ಭಗವಾನ ಶ್ರೀರಾಮನಿಗೇ ರಾಮಜನ್ಮಭೂಮಿ !

ಸುನ್ನೀ ವಕ್ಫ್ ಬೋರ್ಡ್‌ಗೆ ಅಯೋಧ್ಯೆಯಲ್ಲಿ ಬೇರೆಡೆ ೫ ಎಕರೆ ಭೂಮಿ ನಿರ್ಮೋಹಿ ಆಖಾಡಾದ ಹಕ್ಕುಮಂಡಣೆ ವಜಾ !

ರಾಮಜನ್ಮಭೂಮಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಗಳು ೩ ತಿಂಗಳಲ್ಲಿ ಟ್ರಸ್ಟ್‌ಅನ್ನು ಸ್ಥಾಪನೆ ಮಾಡಬೇಕು ! ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ೫ ಸದಸ್ಯರ ಸಾಂವಿಧಾನಿಕ ಪೀಠವು ನವೆಂಬರ್ ೯ ರಂದು ರಾಮಜನ್ಮಭೂಮಿ ಖಟ್ಲೆಯ ತೀರ್ಪನ್ನು ನೀಡುತ್ತಾ ಅಯೋಧ್ಯೆಯ ವಿವಾದಾತ್ಮಕ ೨.೭೭ ಎಕರೆ ಹಾಗೂ ಉಳಿದ ೬೭ ಎಕರೆ ರಾಮಜನ್ಮಭೂಮಿ ರಾಮಲಲ್ಲಾ ವಿರಾಜಮಾನನದ್ದಾಗಿದೆ ಎಂದು ಸ್ಪಷ್ಟ ತೀರ್ಪನ್ನು ನೀಡಿತು. ಸುನ್ನೀ ವಕ್ಫ್ ಬೋರ್ಡ್ ಹಾಗೂ ನಿರ್ಮೋಹಿ ಆಖಾಡಾದ ಈ ಭೂಮಿಯ ಮೇಲಿನ ಹಕ್ಕಿನ ಪ್ರತಿಪಾದನೆ ಯನ್ನು ವಜಾಗೊಳಿಸಿತು; ಆದರೆ ಕೇಂದ್ರ ಸರಕಾರವು ಸುನ್ನಿ ವಕ್ಫ್ ಬೋರ್ಡ್‌ಗೆ ೧೯೯೩ ರಲ್ಲಿ ಅಯೋಧ್ಯೆಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಿಂದ (ಸರಕಾರ ೬೭ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.) ಅಥವಾ ಅಯೋಧ್ಯೆಯಲ್ಲಿಯೇ ಬೇರೆ ಸ್ಥಳದಲ್ಲಿ ಪರ್ಯಾಯ ೫ ಎಕರೆ ಭೂಮಿಯನ್ನು ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಆದೇಶವನ್ನು ನೀಡಿದೆ. ನ್ಯಾಯಾಲಯವು ರಾಮಜನ್ಮಭೂಮಿಯನ್ನು ರಾಮಲಲ್ಲಾ ವಿರಾಜಮಾನಗೆ ನೀಡುತ್ತಾ, ಮುಂಬರುವ ೩ ತಿಂಗಳಲ್ಲಿ ಟ್ರಸ್ಟ್‌ಅನ್ನು ಸ್ಥಾಪಿಸಿ ಅದರ ವ್ಯವಸ್ಥಾಪನೆಯ ಆಯೋಜನೆಯನ್ನು ಮಾಡ ಬೇಕೆಂಬ ಆದೇಶವನ್ನೂ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೀಡಿದೆ. ಆದ್ದರಿಂದ ಮುಂದಿನ ೩ ತಿಂಗಳ ನಂತರ ರಾಮಜನ್ಮಭೂಮಿಯ ಮೇಲೆ ಶ್ರೀರಾಮಮಂದಿರದ ಕಟ್ಟಡ ಕಾಮಗಾರಿ ಆರಂಭವಾಗಬಹುದು, ಎಂಬುದು ಸ್ಪಷ್ಟವಾಗಿದೆ. ಸರ್ವೋಚ್ಚ ನ್ಯಾಯಾಲಯವು ಬೆಳಗ್ಗೆ ೧೦.