲಿ ಮಹತ್ವದ ಪಾತ್ರವಿತ್ತು. ಈ ವಿಶ್ವವಿದ್ಯಾಲಯವು ಎರಡು ಪರಿಸರಗಳಲ್ಲಿದೆ. ಮುಖ್ಯ ಪರಿಸರವು ೧ ಸಾವಿರದ ೩೦೦ ಎಕ್ರೆಯಲ್ಲಿದ್ದು ಅದು ಕಾಶ್ಮೀರದಲ್ಲಿದೆ. ಈ ಭೂಮಿಯನ್ನು ಕಾಶಿ ನರೇಶ ಇವರು ನೀಡಿದ್ದರು. ವಿಶ್ವವಿದ್ಯಾಲಯದ ಇನ್ನೊಂದು ಪರಿಸರವು ಮಿಝಾಪುರದ ಬರಕಛಾದಲ್ಲಿ ೨ ಸಾವಿರದ ೭೦೦ ಎಕ್ರೆಯಲ್ಲಿದೆ. ಇಲ್ಲಿ ೩೪ ದೇಶಗಳಿಂದ ಬಂದಿರುವ ೩೦ ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಭಗವಾನ ವಿಶ್ವನಾಥನ ವಿಶಾಲವಾದ ದೇವಸ್ಥಾನವಿದೆ. ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್, ಡಾ. ಅಮರನಾಥ ಝಾ, ಆಚಾರ್ಯ ನರೇಂದ್ರ ದೇವ, ಮಾಜಿ ಕೇಂದ್ರೀಯ ಶಿಕ್ಷಸಚಿವ ಡಾ. ತ್ರಿಗುಣ ಸೇನ್ ಮುಂತಾದವರು ಈ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು. ಈ ಹಿನ್ನೆಲೆಯಿರುವ ವಿಶ್ವ ವಿದ್ಯಾಲಯದ ಇತಿಹಾಸದ ಪಠ್ಯಕ್ರಮದಿಂದ ನೇರವಾಗಿ ರಾಮಾಯಣ, ಮಹಾಭಾರತ ಮತ್ತು ವೈದಿಕ ಕಾಲದ ಅಧ್ಯಾಯಗಳನ್ನು ತೆಗೆದು ಹಾಕುವುದೆಂದರೆ ಇದು ಬುದ್ಧಿಗೆ ಮೀರಿದ ವಿಷಯವೆನಿಸುತ್ತದೆ. ಇಷ್ಟು ವರ್ಷಗಳಿಂದ ಹಿಂದೂ ಧರ್ಮದ ಜ್ಞಾನವನ್ನು ಜಗತ್ತಿನಾದ್ಯಂತದ ವಿದ್ಯಾರ್ಥಿಗಳಿಗೆ ಕೊಡಲಾಗುತಿತ್ತು, ಈಗ ಅಲ್ಲಿ ಈ ಜ್ಞಾನವು ಸಿಗದಿದ್ದರೆ ಅದಕ್ಕೆ ‘ಹಿಂದೂ ವಿದ್ಯಾಲಯವೆಂದು ಹೇಳುವುದಾದರೂ ಹೇಗೆ ?, ಎನ್ನುವ ಪ್ರಶ್ನೆ ನಿರ್ಮಾಣವಾಗುತ್ತದೆ. ಇದರ ಬಗ್ಗೆ ವಿಶ್ವವಿದ್ಯಾಲಯವು ಸ್ಪಷ್ಟೀಕರಣ ನೀಡುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳು ಇದನ್ನು ವಿರೋಧಿಸಿದ್ದರೂ, ಕೇಂದ್ರದಲ್ಲಿನ ಭಾಜಪ ಸರಕಾರವು ಹಸ್ತಕ್ಷೇಪ ಮಾಡಿ ಈ ಅಧ್ಯಾಯಗಳನ್ನು ತೆಗೆಯುವುದರ ಹಿಂದಿನ ಕಾರಣವನ್ನು ಹುಡುಕಿ ಸಂಬಂಧಪಟ್ಟವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಇಂತಹ ಯಾವುದೇ ಹಿಂದೂದ್ರೋಹಿ ನಿರ್ಣಯವನ್ನು ತೆಗೆದುಕೊಳ್ಳುವ ಮೊದಲು ಸರಕಾರದ ಅನುಮತಿಯನ್ನು ಪಡೆಯುವ ನಿಯಮವನ್ನು ಕೂಡ ಮಾಡಬೇಕು, ಎಂದು ಅನಿಸುತ್ತದೆ.

ಸಂತರನ್ನು ಕುಲಪತಿಯ ಹುದ್ದೆಗೆ ನೇಮಕ ಮಾಡಿರಿ !

