ರಾಮಜನ್ಮಭೂಮಿಯ ಐತಿಹಾಸಿಕ ತೀರ್ಪಿನ ಬಗ್ಗೆ ಗೌರವಾನ್ವಿತರ ನುಡಿ

ಈಗ ರಾಷ್ಟ್ರವನ್ನು ಕಟ್ಟುವ ಹೊಣೆಹೊತ್ತು ಮುನ್ನಡೆಯಬೇಕು ! – ಪ್ರಧಾನಿ ನರೇಂದ್ರ ಮೋದಿ

ಸರ್ವೋಚ್ಚ ನ್ಯಾಯಾಲಯವು ರಾಮ ಜನ್ಮಭೂಮಿಯ ತೀರ್ಪನ್ನು ನೀಡಿದ್ದು ದೇಶದಲ್ಲಿ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರವನ್ನು ಕಟ್ಟುವ ಹೊಣೆಯಿಂದ ಮುನ್ನಡೆಯ ಬೇಕು. ಹೊಸ ಭಾರತವನ್ನು ನಿರ್ಮಿಸ ಬೇಕಾಗಿದೆ. ಈ ಕಾರ್ಯದಲ್ಲಿ ಕಟುತ್ವಕ್ಕೆ ಸ್ಥಾನವೇ ಇಲ್ಲ. ಇಂದಿನ ದಿನ ಸುವರ್ಣಾಕ್ಷರದಲ್ಲಿ ಬರೆಯುವಂತಹದ್ದಾಗಿದೆ. ಇತಿಹಾಸವನ್ನೇ ಬದಲಾಯಿಸುವ ಪುಟವಷ್ಟೇ ಅಲ್ಲ, ಸಂಪೂರ್ಣ ದೇಶದಲ್ಲಿನ ೧೨೫ ಕೋಟಿ ಜನತೆಯು ತಾನೇ ತನ್ನ ಇತಿಹಾಸವನ್ನು ರಚಿಸಿದೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ನೀಡಿದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿಯವರು ನವೆಂಬರ್ ೮ ರಂದು ಸಾಯಂಕಾಲ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಆಗ ಅವರು ಮಾತನಾಡುತ್ತಿದ್ದರು. ‘ಈ ತೀರ್ಪು ಯಾರ ಗೆಲುವು ಅಥವಾ ಸೋಲು ಎಂದು ತಿಳಿಯ ಬಾರದು. ರಾಮಭಕ್ತಿ ಇರಲಿ, ರಹೀಮಭಕ್ತಿ ಇರಲಿ, ಈಗ ಭಾರತಭಕ್ತಿಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಸಮಯವಾಗಿದೆ, ಎಂದೂ ಅವರು ಹೇಳಿದರು.

