ಸಾಧಕರಿಗೆ ಸೂಚನೆ !

ಕು. ಮಧುರಾ ಭೋಸಲೆ

‘ಶ್ರೀಬಗಲಾದಿಗ್ಬಂಧನ ಸ್ತೋತ್ರ ಕೇಳುವ ವಿಷಯದಲ್ಲಿನ ಮಹತ್ವದ ಸೂಚನೆ !

೧. ‘ಶ್ರೀಬಗಲಾದಿಗ್ಬಂಧನ ಸ್ತೋತ್ರದ ಆಡಿಯೋ ಕೇಳಲು ಆ ಆಡಿಯೋ ಎಲ್ಲಿ ಲಭ್ಯವಿದೆ ?

‘ಶ್ರೀಬಗಲಾದಿಗ್ಬಂಧನ ಸ್ತೋತ್ರದ ಆಡಿಯೋ ಮುಂದಿನ ಲಿಂಕ್‌ನಲ್ಲಿ ಲಭ್ಯವಿದೆ.

https://www.sanatan.org/mr/a/65625.html (ಈ ಲಿಂಕ್‌ನಲ್ಲಿರುವ ಆಡಿಯೋ ಆಲ್‌ಲೈನ್‌ನಲ್ಲಿ ಕೇಳಬಹುದು. ಈಗ ಆಡಿಯೋ ಡೌನ್‌ಲೋಡ್ ಮಾಡುವ ಸೌಲಭ್ಯ ಸದ್ಯ ಲಭ್ಯವಿಲ್ಲ. ಸಾಧಕರು ಇದನ್ನು ಗಮನದಲ್ಲಿಡಬೇಕು. ಈ ಆಡಿಯೋ ಡೌನ್‌ಲೋಡ್ ಮಾಡುವಾಗ ಅದು ಆಗದಿದ್ದ ಕಾರಣ ಈ ಸೂಚನೆಯನ್ನು ಸಾಧಕರಿಗೆ ಕೇವಲ ಮಾಹಿತಿಗಾಗಿ ನೀಡಲಾಗಿದೆ. – ಕು. ಮಧುರಾ (೪.೧೧.೨೦೧೯))

೨. ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರವನ್ನು ಕೇಳುವ ಮೊದಲು ಯಾವ ಪ್ರಾರ್ಥನೆ ಮಾಡಬೇಕು ?

‘ಹೇ ಶ್ರೀಬಗಲಾಮುಖಿದೇವಿ, ಈ ಸ್ತೋತ್ರದಲ್ಲಿನ ಶಕ್ತಿ ಮತ್ತು ಚೈತನ್ಯ ನನಗೆ ಸಹನೆಯಾಗಿ ಅದನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಗ್ರಹಣ ಮಾಡಲು ಸಾಧ್ಯವಾಗಲಿ. ಹೇ ಮಾತೆ, ನಿನ್ನ ಕೃಪೆಯ ರಕ್ಷಣಾಕವಚವನ್ನು ನೀನೇ ನನ್ನ ಸುತ್ತಲೂ ನಿರ್ಮಾಣ ಮಾಡು ಮತ್ತು ನನ್ನ ಮೇಲೆ ಹತ್ತುದಿಕ್ಕುಗಳಿಂದ ಆಕ್ರಮಣ ಮಾಡುವ ಕೆಟ್ಟ ಶಕ್ತಿ ಮತ್ತು ಅದೃಶ್ಯ ಶತ್ರುಗಳಿಂದ ನೀನೇ ನನ್ನ ರಕ್ಷಣೆ ಮಾಡು. ಹೇ ಮಾತೆ ನಿನ್ನ ಕೃಪೆ, ಶಕ್ತಿ ಮತ್ತು ಚೈತನ್ಯದಿಂದ ನನ್ನ ಸುತ್ತಲೂ ಅಭೇದ್ಯ ಸಂರಕ್ಷಣಾ ಕವಚವು ನಿರ್ಮಾಣವಾಗಿ ಪ್ರತಿಕ್ಷಣ ನನ್ನ ರಕ್ಷಣೆಯಾಗಲಿ. ಹೇ ಮಾತೆ ನಿನ್ನ ಕೃಪಾದೃಷ್ಟಿ ನಮ್ಮೆಲ್ಲ ಸಾಧಕರ ಮೇಲೆ ನಿರಂತರವಾಗಿರಲಿ ಇದೇ ನಿಮ್ಮ ಕೋಮಲ ಚರಣಗಳಲ್ಲಿ ಪ್ರಾರ್ಥನೆ.

