ಕ್ರೂರಕರ್ಮಿ ಟಿಪ್ಪು ಸುಲ್ತಾನನನ್ನು ಸ್ವಾತಂತ್ರ್ಯಸೇನಾನಿ ಎಂದು ಕರೆಯುವವರೇ ನಿಜವಾದ ಸ್ವಾತಂತ್ರ? ಸೇನಾನಿಗಳನ್ನು ಅವಮಾನಿಸದಿರಿ !

ಟಿಪ್ಪು ಸುಲ್ತಾನನು ಹಿಂದೂಗಳ ಮೇಲೆ ನಡೆಸಿದ ಕಲ್ಪನಾತೀತ ಭೀಕರ ಅತ್ಯಾಚಾರಗಳು

೧. ಟಿಪ್ಪು ಸುಲ್ತಾನನು ದಕ್ಷಿಣ ಭಾರತದಲ್ಲಿ ಮೈಸೂರು ರಾಜ್ಯದ ಅಧಿಕಾರ ಗಳಿಸಿದ ತಕ್ಷಣ ಮೂಲ ಹಿಂದೂ ರಾಜರ ಹೆಸರು-ಊರುಗಳನ್ನು ಅಳಿಸಿ ಹಾಕಿದನು. ಮೈಸೂರನ್ನು ಇಸ್ಲಾಮೀ ರಾಜ್ಯವೆಂದು ಘೋಷಿಸಿದನು.

೨. ಟಿಪ್ಪು ಸುಲ್ತಾನನು ದಕ್ಷಿಣ ಭಾರತದಲ್ಲಿ ೮ ಸಾವಿರಕ್ಕೂ ಹೆಚ್ಚು ಹಿಂದೂ ದೇವಸ್ಥಾನಗಳನ್ನು ಕೆಡವಿ ಆ ಸ್ಥಳಗಳಲ್ಲಿ ಮಸೀದಿಗಳನ್ನು ಕಟ್ಟಿದನು.

೩. ಪದ್ಮನಾಭ ಮೆನನ್ ಎಂಬ ಇತಿಹಾಸಕಾರರು ಹೇಳಿದಂತೆ ಟಿಪ್ಪು ರಾಜ್ಯದಲ್ಲಿ ಪ್ರಜೆಗಳ ಮುಂದೆ ಎರಡೇ ಪರ್ಯಾಯಗಳನ್ನು ಇಟ್ಟಿದ್ದನು. ಒಂದು ಕುರಾನ್ ಹಾಗೂ ಎರಡನೇಯದು ಖಡ್ಗ !

೪. ಟಿಪ್ಪು ಒಂದು ಲಕ್ಷ ಹಿಂದೂ ಸ್ತ್ರಿ-ಪುರುಷರನ್ನು ಬಲವಂತವಾಗಿ ಮತಾಂತರಿಸಿ ಮುಸಲ್ಮಾನರನ್ನಾಗಿಸಿದನು. ಟಿಪ್ಪುವಿನ ಈ ದೌರ್ಜನ್ಯವನ್ನು ವಿರೋಧಿಸುವ ಸಾಮರ್ಥ್ಯ ಇಲ್ಲದಿರುವುದರಿಂದ ಸಾವಿರಾರು ಹಿಂದೂ ಸ್ತ್ರೀ-ಪುರುಷರು ತಮ್ಮ ಮಕ್ಕಳೊಂದಿಗೆ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳ ಪವಿತ್ರ ಪ್ರವಾಹದಲ್ಲಿ ಜಲಸಮಾಧಿ ಮಾಡಿಕೊಂಡರು. ನೂರಾರು ಹಿಂದೂ ಸ್ತ್ರೀ-ಪುರುಷರು ಅಗ್ನಿಪ್ರವೇಶ ಮಾಡಿದರು; ಆದರೆ ತಮ್ಮ ಪವಿತ್ರ ಹಿಂದೂ ಧರ್ಮವನ್ನು ಬಿಟ್ಟು ಮುಸಲ್ಮಾನ ಧರ್ಮವನ್ನು ಸ್ವೀಕರಿಸಲಿಲ್ಲ.

