ದೇಶದಲ್ಲಿನ ಪ್ರಸಿದ್ಧ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳ ಇತಿಹಾಸ !

‘ಉತ್ತರಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಬೋರ್ಡ್‌ನ ಅಧ್ಯಕ್ಷರಾದ ಸೈಯದ್ ವಸೀಮ್ ರಿಝವೀಯವರು ದೇಶದಲ್ಲಿ ದೇವಾಲಯಗಳನ್ನು ಒಡೆದು ಅದರ ಸ್ಥಳದಲ್ಲಿ ಕಟ್ಟಿದ ೯ ಮಸೀದಿಗಳನ್ನು ಹಿಂದೂಗಳಿಗೆ ಒಪ್ಪಿಸುವಂತೆ ‘ಆಲ್ ಇಂಡಿಯಾ ಮುಸ್ಲಿಮ್ ಪರ್ಸ್‌ನಲ್ ಲಾ ಬೋರ್ಡ್ನ ಬಳಿ ಬೇಡಿಕೆ ಸಲ್ಲಿಸಿದ್ದಾರೆ. ಅವರು ಬೋರ್ಡ್‌ನ ಅಧ್ಯಕ್ಷರಿಗೆ ಪತ್ರ ಬರೆದು ಅದರಲ್ಲಿ, ‘ಯಾವುದೇ ಧಾರ್ಮಿಕ ಸ್ಥಳವನ್ನು ಬಲವಂತವಾಗಿ ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟುವುದು ಸರಿಯಲ್ಲ. ಬೇರೆಯವರ ಶ್ರದ್ಧಾಸ್ಥಾನವನ್ನು ಕೆಡವಿ ಕಟ್ಟಿರುವ ಮಸೀದಿಗಳಲ್ಲಿ ಅಲ್ಲಾನ ಅಸ್ತಿತ್ವವಿಲ್ಲ. ಆದ್ದರಿಂದ ಈ ಮಸೀದಿಗಳನ್ನು ಪುನಃ ಹಿಂದೂ ಸಮಾಜಕ್ಕೆ ನೀಡಬೇಕು. ‘ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಏನಾದರೂ ಹಾಗೆ ಮಾಡಿದರೆ ಇಸ್ಲಾಮ್‌ನ ನಿಜವಾದ ಉದ್ದೇಶ ಜಗತ್ತಿಗೆ ತಿಳಿಯುವುದು. ಇತಿಹಾಸಕಾರರು ಈ ೯ ಮಸೀದಿಗಳನ್ನು ಅಭ್ಯಾಸ ಮಾಡಿ ಮೊಗಲ್ ಹಾಗೂ ಅವರ ಮೊದಲು ಇದ್ದ ಸುಲ್ತಾನರು ಈ ೯ ದೇವಾಲಯಗಳನ್ನು ಕೆಡವಿ ಮಸೀದಿ ಕಟ್ಟಿರುವುದಾಗಿ ಹೇಳಿದ್ದಾರೆ. ಆ ೯ ಸ್ಥಾನಗಳನ್ನು ಕೆಳಗೆ ನೀಡಲಾಗಿದೆ. ಈ ದೇವಾಲಯಗಳು ಅಥವಾ ಧಾರ್ಮಿಕ ಸ್ಥಳಗಳ ವಿಷಯದಲ್ಲಿ ಏಕೆ ವಿವಾದವಿದೆ ? ಹಾಗೂ ಈ ದೇವಾಲಯಗಳನ್ನು ಕೆಡವಿ ಅಲ್ಲಿ ಯಾವಾಗ ಮಸೀದಿಯನ್ನು ಕಟ್ಟಲಾಯಿತು ? ಎಂಬುದನ್ನು ನಾವು ತಿಳಿದುಕೊಳ್ಳೋಣ. ವಾಸಿಮ್ ರಿಝವೀಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿರುವ ೯ ಸ್ಥಳಗಳ ವಿಷಯದ ಮೇಲೆ ತುಂಬಾ ಸಮಯದಿಂದ ಎರಡೂ ಧರ್ಮದ ಜನರ ನಡುವೆ ವಾದವಿದೆ.

೧. ಅಯೋಧ್ಯೆಯಲ್ಲಿನ ರಾಮಮಂದಿರ

೨. ಮಥುರಾದ ಶ್ರೀ ಕೇಶವದೇವ ಮಂದಿರ

೩. ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ

೪. ಜೌನಪೂರ್‌ನಲ್ಲಿನ ಅಟಾಲಾದೇವ ದೇವಾಲಯ

೫. ಬಟನಾ ಗುಜರಾತ್‌ನಲ್ಲಿನ ರುದ್ರ ಮಹಾಲಯ ದೇವಾಲಯ

೬. ಕರ್ಣಾವತಿ (ಅಹಮದಾಬಾದ್)ನಲ್ಲಿನ ಭದ್ರಕಾಳಿ ದೇವಾಲಯ

೭. ಪಂಡುವಾ (ಬಂಗಾಲ)ದಲ್ಲಿನ ಅದಿನಾ ಮಸೀದಿ

೮. ವಿದಿಶಾ (ಮಧ್ಯಪ್ರದೇಶ)ದಲ್ಲಿನ ವಿಜಯ ದೇವಾಲಯ

೯. ದೆಹಲಿಯ ಲಾಲಕೋಟ್ (೨೭ ಹಿಂದೂ ಹಾಗೂ ಜೈನ್ ದೇವಾಲಯಗಳು)

