ಕ್ರೂರಕರ್ಮಿ ಟಿಪ್ಪೂ ಸುಲ್ತಾನನ ಲೇಖನಗಳನ್ನು ಪಠ್ಯಪುಸ್ತಕಗಳಿಂದ ಕೈಬಿಡುವ ನಿರ್ಣಯವನ್ನು ತೆಗೆದುಕೊಂಡಿರುವ ಭಾಜಪ ಸರಕಾರಕ್ಕೆ ಅಭಿನಂದನೆ ! ಸರಕಾರ ಕೇವಲ ಇಷ್ಟಕ್ಕೆ ನಿಲ್ಲದೆ ‘ಟಿಪ್ಪೂ ಸುಲ್ತಾನ ಎಕ್ಸ್‌ಪ್ರೆಸ್ಸ್ನ ಹೆಸರನ್ನುಕೂಡ ಬದಲಾಯಿಸಬೇಕು, ಎಂಬುದೇ ಇತಿಹಾಸಪ್ರೇಮಿಗಳ ಮತ್ತು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ. !

ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಲೇಖನಗಳನ್ನು ಪಠ್ಯಪುಸ್ತಕದಿಂದ ಕೈಬಿಡಲಾಗುವುದು ! – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು – ಟಿಪ್ಪು ಸುಲ್ತಾನನಿಗೆ ಸಂಬಂಧಿಸಿ ಪಠ್ಯಪುಸ್ತಕಗಳಲ್ಲಿ ಏನೇನು ಬರೆಯಲಾಗಿದೆಯೋ, ಅವುಗಳನ್ನೆಲ್ಲ ತೆಗೆದುಹಾಕುವ ಚಿಂತನೆ ಮಾಡಲಾಗುವುದು. ಸರಕಾರವು ಶಾಲಾಪಠ್ಯದಲ್ಲಿ ಬದಲಾವಣೆ ಮಾಡುವ ನಿರ್ಣಯ ಮಾಡಿದೆ, ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇವರು ಮಾಹಿತಿ ನೀಡಿದ್ದಾರೆ. ಭಾಜಪದ ಶಾಸಕ ಅಪ್ಪಚು ರಂಜನ ಇವರು ರಾಜ್ಯದ ಪಠ್ಯಪುಸ್ತಕಗಳಿಂದ ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಪಾಠಗಳನ್ನು ತೆಗೆಯಬೇಕೆಂದು ವಿನಂತಿಸಿದ್ದಾರೆ. ಅದಕ್ಕೆ ಶಿಕ್ಷಣ ಸಚಿವ ಸುರೇಶ ಕುಮಾರ ಇವರು ಸಂಬಂಧಪಟ್ಟ ಅಧಿಕಾರಿಗಳಿಗೆ ಟಿಪ್ಪು ಸುಲ್ತಾನನಿಗೆ ಸಂಬಂಧಿಸಿದ ಪಾಠಗಳನ್ನು ಪಠ್ಯಪುಸ್ತಕಗಳಿಂದ ವರ್ಜಿಸುವ ಸಲುವಾಗಿ ವರದಿಯನ್ನು ಸಿದ್ಧಪಡಿಸಬೇಕೆಂದು ಆದೇಶ ನೀಡಿದ್ದಾರೆ. ಕರ್ನಾಟಕದಲ್ಲಿ ಪ್ರತಿವರ್ಷ ನವೆಂಬರ್ ೧೦ ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಇವರು ಅಧಿಕಾರಕ್ಕೇರಿದ ಕೂಡಲೇ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗಕ್ಕೆ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸ ಬಾರದೆಂದು ಆದೇಶ ನೀಡಿದ್ದಾರೆ. ಆ ಆದೇಶಕ್ಕೆ ಜುಲೈ ತಿಂಗಳ ಮಂತ್ರಿಮಂಡಳದ ಬೈಠಕ್‌ನಲ್ಲಿ ಅನುಮೋದನೆ ನೀಡಲಾಗಿದೆ.

