ರಾಮಜನ್ಮಭೂಮಿ ಆಲಿಕೆಯ ವಿಷಯದ ಕೆಲವು ವೈಶಿಷ್ಟ್ಯಪೂರ್ಣ ಅಂಶಗಳು !

೧. ರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂಗಳ ಕಕ್ಷಿದಾರ ೬೭ ಗಂಟೆಗಳು ಮತ್ತು ಮುಸಲ್ಮಾನ ಕಕ್ಷಿದಾರ ೭೧ ಗಂಟೆಗಳ ಕಾಲ ವಿಷಯಗಳನ್ನು ಮಂಡಿಸಿದರು !

ರಾಮಜನ್ಮಭೂಮಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ೧೬೫ ಗಂಟೆಗಳ ವರೆಗೆ ಹಿಂದೂ ಮತ್ತು ಮುಸಲ್ಮಾನ ಕಕ್ಷಿದಾರರ ವಾದವನ್ನು ಕೇಳಿಸಿಕೊಂಡಿತು. ಮೊದಲು ಹಿಂದೂ ಕಕ್ಷಿದಾರರು ೧೬ ದಿನಗಳಲ್ಲಿ ೬೭ ಗಂಟೆ ೩೫ ನಿಮಿಷಗಳ ವರೆಗೆ ಮುಖ್ಯ ಅಂಶಗಳನ್ನು ಮಂಡಿಸಿದರು. ತದನಂತರ ಮುಸಲ್ಮಾನ ಕಕ್ಷಿದಾರರು ೧೮ ದಿನಗಳಲ್ಲಿ ೭೧ ಗಂಟೆ ೩೫ ನಿಮಿಷಗಳ ವರೆಗೆ ತಮ್ಮ ವಾದವನ್ನು ಮಂಡಿಸಿದರು. ಐದು ದಿನಗಳಲ್ಲಿ ಎರಡೂ ಕಕ್ಷಿದಾರರು ಪರಸ್ಪರರ ಅಂಶಗಳ ಮೇಲೆ ೨೫ ಗಂಟೆ ೫೦ ನಿಮಿಷಗಳ ವರೆಗೆ ವಾದ ಪ್ರತಿವಾದ ಮಂಡಿಸಿದರು. ಈ ವಿಚಾರಣೆಯಲ್ಲಿ ವಾದವನ್ನು ಮಂಡಿಸುವ ನ್ಯಾಯವಾದಿಗಳು ಈ ಕಾಲಾವಧಿಯಲ್ಲಿ ಹೊಸದಾಗಿ ಒಂದೇ ಒಂದು ಪ್ರಕರಣವನ್ನು ಸ್ವೀಕರಿಸಲಿಲ್ಲ ಮತ್ತು ಈ ಕಾಲಾವಧಿಯಲ್ಲಿ ಅವರು ವಾದ ಮಂಡಿಸುತ್ತಿದ್ದ ಬೇರೆ ಪ್ರಕರಣಗಳ ವಿಚಾರಣೆಗಳನ್ನು ಮುಂದೂಡುವಂತೆ ಕೋರಿ ಆಯಾ ಸಮಯಕ್ಕೆ ಅರ್ಜಿ ಸಲ್ಲಿಸಿದರು. ಇದರೊಂದಿಗೆ ದೇಶದ ನ್ಯಾಯವ್ಯವಸ್ಥೆಯ ಇತಿಹಾಸದಲ್ಲಿ ಇದು ಎರಡನೇ ಸುದೀರ್ಘ ಕಾಲ ನಡೆದ ವಿಚಾರಣೆಯಾಗಿದೆ. ೬೮ ದಿನಗಳ ವರೆಗೆ ನಡೆದ ಕೇಶವಾನಂದ ಭಾರತಿ ವಿಚಾರಣೆಯು ಅತಿ ದೀರ್ಘ ಕಾಲದ ವರೆಗೆ ನಡೆದ ಪ್ರಕರಣವಾಗಿದೆ.

೨. ಭೂಒಡೆತನದ ಹಕ್ಕಿನ ಮೇಲೆ ನಡೆದ ಅತ್ಯಧಿಕ ವಾದ-ವಿವಾದ !

ರಾಮಜನ್ಮಭೂಮಿ ಪ್ರಕರಣದಲ್ಲಿ ಹಿಂದೂ ಮತ್ತು ಮುಸಲ್ಮಾನ ಕಕ್ಷಿದಾರರ ನಡುವೆ ಭೂಒಡೆತನದ ಹಕ್ಕಿನ ಬಗ್ಗೆ ಅತ್ಯಧಿಕ ವಾದವು ನಡೆಯಿತು. ಹಿಂದೂ ಮತ್ತು ಮುಸಲ್ಮಾನ ಕಕ್ಷಿದಾರರು ವಿವಿಧ ದಾಖಲೆಗಳು, ಪುರಾತತ್ವ ಇಲಾಖೆಯ ವರದಿ ಮತ್ತು ವಿವಿಧ ಧರ್ಮಗ್ರಂಥಗಳ ಆಧಾರವನ್ನು ಪಡೆದರು. ಈ ಪ್ರಕರಣದಲ್ಲಿ ಒಟ್ಟು ೨೦ ಅರ್ಜಿಗಳನ್ನು ದಾಖಲಿಸಲಾಗಿತ್ತು.

೩. ಅಲಾಹಾಬಾದ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ !

೩ ಅ. ಸರ್ವೋಚ್ಚ ನ್ಯಾಯಾಲಯದಲ್ಲಿ ೮ ವರ್ಷಗಳ ಬಳಿಕ ನಿಯಮಿತವಾಗಿ ವಿಚಾರಣೆ ಪ್ರಾರಂಭವಾಯಿತು ! : ರಾಮಜನ್ಮಭೂಮಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದ್ದ ಒಟ್ಟು ೨೦ ಅರ್ಜಿಗಳಲ್ಲಿ ರಾಮಲಲ್ಲಾ ವಿರಾಜಮಾನ, ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖಾಡಾ ಇವರು ಪ್ರಮುಖ ಕಕ್ಷಿದಾರರಾಗಿದ್ದರು. ಇದರಲ್ಲಿ ಶಿಯಾ ಸೆಂಟ್ರಲ್ ಬೋರ್ಡ್ ಸಹ ಹೊಸ ಕಕ್ಷಿದಾರ ಆಗಿದ್ದರು. ಈ ಕಕ್ಷಿದಾರರು ವಿವಾದಾತ್ಮಕ ಸ್ಥಳದಲ್ಲಿ ರಾಮಮಂದಿರವನ್ನು ಕಟ್ಟಲು ಬೇಡಿಕೆ ಮಾಡುತ್ತಿದ್ದರೆ. ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ವಿಭಾಗೀಯಪೀಠವು ೨೦೧೦ ರಲ್ಲಿ ವಿವಾದಿತ ಕ್ಷೇತ್ರವನ್ನು ರಾಮಲಲ್ಲಾ ವಿರಾಜಮಾನ, ನಿರ್ಮೋಹಿ ಆಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರಲ್ಲಿ ಹಂಚಿಕೆ ಮಾಡುವಂತೆ ತೀರ್ಪು ನೀಡಿತ್ತು. ಈ ತೀರ್ಪನ್ನು ೨೦೧೧ ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ೮ ವರ್ಷಗಳ ಬಳಿಕ ಈ ಪ್ರಕರಣದ ನಿಯಮಿತ ಆಲಿಕೆ ಆರಂಭವಾಯಿತು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇವರು ದಾವೆಯ ಅಂಶಗಳು ಮತ್ತು ಸಾಕ್ಷ್ಯಗಳ ಅಧ್ಯಯನವು ಅಕ್ಟೋಬರ್ ೧೭ ರ ವರೆಗೆ ಪೂರ್ಣವಾಗುವುದು ಎಂದು ಸ್ಪಷ್ಟಪಡಿಸಿದರು. ನವೆಂಬರ್ ೧೭ ರಂದು ಅವರು ನಿವೃತ್ತರಾಗಲಿದ್ದು, ಅದಕ್ಕಿಂತ ಮೊದಲು ತೀರ್ಪು ನೀಡುವುದಾಗಿ ತಿಳಿಸಿದ್ದರು.

೩ ಆ. ರಾಮಜನ್ಮಭೂಮಿ ಪ್ರಕರಣದಲ್ಲಿ ವಾದ-ಪ್ರತಿವಾದ ಮಾಡುವ ಹಿಂದೂ ಮತ್ತು ಮುಸಲ್ಮಾನ ಕಕ್ಷಿದಾರರು : ಆಲಿಕೆಯ ಕಾಲದಲ್ಲಿ ಹಿಂದೂ ಕಕ್ಷಿದಾರರಲ್ಲಿ ರಾಮಲಲ್ಲಾ ವಿರಾಜಮಾನದ ಪರವಾಗಿ ನ್ಯಾಯವಾದಿ ಕೆ. ಪರಾಸರನ್ ಮತ್ತು ನ್ಯಾಯವಾದಿ ಸಿ.ಎಸ್. ವೈದ್ಯನಾಥನ್; ನಿರ್ಮೋಹಿ ಆಖಾಡಾ ಪರವಾಗಿ ನ್ಯಾಯವಾದಿ ಸುಶೀಲ ಜೈನ, ರಾಮಜನ್ಮಭೂಮಿ ಪುನರುದ್ಧಾರ ಸಮಿತಿಯ ಪರವಾಗಿ ನ್ಯಾಯವಾದಿ ಪಿ.ಎನ್. ಮಿಶ್ರಾ ಇವರು ಅಂಶಗಳನ್ನು ಮಂಡಿಸಿದರು. ಶಿಯಾ ವಕ್ಫ್ ಬೋರ್ಡ್ ಪರವಾಗಿ ವಕೀಲ ಎಮ್.ಸಿ. ಡಿಂಗರಾ ಇವರು ಮಂದಿರದ ಪರವಾಗಿ ಅಂಶಗಳನ್ನು ಮಂಡಿಸಿದರು. ಮುಸಲ್ಮಾನ ಕಕ್ಷಿದಾರರಲ್ಲಿ ಸುನ್ನಿ ವಕ್ಫ್ ಬೋರ್ಡ್ ಮತ್ತು ಇನ್ನಿತರರ ಪರವಾಗಿ ನ್ಯಾಯವಾದಿ ರಾಜೀವ ಧವನ, ನ್ಯಾಯವಾದಿ ಜಫರಯಾಬ ಜಿಲಾನಿ, ನ್ಯಾಯವಾದಿ ಮೀನಾಕ್ಷಿ ಅರೋರಾ, ನ್ಯಾಯವಾದಿ ಶೇಖರ ನಾಫಡೆ ಮತ್ತು ನ್ಯಾಯವಾದಿ ಮಹಮ್ಮದ್ ನಿಜಾಮ ಪಾಶಾ ಇವರು ಪ್ರತಿವಾದ ಮಂಡಿಸಿದರು.