೩. ಸಾಧಕರು ಎಷ್ಟು ಸಮಯ ‘ಶ್ರೀಬಗಲಾದಿಗ್ಬಂಧನ ಸ್ತೋತ್ರವನ್ನು ಕೇಳಬೇಕು ?

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಾಧಕರು ಮತ್ತು ಕಾರ್ಯಕರ್ತರಿಗೆ ಮುಂದಿನ ೧ ವರ್ಷವಿಡಿ ಕೆಟ್ಟ ಶಕ್ತಿಗಳ ಸೂಕ್ಷ್ಮದಲ್ಲಿನ ತೀವ್ರ ತೊಂದರೆಯಾಗಲಿದೆ. ಸಮಷ್ಟಿ ಸ್ತರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿಂದ ರಕ್ಷಣೆಯಾಗಲು ಸಾಧಕರು ಮತ್ತು ಕಾರ್ಯಕರ್ತರು ಸ್ತೋತ್ರವನ್ನು ಮುಂದಿನ ೧ ವರ್ಷವಿಡಿಯಾದರೂ ಪ್ರತಿದಿನ ೨ ಬಾರಿ ಕೇಳಬೇಕು.

೪. ಸಾಧಕರು ಪ್ರತಿದಿನ ಕಡಿಮೆ ಪಕ್ಷ ಎಷ್ಟು ಸಲ ಸ್ತೋತ್ರ ಕೇಳಬೇಕು ?

ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರವನ್ನು ದಿನವಿಡೀ ೨ ಬಾರಿ ಕೇಳಲು ಪ್ರಯತ್ನಿಸಬೇಕು. ಸಾಧಕರಿಗೆ ೨ ಬಾರಿ ಸ್ತೋತ್ರ ಕೇಳಲು ಆಗದಿದ್ದರೆ ಅವರು ಇಡೀ ದಿನದಲ್ಲಿ ಕಡಿಮೆಪಕ್ಷ ೧ ಬಾರಿಯಾದರೂ ಕೇಳಲು ಪ್ರಯತ್ನಿಸಬೇಕು.

೫. ಸ್ತೋತ್ರ ಕೇಳಲು ಆಗದಿದ್ದರೆ ಏನು ಮಾಡಬೇಕು ?

ಸೇವೆಯಲ್ಲಿ ವ್ಯಸ್ತ ಇರುವುದಿಂದ, ಪ್ರಯಾಣದಿಂದ ಅಥವಾ ಇತರ ಅನಿವಾರ್ಯ ಕಾರಣಗಳಿಂದ ಸಾಧಕರಿಗೆ ‘ಶ್ರೀಬಗಲಾದಿಗ್ಬಂಧನ ಸ್ತೋತ್ರ ಕೇಳಲು ಆಗದಿದ್ದರೆ ಸಾಧಕರು ಶ್ರೀಬಗಲಾಮುಖಿದೇವಿಗೆ ಮೇಲಿನ ಅಂಶ ೨ ರಲ್ಲಿ ಹೇಳಿದಂತೆ ಪ್ರಾರ್ಥನೆಯನ್ನು ಬೆಳಗ್ಗೆ ಮತ್ತು ಸಾಯಂಕಾಲ ಭಾವಪೂರ್ಣವಾಗಿ ಮಾಡಬೇಕು.

೬. ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರ ಹೇಗೆ ಕೇಳಬೇಕು ?

ಸಾಧಕರು ಆದಷ್ಟು ಒಂದು ಸ್ಥಳದಲ್ಲಿ ಶಾಂತವಾಗಿ ಕುಳಿತು ಈ ಸ್ತೋತ್ರವನ್ನು ಕೇಳಬೇಕು. ಸಾಧಕರಿಗೆ ಕುಳಿತು ಸ್ತೋತ್ರವನ್ನು ಕೇಳಲು ಸಾಧ್ಯವಾಗದಿದ್ದರೆ ಸಾಧಕರು ಸೇವೆ ಮಾಡುತ್ತಿರುವಾಗ, ಪ್ರಯಾಣ ಮಾಡುತ್ತಿರುವಾಗ ಅಥವಾ ಇತರ ಕೃತಿ ಮಾಡುತ್ತಿರುವಾಗ ಕೇಳಬಹುದು. ಸ್ತೋತ್ರವು ಕಂಠಪಾಠವಿರುವ ಸಾಧಕರು ಸ್ತೋತ್ರವನ್ನು ಕೇಳುತ್ತಾ ಸ್ತೋತ್ರವನ್ನು ಹೇಳಬಹುದು.

