ರಾಮಮಂದಿರವನ್ನು ಕಟ್ಟುವುದಕ್ಕಾಗಿ ಮತ್ತು ರಾಮರಾಜ್ಯವು ಬರುವುದಕ್ಕಾಗಿ ರಾಮನಾಮದ ಜಪವನ್ನು ಮಾಡಿರಿ !

ಶ್ರೀರಾಮಜನ್ಮಭೂಮಿಯ ಮುಕ್ತಿಗಾಗಿ..

ಹಿಂದೂಗಳ ನೂರಾರು ವರ್ಷಗಳ ರಕ್ತರಂಜಿತ ಹೋರಾಟ !

ಹಿಂದೂಗಳ ಸಂಘರ್ಷ ಏತಕ್ಕಾಗಿ… ? ಹಿಂದೂಗಳ ಶ್ರದ್ಧಾಸ್ಥಾನ ಕಾಪಾಡುವುದಕ್ಕಾಗಿ…

ಶ್ರೀರಾಮಜನ್ಮಭೂಮಿಗಾಗಿ ವರ್ಷಗಟ್ಟಲೆ ನಡೆಯುತ್ತಿದ್ದ ಹೋರಾಟದಲ್ಲಿ ಅನೇಕರು ಬಲಿದಾನ ನೀಡಿದ್ದರೂ, ಯಾರ ಪ್ರಾಣ ತೆಗೆಯಲಿಲ್ಲ. ಹಿಂದೂಗಳ ಈ ಹೋರಾಟದ ಮೂಲಕ ಶ್ರೀರಾಮನಲ್ಲಿ ಮೊರೆ ಹೋಗಿ ಅದರಿಂದಲೇ ಯಶಸ್ಸು ಸಿಕ್ಕಿದೆ !

೧. ರಾಮಜನ್ಮಭೂಮಿಯನ್ನು ನಾಶ ಮಾಡುವಂತೆ ರಾಜಾಜ್ಞೆ

ಬಾಬರನು ‘ರಾಜಾಜ್ಞೆಯಲ್ಲಿ ಹೀಗೆ ಹೇಳಿದ್ದ, ‘ಶಾಹಂಶಾಹೆ ಹಿಂದ್ ಮಾಲಿಕುಲ್ ಜಹಾಂ ಬಾದಶಾಹ ಬಾಬರ ಹಾಗೂ ಹಜರತ ಜಲಾಲಶಾಹ ಇವರ ಆದೇಶಕ್ಕನುಸಾರ ರಾಮಜನ್ಮಭೂಮಿಯನ್ನು ನಾಶ ಮಾಡಿ ಅದೇ ಸಾಮಗ್ರಿಗಳಿಂದ ಮಸೀದಿಯನ್ನು ನಿರ್ಮಿಸುವ ಅನುಮತಿ ಇದೆ. ಅಯೋಧ್ಯೆ ಹೊರತುಪಡಿಸಿ ಹಿಂದುಸ್ಥಾನದಲ್ಲಿಯ ಇತರ ಯಾವುದೇ ಹಿಂದೂ ಅಯೋಧ್ಯೆಗೆ ತಲುಪದಿರಲಿ. ಸಂದೇಹವಿದ್ದಲ್ಲಿ ಸಂಬಂಧಪಟ್ಟವರನ್ನು ಅಲ್ಲೇ ಹತ್ಯೆ ಮಾಡಿ. ಈ ಕಾರ್ಯಾಚರಣೆಯನ್ನು ಕರ್ತವ್ಯವೆಂದು ತಿಳಿದು ಮಾಡಿ. ಇದರಿಂದ ಗಮನಕ್ಕೆ ಬರುವ ಅಂಶವೆಂದರೆ, ಆಗಿನ ಆಡಳಿತಕ್ಕೆ ರಾಮಮಂದಿರವನ್ನು ಒಡೆದು ಅಲ್ಲಿ ಮಸೀದಿಯನ್ನು ನಿರ್ಮಿಸುವುದು ಅಷ್ಟು ಸುಲಭವಲ್ಲ ಎಂಬುದು ತಿಳಿದ ವಿಷಯವಿತ್ತು.