೩೦ ಕ್ಕೆ ತಮ್ಮ ೧ ಸಾವಿರದ ೪೫ ಪುಟಗಳ ತೀರ್ಪಿನ ಪತ್ರದ ಮುಖ್ಯಭಾಗವನ್ನು ಓದಿ ಹೇಳಿದರು. ನ್ಯಾಯಾಲಯವು ೩೦ ರಿಂದ ೩೫ ನಿಮಿಷಗಳಲ್ಲಿ ಈ ತೀರ್ಪನ್ನು ನೀಡಿತು.  ತೀರ್ಪನ್ನು ನೀಡಿದ ಸಾಂವಿಧಾನಿಕ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯಿ ಇವರೊಂದಿಗೆ ನ್ಯಾಯಾಧೀಶ ಶರದ ಬೊಬಡೆ, ನ್ಯಾಯಧೀಶ ಧನಂಜಯ ಚಂದ್ರಚೂಡ, ನ್ಯಾಯಾಧೀಶ ಅಶೋಕ ಭೂಷಣ ಹಾಗೂ ನ್ಯಾಯಾಧೀಶ ಎಸ್. ಅಬ್ದುಲ್ ನಾಜಿರ ಇವರಿದ್ದರು. ನ್ಯಾಯಾಲಯದಲ್ಲಿ ಆಗಸ್ಟ್ ೬ ರಿಂದ ಸತತವಾಗಿ ೪೦ ದಿನಗಳ ಕಾಲ ಈ ಪ್ರಕರಣದ ಆಲಿಕೆಯು ನಡೆಯುತ್ತಿತ್ತು. ೧೬ ಅಕ್ಟೋಬರ್ ೨೦೧೯ ರಂದು ಈ ಖಟ್ಲೆಯ ಆಲಿಕೆ ಪೂರ್ಣವಾಗಿತ್ತು. (‘ರಾಮ ಕಾಲ್ಪನಿಕ ಪುರುಷನಾಗಿದ್ದಾನೆ, ಎಂದು ಹೇಳುವವರಿಗೆ ನ್ಯಾಯಾಲಯದ ತೀರ್ಪು ಕಪಾಳಮೋಕ್ಷ ! – ಸಂಪಾದಕರು) ೨೦೧೦ ರಲ್ಲಿ ಅಲಾಹಾಬಾದ ಉಚ್ಚ ನ್ಯಾಯಾಲಯದ ವಿಭಾಗೀಯಪೀಠವು ಅಯೋಧ್ಯೆಯ ೨.೭೭ ಎಕರೆ ಭೂಮಿಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಿದ್ದ ರಾಮಲಲ್ಲಾ ವಿರಾಜಮಾನ, ನಿರ್ಮೋಹಿ ಆಖಾಡಾ ಹಾಗೂ ಉತ್ತರ ಪ್ರದೇಶದ ಸುನ್ನೀ ವಕ್ಫ್ ಬೋರ್ಡ್‌ಗೆ ಹಂಚುವ ಆದೇಶವನ್ನು ನೀಡಿತ್ತು. ಈ ತೀರ್ಪಿನ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಒಟ್ಟು ೧೪ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಆ ಎಲ್ಲ ಅರ್ಜಿಗಳ ಆಲಿಕೆಯನ್ನು ಒಟ್ಟಾಗಿ ತೆಗೆದುಕೊಂಡಿತು. ಗೋಪಾಲ ವಿಶಾರದ ಇವರು ಸಲ್ಲಿಸಿದ ‘ಪೂಜೆಯ ಅಧಿಕಾರ ಪಡೆಯುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಮಾನ್ಯ ಮಾಡಿತು.

ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಮಂಡಿಸಿದ ಅಂಶಗಳು

೧. ನ್ಯಾಯಾಲಯವು ಪ್ರಪ್ರಥಮವಾಗಿ ಶಿಯಾ ವಕ್ಫ್ ಬೋರ್ಡ್ ವಿರುದ್ಧ ಸುನ್ನೀ ವಕ್ಫ್ ಬೋರ್ಡ್‌ನ ಖಟ್ಲೆಯಲ್ಲಿ ಶಿಯಾ ವಕ್ಫ್ ಬೋರ್ಡ್‌ನ ಹಕ್ಕು ಮಂಡಣೆಯ ಅರ್ಜಿಯನ್ನು ವಜಾಗೊಳಿಸಿತು. ರಾಮಜನ್ಮಭೂಮಿ ಸುನ್ನೀ ವಕ್ಫ್ ಬೋರ್ಡ್‌ನದ್ದಾಗಿರದೇ ಅದು ಶಿಯಾ ವಕ್ಫ್ ಬೋರ್ಡ್‌ನದ್ದಾಗಿದೆ ಎಂದು ಶಿಯಾ ವಕ್ಫ್ ಬೋರ್ಡ್ ಹೇಳಿತ್ತು.

೨. ನ್ಯಾಯಾಲಯವು ತೀರ್ಪನ್ನು ಓದುತ್ತಾ, ಓರ್ವ ವ್ಯಕ್ತಿಯ ನಂಬಿಕೆಯು ಇನ್ನೊಬ್ಬ ವ್ಯಕ್ತಿಯ ಅಧಿಕಾರಕ್ಕೆ ಅಡ್ಡಿಯಾಗಲಾರದು ಎಂಬುದನ್ನು ನ್ಯಾಯಾಲಯವು ನೋಡಬೇಕಾಗುತ್ತದೆ. ನ್ಯಾಯಾಲಯವು ವ್ಯಾಪ್ತಿ ಯಲ್ಲಿ ಅದರ ವಿವರಣೆಯನ್ನು ಮಾಡಲು ಸಾಧ್ಯವಿಲ್ಲ. ನಮಾಜು ಪಠಣ ಮಾಡುವ ಸ್ಥಳವು ಮಸೀದಿ ಎಂದು ಹೇಳುವ ಹಕ್ಕನ್ನು ನಾವು ಅಲ್ಲಗಳೆಯಲು ಸಾಧ್ಯವಿಲ್ಲ.

೩. ನಿರ್ಮೋಹಿ ಆಖಾಡಾದ (ಮಾಲೀಕತ್ವದ ಅಧಿಕಾರ) ದಾವೆ ೬ ವರ್ಷಗಳ ನಂತರ ಸಲ್ಲಿಸಲಾಯಿತು. ಆದ್ದರಿಂದ ಅದನ್ನು ವಜಾ ಮಾಡಲಾಗಿದೆ. ನಿರ್ಮೋಹಿ ಆಖಾಡಾವು ತನ್ನ ದಾವೆಯನ್ನು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ನಿರ್ಮೋಹಿ ಸೇವಾದಾರರಲ್ಲ. ರಾಮಲಲ್ಲಾ ‘ನ್ಯಾಯಾಂಗ ವ್ಯಕ್ತಿಯಾಗಿದ್ದಾರೆ (ಯಾವುದಾದರೊಂದು ಮೂರ್ತಿ ನ್ಯಾಯಾಲಯದಲ್ಲಿ ಪಕ್ಷವೆಂದು ಮೊಕದ್ದಮೆಯನ್ನು ಹೂಡಬಹುದು, ಎಂಬ ಅವಕಾಶವಿದೆ.) ರಾಮ ಜನ್ಮಸ್ಥಳಕ್ಕೆ ಈ ಸ್ಥಾನಮಾನ ನೀಡಲು ಸಾಧ್ಯವಿಲ್ಲ.