೭. ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರದ ಕಾಲಾವಧಿಯನ್ನು ಉಪಾಯದಲ್ಲಿ ಹಿಡಿಯಬಹುದೇ ?

ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರದ ಬೆಳಗ್ಗಿನ ಮತ್ತು ಸಾಯಂಕಾಲದ ೨೩ ನಿಮಿಷಗಳ ಅವಧಿಯನ್ನು ಎಂದರೆ ಒಟ್ಟು ೪೬ ನಿಮಿಷಗಳ ಅವಧಿಯನ್ನು ತಮ್ಮ ಆಧ್ಯಾತ್ಮಿಕ ಉಪಾಯಗಳ ಅವಧಿಯಲ್ಲಿ ಹಿಡಿಯಬಹುದು.

೭. ಸಾಧಕಿಯರು ಮಾಸಿಕ ಸರದಿಯ ಸಮಯದಲ್ಲಿ ಸ್ತೋತ್ರವನ್ನು ಕೇಳಬಹುದೇ ?

ಸಾಧಕಿಯರ ಮಾಸಿಕ ಸರದಿಯ ನಡೆಯುತ್ತಿರುವಾಗ ಈ ಸ್ತೋತ್ರವನ್ನು ಕೇಳಬಹುದು. ಸಾಧಕಿಯರಿಗೆ ದೇವಿಯ ಪ್ರಕಟ ಶಕ್ತಿಯ ತೊಂದರೆ ಆಗಬಾರದೆಂದು ಅವರು ಶ್ರೀಬಗಲಾಮುಖಿ ದೇವಿಯ ಚರಣಗಳಲ್ಲಿ ಪ್ರಾರ್ಥನೆ ಮಾಡಿ ನಂತರ ಈ ಸ್ತೋತ್ರವನ್ನು ಕೇಳಬೇಕು. ‘ಹೇ ಬಗಲಾಮುಖಿ ದೇವಿ, ನಾನು ನಿನಗೆ ಸಂಪೂರ್ಣ ಶರಣಾಗಿದ್ದೇನೆ. ನಿನ್ನ ಈ ಸ್ತೋತ್ರದಿಂದ ಪ್ರಕ್ಷೇಪಿತವಾಗುವ ಶಕ್ತಿಯಿಂದ ನನಗೆ ತೊಂದರೆಯಾಗದಿರಲಿ ಮತ್ತು ನನಗೆ ನಿನ್ನ ಶಕ್ತಿ ಸಹಿಸಲು ಸಾಧ್ಯವಾಗಲಿ, ಎಂದು ನಿನ್ನ ಚರಣಗಳಲ್ಲಿ ವಿನಮ್ರ ಪ್ರಾರ್ಥನೆ.

೯. ಸಾಧಕರು ಶ್ರೀಬಗಲಾಮುಖಿದೇವಿಯ ಜಪ ಮಾಡುವ ಅವಶ್ಯಕತೆಯಿಲ್ಲ

ಸಾಧಕರು ಶ್ರೀಬಗಲಾಮುಖಿದೇವಿಯ ಜಪ ಮಾಡುವ ಅವಶ್ಯಕತೆ ಇಲ್ಲ. ಪ್ರಾಣಶಕ್ತಿವಹನಕ್ಕನುಸಾರ ಹುಡುಕಿದ ಜಪ ಅಥವಾ ಶ್ರೀಕೃಷ್ಣನ ನಾಮಜಪ ಅಥವಾ ಸಂತರು ಹೇಳಿದ ಜಪ ಅಥವಾ ಇಷ್ಟದೇವತೆಯ ನಾಮಜಪ ಮಾಡಬೇಕು.