೨. ಬಾಬರನ ಮಂತ್ರಿ ಮೀರಬಾಕಿಯ ಕ್ರೂರತೆ !

ಯುದ್ಧ ಮಾಡುತ್ತಿರುವಾಗ ೧ ಲಕ್ಷ ೭೪ ಸಾವಿರ ಹಿಂದೂಗಳು ಮರಣ ಹೊಂದಿದರು ಹಾಗೂ ಆ ಮೃತದೇಹಗಳ ರಾಶಿಯಾಯಿತು. ಆಗ ಬಾಬರನ ಮಂತ್ರಿ ‘ಮೀರಬಾಕಿಯು ತೋಪಿನಿಂದ ರಾಮಜನ್ಮಭೂಮಿಯಲ್ಲಿನ ದೇವಸ್ಥಾನವನ್ನು ಬೀಳಿಸಿದನು.

೩. ಮಸೀದಿಯ ನಿರ್ಮಾಣದಲ್ಲಿ ಹಿಂದೂಗಳ ರಕ್ತದ ಬಳಕೆ !

ಜಲಾಲಶಾಹನು ‘ಲಾಹೋರಿ ಇಟ್ಟಿಗೆಗಳನ್ನು ಹಿಂದೂಗಳ ರಕ್ತದಿಂದ ತಣ್ಣಗಾಗಿಸಿ ಅದನ್ನು ಮಸೀದಿಗಾಗಿ ಉಪಯೋಗಿಸಿದನು. ಮಸೀದಿಯನ್ನು ಕಟ್ಟಲು ಪ್ರೇರೇಪಿಸಿದ ತಾಸ್ಸುನ್ ಮುಸಲ್ಮಾನ ಫಕೀರ ಕಜಲ ಅಬ್ಬಾಸ್ ಮೂಸಾ ಅಶಿಕಾನ ಕಲಂದರ್ ಸಾಹಬ ಈತನಿಗೆ ಅಯೋಧ್ಯೆಗೆ ಮಕ್ಕಾದ ರೂಪವನ್ನು ನೀಡುವಬಯಕೆ ಇತ್ತು.

೪. ಕ್ಷತ್ರೀಯರ ರಾಮಜನ್ಮಭೂಮಿಯ ಮುಕ್ತಿಗಾಗಿ ಹೋರಾಟ !

ಕಲಂದರನ ಅನುಮತಿಯಿಂದ ರಾಮಮಂದಿರವನ್ನು ನಾಶ ಮಾಡಿ ಆ ಸಾಮಗ್ರಿಗಳಿಂದ ಮಸೀದಿಯನ್ನು ನಿರ್ಮಿಸಿದನು. ೧೦ ಸಾವಿರ ಸೂರ್ಯವಂಶಿ ಕ್ಷತ್ರೀಯರು ರಾಮಜನ್ಮಭೂಮಿಯ ರಕ್ಷಣೆಗಾಗಿ ಒಟ್ಟಾದರು; ಆದರೆ ಶಾಹಿಯ ಸೇನೆಯು ಯುದ್ಧದಲ್ಲಿ ಅವರನ್ನು ಕೊಂದರ.

೫. ಅಕಬರನ ಕಾಲದಲ್ಲಿ ದೇವಸ್ಥಾನಕ್ಕಾಗಿ ಕಟ್ಟೆ

ಅಕಬರನ ಕಾಲದಲ್ಲಿ ಕ್ಷತ್ರೀಯರು ದಾಳಿಯನ್ನು ಮಾಡಿದಾಗ ಆದಂತಹ ಯುದ್ಧದಲ್ಲಿ ಹಿಂದೂಗಳು ಶಾಹಿ ಸೇನೆಯನ್ನು ಬಗ್ಗು ಬಡಿದು ಮಸೀದಿಯ ಮುಂದೆ ದೇವಸ್ಥಾನಕ್ಕಾಗಿ ಕಟ್ಟೆ ಕಟ್ಟಿದರು; ಆದರೆ ಹಿಂದೂಗಳಿಗೆ ನೋವಾಗದಿರಲಿ ಎಂದು ಅಕಬರನು ಶ್ರೀರಾಮ ಮೂರ್ತಿಯ ಸ್ಥಾಪನೆಗಾಗಿ ಆಜ್ಞೆಯನ್ನು ನೀಡಿದನು.