೪. ಪುರಾತತ್ತ್ವ ಇಲಾಖೆಯ ಸಾಕ್ಷಿಗಳು ಸ್ವೀಕಾರ್ಹ

ಪುರಾತತ್ವ ಇಲಾಖೆಯ ಸಾಕ್ಷಿಯ ಕಡೆ ದುರ್ಲಕ್ಷ ಮಾಡಲು ಸಾಧ್ಯವಿಲ್ಲ. ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಉತ್ಖನನ ವಾಗಿದ್ದು ಅದು ಪಾರದರ್ಶಕವಾಗಿದೆ. ಆ ಸಾಕ್ಷಿಯನ್ನು ತಿರಸ್ಕರಿಸಬೇಕೆಂಬ ಬೇಡಿಕೆ ತಪ್ಪಿದೆ. ಸುನ್ನೀ ವಕ್ಫ್ ಬೋರ್ಡ್‌ವು ಯುಕ್ತಿವಾದದ ಸಮಯದಲ್ಲಿ ದಾವೆಯನ್ನು ಬದಲಾಯಿಸಿತು. ಮೊದಲು ಅದು ಭೂಮಿಯ ಕೆಳಗಿನ ರಚನೆಯು ‘ಈದ್ಗಾಹ ಆಗಿದೆ. ಅಂದರೆ ಬಾಬರಿ ಮಸೀದಿಯು ಖಾಲಿ ಇರುವ ಸ್ಥಳದಲ್ಲಿ ನಿರ್ಮಿಸಿರಲಿಲ್ಲ ! ಈ ಭೂಮಿಯ ಅಡಿಯಲ್ಲಿ ವಿಶಾಲ ರಚನೆ ಇತ್ತು ಎಂದು ಹೇಳಿತ್ತು. ಈ ರಚನೆಯು ಇಸ್ಲಾಮ್‌ನಂತೆ ಇರಲಿಲ್ಲ, ಪುರಾತತ್ವದ ಇಲಾಖೆಯು ಈ ವಾಸ್ತುವು (ಭೂಮಿಯ ಅಡಿಯಲ್ಲಿ ಸಿಕ್ಕಿದ) ೧೨ ನೇ ಶತಮಾನದ್ದಾಗಿದೆ ಎಂದು ಹೇಳಿದೆ; ಆದರೆ ಅದನ್ನು ಒಡೆದು ಅಲ್ಲಿ ಮಸೀದಿಯನ್ನು ನಿರ್ಮಿಸಿದೆ, ಎಂಬುದು ಪುರಾತತ್ವ ಇಲಾಖೆ ಹೇಳಲು ಸಾಧ್ಯವಾಗಲಿಲ್ಲ.

೫. ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಎಂದು ನಂಬುತ್ತಾರೆ !