೫. ಟಿಪ್ಪು ಸುಲ್ತಾನನು ಸಶಸ್ತ್ರ ಆಕ್ರಮಣ ಮಾಡಿ ೨೪ ಗಂಟೆಗಳಲ್ಲಿ ೫೦ ಸಾವಿರ ಹಿಂದೂಗಳನ್ನು ಮುಸಲ್ಮಾನರನ್ನಾಗಿಸಿದನು. ಈ ಮೊದಲಿನ ಯಾವುದೇ ಮುಸಲ್ಮಾನ ಸುಲ್ತಾನರಿಗೆ ಸಾಧ್ಯವಾಗದ್ದನ್ನು ಟಿಪ್ಪು ಸುಲ್ತಾನನು ಮಾಡಿದನು.

೬. ಟಿಪ್ಪುವಿನ ದೌರ್ಜನ್ಯಕ್ಕೊಳಗಾದ ರಾಜ್ಯದಲ್ಲಿ ಯುವತಿಯರಿಗೆ ಅಮಾನವೀಯ ತೊಂದರೆಗಳನ್ನು ಕೊಟ್ಟು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಸುಂದರ ಹಾಗೂ ಯುವ ರಾಜಸ್ತ್ರೀಯ ರನ್ನು ಟಿಪ್ಪು ತನ್ನ ಜನಾನಖಾನೆಯಲ್ಲಿ ಬಂಧಿಸಿಟ್ಟನು.

೭. ಟಿಪ್ಪು ತನ್ನ ಸೇನಾಪತಿಗೆ ಬರೆದ ಪತ್ರವು ಇಂದಿಗೂ ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿದೆ. ಅದರಲ್ಲಿ ಟಿಪ್ಪು ಸುಲ್ತಾನನು, ದೈವದ ಮೇಲೆ ನಂಬಿಕೆ ಇಲ್ಲದ ಎಲ್ಲ ಕಾಫೀರರನ್ನು ಹಿಡಿದು ಕೊಲ್ಲಬೇಕು, ಎಂದು ಹೇಳಿದ್ದಾನೆ.

೮. ೨೨.೩.೧೭೮೯ ರಂದು ಕಡಂಗೇರಿ ಅಬ್ದುಲ್ ಖಾದ್ರಿ ಎಂಬ ಸೇನಾಪತಿಗೆ ಟಿಪ್ಪು ಸುಲ್ತಾನ ಬರೆದ ಪತ್ರದಲ್ಲಿ, ೧೨ ಸಾವಿರ ನಾಸ್ತಿಕರನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರಿಸಲಾಗಿದೆ. ನಂಬೂದ್ರಿ, ನಾಯರ ಎಂಬ ಭೇದವನ್ನು ಮಾಡದೇ ಎಲ್ಲರನ್ನು ಮತಾಂತರಿಸಬೇಕು, ಎಂಬ ಆದೇಶವನ್ನು ನೀಡಿದ್ದನು. ಹಾಗೆಯೇ ಯಾರು ಮತಾಂತರ ಆಗುವುದಿಲ್ಲವೋ, ಅವರನ್ನು ಸಾಯಿಸಬೇಕು, ಎಂದು ಬರೆಯಲಾಗಿತ್ತು.

೯. ಟಿಪ್ಪುವಿನ ಕತ್ತಿಯ ಮೇಲೆ ‘ಈ ವಿಜಯಿ ಕತ್ತಿಯು ಕಾಫೀರರನ್ನು ಕೊಲ್ಲಲು ಗರ್ಜಿಸುತ್ತದೆ, ಎಂದು ಬರೆಯಲಾಗಿದೆ.