೬. ಔರಂಗಜೇಬನ ರಾಮಜನ್ಮ ಭೂಮಿಯ ಮೇಲೆ ಆಕ್ರಮಣ !

ಶಾಹಜಹಾನನ ಮಗ ಮಹಿಯುದ್ದೀನ ಆಲಮಗಿರ್ ಔರಂಗಜೇಬನು ಹಿಂದೂಗಳನ್ನು ದ್ವೇಷಿಸುವ ಕ್ರೂರ ಆಡಳಿಗಾರ ಆಗಿದ್ದನು. ಅಧಿಕಾರದ ಗದ್ದುಗೆ ಏರಿದ ಮೇಲೆ ಆತನು ಸೇನೆಯನ್ನು ಅಯೋಧ್ಯೆಗೆ ಕಳುಹಿಸಿದನು. ಹಿಂದೂಗಳ ಮೂರ್ತಿ ಮತ್ತು ಪೂಜಾ ಸಾಮಗ್ರಿಗಳನ್ನು ಅಡಗಿಸಿಟ್ಟನು. ರಾತ್ರಿ ಹಳ್ಳಿಗಳಲ್ಲಿ ಸುತ್ತಾಡಿ ಆಕ್ರಮಣದ ಸೂಚನೆಯನ್ನು ನೀಡಿದನು. ಹಿಂದೂಗಳ ಒಂದು ಗುಂಪು ರಾಮಜನ್ಮಭೂಮಿಯ ಬಳಿ ಬಂದಿತು. ರಾಮದಾಸಸ್ವಾಮಿಯ ಶಿಷ್ಯ ‘ವೈಷ್ಣವದಾಸ ಇವರೊಂದಿಗೆ ೧೦ ಸಾವಿರ ಸಾಧುಗಳ ಪಡೆ ಇತ್ತು. ಆಕ್ರಮಣದ ಸೂಚನೆ ಸಿಕ್ಕಿದ ನಂತರ ಅವರು ಹಿಂದೂಗಳ ಗುಂಪಿಗೆ ಸೇರಿದರು. ಅವರು ಮೊಗಲ ಸೈನ್ಯವನ್ನು ವಿರೋಧಿಸಿದರು. ಶಾಹಿ ಸೇನೆಯು ಕಾಲ್ಕಿತ್ತಿತು.

೭. ಹಿಂದೂ-ಸಿಕ್ಖ್ ಇವರಿಂದ ಮೊಗಲರ ಸೋಲು

ಕೋಪಗೊಂಡ ಔರಂಗಜೇಬನು ಹಸನ ಅಲಿಗೆ ೫೦ ಸಾವಿರ ಸೈನ್ಯವನ್ನು ನೀಡಿ ರಾಮಜನ್ಮಭೂಮಿಯನ್ನು ಸರ್ವನಾಶ ಮಾಡಲು ಕಳುಹಿಸಿದನು. ವೈಷ್ಣವದಾಸರು ಗುರುಗೋವಿಂದ ಇವರಿಂದ ಸಿಕ್ಖ್‌ರ ಸೈನ್ಯವನ್ನು ತೆಗೆದುಕೊಂಡು ಶಾಹಿ ಮೊಗಲರ ಸೇನೆಯನ್ನು ಹೊಡೆದೋಡಿಸಿದರು. ಹಸನ ಅಲಿ ಈ ಯುದ್ಧದಲ್ಲಿ ಮರಣ ಹೊಂದಿದನು.

೮. ರಾಮಜನ್ಮಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಔರಂಗಜೇಬ್ !

೪ ವರ್ಷಗಳ ನಂತರ ಔರಂಗಜೇಬನು ಮತ್ತೊಮ್ಮೆ ಮಾಡಿದ ಆಕ್ರಮಣದಿಂದಾಗಿ ಶಾಹಿ ಸೇನೆಯು ೧೦ ಸಾವಿರ ಹಿಂದೂಗಳ ಹತ್ಯೆ ಮಾಡಿತು. ಅವರ ಮೃತ ದೇಹಗಳನ್ನು ಬಾವಿಯಲ್ಲಿ ತುಂಬಿ ಅದರ ಸುತ್ತಲೂ ಗೋಡೆಯನ್ನು ಕಟ್ಟಿದನು. ಶಾಹಿ ಸೇನೆಯು ರಾಮ ಜನ್ಮಭೂಮಿಯ ಕಟ್ಟೆಯನ್ನು ಕಿತ್ತು ಅದಕ್ಕೆ ಕೋಟೆಯ ಸ್ವರೂಪ ನೀಡಿತು.

೯. ರಾಮಜನ್ಮಭೂಮಿಯ ಮುಕ್ತಿ ಹಾಗೂ ಹಿಂದೂ !

ನವಾಬ ಸಹಾದತ ಅಲಿ ಖಾನ್ ಅಧಿಕಾರಕ್ಕೆ ಬಂದಾಗ ಹಿಂದೂಗಳು ಪುನಃ ರಾಮಜನ್ಮಭೂಮಿ ಪ್ರಾಪ್ತಿಗಾಗಿ ಆಕ್ರಮಣ ಮಾಡಿದರು; ಆದರೆ ಅವರು ಸೋತರು. ನವಾಬ ಬಸಿರುದ್ದೀನ ಹೈದರ ಅಧಿಕಾರಕ್ಕೆ ಬಂದಮೇಲೆ ಹಿಂದೂಗಳು ಮತ್ತೊಮ್ಮೆ ಆಕ್ರಮಣವನ್ನು ಮಾಡಿದರು. ಸಾಧುಗಳ ಸೈನಿಕರು ಹಿಂದೂ ವೀರರ ಸೇನೆಯೊಂದಿಗೆ ಶಾಹಿ ಸೇನೆಯನ್ನು ಹೊಡೆದುರುಳಿಸಿ ಓಡಿಸಿದರು ಮತ್ತು ರಾಮಜನ್ಮಭೂಮಿಯನ್ನು ಹಿಂದೂಗಳು ತಮ್ಮ ವಶಕ್ಕೆ ಪಡೆದುಕೊಂಡರು; ಆದರೆ ಶಾಹಿ ಸೇನೆಯು ಪುನಃ ಬಂದು ರಾಮಜನ್ಮಭೂಮಿಯನ್ನು ವಶಪಡಿಸಿಕೊಂಡಿತು.

೧೦. ಹಿಂದೂ ರಾಜರು ಮತಾಂಧರನ್ನು ಓಡಿಸುವುದು !

ನವಾಬ ವಾಜೀದ ಅಲೀಶಾಹನ ಕಾಲದಲ್ಲಿ ಹಿಂದೂಗಳು ಮಾಡಿದಂತಹ ೨ ದಿನಗಳ ಯುದ್ಧದಲ್ಲಿ ಮತಾಂಧರು ಸೋತರು. ಅಯೋಧ್ಯೆಯ ಮಹಾರಾಜ ಮಾನಸಿಂಗ್ ಇವರು ಹಿಂದೂಗಳಿಗೆ ರಾಮಜನ್ಮಭೂಮಿಯ ಮೇಲೆ ಮತ್ತೊಮ್ಮೆ ಚೌಥರಾ ಕಟ್ಟಲು ಆಜ್ಞೆಯನ್ನು ಮಾಡಿದರು. ಚೌಥರಾದ ಮೇಲೆ ಹುಲ್ಲಿನ ಕಡ್ಡಿಯಿಂದ ಎತ್ತರವಾದ ದೇವಸ್ಥಾನವನ್ನು ನಿರ್ಮಿಸಿ ಮೂರ್ತಿಯನ್ನು ಸ್ಥಾಪಿಸಿದರು.