ಹಿಂದೂಗಳು ಅಯೋಧ್ಯೆಯನ್ನು ರಾಮನ ಜನ್ಮಸ್ಥಳ ಎಂದು ನಂಬುತ್ತಾರೆ. ಮುಖ್ಯ ಗುಮ್ಮಟ ಇರುವ ಸ್ಥಳವನ್ನು ರಾಮನು ಹುಟ್ಟಿದ ಸ್ಥಳ ಎಂದು ನಂಬುತ್ತಾರೆ. ಅಯೋಧ್ಯೆಯಲ್ಲಿ ರಾಮನ ಜನ್ಮ ಆಗಿರುವ ದಾವೆಗೆ ಯಾವುದೇ ರೀತಿಯ ಭಿನ್ನಮತವಿಲ್ಲ. ವಿವಾದಾತ್ಮಕ ಸ್ಥಳದಲ್ಲಿ ಹಿಂದೂಗಳು ಪೂಜೆಯನ್ನು ಮಾಡುತ್ತಿದ್ದರು. ಸಾಕ್ಷಿದಾರರ ಪಾಟಿಸವಾಲಿನಿಂದ ಹಿಂದೂಗಳ ಈ ದಾವೆಯು ಸುಳ್ಳು ಎಂದು ಪರಿಗಣಿಸಲು ಆಗಲಿಲ್ಲ. ರಾಮಲಲ್ಲಾನು ಐತಿಹಾಸಿಕ ಗ್ರಂಥ, ಯಾತ್ರಿಕರ ವಿವರಣೆ, ಗೆಝೆಟಿಯರ ಇದರ ಆಧಾರದಿಂದಲೇ ಅವರು ಅದರ ಪರವಾಗಿ ಮಂಡಿಸಿದರು. ಚಬೂತರಾ, ಭಂಡಾರ, ಸೀತಾ ರಸೋಯಿ ಇತ್ಯಾದಿ ಸ್ಥಳಗಳಿಂದಾಗಿ ಈ ದಾವೆಗೆ ಆಧಾರ ಸಿಕ್ಕಿತು. ಹಿಂದೂಗಳು ಈ ಸ್ಥಳದಲ್ಲಿ ಪರಿಕ್ರಮವನ್ನೂ ಮಾಡುತ್ತಿದ್ದರು; ಆದರೆ ಮಾಲೀಕತ್ವವು ಕೇವಲ ಶ್ರದ್ಧೆಯ ಮೇಲೆ ಸಾಬೀತಾಗುವುದಿಲ್ಲ.

೬. ಹಿಂದೂಗಳು ಪೂಜೆಯನ್ನು ಮಾಡುತ್ತಿದ್ದರು; ಆದರೆ ಮುಸಲ್ಮಾನರು ನಮಾಜಪಠಣ ಮಾಡುತ್ತಿರುವುದಕ್ಕೆ ಸಾಕ್ಷಿ ಇಲ್ಲ !

ಬಾಬರನ ಕಾಲದಲ್ಲಿ ಮೀರ ಬಾಕಿಯು ಬಾಬರಿ ಮಸೀದಿಯನ್ನು ಕಟ್ಟಿದನು. ೧೮೫೬ ರ ಹಿಂದೆ ಹಿಂದೂ ಭಕ್ತರು ಈ ಸ್ಥಳದಲ್ಲಿ ಪೂಜೆಯನ್ನು ಮಾಡುತ್ತಿದ್ದರು. ೧೮೫೯ ರಲ್ಲಿ ಬ್ರಿಟೀಷರು ಇಲ್ಲಿ ಬೇಲಿ ಹಾಕಿದ್ದರಿಂದ ವಿವಾದವು ಆರಂಭವಾಯಿತು. ಈ ಸ್ಥಳದಲ್ಲಿ ಪೂಜೆಯನ್ನು ನಿಲ್ಲಿಸಿದ್ದರಿಂದ ಹಿಂದೂಗಳು ಹೊರಗೆ ಚಬೂತರಾವನ್ನು ನಿರ್ಮಿಸಿ ಪೂಜೆಯನ್ನು ಆರಂಭಿಸಿದರು. ಸುನ್ನೀ ವಕ್ಫ್ ಬೋರ್ಡ್ ಈ ಸ್ಥಳವನ್ನು ಮಸೀದಿ ಎಂದು ಘೋಷಿಸುವಂತೆ ಬೇಡಿಕೆಯನ್ನು ಮಾಡಿದರು. ಮುಸಲ್ಮಾನ ಪಕ್ಷವು, ಮಸೀದಿ ಆರಂಭವಾಗಿದ್ದರಿಂದ ೧೯೪೯ ರ ತನಕ ಇಲ್ಲಿ ನಮಾಜು ಪಠಣ ಮಾಡುತ್ತಿದ್ದರು ಎಂದು ವಾದಿಸಿತ್ತು; ಆದರೆ ೧೮೫೬-೫೭ ತನಕದ ಕಾಲಾವಧಿಯಲ್ಲಿ ಈ ರೀತಿಯ ಯಾವುದೇ ಸಾಕ್ಷಿಯು ಇಲ್ಲ.

