ಸರ್ವೋಚ್ಚ ನ್ಯಾಯಾಲಯದಲ್ಲಿ ಇಬ್ಬರೂ ಕಕ್ಷಿದಾರರು ೭ ಮುಖ್ಯ ಅಂಶಗಳ ಮೇಲೆ ಮಾಡಿರುವ ವಾದ-ಪ್ರತಿವಾದ !

ಸರ್ವೋಚ್ಚ ನ್ಯಾಯಾಲಯದಲ್ಲಿ ೭ ಮಹತ್ವದ ಅಂಶಗಳ ಮೇಲೆ ಇಬ್ಬರೂ ಕಕ್ಷಿದಾರರಿಂದ ತೀವ್ರ ವಾದ-ಪ್ರತಿವಾದಗಳಾದವು. ಆ ಪ್ರಮುಖ ಅಂಶಗಳಾವವು ಮತ್ತು ಇವುಗಳ ಮೇಲೆ ಎರಡೂ ಪಕ್ಷದ ಪರವಾಗಿ ಏನು ಪ್ರತಿವಾದ ಮಂಡಿಸಿದರು ಎನ್ನುವುದನ್ನು ನೋಡೋಣ. ಹಾಗೆಯೇ ಈ ಅಂಶಗಳ ಮೇಲೆ ಅಲಾಹಾಬಾದ ಉಚ್ಚ ನ್ಯಾಯಾಲಯವು ಮಂಡಿಸಿದ ಅಂಶಗಳನ್ನು ಕೂಡ ನೋಡೋಣ.

೧. ಒಡೆತನ ಹಕ್ಕಿನ ವಿಷಯದ ಮೇಲೆ ಇಬ್ಬರೂ ಕಕ್ಷಿದಾರರು ಮಾಡಿರುವ ವಾದ-ಪ್ರತಿವಾದ !

೧. ಹಿಂದೂ ಕಕ್ಷಿದಾರ : ೨.೭೭ ಎಕರೆ ವಿವಾದಾತ್ಮಕ ಭೂಮಿಯ ಮೇಲೆ ಮಂದಿರವಿತ್ತು. ಆ ಸ್ಥಳದಲ್ಲಿ ಬಾಬರನು ಮಸೀದಿಯನ್ನು ನಿರ್ಮಿಸಿದನು. ೮೫ ಕಂಬಗಳು, ಅವುಗಳ ಮೇಲಿನ ಚಿತ್ರಕಲೆ ಮತ್ತು ಪುರಾತತ್ವ ಇಲಾಖೆಯ ವರದಿಯು ಇದನ್ನು ದೃಢಪಡಿಸುತ್ತದೆ. ಅಲ್ಲಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದ್ದರೂ, ಭೂಮಿಯ ಒಡೆತನದ ಹಕ್ಕು ಮಾತ್ರ ಹಿಂದೂಗಳದ್ದೇ ಆಗಿದೆ, ಎಂದು ರಾಮಲಲ್ಲಾ ವಿರಾಜಮಾನನ ಪರವಾಗಿ ವಾದಿಸಿದರು. ನಿರ್ಮೋಹಿ ಆಖಾಡಾದವರು ರಾಮಜನ್ಮಭೂಮಿಯಲ್ಲಿ ನಾವು ಪ್ರಾರಂಭದಿಂದಲೂ ಸೇವಕರಾಗಿದ್ದೇವೆ. ಆದುದರಿಂದ ಒಡೆತನದ ಹಕ್ಕು ನಮ್ಮದೇ ಆಗಿದೆಯೆಂದು ವಾದಿಸಿದರು.

೨. ಸುನ್ನಿ ವಕ್ಫ್ ಬೋರ್ಡ್ : ಮಸೀದಿ ೪೦೦ ವರ್ಷಗಳಿಂದ ಇತ್ತು. ಬ್ರಿಟಿಷ ಸರಕಾರ ಅದಕ್ಕೆ ಅನುದಾನವನ್ನು ಕೂಡ ನೀಡಿತ್ತು. ಆಂಗ್ಲರು ಕೇವಲ ಪೂಜೆ ಮಾಡಲು ಅಧಿಕಾರ ನೀಡಿದ್ದರು.