೧೦. ಕೊಡಗು ಹಾಗೂ ಮಲಬಾರ ಪ್ರಾಂತದಲ್ಲಿ ಟಿಪ್ಪು ಸೈನ್ಯದ ಗುಂಪುಗಳನ್ನು ಮಾಡಿ ಗುತ್ತಿಪೂರದಲ್ಲಿನ ನಾಯರ್ ಜನರಿಗೆ ಮುತ್ತಿಗೆ ಹಾಕಿದನು. ಅಲ್ಲಿ ಹೆಂಗಸರು ಮಕ್ಕಳು ಸೇರಿ ಒಟ್ಟು ೨ ಸಾವಿರ ನಾಯರ್ ಜನರಿದ್ದರು. ಉಪವಾಸದ ಕಷ್ಟದಿಂದಾಗಿ ಅವರು ಶರಣಾದರು. ಆಗ ಟಿಪ್ಪು ಅವರಿಗೆ ನಾಯರರು ತಾವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಬೇಕು ಇಲ್ಲದಿದ್ದರೆ ಬಲವಂತವಾಗಿ ನಿಮಗೆ ಮುಸಲ್ಮಾನ ಧರ್ಮದ ದೀಕ್ಷೆಯನ್ನು ಕೊಡಲಾಗುವುದು ಎಂದು ಹೇಳಿದನು. ಹೆದರಿದ ನಾಯರರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒಪ್ಪಿದರು. ಮೊದಲಿಗೆ ಪುರುಷರ ಸುನ್ನತ್ ಮಾಡಲಾಯಿತು, ನಂತರ ಸ್ತ್ರೀ-ಪುರುಷ ಎಲ್ಲರಿಗೂ ಗೋಮಾಂಸವನ್ನು ತಿನ್ನಲು ಹೇಳಿ ಮತಾಂತರವನ್ನು ಮಾಡಲಾಯಿತು.

೧೧. ೧೭೮೮ ರಲ್ಲಿ ಕಲ್ಲಿಕೋಟೆಯಲ್ಲಿ ೨೦೦ ಜನ ಬ್ರಾಹ್ಮಣರನ್ನು ಮತಾಂತರಿಸಿ ಮುಸಲ್ಮಾನರನ್ನಾಗಿ ಮಾಡಲಾಯಿತು.

೧೨. ತಿರುವಂಕೂರಿನ ಹಿಂದೂ ರಾಜನ ಕೊಲೆ ಮಾಡಿ ಟಿಪ್ಪು ಅವನ ಶವವನ್ನು ಆನೆಯ ಕಾಲಿಗೆ ಕಟ್ಟಿ ಮೆರವಣಿಗೆ ತೆಗೆದನು ಹಾಗೂ ಇನ್ನೂ ೧೫-೨೦ ಶವಗಳೊಂದಿಗೆ ಅದನ್ನು ಒಂದು ಮರದಲ್ಲಿ ನೇತಾಡಿಸಿದನು.

೧೩. ತ್ರಿಚೂರ್‌ನ ಹಿಂದೂ ದೇವಾಲಯದಲ್ಲಿ ಟಿಪ್ಪುವಿನ ಸೇನಾಪತಿ ವಸತಿ ಮಾಡಿದನು ಮತ್ತು ದೇವಾಲಯದಲ್ಲಿಯೇ ಗೋಹತ್ಯೆಯನ್ನು ಮಾಡಲಾಯಿತು.

೧೪. ಋಗ್ವೇದವನ್ನು ಕಲಿಸಲು ಪ್ರಸಿದ್ಧವಾಗಿರುವ ತಿರುನಾವಾಯ ಮಂದಿರವನ್ನೂ ನಾಶ ಮಾಡಲಾಯಿತು.

೧೫. ಟಿಪ್ಪು ಕಲ್ಲಿಕೋಟೆ ನಗರವನ್ನು ಸಂಪೂರ್ಣ ನಾಶ ಮಾಡಲು ಆದೇಶವನ್ನು ನೀಡಿದ್ದನು.

೧೬. ಟಿಪ್ಪುವಿನ ತಂದೆ ಹೈದರಅಲಿ ಗುರುವಾಯೂರ್ ಶ್ರೀಕೃಷ್ಣ ಮಂದಿರದ ಮೇಲೆ ೧೭೬೬ ರಲ್ಲಿ ಆಕ್ರಮಣ ಮಾಡಿದ್ದನು. ಅವನ ಕೃತ್ಯವನ್ನು ಮುಂದುವರಿಸಿದ ಟಿಪ್ಪು ಮಮ್ಮಿಯೂರ ಶಿವಮಂದಿರ ಹಾಗೂ ಇನ್ನೂ ಎರಡು ಶ್ರೀಕೃಷ್ಣಮಂದಿರಗಳನ್ನು ನಾಶಗೊಳಿಸಿದ ನಂತರ ಗುರುವಾಯೂರ ಮಂದಿರದ ಮೇಲೆ ಆಕ್ರಮಣವನ್ನು ಮಾಡಿ ಆ ಮಂದಿರವನ್ನೂ ನಾಶ ಮಾಡಿದ್ದನು.