೭. ಮುಸಲ್ಮಾನ ಸ್ಥಳ ಎನ್ನಲು ಸಾಕ್ಷಿ ಇಲ್ಲ !

೧೯೩೪ ರ ದಂಗೆಯ ನಂತರ ಈ ಭೂಮಿಯ ಮೇಲೆ ಮುಸಲ್ಮಾನರ ನಿಯಂತ್ರಣ ಉಳಿಯಲಿಲ್ಲ. ಆ ಸ್ಥಳದ ಮಾಲೀಕತ್ವದ ಅಧಿಕಾರವನ್ನು ಸಾಬೀತು ಪಡಿಸಲಾಗಲಿಲ್ಲ. ಯಾತ್ರಿಕರ ವರದಿ ಹಾಗೂ ಪುರಾತತ್ವ ಇಲಾಖೆಯು ಮಂಡಿಸಿದ ಸಾಕ್ಷಿಯು ಹಿಂದೂಗಳ ಪರವಾಗಿತ್ತು. ಹಿಂದೂಗಳ ಪೂಜೆಯು ಹೊರಗಡೆ ನಡೆಯುತ್ತಿತ್ತು; ಆದರೆ ಮುಸಲ್ಮಾನರು ಒಳಭಾಗದಲ್ಲಿ ೧೮೫೬ ರ ಮೊದಲಿನ ನಿಯಂತ್ರಣದ ಬಗ್ಗೆ ಸಾಬೀತು ಪಡಿಸಲಾಗಲಿಲ್ಲ. ೧೯೪೯ ರಲ್ಲಿ ಇಲ್ಲಿ ಎರಡು ಮೂರ್ತಿಗಳನ್ನು ಇಡಲಾಯಿತು.

೮. ಅಲಾಹಾಬಾದ ಉಚ್ಚ ನ್ಯಾಯಾಲಯದ ಭೂಮಿ ಹಂಚುವಿಕೆಯ ನಿರ್ಣಯದ ತರ್ಕವು ಅಸಮಂಜಸ !

ಅಲಾಹಾಬಾದ ಉಚ್ಚ ನ್ಯಾಯಾಲಯದ ೩ ಭಾಗಗಳಲ್ಲಿ ಭೂಮಿ ಹಂಚಿಕೆಯ ನಿರ್ಣಯದ ತರ್ಕವು ಅಸಮಂಜಸವಾಗಿದೆ ಎಂದಿದ್ದಾರೆ. (ಅಲಾಹಾಬಾದ ಉಚ್ಚ ನ್ಯಾಯಾಲಯವು ೩೦ ಸಪ್ಟೆಂಬರ್ ೨೦೧೦ ರಂದು ಈ ನಿರ್ಣಯವನ್ನು ನೀಡಿತ್ತು ಹಾಗೂ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ ನಂತರ ಇಂದು ಹೆಚ್ಚುಕಡಿಮೆ ೧೦ ವರ್ಷಗಳ ನಂತರ ತೀರ್ಪು ಬಂದಿದೆ. ಅಲಾಹಾಬಾದ ಉಚ್ಚ ನ್ಯಾಯಾಲಯದ ಈ ನಿರ್ಣಯದಿಂದಾಗಿ ೧೦ ವರ್ಷ ಈ ಮೊಕದ್ದಮೆ ನಡೆಯಿತು. ಇದರಿಂದಾಗಿ ದೇಶದ ಮಹತ್ವದ ಕಾಲಾವಧಿ ವ್ಯರ್ಥವಾಯಿತು, ಹೀಗೆ ಯಾರಾದರೂ ಹೇಳಿದರೆ ಅದಕ್ಕೆ ಆಶ್ವರ್ಯವೆನಿಲ್ಲ ! – ಸಂಪಾದಕರು)

೯. ಶ್ರದ್ಧೆ ಇದೊಂದು ವೈಯಕ್ತಿಕವಾದ ಅಂಶ !