೧೧. ಆಂಗ್ಲರ ಕಾಲದಲ್ಲಿ ಎರಡು ಸಲ ರಾಮಜನ್ಮಭೂಮಿ ಮುಕ್ತಿಗಾಗಿ ಹೋರಾಟ

ಅ. ಆಂಗ್ಲರ ಅಧಿಕಾರದಲ್ಲಿ ಮೊದಲನೇ ಆಕ್ರಮಣ ೧೯೧೨ ರಲ್ಲಿ ಆಯಿತು. ಈ ಆಕ್ರಮಣದಲ್ಲಿ ಬಾಬರಿಗೆ ಯಾವುದೇ ಹಾನಿಯಾಗಲು ಬಿಡಲಿಲ್ಲ.

ಆ. ಎರಡನೇ ಆಕ್ರಮಣ ೧೯೩೪ ನೇ ಇಸವಿಯಲ್ಲಿ ಆಯಿತು. ಈ ಆಕ್ರಮಣದಲ್ಲಿ ಬಾಬರಿಯ ಕಟ್ಟಡವನ್ನು ಒಡೆದರು. ಫೌಜಾಬಾದನಲ್ಲಿಯ ಜಿಲ್ಲಾಧಿಕಾರಿ ಜೆ.ಪಿ. ನಿಕಲಸನನು ಮಸೀದಿಯನ್ನು ಪುನಃ ನಿರ್ಮಿಸಿದನು. ಬಾಬರಿನ ಒಂದು ಸ್ಥಳದಲ್ಲಿ ಬರೆದಿತ್ತು, ೨೭.೩.೧೯೩೪ ಅನುಸಾರ ಜೀಉಲ್ ಹಿಜ್ಜಾ ಸನ ೧೩೫೨ ಹಿಜರಿ (ಮುಸಲ್ಮಾನ ಕಾಲಗಣನೆ ವರ್ಷ ಈ ಅರ್ಥದಲ್ಲಿ) ಈ ದಿನದಂದು ಹಿಂದೂಗಳು ನಾಶಗೊಳಿಸಿದ ಮಸೀದಿ ತಹವ್ವರ ಖಾನ್ ಈ ಗುತ್ತಿಗೆದಾರನು ಅತ್ಯಂತ ಚಾಣಾಕ್ಷ ತನದಿಂದ ಮತ್ತೊಮ್ಮೆ ಕಟ್ಟಿದನು.

೧೨. ರಾಮಜನ್ಮಭೂಮಿಯ ಮುಕ್ತಿಗಾಗಿ ಹಿಂದೂಗಳ ೭೭ ಸಲ ಹೋರಾಟ !

೧೯೯೨ ರಲ್ಲಿ ಡಿಸೆಂಬರ್ ೬ ರಂದು ಬಾಬರಿ ಮಸೀದಿಯ ಮೇಲೆ ಏನೆಲ್ಲ ಆಯೊತೋ, ಆ ಬಗ್ಗೆ ಎಲ್ಲರಿಗೂ ತಿಳಿದ ವಿಷಯವಾಗಿದೆ. ರಾಮಜನ್ಮಭೂಮಿಯ ಉದ್ದೇಶದಿಂದ ಇಲ್ಲಿಯವರೆಗೆ ೭೭ ಆಕ್ರಮಣಗಳಾದವು. ಬಾಬರನ ಕಾಲದಲ್ಲಿ ೪, ಹುಮಾಯೂನನ ಕಾಲದಲ್ಲಿ ೧೦, ಔರಂಗಜೇಬನ ಕಾಲಾವಧಿಯಲ್ಲಿ ೩೦, ಶಹಾದತ ಅಲಿಯ ಕಾಲದಲ್ಲಿ ೫, ನಸಿರುದ್ದೀನ್ ಹೈದರನ ಕಾಲದಲ್ಲಿ ೪, ವಜಿದ ಅಲಿಯ ಕಾಲದಲ್ಲಿ ೨, ಆಂಗ್ಲರ ಕಾಲದಲ್ಲಿ ೨, ಮಾಜಿ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಇವರ ಕಾಲದಲ್ಲಿ ೧ ಸಲ, ಹೀಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೋರಾಟವಾಗಿತ್ತು. – ಗುರುಕುಲ ಝಜ್ಜರ, ಹರಿಯಾಣಾ