ದೇವಾಲಯದ ದ್ವಾರ ತೆರದಿದ್ದರಿಂದ ಭಾಜಪದ ರಾಜಕಾರಣದ ದ್ವಾರ ಮುಚ್ಚಿ ಹೋಗಿದೆ ! – ಕಾಂಗ್ರೆಸ್

ತೀರ್ಮಾನ ಸ್ವಾಗತಾರ್ಹವಾಗಿದೆ. ನಾವು ರಾಮ ಮಂದಿರವನ್ನು ಕಟ್ಟುವ ಪಕ್ಷದಲ್ಲಿದ್ದೇವೆ. (ತಡವಾಗಿ ಎಚ್ಚರಗೊಂಡಿರುವ, ಸುಳ್ಳುಬುರುಕ ಹಾಗೂ ಜನತೆಯನ್ನು ಮೂರ್ಖವೆಂದುಕೊಂಡ ಕಾಂಗ್ರೆಸ್ ! ಕಾಂಗ್ರೆಸ್ ತನ್ನ ೬೦ ವರ್ಷಗಳ ಅಧಿಕಾರಕಾಲದಲ್ಲಿ ರಾಮ ಮಂದಿರವನ್ನು ಏಕೆ ನಿರ್ಮಿಸಲಿಲ್ಲ ? ಸೇತುಸಮುದ್ರಮ್ ಪರಿಕಲ್ಪನೆಯ ಸಮಯದಲ್ಲಿ ರಾಮಸೇತುವನ್ನು ಧ್ವಂಸ ಮಾಡುವ ಷಡ್ಯಂತ್ರವು ಕಾಂಗ್ರೆಸ್ ನಡೆಸುತ್ತಿರುವಾಗಲೇ ‘ರಾಮ ಕಾಲ್ಪನಿಕವಾಗಿದ್ದಾನೆ, ಎಂಬ ಪ್ರತಿಜ್ಞಾಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಹಾಗಾದರೆ ಕಾಂಗ್ರೆಸ್ ರಾಮಮಂದಿರವನ್ನು ನಿರ್ಮಿಸುವ ಪಕ್ಷದಲ್ಲಿದೆ, ಎಂದು ಹೇಗೆ ಸುಳ್ಳು ಮಾತನಾಡುತ್ತಿದೆ ? – ಸಂಪಾದಕರು) ಈ ತೀರ್ಮಾನದಿಂದ ದೇವಾಲಯವನ್ನು ನಿರ್ಮಿಸುವದ್ವಾರ ತೆರೆದುಕೊಂಡಿರುವುದರಿಂದ ಭಾಜಪದ ರಾಜಕಾರಣ ಮಾಡುವ ದ್ವಾರವು ಮುಚ್ಚಿದೆ, ಎಂದು ಕಾಂಗ್ರೆಸ್ಸಿನ ವಕ್ತಾರರಾದ ರಣದೀಪ್ ಸೂರಜೇವಾಲಾ ರವರು ಹೇಳಿದ್ದಾರೆ.

ತೀರ್ಪನ್ನು ಸ್ವಾಗತಿಸಿ ಶಾಂತಿ ಕಾಪಾಡೋಣ ! – ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

ತೀರ್ಪು ಕುರಿತಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು ಅಯೋಧ್ಯೆ ವಿವಾದದ ಕುರಿತು ಸುಪ್ರೀಮ್ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ . ಉದ್ವೇಗಕ್ಕೆ ಒಳಗಾಗಬೇಡಿ , ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ.

‘೯/೧೧ ರ ದಿನ ಜಗತ್ತಿನಾದ್ಯಂತ ಪ್ರಭು ಶ್ರೀರಾಮಚಂದ್ರನ ಸ್ಮರಣೆಯಲ್ಲಿ ‘ಅಯೋಧ್ಯಾ ದಿನವೆಂದು ಗುರುತಿಸಲಾಗುವುದು !
– ಪೂ. (ನ್ಯಾಯವಾದಿ) ಹರಿಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