ಪ್ರಭು ಶ್ರೀರಾಮನ ಜನ್ಮ ಇದೇ ಸ್ಥಳದಲ್ಲಿ ಆಗಿತ್ತು, ಎಂದು ಹಿಂದೂಗಳ ಶ್ರದ್ಧೆಯಾಗಿದೆ. ಆದರೆ ಮುಸಲ್ಮಾನರು ಇದನ್ನು ಬಾಬರಿ ಮಸೀದಿ ಎಂದು ತಿಳಿಯುತ್ತಾರೆ. ಶ್ರದ್ಧೆ ಇದು ಪ್ರತಿಯೊಬ್ಬರ ವೈಯಕ್ತಿಕ ಅಂಶವಾಗಿದೆ.

ರಾಮಜನ್ಮಭೂಮಿಯಲ್ಲಿ ಪೂಜೆಯನ್ನು ಮಾಡುವ ಅಧಿಕಾರವನ್ನು ಕೇಳುವ ಗೋಪಾಲಸಿಂಹ ವಿಶಾರದ !

ಗೋಪಾಲಸಿಂಹ ವಿಶಾರದ

ಗೋಪಾಲಸಿಂಹ ವಿಶಾರದ ಇವರು ರಾಮಜನ್ಮಭೂಮಿಯಲ್ಲಿ ಪೂಜೆಯನ್ನು ಮಾಡುವ ಅಧಿಕಾರವನ್ನು ನೀಡುವ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ಈಗ ನೀಡಿದಂತಹ ತೀರ್ಪಿನಲ್ಲಿ ಅವರಿಗೆ ಆ ಅಧಿಕಾರವನ್ನು ನೀಡಿದ್ದಾರೆ; ಆದರೆ ಆ ಅಧಿಕಾರವನ್ನು ಉಪಯೋಗಿಸಲು ಸಾಧ್ಯವಿಲ್ಲ. ೩೩ ವರ್ಷಗಳ ಹಿಂದೆ ಅಂದರೆ ೧೯೮೩ರಲ್ಲಿ ವಿಶಾರದ ಇವರ ಮೃತ್ಯುವಾಗಿದೆ. ವಿಶಾರದ ಇವರೇ ೧೯೪೯ ರಲ್ಲಿ ರಾಮಜನ್ಮಭೂಮಿಯ ಸ್ಥಳದಲ್ಲಿ ಮೂರ್ತಿ ಇಟ್ಟ ನಂತರ ೧೬ ಜನವರಿ ೧೯೯೫೦ ರಲ್ಲಿ ಫೈಜಾಬಾದ್ ನ್ಯಾಯಾಲಯದಲ್ಲಿ ಪೂಜೆಯ ಅಧಿಕಾರಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ಅವರು ರಾಮಜನ್ಮಭೂಮಿಯ ಸ್ಥಳದಲ್ಲಿ ಇಡಲಾಗಿದ್ದ ಮೂರ್ತಿಯನ್ನು ತೆಗೆಯಬಾರದು, ಎಂಬ ಬೇಡಿಕೆ ಯನ್ನೂ ಮಾಡಿದ್ದರು. ವಿಶಾರದ ಹಿಂದೂ ಮಹಾಸಭೆಯೊಂದಿಗೆ ಸಂಪರ್ಕದಲ್ಲಿದ್ದು ಅವರ ಮೃತ್ಯುನಿನ ನಂತರ ಅವರ ಮಗ ರಾಜೇಂದ್ರ ಸಿಂಹ ಇವರು ಈ ಖಟ್ಲೆಯನ್ನು ಹೋರಾಡಿದರು.