ಸ್ವಾತಂತ್ರ್ಯವೀರ ಸಾವರ್ಕರರ ಪ್ರತಿಮೆಯನ್ನು ಬೀಳಿಸಿ ಅದರ ಮೇಲೆ ಶಾಯಿ ಎಸೆದಿರುವ ಘಟನೆಯನ್ನು ಯಾರು ಮಾಡಿದರು, ಎಂಬುದನ್ನೂ ಪತ್ತೆ ಹಚ್ಚಬೇಕು. ಈ ಕೃತಿ ವಿದ್ಯಾರ್ಥಿಗಳಿಂದಾಗಿದೆಯೆ ಅಥವಾ ಶಿಕ್ಷಕರಿಂದ ಎಂಬುದನ್ನು ತಿಳಿದುಕೊಳ್ಳಬೇಕು. ಹೇಗೆ ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಒಡೆದು ಹಾಕಲಾಗಿದೆಯೋ, ಹಾಗೆಯೆ ಹಿಂದೂದ್ವೇಷಿ ಸಾಮ್ಯವಾದಿ ವಿಚಾರದ ವಿದ್ಯಾರ್ಥಿಗಳಿಂದ ಈ ಕೃತ್ಯವಾಗಿದೆಯೇ ?, ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಒಂದು ವೇಳೆ ಇಂತಹ ವಿಚಾರಸರಣಿಯ ವಿದ್ಯಾರ್ಥಿಗಳು ಈ ಹಿಂದೂ ವಿಶ್ವವಿದ್ಯಾಲಯಕ್ಕೆ ನುಸುಳಿದ್ದರೆ, ಅವರು ಇಂತಹ ಕೃತ್ಯವನ್ನು ಮಾಡಿದ್ದರೆ, ಅವರನ್ನು ತಕ್ಷಣ ಈ ವಿಶ್ವವಿದ್ಯಾಲಯದಿಂದ ಹೊರದಬ್ಬಬೇಕು ಹಾಗೂ ಇಂತಹ ಘಟನೆಗಳು ಮುಂದೆ ಆಗದಂತೆ ಜಾಗರೂಕತೆ ವಹಿಸಬೇಕು. ಪಂಡಿತ ಮದನ ಮೋಹನ ಮಾಳವೀಯರಂತಹ ಶ್ರೇಷ್ಠ ವ್ಯಕ್ತಿಯಿಂದ ಸ್ಥಾಪಿಸಲ್ಪಟ್ಟ ಈ ವಿಶ್ವವಿದ್ಯಾಲಯದ ವ್ಯವಸ್ಥಾಪನೆಯನ್ನು ಈಗ ಸಂತರ ಕೈಗೆ ಒಪ್ಪಿಸಬೇಕು. ಭಾರತದಲ್ಲಿ ಈ ಹಿಂದೆ ಸಾವಿರಾರು ಗುರುಕುಲಗಳಿದ್ದವು ಹಾಗೂ ಅವುಗಳಿಂದ ವಿದ್ಯಾರ್ಥಿಗಳು ಧರ್ಮ, ನೀತಿ ನಿಯಮಗಳ ಶಿಕ್ಷಣ ಪಡೆದು ಆದರ್ಶ ವ್ಯಕ್ತಿಗಳಾಗುತ್ತಿದ್ದರು. ‘ಇಂದಿನ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗುತ್ತಾರೆ, ಎಂದು ಹೇಳಲು ಧೈರ್ಯ ಬೇಕಾಗುವುದು ! ಶಿಕ್ಷಣ ಪಡೆಯುವುದು ಮತ್ತು ಸಂಸ್ಕಾರ ಮಾಡುವುದು ಇವೆರಡೂ ಬೇರೆ ಬೇರೆ ವಿಷಯಗಳಾಗಿವೆ. ಇಂದು ಶಿಕ್ಷಣ ಸಿಗುತ್ತದೆ; ಆದರೆ ವಿದ್ಯಾರ್ಥಿಗಳಿಗೆ ಸಂಸ್ಕಾರ ಆಗುವುದಿಲ್ಲ. ಧರ್ಮ, ರಾಷ್ಟ್ರ, ಸಂಸ್ಕೃತಿ ಇತ್ಯಾದಿಗಳ ಸಂಸ್ಕಾರ ಇಲ್ಲದ ಕಾರಣ ಇಂದಿನ ಪೀಳಿಗೆಗೆ ಈ ವಿಷಯದಲ್ಲಿ ಆಸಕ್ತಿ, ಮಮತೆ, ಅಭಿಮಾನವಿಲ್ಲ. ಇದರ ಪರಿಣಾಮವೆಂದರೆ, ದೇಶದ ನೈತಿಕತೆಯು ರಸಾತಳಕ್ಕೆ ಹೋಗುತ್ತಿದೆ. ಈ ಸ್ಥಿತಿಯನ್ನು ಬದಲಾಯಿಸಲು ಸಂಸ್ಕಾರ ನೀಡುವ ಶಾಲೆಗಳು, ಮಹಾವಿದ್ಯಾಲಯಗಳು ಮತ್ತು ವಿಶ್ವ ವಿದ್ಯಾಲಯಗಳಿರುವ ಅವಶ್ಯಕತೆಯಿದೆ. ಅವುಗಳ ವ್ಯವಸ್ಥಾಪನೆಯನ್ನು ಸಂತರ, ಗುರುಗಳ ಕೈಗೆ ಒಪ್ಪಿಸಬೇಕು. ಹಿಂದೂ ರಾಷ್ಟ್ರದಲ್ಲಿ ಇಂತಹ ವಿಶ್ವವಿದ್ಯಾಲಯಗಳೇ ಇರಲಿವೆ.