ಅಖಿಲ ಭಾರತೀಯ ವ್ಯಾಪಾರಿ ಸಂಘಟನೆಯ ಚೀನಾವಿರೋಧಿ ಕರೆಗೆ ಸಂದ ಜಯ !

ದೀಪಾವಳಿ ಅವಧಿಯಲ್ಲಿ ದೇಶಾದ್ಯಂತ ಚೀನಾ ವಸ್ತುಗಳ ಮಾರಾಟದಲ್ಲಿ ಶೇ. ೬೦ ರಷ್ಟು ಭಾರಿ ಇಳಿಕೆ !

ಭಾರತವನ್ನು ದೊಡ್ಡ ಮಾರುಕಟ್ಟೆ ಎಂದು ತಿಳಿದು ‘ಭಾರತವು ಚೀನಾವನ್ನು ಅವಲಂಬಿಸಿದೆ, ಎಂದು ತಿಳಿಯುವ ಹಾಗೂ ಭಾರತವನ್ನು ಆ ರೀತಿ ಊಹಿಸಿಕೊಂಡಿರುವ ಚೀನಾಗೆ ತಪರಾಕಿ !

ಇನ್ನು ಭಾರತದ ಜನರು ಚೀನಾದ ವಸ್ತುಗಳನ್ನು ಶೇ. ೧೦೦ ರಷ್ಟು ಬಹಿಷ್ಕರಿಸಿ ಅದಕ್ಕೆ ಪಾಠ ಕಲಿಸಬೇಕು !

ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಕರೆ ನೀಡಿ ಅದರಲ್ಲಿ ದೊಡ್ಡ ಯಶಸ್ಸನ್ನು ಕಂಡ ಅಖಿಲ ಭಾರತೀಯ ವ್ಯಾಪಾರಿ ಸಂಘಟನೆಯ ಕೃತಿ ಶ್ಲಾಘನೀಯ !

ನವ ದೆಹಲಿ – ದೀಪಾವಳಿಯ ಕಾಲಾವಧಿಯಲ್ಲಿ ಕಳೆದ ವರ್ಷದ ತುಲನೆಯಲ್ಲಿ ಚೀನಾ ವಸ್ತುಗಳ ಮಾರಾಟದಲ್ಲಿ ಶೇ. ೬೦ ರಷ್ಟು ಇಳಿಕೆಯಾಗಿದೆ. ‘ಕ್ಯಾನ್ಫೆಡ ರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಅಖಿಲ ಭಾರತೀಯ ವ್ಯಾಪಾರಿ ಸಂಘಟನೆಯು) ಮಾಡಿದ ಸಮೀಕ್ಷೆಯಿಂದ ಈ ಮಾಹಿತಿ ಎದುರು ಬಂದಿದೆ. ಅಕ್ಟೋಬರ್ ೨೪ ರಿಂದ ೨೯ ಈ ಅವಧಿಯಲ್ಲಿ ದೇಶದ ೨೧ ದೊಡ್ಡ ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು. ಈ ಬಗ್ಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಖಂಡೇಲವಾಲರು, ನಾವು ಆಯಾತ ಮಾಡುವವರಿಗೆ ಮತ್ತು ವ್ಯಾಪಾರಿಗಳಿಗೆ ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದೆವು. ೨೦೧೮ ನೇ ಇಸವಿಯಲ್ಲಿಯೂ ನಾವು ಆ ರೀತಿ ಕರೆ ನೀಡಿದ್ದರಿಂದ ಆಗ ಮಾರಾಟದಲ್ಲಿ ಶೇ. ೩೦ ರಷ್ಟು ಇಳಿಕೆಯಾಗಿತ್ತು. ಈ ಸಮಯದಲ್ಲಿ ಮಾತ್ರ ಜುಲೈ ೨೦೧೯ ರಲ್ಲಿಯೇ ಚೀನಾವಿರೋಧಿ ಜಾಗೃತಿ ಮೂಡಿಸಿದ್ದರಿಂದ ಅನೇಕ ವ್ಯಾಪಾರಿಗಳು ಚೀನಾ ವಸ್ತುಗಳ ಆಯಾತಕ್ಕಿಂತ ಭಾರತದಲ್ಲಿ ತಯಾರಿಸುವ (ಸ್ವದೇಶಿ) ವಸ್ತುಗಳನ್ನು ಖರೀದಿಸಲು ಆದ್ಯತೆ ನೀಡಿದರು. ಇದರಿಂದ ಈ ವರ್ಷ ಚೀನಾ ವಸ್ತುಗಳ ಮಾರಾಟದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿದೆ. ‘ಫೈನಾನ್ಶಿಯಲ್ ಎಕ್ಸಪ್ರೆಸ್ ಈ ವಾರ್ತಾ ಜಾಲತಾಣವು ನೀಡಿದ ಮಾಹಿತಿಗನುಸಾರ ೨೦೧೮ ನೇ ಇಸವಿಯ ದೀಪಾವಳಿಯ ಅವಧಿಯಲ್ಲಿ ೮ ಸಾವಿರ ಕೋಟಿ ರೂಪಾಯಿಗಳ ಚೀನಾ ವಸ್ತುಗಳು ಮಾರಾಟವಾಗಿತ್ತು, ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಈ ಸಲ ಮಾತ್ರ ಈ ಅಂಕಿ ೩ ಸಾವಿರದ ೨೦೦ ಕೋಟಿ ರೂಪಾಯಿಯಷ್ಟೇ ಇದೆ. ಸಮೀಕ್ಷೆಯ ಮೂಲಕ ದೊರೆತ ಮಾಹಿತಿಗನುಸಾರ ಶೇ. ೮೫ ರಷ್ಟು ವ್ಯಾಪಾರಿಗಳು, ಈ ಸಲ ಚೀನಾದ ಉತ್ಪಾದನೆಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದರು. ದೇಶದ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಭಾಗ್ಯನಗರ, ರಾಯಪೂರ, ನಾಗಪೂರ, ಪುಣೆ, ಭೋಪಾಳ, ಜಯಪೂರ, ಲಕ್ಷ್ಮಣಪುರಿ, ಕಾನಪೂರ, ಕರ್ಣಾವತಿ, ರಾಂಚಿ, ಡೇಹರಾಡೂನ, ಜಮ್ಮೂ, ಕೋಯಂಬತ್ತೂರ, ಭುವನೇಶ್ವರ, ಕೋಲಕಾತಾ, ಪಾಂಡಿಚೇರಿ ಮತ್ತು ತಿನಸುಕಿಯಾ ಈ ೨೧ ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು.