ಪ್ರತಿಭೆಯ ದುರ್ಲಕ್ಷ್ಯ !

ವಶಿಷ್ಠ ನಾರಾಯಣ ಸಿಂಹ

ಅಲ್ಬರ್ಟ್ ಐನ್‌ಸ್ಟೈನ್‌ನ ಸಾಪೇಕ್ಷ ಸಿದ್ಧಾಂತಕ್ಕೆ ಸವಾಲೆಸಗುವ ಬಿಹಾರದಲ್ಲಿನ ಸುಪ್ರಸಿದ್ಧ ಭಾರತೀಯ ಗಣಿತ ತಜ್ಞ ವಶಿಷ್ಠ ನಾರಾಯಣ ಸಿಂಹ ಇವರು ನವೆಂಬರ್ ೧೪ ರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾದರು. ಮರಣದ ಸಮಯದಲ್ಲಿ ಅವರ ವಯಸ್ಸು ೭೭ ವರ್ಷವಿತ್ತು. ಅವರು ಅನೇಕ ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ದೇಶದಲ್ಲಿನ ಇಂತಹ ಮಹಾನ್ ಗಣಿತ ತಜ್ಞರ ಹೆಸರು ಅವರ ಮರಣದ ನಂತರ ಬೆಳಕಿಗೆ ಬರುವುದು ಖೇದದ ವಿಷಯವಾಗಿದೆ. ಅವರ ವಿಷಯದಲ್ಲಿ ಎಲ್ಲಿಯೂ ಓದಿದ ಅಥವಾ ಬರೆದಿರುವ ವಿಷಯವು ಯಾರಿಗೂ ನೆನಪಿಲ್ಲ. ಅವರ ಮಹಾನ್ ಕಾರ್ಯಗಳಿಗೆ ಸೂಕ್ತ ಸನ್ಮಾನ ಕೂಡ ಮಾಡಿರಲಿಕ್ಕಿಲ್ಲ. ೧೯೭೬ ರಲ್ಲಿ ಅವರು ‘ಸ್ಕಿಝೋಫ್ರೇನಿಯಾ ರೋಗಕ್ಕೆ ತುತ್ತಾಗಿದ್ದರು. ಆಗ ಅವರ ಪೂರ್ಣ ಕಾಳಜಿ ವಹಿಸುವ ಜವಾಬ್ದಾರಿಯನ್ನು ಭಾರತವಲ್ಲ, ಅಮೇರಿಕಾ ವಹಿಸಿಕೊಳ್ಳಲಿದೆ ಎಂದು ಹೇಳಿತ್ತು. ಆದರೆ ‘ಅಂದಿನ ಸರಕಾರ ವಶಿಷ್ಠ ಸಿಂಹರನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ ಹಾಗೂ ಅವರನ್ನು ಹುಚ್ಚರ ಆಸ್ಪತ್ರೆಗೆ ಸೇರಿಸಲಾಯಿತು. ಆದ್ದರಿಂದ ಅವರ ಪ್ರತಿಭೆಯೇ ನಾಶವಾಯಿತು, ಎಂದು ವಶಿಷ್ಠರ ಕುಟುಂಬದವರು ಆರೋಪಿಸಿದ್ದಾರೆ. ಅವರು ಕಾಯಿಲೆಯಲ್ಲಿರುವಾಗ ಸುಮಾರು ೫೦ ವರ್ಷಗಳ ವರೆಗೆ ಅವರನ್ನು ದುರ್ಲಕ್ಷಿಸಲಾಯಿತು.

ಮಾಧ್ಯಮಗಳಿಂದಲೂ ದುರ್ಲಕ್ಷ !

ಬಿಹಾರಿನ ಮುಖ್ಯಮಂತ್ರಿ ನಿತೀಶ ಕುಮಾರ ಇವರು ಸಿಂಹ ಇವರ ನಿಧನದ ವಿಷಯದಲ್ಲಿ ದುಃಖವನ್ನು ವ್ಯಕ್ತಪಡಿಸುತ್ತಾ ‘ಸಿಂಹ ಇವರು ತಮ್ಮ ಜ್ಞಾನದಿಂದ ಸಂಪೂರ್ಣ ಬಿಹಾರದ ಹೆಸರನ್ನು ಉಜ್ವಲಗೊಳಿಸಿದರು, ಎಂದು ಹೇಳಿದರು; ಆದರೆ ಅವರ ಸರಕಾರವೇ ಸಿಂಹ ಇವರ ಮೃತದೇಹವನ್ನು ಸಾಗಿಸಲು ಒಂದು ರೋಗಿವಾಹಕವನ್ನೂ ಒದಗಿಸಲಿಲ್ಲ. ಅವರ ಮೃತದೇಹ ಸುಮಾರು ಒಂದುವರೆ ಗಂಟೆ ಆಸ್ಪತ್ರೆಯ ಸ್ಟ್ರೆಚರ್‌ನಲ್ಲಿ ಬಿದ್ದುಕೊಂಡಿತ್ತು. ಅವರ ಸಹೋದರ ತುಂಬಾ ಹೊತ್ತು ಅಲ್ಲಿಯೇ ನಿಂತಿದ್ದರು. ಅನಂತರ ‘ಅಂಬ್ಯುಲೆನ್ಸ್ ಬಂದಿತು; ಆದರೆ ಅದರ ಮಾಲೀಕನು ಸಿಂಹ ಇವರ ಕುಟುಂಬದವರಿಂದ ಶವವನ್ನು ಸಾಗಿಸಲು ೫ ಸಾವಿರ ರೂಪಾಯಿಗಳನ್ನು ಕೇಳಿದನು. ಇದರಿಂದ ಯಾರಿಗಾದರೂ ಸಿಟ್ಟು ನೆತ್ತಿಗೇರುವುದು ಸಹಜವಾಗಿದೆ. ಸಿಂಹ ಇವರ ಶವದ ಅವಮಾನ ಮಾಡುವುದು ಅತ್ಯಂತ ಖೇದದ ವಿಷಯವಾಗಿದೆ. ಓರ್ವ ಗಣಿತ ತಜ್ಞನ ವಿಷಯದಲ್ಲಿ ಸಂವೇದನಾಶೀಲತೆಯು ಎಳ್ಳಷ್ಟೂ ಇಲ್ಲದಿರುವುದು ನಾಚಿಕೆಯ ವಿಷಯವಾಗಿದೆ. ಸಿಂಹ ಇವರ ವಿಷಯದಲ್ಲಿ ಆದ ಅವಮಾನದಿಂದ ಭಾರತದಲ್ಲಿ ಪ್ರತಿಭಾವಂತರೊಂದಿಗೆ ಮೃತ್ಯುವಿನ ಮೊದಲು ಮತ್ತು ನಂತರ ಹೇಗೆ ವರ್ತಿಸಲಾಗುತ್ತದೆ, ಎಂಬುದು ಅರಿವಾಗುತ್ತದೆ ! ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಏಕೆ ಏನೂ ಮಾತನಾಡಲಿಲ್ಲ ? ಕೇವಲ ಶ್ರದ್ಧಾಂಜಲಿ ನೀಡುತ್ತಾ ಭಾಷಣ ಬಿಗಿಯುವುದು, ಸಂಬಂಧಪಟ್ಟ ವ್ಯಕ್ತಿಯ ವಿಷಯದಲ್ಲಿ ನುಡಿಮುತ್ತುಗಳನ್ನು ಉದುರಿಸುವುದು, ಇಷ್ಟು ಮಾತ್ರ ನಡೆಯಿತು ! ಮುಖ್ಯಮಂತ್ರಿಗಳ ಕರ್ತವ್ಯ ಇಷ್ಟೇನಾ ? ಸಿಂಹ ಇವರು ಬಿಹಾರದ ಹೆಸರನ್ನು ಉಜ್ವಲಗೊಳಿಸಿದರು; ಆದರೆ ಅವರ ವಿಷಯದಲ್ಲಿಯೇ ಇಂತಹ ತಿರಸ್ಕಾರ ಮಾಡಿ ‘ಸರಕಾರ ಬಿಹಾರಿನ ಹೆಸರನ್ನು ಧೂಳಿಪಟಗೊಳಿಸಿತು, ಎಂದು ಹೇಳಬಹುದು. ಬಿಹಾರ ಸರಕಾರಕ್ಕೆ ಧಿಕ್ಕಾರ, ಧಿಕ್ಕಾರ, ಧಿಕ್ಕಾರ. ಯಾವ ದೇಶದಲ್ಲಿ ವಿದ್ವಾಂಸರಿಗೆ ಯತೋಚಿತ ಸನ್ಮಾನವಾಗುವುದಿಲ್ಲವೋ, ಅಂತಹ ದೇಶವು ವಿಶ್ವಗುರು ಹೇಗೆ ಆಗುವುದು ? ಎಲ್ಲ ಭಾರತೀಯರು ಇದರ ಬಗ್ಗೆ ವಿಚಾರ ಮಾಡಬೇಕು. ಸಿಂಹ ಇವರ ವಿಷಯದಲ್ಲಿ ಅಕ್ಷಮ್ಯ ಅವಮಾನ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು. ಗಣಿತ ತಜ್ಞ ವಶಿಷ್ಠ ಸಿಂಹ ಇವರ ನಿಧನದ ವಾರ್ತೆಯನ್ನು ಪ್ರಸಿದ್ಧಿಮಾಧ್ಯಮಗಳು ಒಳಗಿನ ಪುಟಗಳಲ್ಲಿ ಕೇವಲ ೪ ಸಾಲುಗಳಲ್ಲಿ ಪ್ರಸಿದ್ಧಪಡಿಸಿದವು !

ದೇಶವು ವಿನಾಶದ ಕಡೆಗೆ ಪ್ರಯಾಣಿಸುತ್ತಿದೆ !

ಸಿಂಹ ಇವರಂತೆಯೆ ಅನೇಕ ಪ್ರತಿಭಾವಂತರು ಹಾಗೂ ಬುದ್ಧಿವಂತ ವ್ಯಕ್ತಿಗಳ ಗೌರವಶಾಲಿ ಪರಂಪರೆಯು ನಮ್ಮ ದೇಶಕ್ಕೆ ಲಭಿಸಿದೆ; ಆದರೆ ಅವರ ನಿಧನದ ನಂತರ ಅವರ ಪಾಲಿಗೂ ಇದೇ ದುರ್ಲಕ್ಷ ಬಂದಿದೆ. ಈ ದುರ್ಲಕ್ಷ್ಯಕ್ಕೆ ಮಾಧ್ಯಮಗಳು ಹಾಗೂ ವಾರ್ತಾವಾಹಿನಿಗಳೇ ಹೆಚ್ಚು ಪ್ರಮಾಣದಲ್ಲಿ ಜವಾಬ್ದಾರವಾಗಿವೆ. ಈ ವಿಷಯದಲ್ಲಿ ಅನೇಕ ಉದಾಹರಣೆಗಳನ್ನು ಕೊಡಬಹುದು. ಭಾರತದ ಹನ್ನೊಂದನೇ ರಾಷ್ಟ್ರಪತಿ ಹಾಗೂ ಜಗತ್ಪ್ರಸಿದ್ಧ ವಿಜ್ಞಾನಿ ಡಾ. ಎಪಿ.