ಕೋಟ್ಯವಧಿ ಬಾಂಗ್ಲಾದೇಶಿ ನುಸುಳುಖೋರರಿಂದ ಕೂಡಿರುವ ಭಾರತ !

ಸರಕಾರವು ನುಸುಳುಕೋರರನ್ನು ಪತ್ತೆ ಹಚ್ಚಿ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು, ಇಲ್ಲದಿದ್ದರೆ ಈ ನುಸುಳುಖೋರರಿಂದ ದೇಶದ ಭದ್ರತೆ ಅಪಾಯಕ್ಕೊಳಗಾಗುವುದು ಬೆಂಗಳೂರು ನಗರದ ವಿವಿಧ ಭಾಗಗಳಿಂದ ೬೦ ಕ್ಕಿಂತ ಹೆಚ್ಚು ಬಾಂಗ್ಲಾದೇಶಿ ನುಸುಳುಖೋರರ ಬಂಧನ ನುಸುಳುಖೋರರು ಅನೇಕ ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಸಂಶಯ !

ಬೆಂಗಳೂರು – ಪೊಲೀಸರು ದೊಡ್ಡ ಕಾರ್ಯಾಚರಣೆಯನ್ನು ನಡೆಸಿ ನಗರದಲ್ಲಿ ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದ ೬೦ ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಿದ್ದಾರೆ. ಇವರು ಬಾಂಗ್ಲಾದೇಶಿ ಪಾಸಪೋರ್ಟ ಇಲ್ಲದೇ ಭಾರತದಲ್ಲಿ ವಾಸಿಸುತ್ತಿದ್ದರು. ಕಳೆದ ೨ ದಿನಗಳಲ್ಲಿ ನಗರದ ಮಾರತಳ್ಳಿ, ಕೆ.ಆರ್.ಪುರಂ, ರಾಮಮೂರ್ತಿ ನಗರ ಮತ್ತು ‘ಹೆಚ್.ಎ.ಎಲ್. ಪ್ರದೇಶಗಳಿಗೆ ದಾಳಿ ಮಾಡಿ ಪೊಲೀಸರು ಈ ಕಾರ್ಯಾ ಚರಣೆಯನ್ನು ನಡೆಸಿದ್ದಾರೆ. ‘ಬೆಂಗಳೂರು ಮಿರರ್ ದಿನಪತ್ರಿಕೆಯ ಜಾಲತಾಣದ ಮಾಹಿತಿಗನುಸಾರ ಬಂಧಿತ ನುಸುಳುಕೋರರ ವಿರುದ್ಧ ಕಾನೂನುರೀತ್ಯಾ ಕ್ರಮ ಜರುಗಿಸಿ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುವುದು ಎನ್ನುವ ಮಾಹಿತಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ. ಬೆಂಗಳೂರಿನ ಪೊಲೀಸ್ ಆಯುಕ್ತರಾದ ಭಾಸ್ಕರ ರಾವ್ ಪ್ರಸಾರಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, “ಕಟ್ಟದ ಮಾಲೀಕರು ಜನರಿಗೆ ಮನೆ ಬಾಡಿಗೆಗೆ ನೀಡುವಾಗ ಅವರ ಪರಿಚಯಪತ್ರವನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಆವಶ್ಯಕವಾಗಿದೆ. ಒಂದು ವೇಳೆ ಇದರಲ್ಲಿ ಅವರು ನಿಷ್ಕಾಳಜಿ ತೋರಿಸಿದರೆ, ಅವರ ಮೇಲೆಯೂ ಕ್ರಮ ಜರುಗಿಸಲಾಗುವುದು. ಬಂಧಿತ ಬಾಂಗ್ಲಾದೇಶಿ ನುಸುಳುಖೋರರನ್ನು ನಗರದಲ್ಲಿ ನುಸುಳಲು ಯಾರು ಸಹಾಯ ಮಾಡಿದ್ದಾರೆಂದು ಪತ್ತೆ ಹಚ್ಚಲಾಗುತ್ತಿದೆ, ಎಂದರು.