೩. ಅಲಾಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಧರ್ಮವೀರ ಶರ್ಮಾ ಇವರು ರಾಮಲಲ್ಲಾ ವಿರಾಜಮಾನಗೆ ಸಂಪೂರ್ಣ ಭೂಮಿಯ ಒಡೆತನದ ಹಕ್ಕಿದೆ ಎಂದು ಒಪ್ಪಿದ್ದರು. ಈ ವಿಭಾಗೀಯ ಪೀಠದ ಇತರ ಇಬ್ಬರು ನ್ಯಾಯಾಧೀಶರಾದ ಸುಧೀರ ಅಗರವಾಲ ಮತ್ತು ಎಸ್.ಯು. ಖಾನ್ ಇವರು ‘ಮೂವರು ಕಕ್ಷಿದಾರರಿಗೆ ಭೂಮಿಯನ್ನು ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಹೇಳಿದ್ದರು.

೨. ಭೂಮಿಯನ್ನು ವಶಪಡಿಸಿಕೊಳ್ಳುವ ವಿಷಯದಲ್ಲಿ ನಡೆದ ವಾದ-ಪ್ರತಿವಾದ

೧. ಹಿಂದೂ ಕಕ್ಷಿದಾರ : ೧೯೩೪ ನೇ ಇಸವಿಯ ಬಳಿಕ ಈ ಸ್ಥಳದಲ್ಲಿ ಮುಸಲ್ಮಾನರು ನಮಾಜು ಪಠಿಸುವುದನ್ನು ನಿಲ್ಲಿಸಿದ್ದರು; ಆದರೆ ಹಿಂದೂಗಳು ಪೂಜೆಯನ್ನು ಮುಂದುವರಿಸಿದರು. ಹಿಂದೂಗಳು ಈ ಸ್ಥಳದಲ್ಲಿ ೧೮೦೦ ನೇ ಇಸವಿಗಿಂತಲೂ ಮೊದಲಿನಿಂದ ಅಖಂಡ ಪೂಜೆಯನ್ನು ಮಾಡುತ್ತಿದ್ದಾರೆ. ಮುಸಲ್ಮಾನ ಕಕ್ಷಿದಾರರು ಕೂಡ ‘೧೮೫೫ ರಿಂದ ನಮ್ಮನ್ನು ದೇವರ ಸೇವಕರಾಗಿದ್ದರು ಎಂದು ಒಪ್ಪಿಕೊಂಡಿದ್ದರು ಎಂದು ನಿರ್ಮೋಹಿ ಆಖಾಡದವರು ಹೇಳಿದ್ದರು.

೨. ಮುಸಲ್ಮಾನ ಕಕ್ಷಿದಾರರು : ನಮಗೆ ನಮಾಜ ಪಠಿಸಲು ಬಲವಂತವಾಗಿ ತಡೆಯಲಾಯಿತು. ೧೯೩೪ ರ ಬಳಿಕ ನಿಯಮಿತ ನಮಾಜು ಪಠಣ ಸ್ಥಗಿತಗೊಂಡಿತು. ನಮಾಜು ಪಠಿಸಲು ಪ್ರಯತ್ನಿಸಿದಾಗ ಕಾರಾಗೃಹಕ್ಕೆ ದೂಡಲಾಯಿತೆಂದು ಸಾಕ್ಷಿದಾರನು ದೃಢಪಡಿಸಿದನು. ನಮಾಜು ಪಠಣ ಸ್ಥಗಿತಗೊಂಡರೂ, ನಿಯಂತ್ರಣ ನಮ್ಮದೇ ಆಗಿತ್ತು.

