ದಿ. ರಾಜೀವ ದೀಕ್ಷಿತ್ ಇವರ ೩೦ ನವೆಂಬರ್ ೨೦೧೯ ರಂದು ಇರುವ ಪುಣ್ಯಸ್ಮರಣೆ ನಿಮಿತ್ತ

ಆಂಗ್ಲರು ವಂಚನೆ ಹಾಗೂ ಕಪಟ ನೀತಿಯಿಂದ ಪ್ರಾಚೀನ ಭಾರತದ ಸಮೃದ್ಧ ಕೃಷಿಯನ್ನು ನಾಶ ಮಾಡಿರುವುದು !

‘ವಿಚಾರಶೀಲ ಧರ್ಮಪಾಲರು ‘ಬ್ರಿಟೀಶರು ಭಾರತೀಯ ರೈತರನ್ನು ಹೇಗೆ ಕೊಳ್ಳೆಹೊಡೆದರು, ಎಂಬುದನ್ನು ಬ್ರಿಟೀಶರ ಕಡತಗಳ ಸಹಾಯದಿಂದ ತೋರಿಸಿಕೊಟ್ಟಿದ್ದಾರೆ. ಅವರು ತಮ್ಮ ಸಾರಾಂಶವನ್ನು ಮಂಡಿಸುವಾಗ, ‘೧೭೬೦ ರಿಂದ ೧೮೨೦ ರ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬ್ರಿಟೀಶರು ಬಂಗಾಲ ಹಾಗೂ ಮದ್ರಾಸ ಪ್ರಾಂತ್ಯದಲ್ಲಿ ಕೃಷಿ ಭೂಮಿಯ ಒಟ್ಟು ಉತ್ಪನ್ನದ ಶೇಕಡಾ ೫೦ ರಷ್ಟು ಕೃಷಿ ತೆರಿಗೆಯೆಂದು ನಿರ್ಧರಿಸಲಾಯಿತು. ಆರಂಭದಲ್ಲಿ ನನಗೆ ಈ ಮಾಹಿತಿಯಿಂದ ಆಘಾತವಾಯಿತು. ನಾನು ಈ ಮಾಹಿತಿಯನ್ನು ಕೆಲವು ಮಾಹಿತಿಗಾರರಿಗೆ, ದೇಶದಲ್ಲಿನ ಹಿರಿಯ ರಾಜಕಾರಣಿಗಳಿಗೆ, ಹಿರಿಯ ಸರಕಾರಿ ಅಧಿಕಾರಿಗಳಿಗೆ ಹಾಗೂ ಕೆಲವು ಮಿತ್ರರಿಗೆ ಹೇಳಿದೆ. ಆದರೆ ಯಾರೂ ಈ ಸತ್ಯವನ್ನು ಒಪ್ಪಿಕೊಳ್ಳಲುಸಿದ್ಧರಿರಲಿಲ್ಲ. ಓರ್ವ ಜಿಲ್ಲಾಧಿಕಾರಿಗಳು, ‘ಹೀಗೆ ಆಗಲು ಸಾಧ್ಯವೇ ಇಲ್ಲ; ಏಕೆಂದರೆ ಸರಕಾರಕ್ಕೆ ಇಷ್ಟು ತೆರಿಗೆ ನೀಡಬೇಕೆಂದರೆ ಅದು ರೈತರಿಗೆ ನೀಡಲು ಸಾಧ್ಯವೇ ಇಲ್ಲ.’ ೨೦ ನೇ ಶತಮಾನದಲ್ಲಿ ಹೆಚ್ಚು ಅಭಿರುಚಿಯಿರುವ ಓರ್ವ ಇತಿಹಾಸಕಾರರು ಮಾತ್ರ ನುಡಿದರು, ‘ಬ್ರಿಟೀಶರು ನಿಜವಾಗಿಯೂ ಹಾಗೆ ಮಾಡಿದ್ದರು, ಆದರೆ ಈ ವಿಷಯ ಹೆಚ್ಚಾಗಿ ಯಾರಿಗೂ ತಿಳಿದಿಲ್ಲ, ಎಂದಿದ್ದರೂ ಕೂಡ ದೇಶದಲ್ಲಿರುವ ಓರ್ವ ಅತಿ ಮಹತ್ವದ ವ್ಯಕ್ತಿಗೆ ಮಾತ್ರ ಈ ವಿಷಯ ತಿಳಿದಿತ್ತು. ಆ ವ್ಯಕ್ತಿಯೆಂದರೆ ಸ್ವಾತಂತ್ರ್ಯ ಭಾರತದ ಪ್ರಜಾಪ್ರಭುತ್ವದ ಮೊದಲನೇ ಪ್ರಧಾನಮಂತ್ರಿ !’ ಭಾರತೀಯ ರೈತರು ಕಷ್ಟಪಟ್ಟು ಬೆಳೆದ ಧಾನ್ಯವನ್ನು ಎರಡನೇ ಮಹಾಯುದ್ಧದಲ್ಲಿ ತಮಗೋಸ್ಕರ ಬಳಸಿಕೊಳ್ಳಲಾಯಿತು. ಒಂದೆರಡು ಬರಗಾಲ ಬಿಟ್ಟರೆ, ಬೇರೆಲ್ಲ ಬರಗಾಲಗಳಲ್ಲಿ ಆಂಗ್ಲರು ಅನ್ಯಾಯವಾಗುವಂತಹ ಧೋರಣೆಯಿಂದ ನಡೆದುಕೊಂಡರು. ಅದರಲ್ಲಿ ಲಕ್ಷಗಟ್ಟಲೆ ಜನರು ಹಸಿವಿನಿಂದ ಸಾವನ್ನಪ್ಪಿದರು. ಆಂಗ್ಲರು ಭಾರತೀಯರ ಬಗ್ಗೆ ನಡೆಸಿದ ಸಮೀಕ್ಷೆಯಿಂದ ಭಾರತದ ಆರ್ಥಿಕ ಸ್ಥಿತಿಂiನ್ನು ನಾಶ ಮಾಡಲು ಕೃಷಿ ಹಾಗೂ ಉದ್ಯೋಗವನ್ನು ನಾಶ ಮಾಡಬೇಕಾಗುವುದು. ಕೃಷಿಯ ಕೇಂದ್ರಬಿಂದು ಹಸು ಹಾಗೂ ಎತ್ತು. ರೈತರು ಹಸುವಿನ ಹಾಲನ್ನು ಕುಡಿಯುತ್ತಾರೆ. ಆದ್ದರಿಂದ ಅವರಿಗೆ ಶಕ್ತಿ ಸಿಕ್ಕಿ ಅವರು ಕಷ್ಟದ ಕೆಲಸವನ್ನು ಮಾಡಬಹುದು. ಹಸುವಿನ ಸಗಣಿಯಿಂದ ಗೊಬ್ಬರ ಸಿಕ್ಕಿ ಅದನ್ನು ಅವರು ಕೃಷಿಗೋಸ್ಕರ ಬಳಸುತ್ತಾರೆ. ಆದ್ದರಿಂದ ಬೆಳೆಯ ಶಕ್ತಿಯು ಹೆಚ್ಚಾಗುತ್ತದೆ. ಗೋಮೂತ್ರವನ್ನು ಕೀಟ ನಾಶಕವನ್ನು ತಯಾರಿಸಲು ಪ್ರಯೋಗಿಸಲಾಗುತ್ತದೆ. ಆದ್ದರಿಂದ ಆಂಗ್ಲರು ಗೋಹತ್ಯೆಯ ದಂಡವಿಧಾನವನ್ನು ತಯಾರು ಮಾಡಿದರು ಹಾಗೂ ೧೭೬೦ ನೇ ಇಸವಿಯಲ್ಲಿ ಆಂಗ್ಲರ ಆದೇಶದಂತೆ ಗೋಹತ್ಯೆ ಪ್ರಾರಂಭವಾಯಿತು. ಆದ್ದರಿಂದ ಪಶುಧನವು ನಾಶವಾಗತೊಡಗಿತು. ಅದರ ಪರಿಣಾಮದಿಂದ ಹಾಲು, ಸಗಣಿ, ಗೊಬ್ಬರ ಹಾಗೂ ಗೋಮೂತ್ರ ಹೀಗೆ ಕೃಷಿಗೆ ಸಂಬಂಧಪಟ್ಟ ವಿಷಯಗಳು ಕಡಿಮೆ ಸಿಗತೊಡಗಿತು. ೧೭೬೦ ರಿಂದ ೧೯೪೭ ರ ವರೆಗೂ ಹೆಚ್ಚುಕಡಿಮೆ ೪೮ ಕೋಟಿಗೂ ಹೆಚ್ಚು ಹಸು ಹಾಗೂ ಎತ್ತುಗಳನ್ನು ಕೊಲೆ ಮಾಡಲಾಯಿತು. ‘ಇಂಡಿಯನ್ ಫಾರೆಸ್ಟ್ ಆಕ್ಟ್ ಮೂಲಕ ಆಂಗ್ಲರು ಮಾಡಿದ ಪರಿಸರದ ಪರ್ಯಾಯವಾಗಿ ಕೃಷಿಯ ಹಾನಿ ಯಾವ ಅರಣ್ಯವನ್ನು ರೈತನು ತನ್ನ ಸಾಮೂಹಿಕ ಸಂಪತ್ತೆಂದು ತಿಳಿದುಕೊಂಡಿದ್ದನೋ ಅವನಿಗೆ ಕೃಷಿಗೋಸ್ಕರ ಬೇಕಾಗಿರುವ ಎಲ್ಲ ವಿಷಯಗಳೂ ಸಿಗುತ್ತಿತ್ತೋ, ಅದೇ ಅರಣ್ಯವನ್ನು ಆಂಗ್ಲರು ಸರ್ವನಾಶ ಮಾಡಿದರು. ೧೮೪೫ ರಲ್ಲಿ ‘ಇಂಡಿಯನ್ ಫಾರೆಸ್ಟ್ ಆಕ್ಟನ್ನು ಅನ್ವಯಿಸಿದರು. ಆಂಗ್ಲರು ಅರಣ್ಯವನ್ನು ತಮ್ಮ ಭೂಮಿಯೆಂದು ಘೋಷಿಸಿ ಈ ಕಾಯಿದೆಯ ಮೂಲಕ ಅರಣ್ಯವನ್ನು ಕಡಿದು ಕಟ್ಟಿಗೆ ಕೊಂಡೊಯ್ಯುವವರಿಗೆ ಶಿಕ್ಷೆ ನೀಡಲು ಪ್ರಾರಂಭಿಸಲಾಯಿತು. ಆದರೆ ಪ್ರತ್ಯಕ್ಷದಲ್ಲಿ ಮಾತ್ರ ಅವರೇ ಸ್ವತಃ ಅರಣ್ಯವನ್ನು ಕಡಿಯಲು ಪ್ರಾರಂಭಿಸಿದರು. ಅದರಿಂದ ಮರಗಳು ಕಡಿಮೆಯಾದವು, ಮಣ್ಣಿನ ರಾಶಿ ಹೆಚ್ಚಾಗಿ ಅದು ನದಿ, ನಾಲೆ ಹಾಗೂ ಅಣೆಕಟ್ಟಿನಲ್ಲಿ ಸೇರತೊಡಗಿತು. ನದಿಯ ಆಳಕಡಿಮೆಯಾಗಿ ನೀರು ಕಡಿಮೆಯಾಯಿತು. ಆದ್ದರಿಂದ ನೆರೆ ಬಂದಿತು. ಇವೆಲ್ಲದರ ಪರಿಣಾಮವು ಪರೋಕ್ಷವಾಗಿ ಕೃಷಿಯ ಮೇಲಾಗತೊಡಗಿತು.

೧೯೧೦ ರಲ್ಲಿ ಆಂಗ್ಲರ ಅನ್ಯಾಯಕರ ನಿಯಮವು ಇನ್ನೂ ಇದೆ

ಆಂಗ್ಲರು ಒಂದು ವಿಚಿತ್ರವಾದ ನಿಯಮವಿದೆ, ನಿಮಗೇನಾದರೂ ಅದು ತಿಳಿದರೆ ನಿಮಗೂ ವ್ಯಾಕುಲವಾಗುತ್ತದೆ. ಅದರ ಉದಾಹರಣೆ ಎಂದರೆ ಕೃಷಿಯಲ್ಲಿ ಬೆಳೆ ತೆಗೆಯಲು ನೀರಿನ ಅಗತ್ಯವಿರುತ್ತದೆ, ಅಗತ್ಯವಿರುವುದಕ್ಕೆ ನೀರು ನೀಡುವುದಿಲ್ಲ ಹಾಗೂ ಬೆಳೆ ತಯಾರಾಗಿ ತೆಗೆಯುವ ಸಮಯ ಬಂದಾಗ, ಅದಕ್ಕೆ ಸಾಕಷ್ಟು ನೀರು ಬಿಡಲಾಗುತ್ತಿತ್ತು. ಇದು ಏಕೆ ಹೀಗೆ? ಎಂಬುದರ ಉತ್ತರವನ್ನು ಪಡೆಯಲು ನೀರಾವರಿ ವಿಭಾಗದ ಬಳಿ ವಿಚಾರಣೆಮಾಡಿದೆ. ಅದಕ್ಕೆ ಅಲ್ಲಿನ ಅಧಿಕಾರಿಗಳು ನುಡಿದರು, ‘ನಿಯಮವೇ ಹಾಗಿದೆ. ನಾವಾದರೂ ಏನು ಮಾಡುವುದು ? ನಾವೂ ಈ ನಿಯಮದಿಂದ ವ್ಯಾಕುಲಗೊಂಡಿದ್ದೇವೆ’, ಎಂದರು. ಅವರ ಕಾಗದ ಪತ್ರಗಳನ್ನು ನೋಡುವಾಗ ಗಮನಕ್ಕೆ ಬಂದ ಅಂಶವೆಂದರೆ, ಆಂಗ್ಲರು ಬಂಗಾಲವನ್ನು ವಿಭಜನೆ ಮಾಡಿದ ಬಳಿಕ ಅಂದರೆ ವರ್ಷ ೧೯೧೦ ರಲ್ಲಿ ಈ ನಿಯಮವನ್ನು ಅನ್ವಯಿಸಿದರು. ಅದು ಇನ್ನೂ ಕೂಡ ಹಾಗೆಯೇ ಇದೆ. – ದಿವಂಗತ ರಾಜೀವ ದೀಕ್ಷಿತ, ಸ್ವದೇಶಿ ಆಂದೋಲನದ ಹರಿಕಾರರು