ರಾಮೋ ರಾಜಮಣಿಃ ಸದಾ ವಿಜಯತೆ !

ವಿಶೇಷ ಸಂಪಾದಕೀಯ

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೆ |

ರಘುನಾಥಾಯ ನಾಥಾಯ ಸೀತಾಯಾಃಪತಯೇ ನಮಃ ||

ಅರ್ಥ : ಯಾರಿಗೆ ರಾಮ, ರಾಮಭದ್ರ, ರಾಮಚಂದ್ರ, ವೇಧಾ (ಸೃಷ್ಟಿಕರ್ತ), ರಘುನಾಥ, ನಾಥ ಇತ್ಯಾದಿ ಹೆಸರುಗಳಿಯೋ, ಇಂತಹ ಸೀತಾಪತಿ ಶ್ರೀರಾಮನಿಗೆ ನಮಸ್ಕಾರಗಳು. ರಾಮಜನ್ಮ ಭೂಮಿಗೆ ಸಂಬಂಧಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ಸನಾತನ ಪರಿವಾರದಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

ಅಯೋಧ್ಯೆಯಲ್ಲಿನ ಶ್ರೀರಾಮಜನ್ಮಭೂಮಿಯ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಾಧೀಶರು ನವೆಂಬರ್ ೯ ರಂದು ನೀಡಿದ ತೀರ್ಪು ‘ಐತಿಹಾಸಿಕವೆಂದೇ ಹೇಳಬೇಕಾ ಗುತ್ತದೆ. ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ‘ರಾಮಲಲ್ಲಾ ವಿರಾಜಮಾನನ ಪರವಾಗಿ ನೀಡುವಾಗ ನಿರ್ಮೋಹಿ ಆಖಾಡಾ ಮತ್ತು ಸುನ್ನೀ ವಕ್ಫ್ ಬೋರ್ಡ್ ಇವರ ದಾವೆಯನ್ನು ತಳ್ಳಿ ಹಾಕುತ್ತಾ ‘ಶ್ರೀರಾಮನ ಜನ್ಮಭೂಮಿಯು ವಿಭಜನೆಯಾಗಲು ಸಾಧ್ಯವಿಲ್ಲ, ಎಂದು ಸ್ಪಷ್ಟಪಡಿಸಿದೆ. ಸ್ಕಂದ ಪುರಾಣದಲ್ಲಿ ರಾಮಜನ್ಮಭೂಮಿಯ ಸ್ಥಳದ ಮಹಾತ್ಮೆಯನ್ನು ವಿವರಿಸುವಾಗ ರಾಮಜನ್ಮಸ್ಥಾನದ ದರ್ಶನವು ಮೋಕ್ಷದಾಯಕವಾಗಿದೆಯೆಂದು ಹೇಳಿದೆ. ಆದ್ದರಿಂದ ರಾಮನ ಜನ್ಮಸ್ಥಾನವು ರಾಮಭಕ್ತರಿಗೆ ಮಹತ್ವದ್ದಾಗಿತ್ತು ಹಾಗೂ ಅದು ರಾಮಭಕ್ತರಿಗೇ ಲಭಿಸಿತು. ಅದರ ವಿಭಜನೆಯು ಅನ್ಯಾಯ ವಾಗುತ್ತಿತ್ತು. ನ್ಯಾಯಾಲಯವು ಈ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಮಾರ್ಗವನ್ನು ಕೂಡ ಮುಕ್ತಗೊಳಿಸಿದೆ ಹಾಗೂ ಅದಕ್ಕಾಗಿ ನಕಾಶೆಯನ್ನು ತಯಾರಿಸಲು ಸರಕಾರಕ್ಕೆ ೩ ತಿಂಗಳ ಸಮಯಮಿತಿಯನ್ನು ಕೂಡ ನೀಡಿರುವುದು ಈ ತೀರ್ಪಿನ ಇನ್ನೊಂದು ಮಹತ್ವದ ಅಂಗವಾಗಿದೆ. ರಾಮಜನ್ಮಭೂಮಿಗಾಗಿ ಹಿಂದೂಗಳ ಸಂಘರ್ಷವು ಸ್ವಾತಂತ್ರ್ಯದ ನಂತರದ ವಿಷಯವಾಗಿರದೆ ಅದು ೧೫೨೮ ರಿಂದ ಆರಂಭವಾಗಿದೆ. ಅದಕ್ಕೆ ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದಿಂದ ಪೂರ್ಣವಿರಾಮ ಬಿದ್ದಿದೆ, ಎಂದು ಹೇಳಬಹುದು. ರಾಮಜನ್ಮಭೂಮಿಯ ವಿವಾದವು ಹಿಂದೂಗಳ ಅಭಿಮಾನದ ಪ್ರಶ್ನೆಯಾಗಿತ್ತು. ಈ ಜನ್ಮಭೂಮಿಗಾಗಿ ಈ ಹಿಂದೆ ೭೦ ಸಲ ಸಂಘರ್ಷ ಆಗಿತ್ತು. ಅದಕ್ಕಾಗಿ ಅನೇಕ ಜನರು ಬಲಿದಾನ ನೀಡಿದ್ದಾರೆ. ಈ ೭೦ ಸಂಘರ್ಷಗಳ ಇತಿಹಾಸವನ್ನು ಕೂಡ ನೋಡಬಹುದು; ಆದರೆ ಈ ಇತಿಹಾಸವು ಈ ಭೂಮಿಯು ಶ್ರೀರಾಮನ ಜನ್ಮಭೂಮಿಯೇ ಆಗಿದೆ, ಎಂದು ಸಿದ್ಧಪಡಿಸಲು ಸಾಧ್ಯವಾಗದ ಕಾರಣ ಅದು ನ್ಯಾಯಾಲಯದಲ್ಲಿ ಪುರಾವೆಯೆಂದು ಸಿದ್ಧವಾಗಿರಲಿಕ್ಕಿಲ್ಲ. ಆದ್ದರಿಂದ ಅಲಾಹಾಬಾದ ಉಚ್ಚ ನ್ಯಾಯಾಲಯವು ನೀಡಿದ ನಿರ್ಣಯದಲ್ಲಿ ರಾಮಜನ್ಮಭೂಮಿಯನ್ನು ಮೂವರೂ ಕಕ್ಷಿದಾರರಿಗೆ ಹಂಚಲಾಗಿತ್ತು. ಈ ನಿರ್ಣಯವು ಸರ್ವೋಚ್ಚ ನ್ಯಾಯಾಲಯದಲ್ಲಿ ಸುಧಾರಣೆಯಾಯಿತು, ಇದು ರಾಮನ ಕೃಪೆಯೇ ಆಗಿದೆ !