ಜೆ. ಅಬ್ದುಲ್ ಕಲಾಮ್ ಇವರು ೨೭ ಜುಲೈ ೨೦೧೫ ರಂದು ನಿಧನರಾದರು ಮತ್ತು ಉಗ್ರವಾದಿ ಯಾಕೂಬ್ ಮೆಮನ್‌ಗೆ ಜುಲೈ ೩೦ ರಂದು ಗಲ್ಲಿಗೇರಿಸಲಾಯಿತು. ಇದರಲ್ಲಿ ವಾರ್ತಾವಾಹಿನಿಗಳು ಯಾಕೂಬ ಮೆಮನ್‌ನ ಶಿಕ್ಷೆಯ ವಾರ್ತೆಯನ್ನು ಹೆಚ್ಚು ಪ್ರಮಾಣದಲ್ಲಿ ವೈಭವೀಕರಿಸುತ್ತಾ ಅದಕ್ಕೆ ದೊಡ್ಡ ಪ್ರಸಿದ್ಧಿಯನ್ನು ನೀಡಿದ್ದವು. ಆ ಪ್ರಸಿದ್ಧಿಯು ಎಷ್ಟು ದೊಡ್ಡದಾಗಿತ್ತೆಂದರೆ, ಅದನ್ನು ಕಾಮೆಂಟ್ರಿಯೊಂದಿಗೆ ಪ್ರಸಾರ ಮಾಡಲಾಗುತ್ತಿತ್ತು, ಅದನ್ನು ನೋಡಿ ‘ಗಲ್ಲಿಗೇರಿಸುವುದು ಅಂದರೆ ಉಗ್ರವಾದಿಗಳ ಮೇಲೆ ಅನ್ಯಾಯ ಮಾಡಿದಂತೆಯೇ ಆಗಿದೆ, ಎಂದು ಯಾರಿಗಾದರೂ ಅನಿಸುವ ಹಾಗಿತ್ತು ಹಾಗೂ ಜನರಿಗೆ ಉಗ್ರವಾದಿಗಳ ವಿಷಯದಲ್ಲಿ ಕಳಕಳಿ ನಿರ್ಮಾಣವಾಗಲೂ ಬಹುದು. ಡಾ. ಎ.ಪಿ.ಜೆ. ಅಬ್ದುಲ್ ಕಲಾಮ್ ಇವರ ಶವವನ್ನು ಜುಲೈ ೩೦ ರಂದು ಹೂಳಲಾಯಿತು; ಆದರೆ ಆ ವಾರ್ತೆಗೆ ಯಾಕೂಬನಷ್ಟು ಪ್ರಸಿದ್ಧಿ ಸಿಗಲಿಲ್ಲ. ಇದರಿಂದ ಒಂದು ರೀತಿಯಲ್ಲಿ ವಿಜ್ಞಾನಕ್ಕೆ, ರಾಷ್ಟ್ರಪತಿಯ ಹುದ್ದೆಗೆ ಮತ್ತು ದೇಶಕ್ಕೆ ಅವಮಾನವೇ ಮಾಡಲಾಯಿತು. ೨೪ ಫೆಬ್ರವರಿ ೨೦೧೮ ರಂದು ಹಿಂದಿ ಚಲನಚಿತ್ರದ ಖ್ಯಾತ ನಟಿ ಶ್ರೀದೇವಿಯು ನೀರಿನಲ್ಲಿ ಮುಳುಗಿ ನಿಧನರಾದರು. ಅವರ ವಿಷಯದಲ್ಲಿ ೨-೩ ದಿನ ದೂರಚಿತ್ರವಾಹಿನಿಗಳಲ್ಲಿ ವಾರ್ತೆಯನ್ನು ನೀಡಲಾಗುತ್ತಿತ್ತು. ಅದರಲ್ಲಿ ಅವರ ವಿಷಯದಲ್ಲಿ ಎಲ್ಲ ರೀತಿಯ ಗುಣಗಾನ ಮಾಡಲಾಗುತ್ತಿತ್ತು. ಪ್ರೇಕ್ಷಕರು ಕೂಡ ಆ ೨ – ೩ ದಿನಗಳಲ್ಲಿ ‘ಶ್ರೀದೇವಿಮಯವಾಗಿರಬೇಕು. ಅನಂತರ ೪ ದಿನಗಳಲ್ಲಿಯೇ ಅಂದರೆ ಫೆಬ್ರವರಿ ೨೮ ರಂದು ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಇವರು ದೇಹತ್ಯಾಗ ಮಾಡಿದರು. ನಿಜವಾಗಿ ನೋಡಿದರೆ, ಶಂಕರಾಚಾರ್ಯರ ಯೋಗದಾನವು ಹಿಂದೂ ಸಮಾಜಕ್ಕೆ ಮಹತ್ವಪೂರ್ಣ ಹಾಗೂ ಉಲ್ಲೇಖನೀಯವಾಗಿತ್ತು; ಆದರೆ ಕೇವಲ ೧ ನಿಮಿಷದ ವಾರ್ತೆ ಓದಿ ಅವರ ದೇಹತ್ಯಾಗದ ವಿಷಯವನ್ನು ಪ್ರೇಕ್ಷಕರಿಗೆ ಹೇಳಲಾಯಿತು. ಅವರು ಹಿಂದೂ ಧರ್ಮಕ್ಕಾಗಿ ಮಾಡಿದ ಕಾರ್ಯ ಅಥವಾ ಅವರಿಗೆ ಮಾಡಿದ ಅಂತಿಮಸಂಸ್ಕಾರ ಇತ್ಯಾದಿಗಳ ಸುದ್ದಿಯನ್ನು ಯಾವುದೇ ವಾರ್ತಾವಾಹಿನಿಯು ಉಲ್ಲೇಖಿಸಲಿಲ್ಲ. ಪ್ರಸಿದ್ದಿಮಾಧ್ಯಮಗಳು ಸಹ ಅವರ ದೇಹತ್ಯಾಗದ ವಾರ್ತೆಯನ್ನು ಅತ್ಯಂತ ಸಂಕ್ಷಿಪ್ತದಲ್ಲಿಯೇ ಪ್ರಕಟಿಸಿದವು. ಇದರಿಂದ ದ್ವಿಮುಖ ಮಾನಸಿಕತೆಯು ಎದ್ದು ಕಾಣುತ್ತದೆ. ಉಗ್ರವಾದವನ್ನು ತಲೆಯ ಮೇಲೆ ಇಟ್ಟುಕೊಳ್ಳುವ ಹಾಗೂ ರಾಷ್ಟ್ರಪತಿ ಮತ್ತು ಶಂಕರಾಚಾರ್ಯರನ್ನು ಹೀನವಾಗಿ ಪರಿಗಣಿಸುವ ಮಾನಸಿಕತೆಯು ದೇಶವನ್ನು ವಿನಾಶದ ಕಡೆಗೆ ಒಯ್ಯುತ್ತಿದೆ, ಎಂಬ ಸತ್ಯವನ್ನು ದುರ್ಲಕ್ಷಿಸಲು ಸಾಧ್ಯವಿಲ್ಲ. ಭಾರತದ ಮಾಜಿ ಚುನಾವಣಾಯುಕ್ತ ಟಿ.ಎನ್. ಶೇಷನ್ (ವ.೮೬ ವರ್ಷ) ಇವರು ನವೆಂಬರ್ ೧೦ ರಂದು ಚೆನ್ನೈಯಲ್ಲಿ ನಿಧನರಾದರು. ಅವರ ಕಟ್ಟುನಿಟ್ಟಿನ ಕಾರ್ಯವೈಖರಿ, ಅವರು ಮಾಡಿದ ಮಹತ್ವಪೂರ್ಣ ಕಾರ್ಯವನ್ನು ದೇಶಕ್ಕೆ ತಲುಪಿಸುವ ಸೌಜನ್ಯವನ್ನು ಕೂಡ ವಾರ್ತಾವಾಹಿನಿಗಳು ತೋರಿಸಲಿಲ್ಲ. ಅವರ ನಿಧನದ ವಾರ್ತೆಯನ್ನು ಕೆಲವೇ ನಿಮಿಷ ತೋರಿಸಿ ಇತರ ವಾರ್ತೆಗಳನ್ನು ಮಾತ್ರ ದಿನವಿಡೀ ಪ್ರೇಕ್ಷಕರಿಗೆ ತೋರಿಸಲಾಯಿತು. ಗಣ್ಯವ್ಯಕ್ತಿಗಳ ನಿಧನದ ನಂತರ ಕೂಡ ಆಗುವ ತಿರಸ್ಕಾರವು ಭಯಂಕರ ಹಾಗೂ ವಿದಾರಕವಾಗಿದೆ. ಈ ಮಾನಸಿಕತೆಯನ್ನು ಬದಲಾಯಿಸಲು ಸಂವೇದನಾಶೀಲತೆ ನಿರ್ಮಾಣ ಮಾಡುವ ನೈತಿಕಮೌಲ್ಯವನ್ನು ಅಂಗೀಕರಿಸುವುದು ಮಹತ್ವದ್ದಾಗಿದೆ.