೧೦. ಶ್ರೀಬಗಲಾಮುಖಿ ಗಾಯತ್ರಿಮಂತ್ರ

ಸಾಧಕರು ಶ್ರೀಬಗಲಾಮುಖಿದೇವಿಯ ಶಕ್ತಿ ಮತ್ತು ಚೈತನ್ಯ ಹೆಚ್ಚು ಪ್ರಮಾಣದಲ್ಲಿ ಗ್ರಹಣ ಮಾಡಲು ಸಾಧ್ಯವಾಗಲೆಂದು ಮುಂದಿನ ಉಪಾಯ ಮಾಡಬೇಕು. ಶ್ರೀಬಗಲಾಮುಖಿ ಗಾಯತ್ರಿಮಂತ್ರ ಖಾಲಿ ಕಾಗದದ ಮೇಲೆ ಬರೆದು ಆ ಕಾಗದವನ್ನು ಮಡಚಿ ಪ್ಲಾಸ್ಟಿಕಿನ ಸಣ್ಣ ಚೀಲದಲ್ಲಿ ಅಥವಾ ತಾಯಿತ ಹಾಕಿ ಹಳದಿ ಅಥವಾ ಕೆಂಪು ದಾರದಲ್ಲಿ ಈ ಮಂತ್ರ ಬರೆದ ಕಾಗದವನ್ನು ಕುತ್ತಿಗೆಯಲ್ಲಿ ಹಾಕಬೇಕು.

ಶ್ರೀ ಬಗಲಾಮುಖಿ ಗಾಯತ್ರಿ ಮಂತ್ರ

|| ಬಗಲಾಂಬಿಕಾಯೈ ವಿದ್ಮಹೇ ಬ್ರಹ್ಮಾಸ್ತ್ರವಿದ್ಯಾಯೈ ಧೀಮಹಿ |

ತನ್ನಃ ಸ್ತಂಭಿನೀ ಪ್ರಚೋದಯಾತ್ ||

೧೧. ಸಾಧಕರು ‘ಶ್ರೀಬಗಲಾದಿಗ್ಬಂಧನ ಸ್ತೋತ್ರ ಕೇಳುವುದರಿಂದ ಮತ್ತು ಅವಳ ಗಾಯತ್ರಿ ಮಂತ್ರ ಬರೆದ ಕಾಗದವನ್ನು ಕುತ್ತಿಗೆಯಲ್ಲಿ ಹಾಕುವುದರಿಂದಾಗುವ ಆಧ್ಯಾತ್ಮಿಕ ಲಾಭ !

ಅ. ಸಾಧಕರಿಗೆ ಹತ್ತು ದಿಕ್ಕುಗಳಿಂದಾಗುವ ಆಕ್ರಮಣ ಮಾಡುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಅವರ ರಕ್ಷಣೆಯಾಗುತ್ತದೆ.

ಆ. ಈ ಸ್ತೋತ್ರದಿಂದ ಮತ್ತು ಗಾಯತ್ರಿ ಮಂತ್ರದಿಂದ ಪ್ರಕ್ಷೇಪಿತವಾಗುವ ಶ್ರೀಬಗಲಾಮುಖಿ ದೇವಿಯ ಮಾರಕ ಶಕ್ತಿ ಮತ್ತು ಚೈತನ್ಯ ಇವುಗಳಿಂದ ಶರೀರ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂ ಇವುಗಳ ಮೇಲಿನ ತೊಂದರೆದಾಯಕ ಶಕ್ತಿಗಳ ಆವರಣ ಬೇಗನೆ ನಾಶವಾಗುತ್ತದೆ.

ಇ. ಶ್ರೀಬಗಲಾಮುಖಿ ದೇವಿಯ ಮಾರಕ ಶಕ್ತಿ ಮತ್ತು ಚೈತನ್ಯ ಸಾಧಕರ ದೇಹದ ಸುತ್ತಲೂ ಕಾರ್ಯನಿರತವಾಗಿ ಸಾಧಕರ ಸುತ್ತಲೂ ದೇವಿಯ ಕೃಪೆಯ ಸಂರಕ್ಷಕ ಕವಚ ನಿರ್ಮಾಣವಾಗಿ ಅದು ೨೪ ಗಂಟೆ ಕಾರ್ಯನಿರತವಿರುತ್ತದೆ. ಅದರಿಂದ ಸಾಧಕರ ಕೆಟ್ಟ ಶಕ್ತಿ ಮತ್ತು ವಿವಿಧ ರೋಗರುಜಿನೆಗಳಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ.

ಈ. ಅದರಿಂದ ಮೇಲಿನ ಉಪಾಯ ಪ್ರತಿಯೊಬ್ಬ ಸಾಧಕರು ನಿಯಮಿತವಾಗಿ ಮಾಡಬೇಕು.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ), ಸನಾತನ ಆಶ್ರಮ, ರಾಮನಾಥಿ ಗೋವಾ (೧೮.೧೦.೨೦೧೯)