೨೦೧೪ ರಲ್ಲಿ ದೇಶದಲ್ಲಿ ನರೇಂದ್ರ ಮೋದಿ ಸರಕಾರ ಬಂದಿತು. ಈ ಸರಕಾರದಿಂದ ಹಿಂದೂಗಳಿಗೆ ಸಂಬಂಧಿಸಿದ ಕೆಲವು ವಿಷಯಗಳ ನಿರ್ಣಯವಾಗಬೇಕೆಂದು ಹಿಂದೂಗಳಿಗೆ ಅಪೇಕ್ಷೆಯಿತ್ತು. ಮೊದಲಿನ ೫ ವರ್ಷಗಳಲ್ಲಿ ಇಂತಹ ನಿರ್ಣಯವಾಗದಿರುವುದರಿಂದ ಹಿಂದೂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಬೇಸರವಾಗಿತ್ತು; ಆದರೂ ನಂತರದ ಚುನಾವಣೆಯಲ್ಲಿ ಜನರು ಮೋದಿ ಸರಕಾರದ ಮೇಲೆಯೇ ವಿಶ್ವಾಸವನ್ನಿಟ್ಟಿರುವು ದರಿಂದ ಅನಂತರ ಒಂದೊಂದೇ ರಾಷ್ಟ್ರಹಿತ ಕಾರ್ಯಗಳ ನಿರ್ಣಯ ವಾಗಲು ಆರಂಭವಾಯಿತು. ಕಾಶ್ಮೀರದಲ್ಲಿನ ೩೭೦ ಕಲಮ್ ರದ್ದುಪಡಿಸಿರುವುದು, ಸರಕಾರದ ಅಧಿಕಾರದಲ್ಲಿನ ಯೋಗ್ಯವಾದ ನಿರ್ಣಯವಾಗಿತ್ತು; ಇದರಿಂದ ಸರಕಾರವು ಹೊಗಳಿಕೆಗೆ ಪಾತ್ರವಾಯಿತು. ನಾಗರಿಕ ನೋಂದಣಿ, ಸಮಾನ ನಾಗರಿಕ ಕಾನೂನಿನ ದೃಷ್ಟಿಯಲ್ಲಿ ತೆಗೆದುಕೊಂಡಿರುವ ಮೌಖಿಕ ತಲಾಕ್ ರದ್ದು ಪಡಿಸುವ ನಿರ್ಣಯ, ಇದು ಕೂಡ ಪ್ರಶಂಸಾರ್ಹ ನಿರ್ಣಯವಾಗಿತ್ತು; ಆದರೆ ರಾಮಜನ್ಮಭೂಮಿಯ ಪ್ರಕರಣವು ನ್ಯಾಯಾಂಗ ವಿಷಯವಾಗಿದ್ದ ಕಾರಣ ಅದರಲ್ಲಿ ಸರಕಾರ ಹೆಚ್ಚೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ನಿರ್ಣಯವೂ ರಾಮಮಂದಿರ ನಿರ್ಮಾಣಕ್ಕಾಗಿ ಅನುಕೂಲಕರವಾಗಿರುವುದರಿಂದ ಮೋದಿ ಸರಕಾರ ಶೀಘ್ರದಲ್ಲಿಯೇ ರಾಮಮಂದಿರವನ್ನು ನಿರ್ಮಿಸಿ ಇನ್ನೊಂದು ಗರಿಯನ್ನು ತನ್ನ ಕಿರೀಟದ ಮೇಲೇರಿಸಬಹುದು. ಅದರಲ್ಲಿ ಶ್ರೀರಾಮನ ಆಶೀರ್ವಾದ ಮತ್ತು ಎಲ್ಲ ಹಿಂದೂಗಳ ಬೆಂಬಲ ಸರಕಾರಕ್ಕೆ ಸಿಗುವುದು.