೩. ಅಲಾಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ಮುಸಲ್ಮಾನ ಕಕ್ಷಿದಾರ ಮತ್ತು ನಿರ್ಮೋಹಿ ಆಖಾಡಾ ಇವರು ದೀರ್ಘಕಾಲ ಭೂಮಿಯ ಮೇಲೆ ಹಕ್ಕನ್ನು ಸ್ಥಾಪಿಸಿದ್ದಾರೆ. ಇದಕ್ಕಾಗಿ ರಾಮಲಲ್ಲಾ ವಿರಾಜಮಾನ ಜೊತೆಗೆ ಅವರಿಗೂ ಈ ಭೂಮಿಯ ಒಂದೊಂದು ಭಾಗ ನೀಡಬೇಕು.

೩. ಪುರಾತತ್ವ ಇಲಾಖೆಯು ಪ್ರಸ್ತುತಪಡಿಸಿದ ವರದಿಯಲ್ಲಿನ ವಾದ !

೧. ಹಿಂದೂ ಕಕ್ಷಿದಾರ : ವಿವಾದಿತ ಸ್ಥಳದಲ್ಲಿ ಭೂಮಿಯ ಉತ್ಖನನ ಮಾಡಿದಾಗ ಪುರಾತತ್ವ ಇಲಾಖೆ ವರದಿಯಲ್ಲಿ. ‘ಅಲ್ಲಿ ದೊರೆತ ಅವಶೇಷ ಮತ್ತು ಕಂಬಗಳು ಯಾವುದಾದರೂ ದೇವಸ್ಥಾನದ್ದಾಗಿದೆ. ಅಂದರೆ ಅಲ್ಲಿ ಈ ಮೊದಲು ಮಂದಿರವಿತ್ತು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಕುರಾನಿನಲ್ಲಿ ಮಸೀದಿಯ ಮೇಲೆ ಯಾವುದೇ ರೀತಿಯ ಚಿತ್ರ ಕೊರೆಯುವುದನ್ನು ನಿಷೇಧಿಸಲಾಗಿದೆ.

೨. ಮುಸಲ್ಮಾನ ಕಕ್ಷಿದಾರ : ಈ ವರದಿಯೆಂದರೆ ಗೌರವಾನ್ವಿತ ವಿಶೇಷಜ್ಞರ ವಿಚಾರವಾಗಿದೆ. ಉತ್ಖನನದ ಸಮಯದಲ್ಲಿ ಪುರಾತತ್ವ ವಿಭಾಗದವರು ಭಾಜಪದ ಒಬ್ಬ ಮಂತ್ರಿಯ ಸೂಚನೆಯಂತೆ ಕಾರ್ಯ ಮಾಡುತ್ತಿದ್ದರು. ಕೆಲವು ಕಡೆ ಹೂವು-ಎಲೆಗಳನ್ನು ಕೊರೆಯಲಾಗಿರುವ ಮಸೀದಿಗಳಿವೆ. ವಿವಾದಾತ್ಮಕ ಸ್ಥಳದಲ್ಲಿ ದೊರೆತ ಅವಶೇಷಗಳು ಈದ್ಗಾಹದ್ದೂ ಆಗಿರಬಹುದು. ಆದರೆ ಮಂದಿರದ್ದಲ್ಲ.

೩. ಅಲಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ನ್ಯಾಯಧೀಶರಾದ ಅಗ್ರವಾಲ ಮತ್ತು ನ್ಯಾಯಧೀಶ ಶರ್ಮಾ ಇವರು ಪುರಾತತ್ವ ಇಲಾಖೆಯ ವರದಿಯನ್ನು ಅಂಗೀಕರಿಸಿದ್ದರು ಹಾಗೂ ‘ವರದಿಯಲ್ಲಿರುವ ಸಾಕ್ಷ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ;, ಎಂದಿದ್ದರು. ನ್ಯಾಯಾಧೀಶ ಖಾನರು ಈ ವರದಿಯನ್ನು ಸ್ವೀಕರಿಸಿರಲಿಲ್ಲ.