ದೇಶದ್ರೋಹಿ ಹಾಗೂ ಮತಾಂಧ ಟಿಪ್ಪುವಿನ ವಿಷಯಗಳನ್ನು ತೆಗೆದು ಹಾಕುವ ನಿರ್ಣಯವು ಸ್ವಾಗತಾರ್ಹ ! – ಶ್ರೀ. ಪ್ರಮೋದ ಮುತಾಲಿಕ್, ಸಂಸ್ಥಾಪಕ, ಶ್ರೀರಾಮ ಸೇನೆ

ಟಿಪ್ಪು ಸುಲ್ತಾನ ದೇಶದ್ರೋಹಿ ಹಾಗೂ ಮತಾಂಧನಾಗಿದ್ದನು, ಎಂದು ಹೇಳುವ ಅನೇಕ ಪುರಾವೆಗಳಿವೆ. ಆದರೂ ಜನತಾ ದಳ (ಜಾತ್ಯತೀತ), ಕಮ್ಯುನಿಸ್ಟ್ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಮತಾಂಧರನ್ನು ಓಲೈಸಲು ಅವನನ್ನು ವೈಭವೀಕರಿಸಿದವು ಹಾಗೂ ಆ ಲೇಖನವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮುದ್ರಿಸಲಾಗಿತ್ತು. ಭಾಜಪ ಸರಕಾರ ಆ ವಿಷಯಗಳನ್ನು ತೆಗೆಯುವ ನಿರ್ಣಯ ಮಾಡಿರುವುದು ಸ್ವಾಗತಾರ್ಹವಾಗಿದೆ. ಲಂಡನ್‌ನಲ್ಲಿನ ಪ್ರಾಚೀನ ವಾಸ್ತು ವಿಭಾಗದಲ್ಲಿ ಟಿಪ್ಪುಸುಲ್ತಾನನು ತನ್ನ ಸರದಾರರಿಗೆ ಬರೆದಿರುವ ಪತ್ರವಿದೆ, ಅದರಲ್ಲಿ ದೇವಸ್ಥಾನಗಳನ್ನು ಕೆಡವಿದ ಉಲ್ಲೇಖವಿದೆ. ಇಂತಹ ದೇಶದ್ರೋಹಿಯ ವಿಷಯವನ್ನು ಪುಸ್ತಕದಿಂದ ತೆಗೆಯುವುದು ಯೋಗ್ಯವಿದೆ.

‘ಟಿಪ್ಪು ಸುಲ್ತಾನ ಎಕ್ಸ್‌ಪ್ರೆಸ್ಗೆ ಮಹಾನ್ ‘ರಾಜ ಕೃಷ್ಣರಾಜ ಒಡೆಯರ ಇವರ ಹೆಸರು ನೀಡಬೇಕು ! – ಹಿಂದೂ ಜನಜಾಗೃತಿ ಸಮಿತಿ

ಅಂದಿನ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಮುಸಲ್ಮಾನರನ್ನು ಓಲೈಸುವ ಸಲುವಾಗಿ ಅತ್ಯಂತ ಕ್ರೂರ, ಮತಾಂಧ ಹಾಗೂ ಅಸಹಿಷ್ಣು ಆಗಿದ್ದ ಟಿಪ್ಪು ಸುಲ್ತಾನ ‘ಮೈಸೂರಿನ ಹುಲಿ, ‘ಉತ್ತಮ ಆಡಳಿತಗಾರ ಮತ್ತು ‘ಸ್ವಾತಂತ್ರ್ಯಸೇನಾನಿ ಇತ್ಯಾದಿ ಆಗಿದ್ದನು ಎಂದು ಹೇಳುತ್ತಾ ಮಕ್ಕಳಿಗೆ ಅವನ ಸುಳ್ಳು ಇತಿಹಾಸವನ್ನು ಕಲಿಸಲಾಗುತ್ತಿತ್ತು. ಇಂತಹ ಟಿಪ್ಪ್ಪು ಸುಲ್ತಾನನ ಇತಿಹಾಸವನ್ನು ಶಾಲಾ ಪಠ್ಯಪುಸ್ತಕದಿಂದ ವರ್ಜಿಸುವ ನಿರ್ಣಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇವರು ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ. ಈ ನಿರ್ಣಯಕ್ಕೆ ಹಿಂದೂ ಜನಜಾಗೃತಿ ಸಮಿತಿಯ ಬೆಂಬಲವಿದೆ. ಆದ್ದರಿಂದ ಈ ನಿಮಿತ್ತದಲ್ಲಿ ‘ಟಿಪ್ಪ್ಪು ಸುಲ್ತಾನ ಎಕ್ಸ್‌ಪ್ರೆಸ್ನ ಹೆಸರನ್ನು ಬದಲಾಯಿಸಿ ಮಹಾನ ರಾಜ ‘ಕೃಷ್ಣರಾಜ ಒಡೆಯರ ಇವರ ಹೆಸರನ್ನು ನೀಡಬೇಕು, ಎಂದು ಎಲ್ಲ ಹಿಂದೂಗಳ ವತಿಯಿಂದ ನಾವು ವಿನಂತಿಸುತ್ತಿದ್ದೇವೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.