ಧಾರ್ಮಿಕ ಸೌಹಾರ್ದತೆ !

ಸನಾತನ ಧರ್ಮವು ಜಗತ್ತಿನ ಎಲ್ಲ ಕ್ಷೇತ್ರಗಳಿಗೂ ಅನೇಕ ಹಿತಕಾರಿ ವಿಷಯಗಳನ್ನು ನೀಡಿದೆ. ಅದೇ ರೀತಿ ಶ್ರೀರಾಮನ ಶ್ರದ್ಧಾಸ್ಥಾನಕ್ಕೂ ಜಗತ್ತಿನಾದ್ಯಂತ ಮನ್ನಣೆಯಿದೆ. ಶ್ರೀರಾಮನ ಚರಿತ್ರೆ ಆದರ್ಶವಾಗಿದೆ. ಬುದ್ಧಿಜೀವಿಗಳು ಶ್ರೀರಾಮನನ್ನು ಸಂಕುಚಿತ ದೃಷ್ಟಿಯಿಂದ ನೋಡು ತ್ತಿರುವುದರಿಂದ ಅವರಿಗೆ ಶ್ರೀರಾಮನಲ್ಲಿಯೂ ಕೊರತೆಗಳು ಕಾಣುತ್ತವೆ. ಬುದ್ಧಿಯ ಮಿತಿಯೂ ಇದರ ಹಿಂದಿನ ಒಂದು ಕಾರಣವಾಗಿದೆ. ಇಂಡೋನೇಶಿಯಾ, ಥಾಯಲ್ಯಾಂಡ್, ಮಲೇಶಿಯಾ ಇತ್ಯಾದಿ ಮುಸಲ್ಮಾನಪ್ರಾಬಲ್ಯವಿರುವ ದೇಶಗಳಲ್ಲಿ ಶ್ರೀರಾಮನಿಗೆ ಗೌರವದ ಸ್ಥಾನವಿದೆ. ಈ ದೇಶಗಳಲ್ಲಿನ ಮುಸಲ್ಮಾನರು, ನಮ್ಮ ಧರ್ಮ ಇಸ್ಲಾಮ್ ಆಗಿದ್ದರೂ ನಮ್ಮ ಸಂಸ್ಕೃತಿಯಲ್ಲಿ ಶ್ರೀರಾಮನಿಗೆ ಗೌರವದ ಸ್ಥಾನವಿದೆ, ಎಂದು ಹೇಳುತ್ತಾರೆ. ಶೇ. ೯೦ ರಷ್ಟು ಮುಸಲ್ಮಾನ ಜನಸಂಖ್ಯೆ ಇರುವ ಇಂಡೋನೇಶಿಯಾದ ನೋಟಿನ ಮೇಲೆ ಶ್ರೀರಾಮನ ಚಿತ್ರವನ್ನು ಮುದ್ರಿಸಲಾಗುತ್ತದೆ. ಇಲ್ಲಿ ಸರಕಾರದ ವತಿಯಿಂದ ಒಂದು ತಿಂಗಳು ಶ್ರೀರಾಮನ ಲೀಲೆಯನ್ನು ಪ್ರಸ್ತುತಪಡಿಸಲಾಗುತ್ತದೆ. ಬೌದ್ಧ ಧರ್ಮೀಯರಾಗಿರುವ ಥಾಯಲ್ಯಾಂಡಿನ ಎಲ್ಲ ರಾಜರು ಕೂಡ ತಮ್ಮನ್ನು ಶ್ರೀರಾಮನ ವಂಶಜರೆಂದು ತಿಳಿಯುತ್ತಾರೆ. ಆದ್ದರಿಂದ ಅವರು ತಮ್ಮ ಹೆಸರಿನ ಮುಂದೆ ‘ರಾಮ ಎಂದು ಬರೆಯುತ್ತಾರೆ. ಹೀಗಿರುವಾಗ ಹಿಂದೂಬಹುಸಂಖ್ಯಾತರಿರುವ ಭಾರತದಲ್ಲಿ ಶ್ರೀರಾಮನ ಜನ್ಮಸ್ಥಾನದ ವಿಷಯದಲ್ಲಿ ವಿವಾದ ನಿರ್ಮಾಣವಾಗಬಾರದಿತ್ತು. ಸರ್ವೋಚ್ಚ ನ್ಯಾಯಾಲಯದ ಈಗಿನ ನಿರ್ಣಯ ಕೂಡ ಭಾರತದಲ್ಲಿ ಎಲ್ಲರಿಗೂ ಇಷ್ಟವಾಗಿದೆಯೆಂದು ಹೇಳುವ ಹಾಗಿಲ್ಲ, ಏಕೆಂದರೆ ‘ನಮಗೆ ನ್ಯಾಯಾಲಯದ ನಿರ್ಣಯದಿಂದ ಸಮಾಧಾನವಿಲ್ಲ, ಎಂಬ ಪ್ರತಿಕ್ರಿಯೆ ಕೇಳಿಬರುತ್ತಿದೆ. ನ್ಯಾಯಾಲಯದ ನಿರ್ಣಯದ ನಂತರ ಸಾಮಾಜಿಕ ವಾತಾವರಣ ಕೆಡಬಾರದೆಂದು ಸರಕಾರ ಏನೆಲ್ಲ ಭದ್ರತೆಯನ್ನು ಮಾಡಬೇಕಾಗಿದೆಯೋ, ಅದನ್ನು ನೋಡುವಾಗ ಇದು ಬಗೆಹರಿಯದ ವಿವಾದ ಎಂಬುದು ಸರಕಾರಕ್ಕೂ ತಿಳಿದಿರಬಹುದು. ಆದರೂ ಇಂದಿನ ನಿರ್ಣಯದಿಂದ ತಿಳುವಳಿಕೆಯುಳ್ಳವರು, ಪ್ರಜ್ಞಾವಂತರು ಹಾಗೂ ಮುಗ್ದ ಜನರು ಈ ದೇಶದಲ್ಲಿ ಬಹುಸಂಖ್ಯೆಯಲ್ಲಿದ್ದಾರೆ, ಅವರ ದೃಷ್ಟಿಯಲ್ಲಾದರೂ ರಾಮಜನ್ಮಭೂಮಿಯ ವಿವಾದವು ಮುಗಿದಿದೆ.