೪. ಮಸೀದಿಯನ್ನು ಹೇಗೆ ಗುರುತಿಸಲಾಗುತ್ತದೆ ?

೧. ಹಿಂದೂ ಕಕ್ಷಿದಾರ : ಕುರಾನಿಗನುಸಾರ ಮಸೀದಿಯಲ್ಲಿ ಚಿತ್ರ ಕೊರೆಯುವುದು ನಿಷಿದ್ಧವಿದೆ. ಮಸೀದಿಯನ್ನು ಇತರ ಧಾರ್ಮಿಕ ಸ್ಥಳಗಳಲ್ಲಿ ನಿರ್ಮಿಸಿದ್ದರೆ, ಅದು ಅಕ್ರಮವಾಗಿದೆ. ಹತ್ತಿರದಲ್ಲಿ ಕಬರಸ್ಥಾನವಿದ್ದರೆ, ಅದನ್ನು ಮಸೀದಿ ಎಂದು ಹೇಳಲು ಸಾಧ್ಯವಿಲ್ಲ. ವಿವಾದಿತ ಸ್ಥಳದಲ್ಲಿಯಂತೂ ಎಷ್ಟೋ ಗೋರಿಗಳು ಸಿಕ್ಕಿದ್ದವು. ಪುರಾತತ್ವ ವಿಭಾಗದ ವರದಿಯಿಂದ ಮಂದಿರದಲ್ಲಿ ಬದಲಾವಣೆ ಮಾಡಿ ಮಸೀದಿ ನಿರ್ಮಿಸಲಾಯಿತು ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತದೆ.

೨. ಮುಸಲ್ಮಾನ ಕಕ್ಷಿದಾರ : ಮಸೀದಿಯಲ್ಲಿ ಚಿತ್ರಗಳನ್ನು ಕೊರೆಯುವುದಿಲ್ಲ ಎನ್ನುವುದು ತಪ್ಪಾಗಿದೆ. ಮಸೀದಿಯ ಗೋಡೆಗಳ ಮೇಲೆ ಇಂತಹ ಚಿತ್ರಗಳನ್ನು ಕೊರೆಯಲು ಸಾಧ್ಯವಿದೆ. ಹತ್ತಿರದಲ್ಲಿ ಕಬರ್ ಇದ್ದುದರಿಂದ ಅಲ್ಲಿ ನಮಾಜು ಪಠಿಸಲು ಸಾಧ್ಯವಿಲ್ಲ ಎನ್ನುವ ತರ್ಕವೂ ತಪ್ಪ್ಪಾಗಿದೆ.

೩. ಅಲಾಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ನ್ಯಾಯಧೀಶ ಅಗ್ರವಾಲ ಮತ್ತು ನ್ಯಾಯಾಧೀಶ ಶರ್ಮಾ ಇವರು ಕಂಡು ಬಂದಿರುವ ದಾಖಲೆಗಳ ಆಧಾರದಲ್ಲಿ ವಿವಾದಿತ ಸ್ಥಳಕ್ಕೆ ಮಸೀದಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನ್ಯಾಯಾಧೀಶ ರಾದ ಎಸ್.ಯು. ಖಾನ್ ಇವರು ಈ ಅಂಶದ ಮೇಲೆ ಏನೂ ಹೇಳಲಿಲ್ಲ.

೪. ಶ್ರೀರಾಮನ ಜನ್ಮಸ್ಥಾನದ ಕುರಿತು ನಡೆದ ವಾದ-ಪ್ರತಿವಾದ

೧. ಹಿಂದೂ ಕಕ್ಷಿದಾರ : ಮಸೀದಿಯ ಕೇಂದ್ರಸ್ಥಾನವಾಗಿರುವ ಗುಮ್ಮಟದ ಕೆಳಗಿನ ಸ್ಥಾನವೇ ಭಗವಾನ ಶ್ರೀರಾಮನ ನಿಜವಾದ ಜನ್ಮಸ್ಥಾನವಾಗಿದೆ.

೨. ಮುಸಲ್ಮಾನ ಕಕ್ಷಿದಾರ : ಅರ್ಚಕರಿಗೆ ಭಗವಾನ ರಾಮನು ಕನಸಿನಲ್ಲಿ ಬಂದು ಆ ಸ್ಥಳದ ಮಾಹಿತಿ ನೀಡಿದನು ಎಂದು ಹೇಳಿರುವ ದಾಖಲೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ವಿವಾದಾತ್ಮಕ ಭೂಮಿಯ ಸಮೀಪ ಜನ್ಮಸ್ಥಾನದ ಹೆಸರಿನ ಒಂದು ಮಂದಿರವಿದೆ. ಕೆಲವು ಜನರು ಅದನ್ನೇ ರಾಮನ ಜನ್ಮಸ್ಥಾನವೆಂದು ನಂಬುತ್ತಾರೆ. ಹಾಗೆಯೇ ಕೆಲವು ಜನರು ‘ರಾಮ ಚಬೂತರಾ ಇದು ಭಗವಾನ ರಾಮನ ಜನ್ಮಸ್ಥಾನವಾಗಿದೆ ಎಂದು ಹೇಳುತ್ತಾರೆ. ಹೀಗಿರುವಾಗ ಇದರಲ್ಲಿ ಯಾವ ವಾದ ನಿಜವಾಗಿದೆ ?

೩. ಅಲಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ನ್ಯಾಯಾಧೀಶ ಶರ್ಮಾ ಮತ್ತು ನ್ಯಾಯಾಧೀಶ ಅಗ್ರವಾಲ ಇವರು ‘ನಾವು ರಾಮನು ಎಲ್ಲಿ ಜನಿಸಿದನೆಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಆದರೆ ಈ ಪ್ರಾಂಗಣದಲ್ಲಿ ರಾಮನು ಜನಿಸಿದ್ದಾನೆಂದು ಜನರ ಶ್ರದ್ಧೆಯಿದೆ, ನ್ಯಾಯಾಧೀಶ ಖಾನರು ಈ ವಿಷಯದ ಮೇಲೆ ಏನೂ ಹೇಳಿಲ್ಲ.

೬. ಮಂದಿರದ ಸ್ಥಳದಲ್ಲಿ ಮಸೀದಿ ಹೇಗೆ ಬಂದಿತು ?

೧. ಹಿಂದೂ ಕಕ್ಷಿದಾರ : ಬಾಬರಿ ಮಸೀದಿ ನಿರ್ಮಿಸಲು ಮೊಗಲ ಶಾಸಕನಾದ ಬಾಬರನು ಮಂದಿರವನ್ನು ಧ್ವಂಸಗೊಳಿಸಿದ್ದನು. ವಿವಾದಾತ್ಮಕ ಸ್ಥಳದಲ್ಲಿ ಮಂದಿರವಿತ್ತು. ಅದನ್ನು ಮಸೀದಿಗೆ ರೂಪಾಂತರಿಸಲಾಯಿತು. ಮಸೀದಿ ಹೊಸದಾಗಿ ನಿರ್ಮಾಣವಾಗಿರಲೇ ಇಲ್ಲ.

೨. ಮುಸಲ್ಮಾನ ಕಕ್ಷಿದಾರ : ವಿವಾದಾತ್ಮಕ ಸ್ಥಳದಲ್ಲಿ ಯಾವುದೇ ದೇವಸ್ಥಾನವಿರಲಿಲ್ಲ. ೧೫೨೭ ರಲ್ಲಿ ಬಾಬರನ ಹೇಳಿಕೆಯಂತೆ ಅವನ ಸೇನಾಧಿಕಾರಿ ಮೀರ ಬಾಕಿ ಒಂದು ಸಮತಟ್ಟಾದ ಭೂಮಿಯ ಮೇಲೆ ಮಸೀದಿಯನ್ನು ನಿರ್ಮಿಸಿದ್ದನು. ಇದರ ಉಲ್ಲೇಖ ಅನೇಕ ಇಸ್ಲಾಮಿ ಪುಸ್ತಕಗಳಲ್ಲಿವೆ.