‘೯/೧೧ (ನವೆಂಬರ್ ೯) ಈ ದಿನ ಇಂದಿನಿಂದ ಇಡೀ ವಿಶ್ವದಲ್ಲಿ ಪ್ರಭು ಶ್ರೀರಾಮಚಂದ್ರನ ಸ್ಮರಣೆಯಲ್ಲಿ ‘ಅಯೋಧ್ಯಾ ದಿನವೆಂದು ಗುರುತಿಸಲಾಗುವುದು. ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶದಿಂದ ಇಂದು ನಮ್ಮ ಶಿರ ಅಭಿಮಾನದಿಂದ ಎತ್ತರವಾಗಿದೆ. ‘ವಿವಾದಿತ ಸ್ಥಳದಲ್ಲಿ ಮೂಲ ಶ್ರೀರಾಮಜನ್ಮಭೂಮಿಯಿದ್ದು ಅದನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಯನ್ನು ಕಟ್ಟಲಾಯಿತು, ಎಂದು ಹಿಂದೂಗಳು ಮಂಡಿಸಿದ ಅಂಶವನ್ನು ಘಟನೆಗಳ ಆಧಾರದಿಂದ ನ್ಯಾಯಾಲಯವು ಸಮ್ಮತಿಸಿದೆ. ಮುಸಲ್ಮಾನರಿಗೆ ರಾಮಜನ್ಮ ಭೂಮಿಯನ್ನು ಬಿಟ್ಟು ಅಯೋಧ್ಯೆಯಲ್ಲಿ ಬೇರೆ ಎಲ್ಲಾದರೂ ೫ ಎಕರೆ ಭೂಮಿಯ ಮೇಲೆ ಮಸೀದಿಯನ್ನು ಕಟ್ಟಿಕೊಳ್ಳಬಹುದೆಂದು ನ್ಯಾಯಾಲಯವು ಸ್ಪಷ್ಟಗೊಳಿಸಿದೆ. ಸರಕಾರವು ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗುತ್ತದೆ. ಒಟ್ಟಿನಲ್ಲಿ, ‘ಸೌಗಂಧ್ ರಾಮ್ ಕೀ ಖಾತೆ ಹೈ, ಹಮ್ ಮಂದಿರ್ ವಹೀಂ ಬನಾಯೇಂಗೇ, ಎಂಬ ನಮ್ಮ ಬೇಡಿಕೆ ವಾಸ್ತವ ಸ್ವರೂಪ ಪ್ರಾಪ್ತವಾಗಲಿದೆ. ಈಗ ಆ ಸಮಯ ‘ಬಂದಿದೆ. ಈಶ್ವರನೇ ಇದನ್ನು ಮಾಡಿದ್ದಾನೆ.

ಇದು ಧರ್ಮದ ಜಯವಾಗಿದೆ ! – ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು
ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟೀಸ್‌ನ ವಕ್ತಾರರು

‘ರಾಮಲಲ್ಲಾನ ಜನ್ಮಸ್ಥಾನವಾಗಿರುವ ಅಯೋಧ್ಯೆಯಲ್ಲಿ ೬೭ ಏಕರೆಯ ಸಂಪೂರ್ಣ ಭೂಮಿ ಹಿಂದೂ ಕಕ್ಷಿದಾರರಿಗೆ ಸಿಕ್ಕಿದೆ. ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರರಿಗೆ ಅಯೋಧ್ಯೆಯಲ್ಲಿ ಅಥವಾ ಹೊರಗೆ ಎಲ್ಲಾದರೂ ಪ್ರಮುಖ ಕ್ಷೇತ್ರದಲ್ಲಿ ೫ ಎಕರೆ ಭೂಮಿಯನ್ನು ಮಸೀದಿಗಾಗಿ ನೀಡುವಂತಾಗಲಿ ಎಂದು ನುಡಿದಿದೆ. ಸರ್ವೋಚ್ಚ ನ್ಯಾಯಾಲಯವು ಬಾಬರಿ ಕಟ್ಟಡ ಹೊರಗಿನ ಜಾಗದ ಮೇಲೆಯೂ ನಮ್ಮ ಅಧಿಪತ್ಯವನ್ನು ಒಪ್ಪಿಕೊಂಡಿದೆ. ಇದು ಅತ್ಯಂತ ಮಹತ್ವದ ವಿಷಯವಾಗಿದೆ. ನಾವು ಮಾಡಿದ ಯುಕ್ತಿವಾದವನ್ನು ಒಪ್ಪಿಕೊಂಡು ಸಂಪೂರ್ಣ ಜಮೀನನ್ನು ನಮಗೆ ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಹಿಂದೂ ಮಹಾಸಭಾ ಹಾಗೂ (ಪೂ.) ನ್ಯಾಯವಾದಿ ಹರಿ ಶಂಕರ ಜೈನ್‌ರವರು ಮಾಡಿದ ಯುಕ್ತಿವಾದವನ್ನು ಅಂಗೀಕರಿಸಿತು. ಇದು ಧರ್ಮದ ವಿಜಯವಾಗಿದೆ, ಎಂದು ನಮಗನಿಸುತ್ತದೆ.