ಪುರಾವೆ ಮತ್ತು ಕಾನೂನು !

ನಿರ್ಣಯ ನೀಡುವಾಗ ಪುರಾತತ್ವ ವಿಭಾಗದ ದಾವೆಯನ್ನು ಸಂವಿಧಾನಪೀಠವು ಒಪ್ಪಿದೆ. ಉತ್ಖನನದಲ್ಲಿ ಸಿಕ್ಕಿದ ಪುರಾವೆಗಳಿಗನುಸಾರ ಮಸೀದಿಯನ್ನು ಖಾಲಿ ಸ್ಥಳದಲ್ಲಿ ನಿರ್ಮಿಸಲಾಗಿತ್ತು; ಆದರೆ ಮಸೀದಿಯ ಕೆಳಗಿನ ರಚನೆಯು ಇಸ್ಲಾಮೀಶೈಲಿಯದ್ದಾಗಿರಲಿಲ್ಲ, ಎಂದು ನಿರೀಕ್ಷಣೆಯನ್ನು ದಾಖಲಿಸಲಾಯಿತು ಮತ್ತು ಮಂದಿರವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ, ಎಂದು ಪುರಾತತ್ವ ವಿಭಾಗಕ್ಕೆ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ, ಎಂದು ಕೂಡ ನಿರೀಕ್ಷಣೆಯನ್ನು ದಾಖಲಿಸಿತ್ತು. ಈ ನಿರೀಕ್ಷಣೆಯು ವಾಸ್ತವಿಕತೆಯನ್ನು ತೋರಿಸುತ್ತಿದ್ದರೂ, ಸ್ವಲ್ಪ ಗೊಂದಲಗೊಳಿಸುವುದಾಗಿದೆ. ನ್ಯಾಯಾಲಯ ದಲ್ಲಿ ತರ್ಕ ನಡೆಯುವುದಿಲ್ಲ, ಪ್ರತ್ಯಕ್ಷ ಪುರಾವೆ ಬೇಕಾಗುತ್ತದೆ, ಆದ್ದರಿಂದ ಇಂತಹ ನಿರೀಕ್ಷಣೆಗಳಿರುತ್ತವೆ. ಆದ್ದರಿಂದ ಮಸೀದಿಯ ಕೆಳಗಿನ ರಚನೆಯು ಇಸ್ಲಾಮೀ ಆಗಿರಲಿಲ್ಲ, ಉತ್ಖನನದಲ್ಲಿ ಹಿಂದೂ ಸಂಸ್ಕೃತಿಗನು ಸಾರ ಅವಶೇಷ ಸಿಕ್ಕಿದೆಯೆಂಬುದು ಬೆಳಕಿಗೆ ಬಂದಿದೆ, ಆದರೂ ಮಂದಿರ ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ, ಎಂಬುವುದನ್ನು ನಮ್ಮ ಕಾನೂನಿಗನುಸಾರ ನ್ಯಾಯಾಲಯದಲ್ಲಿ ಸಿದ್ಧಪಡಿಸಲು ಸಾಧ್ಯವಿಲ್ಲ.