೧೭. ಅಂಗಾಡಿಪ್ಪುರಮ್‌ನಲ್ಲಿನ ೪ ಸಾವಿರ ವರ್ಷಗಳ ಹಿಂದಿನ ನರಸಿಂಹಮೂರ್ತಿ ಮಂದಿರವನ್ನು ಟಿಪ್ಪುವಿನ ಸೈನ್ಯವು ನಾಶ ಮಾಡಿತು. ೧೯೪೬ ರಲ್ಲಿ ಈ ಮಂದಿರವನ್ನು ಪುನಃ ಕಟ್ಟಿದ ನಂತರ ಮತಾಂಧರು ಅದನ್ನು ಪುನಃ ನಾಶ ಮಾಡಿದರು.

೧೮. ಕೇರಳದಲ್ಲಿನ ಕಣ್ಣೂರ ಜಿಲ್ಲೆಯಲ್ಲಿಯ ಕತಿರೂರ್ ನಲ್ಲಿರುವ ಮಸೀದಿಯು ಮಂದಿರದಂತೆಯೇ ಇದೆ. ಟಿಪ್ಪು ಮಂದಿರವನ್ನು ನಾಶ ಮಾಡಿ ಆ ಜಾಗದಲ್ಲಿ ಈ ಮಸೀದಿಯನ್ನು ಕಟ್ಟಿದ್ದನು, ಎಂದು ಇತಿಹಾಸತಜ್ಞರು ಅಭಿಪ್ರಾಯಪಟ್ಟಿದ್ದಾರೆ.

೧೯. ಮಣಿಯೂರ ಮಸೀದಿಯು ಒಂದು ಕಾಲದಲ್ಲಿ ಹಿಂದೂಗಳ ಮಂದಿರವಾಗಿತ್ತು, ಎಂದು ಮಲಬಾರಿನ ಇತಿಹಾಸ ದಲ್ಲಿ ಬರೆಯಲಾಗಿದೆ. ಟಿಪ್ಪುವಿನ ಮಲಬಾರಿನ ಮೇಲಿನ ಆಕ್ರಮಣದ ನಂತರ ಅದು ಮಸೀದಿಯಾಗಿ ರೂಪಾಂತರವಾಯಿತು, ಎಂದು ಸ್ಥಳೀಯರ ಅಭಿಪ್ರಾಯವಿದೆ.

೨೦. ಮಸೀದಿಗಳನ್ನು ಕಟ್ಟುವ ಹಿಂಸಕ ಪದ್ಧತಿ : ಟಿಪ್ಪುವಿನ ಜನರು ಗೋಹತ್ಯೆ ಮಾಡುತ್ತಿದ್ದರು ಇಷ್ಟೇ ಅಲ್ಲ, ಹಿಂದೂಗಳ ಗಾಯದ ಮೇಲೆ ಬರೆ ಎಳೆಯಲು ಮಂದಿರಗಳಲ್ಲಿನ ಮೂರ್ತಿಗಳನ್ನು ಒಡೆದು ಆ ಜಾಗದಲ್ಲಿ ಗೋಹತ್ಯೆ ಮಾಡುತ್ತಿದ್ದರು ಹಾಗೂ ನಂತರ ಅಲ್ಲಿ ಮಸೀದಿಯನ್ನು ಕಟ್ಟುತ್ತಿದ್ದರು. ಶ್ರದ್ಧಾವಂತ ಮತ್ತು ಶಾಂತಿಯ ಪೂಜಕರೆಂದು ಅನಿಸಿಕೊಳ್ಳುವ ಮುಸಲ್ಮಾನರಿಗೆ ಮೂರ್ತಿಗಳ ಮೇಲೆ ಕಾಲಿಟ್ಟು ನಮಾಜಿಗೆ ಹೋಗಲು ಬರಬೇಕೆಂದು ಬಹಳಷ್ಟು ಸಲ ಮೂರ್ತಿಗಳ ತುಂಡುಗಳನ್ನು ಮಾಡಿ ಅವುಗಳಿಂದ ಮಸೀದಿಯ ಮೆಟ್ಟಿಲುಗಳನ್ನು ತಯಾರಿಸುತ್ತಿದ್ದರು.

೨೧. ಮಲಬಾರನಲ್ಲಿನ ಹಿಂದೂಗಳು ಟಿಪ್ಪುವಿನ ಆಕ್ರಮಣದಿಂದ ತ್ರಿಪ್ರಯಾರ ಮಂದಿರದಲ್ಲಿನ ಮೂರ್ತಿಗಳನ್ನು ಉಳಿಸಲು ಅವುಗಳನ್ನು ಕೂಡಲೇ ತೆಗೆದು ಬೇರೆ ಕಡೆಗೆ ಇಟ್ಟರು. ಟಿಪ್ಪು ಮಲಬಾರ ಪ್ರಾಂತವನ್ನು ಬಿಟ್ಟ ನಂತರ ೧೭೯೦ ರ ಕೊನೆಯಲ್ಲಿ ಈ ಮೂರ್ತಿಗಳನ್ನು ಮೂಲ ಸ್ಥಾನದಲ್ಲಿ ಪುನಃ ಸ್ಥಾಪನೆ ಮಾಡಲಾಯಿತು.

೨೨. ಮಂದಿರಗಳನ್ನು ಒಡೆಯುವುದನ್ನು ತಡೆಯುವ ಬಗ್ಗೆ ಕ್ರೂರಕರ್ಮಿ, ಜಿಹಾದಿ ಟಿಪ್ಪು ಕೊಟ್ಟಿರುವ ಮತಾಂಧ ಹಾಗೂ ಅಹಂಕಾರದ ಉತ್ತರ ! : ಟಿಪ್ಪು ಸುಲ್ತಾನನ ಕೆಲವು ವೈಯಕ್ತಿಕ ಬರಹಗಳಲ್ಲಿ ಒಂದು ಘಟನೆಯ ಬಗ್ಗೆ ಹೀಗೆ ಬರೆದಿದೆ. ಕಣ್ಣೂರಿನಲ್ಲಿನ ಚಿರಕ್ಕಲ ರಾಜನು ಮಂದಿರಗಳನ್ನು ಒಡೆಯು ವುದನ್ನು ನಿಲ್ಲಿಸಲು ಟಿಪ್ಪುವಿಗೆ ೪ ಲಕ್ಷ ಚಿನ್ನ ಹಾಗೂ ಬೆಳ್ಳಿಯನ್ನು ಕೊಡ ಬಯಸಿದನು. ಆಗ ಆ ಜಿಹಾದಿ ಟಿಪ್ಪು ಅವರಿಗೆ ಹೀಗೆ ಉತ್ತರ ನೀಡಿದನು, ‘ಸಂಪೂರ್ಣ ವಿಶ್ವವನ್ನೇ ನನಗೆ ಕೊಟ್ಟರೂ, ನಾನು ಹಿಂದೂಗಳ ಮಂದಿರಗಳನ್ನು ಒಡೆಯುವುದನ್ನು ನಿಲ್ಲಿಸುವುದಿಲ್ಲ. (ಆಧಾರ : ಸರದಾರ ಪಣಿಕ್ಕರ ಇವರ ಗ್ರಂಥ ‘ಫ್ರೀಡಮ್ ಸ್ಟ್ರಗಲ್) ಇದೇ ಆಗಿತ್ತು, ಅವನ ಅಂದರೆ ಇಸ್ಲಾಮಿಕ್ ಸುಲ್ತಾನನ ನಿಜ ಸ್ವರೂಪ ! ಟಿಪ್ಪು ಮಾಡಿದ ಜಿಹಾದಿ ಆಕ್ರಮಣದಲ್ಲಿ ಮಲಬಾರ್ ಭಾಗದಲ್ಲಿನ ಶೇ. ೮೦ ಕ್ಕಿಂತ ಹೆಚ್ಚು ಮಂದಿರಗಳನ್ನು ಧ್ವಂಸಗೊಳಿಸಲಾಯಿತು. (ಅಷ್ಟಕ್ಕೂ ಟಿಪ್ಪು ಆಂಗ್ಲರೊಂದಿಗೆ ಹೋರಾಡಿದ್ದು ತನ್ನ ರಾಜ್ಯ ಉಳಿಸಿಕೊಳ್ಳಲು ! ಇಂತಹ ಟಿಪ್ಪುವಿಗೆ ಸ್ವಾತಂತ್ರ್ಯ ಸೇನಾನಿ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ.) (ದೈನಿಕ ಸನಾತನ ಪ್ರಭಾತ (೩.೪.೨೦೧೪)) (ಪುನರ್‌ಮುದ್ರಿತ ಲೇಖನ)