೩. ಅಲಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ನ್ಯಾಯಾಧೀಶ ಖಾನ ಇವರು ‘ಮಂದಿರದ ಅಂಶಗಳು ಪುರಾತತ್ವ ವಿಭಾಗದ ವರದಿಯನ್ವಯ ಕಂಡು ಬಂದಿದೆ. ಇನ್ನುಳಿದ ಇಬ್ಬರು ನ್ಯಾಯಾಧೀಶರು ‘ಮಂದಿರ ಧ್ವಂಸ ಮಾಡಿರುವ ಬಗ್ಗೆ ದಾಖಲೆಗಳಿಲ್ಲ; ಆದರೆ ಮೊದಲು ಅಲ್ಲಿ ಮಂದಿರವಿತ್ತು, ಎನ್ನುವುದು ಈ ಅಂಶಗಳಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

೭. ರಾಮಲಲ್ಲಾ ನ್ಯಾಯ ಕೋರುವ ವ್ಯಕ್ತಿ !

೧. ಹಿಂದೂ ಕಕ್ಷಿದಾರ : ಪ್ರಭು ಶ್ರೀರಾಮಚಂದ್ರ ಮತ್ತು ಅವನ ಜನ್ಮಭೂಮಿ ಶ್ರದ್ಧೆಯ ಕೇಂದ್ರವಾಗಿದೆ. ಜನರು ಅವನನ್ನು ಶ್ರದ್ಧೆಯಿಂದ ಪೂಜಿಸುತ್ತಾರೆ. ಇದಕ್ಕಾಗಿ ರಾಮಲಲ್ಲಾ ನ್ಯಾಯ ಕೋರುವ ವ್ಯಕ್ತಿಯಾಗಿದ್ದಾನೆ.

೨. ಮುಸಲ್ಮಾನ ಕಕ್ಷಿದಾರ : ವಿವಾದಿತ ಸ್ಥಳವನ್ನು‘ನ್ಯಾಯ ಕೋರುವ ವ್ಯಕ್ತಿ (ಯಾವುದೇ ಮೂರ್ತಿಯನ್ನು ನ್ಯಾಯಾಲಯದಲ್ಲಿ ಕಕ್ಷಿದಾರನೆಂದು ಪರಿಗಣಿಸಿ ವಿಚಾರಣೆಯನ್ನು ನಡೆಸಲು ಅವಕಾಶವಿದೆ) ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯ ಹೀಗೆ ಮಾಡುತ್ತಿದ್ದರೆ, ಮಸೀದಿ ಕೂಡ ನ್ಯಾಯ ಕೋರುವ ವ್ಯಕ್ತಿಯಾಗುತ್ತಾನೆ.

೩. ಅಲಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ : ನ್ಯಾಯಮೂರ್ತಿ ಸುಧೀರ ಅಗ್ರವಾಲ ಮತ್ತು ಧರ್ಮವೀರ ಶರ್ಮಾ ಇವರು ಸ್ಥಳವನ್ನು ನ್ಯಾಯ ಕೋರುವ ವ್ಯಕ್ತಿಯೆಂದು ಒಪ್ಪಿಕೊಂಡಿದ್ದರು; ಆದರೆ ನ್ಯಾಯಮೂರ್ತಿ ಎಸ್.ಯು. ಖಾನ್ ಇವರು ಅದನ್ನು ಒಪ್ಪಿಕೊಂಡಿರಲಿಲ್ಲ.