ಶ್ರೀರಾಮಚಂದ್ರನ ವಿಜಯ !

೧೫೨೮ ರಿಂದ ೧೯೪೯ ವರೆಗೆ ರಾಮಜನ್ಮಭೂಮಿಗಾಗಿ ಅನೇಕ ಬಾರಿ ಸಂಘರ್ಷಗಳಾಯಿತು. ೧೯೪೯ ರಲ್ಲಿ ಒಬ್ಬ ಕಾವಲುದಾರನಿಗೆ ಆಕಾಶದಿಂದ ಒಂದು ದಿವ್ಯ ಪ್ರಕಾಶವು ಈಗ ‘ರಾಮಲಲ್ಲಾ ವಿರಾಜಮಾನರಾಗಿರುವ ಸ್ಥಳಕ್ಕೆ ಹೋಗುವುದು ಕಾಣಿಸಿದೆ ಹಾಗೂ ಅದರಿಂದ ‘ರಾಮಲಲ್ಲಾ ಪ್ರಕಟವಾದರು. ಇದು ಚಮತ್ಕಾರವೆಂದು ಅನಿಸುತ್ತಿದ್ದರೂ, ಸುಳ್ಳೆಂದು ಸಿದ್ಧಪಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಅಂದಿನಿಂದ ಶ್ರದ್ಧಾಳುಗಳಿಂದ ಈ ‘ರಾಮಲಲ್ಲಾ ವಿರಾಜಮಾನಕ್ಕೆ ಪೂಜೆ ಪುನಸ್ಕಾರ ಆರಂಭವಾಯಿತು. ೧೯೮೯ ರಲ್ಲಿ ‘ರಾಮಲಲ್ಲಾ ವಿರಾಜಮಾನ ಇವರನ್ನು ಕಕ್ಷಿದಾರರೆಂದು ಜನ್ಮಭೂಮಿಗಾಗಿ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಲಾಯಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ ಅರ್ಜಿಯಲ್ಲಿಯೂ ‘ರಾಮಲಲ್ಲಾ ವಿರಾಜಮಾನ ಕಕ್ಷಿದಾರರಾಗಿದ್ದರು ಹಾಗೂ ಸರ್ವೋಚ್ಚ ನ್ಯಾಯಾಲಯವು ಇತರ ಕಕ್ಷಿದಾರರ ದಾವೆಯನ್ನು ತಳ್ಳಿ ಹಾಕಿ ಅವರಿಗೇ ಈ ಭೂಮಿಯನ್ನು ಕೊಟ್ಟಿದೆ. ಸ್ವತಃ ಶ್ರೀರಾಮನಿಗೇ ತನ್ನ ಜನ್ಮಭೂಮಿಯನ್ನು ಹಿಂತಿರುಗಿ ಪಡೆಯಲು ರಾಮಲಲ್ಲಾನ ಮೂಲಕ ಪ್ರಕಟವಾಗಬೇಕಾಯಿತು, ಎಂದೇ ಹೇಳಬೇಕಾಗುವುದು. ಯಾವುದೇ ಸಮಾಜದ್ದಲ್ಲ, ಅಂತೂ ಕೊನೆಗೆ ಸತ್ಯವಚನಿ ಶ್ರೀರಾಮನದ್ದೇ ವಿಜಯವಾಯಿತು. ‘ರಾಮೋ ರಾಜಮಣಿಃ ಸದಾ ವಿಜಯತೇ | ಅಂದರೆ ರಾಜರ ಶಿರೋಮಣಿ ಶ್ರೀರಾಮ ಸದಾಕಾಲ ವಿಜಯಿಯಾಗುತ್ತಾನೆ, ಎಂಬುದು ಸತ್ಯ !