ಕಾಶಿ ವಿಶ್ವನಾಥ ದೇವಾಲಯ

ವಾರಾಣಸಿಯ ಗಂಗಾ ನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನ ಉತ್ತರ ದಿಕ್ಕಿನಲ್ಲಿರುವ ಲಲಿತಾ ಘಾಟ್‌ನ ಸಮೀಪದಲ್ಲಿ ಮೊಗಲ್ ಬಾದಶಾಹ ಔರಂಗಜೇಬನು ೧೬೬೯ ನೇ ಇಸವಿಯಲ್ಲಿ ಮತ್ತೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಿ ಅದರ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿದನು. ಈ ಮಸೀದಿಯ ಹೆಸರು ಜ್ಞಾನವಾಪಿ ಮಸೀದಿಯಾಗಿದೆ. ವಾರಾಣಸಿ ನಗರದಲ್ಲಿರುವ ಈ ಮಸೀದಿ ಜಾಮಾ ಮಸೀದಿಯಾಗಿದೆ. ಈ ಮಸೀದಿಯ ಗೋಡೆಯ ಮೇಲೆ ದೇವಾಲಯದ ಅವಶೇ?ಗಳು ಸ್ಪ?ವಾಗಿ ಕಾಣಿಸುತ್ತವೆ. ‘ಈಗ ಅಲ್ಲಿರುವ ಮಸೀದಿಯೇ ಹಿಂದಿನ ನಿಜವಾದ ಕಾಶಿ ವಿಶ್ವನಾಥ ದೇವಾಲಯವಾಗಿತ್ತು, ಎಂದು ಹಿಂದೂಗಳ ನಂಬಿಕೆ. ಇಲ್ಲಿನ ದೇವಾಲಯವನ್ನು ಎ?ಇಂಔಂ ಬಾರಿ ಕೆಡವಿ ಮತ್ತು ಪುನಃ ಕಟ್ಟಲಾಗಿದೆ. ಔರಂಗಜೇಬನು ಕೆಡವಿದ ದೇವಾಲಯ ವನ್ನು ಬಾದಶಾಹ ಅಕ್ಬರ್‌ನ ಕಾಲದಲ್ಲಿ ರಾಜಾ ಮಾನಸಿಂಹನು ಕಟ್ಟಿದ್ದಾನೆಂದು ಹೇಳಲಾಗುತ್ತದೆ. ಮಾನಸಿಂಹನ ಮೊಮ್ಮಗ ಜಯಸಿಂಹ (ಮೊದಲ) ಇವನು ಮರಾಠರ ರಾಜ ಛತ್ರಪತಿ ಶಿವಾಜಿ ಮಹಾರಾಜರು ಆಗ್ರಾದಿಂದ ಓಡಿಹೋಗಲು ಸಹಾಯ ಮಾಡಿದ್ದರು. ಇದರ ಸೇಡು ತೀರಿಸಿಕೊಳ್ಳಲು ಔರಂಗಜೇಬನು ದೇವಾಲಯವನ್ನು ಕೆಡವಿದನು. ಈಗಿರುವ ಕಾಶಿ ವಿಶ್ವನಾಥ ದೇವಾಲಯವನ್ನು ೧೭೮೦ ರಲ್ಲಿ ಅಹಿಲ್ಯಾಬಾಯಿ ಹೋಳಕರ್ರವರು ಕಟ್ಟಿದರು. ಇತಿಹಾಸಕಾರರು ಜ್ಞಾನವಾಪಿ ಮಸೀದಿಯ ಹಿಂದಿನ ಗೋಡೆಯ ಮೇಲೆ ಪ್ರಾಚೀನ ದೇವಾಲಯದ ಅವಶೇಷಗಳ ಕೆಲವು ಕುರುಹುಗಳು ಸಿಕ್ಕಿವೆ. ಕೆಲವು ತಜ್ಞರ ಹೇಳಿಕೆಯಂತೆ ಇದೇ ಪ್ರಾಚೀನ ಕಾಶಿ ವಿಶ್ವನಾಥ ದೇವಾಲಯವಾಗಿದೆ.

೧. ಅಯೋಧ್ಯೆಯಲ್ಲಿನ ರಾಮಮಂದಿರ

ಎಲ್ಲ ಸ್ಥಳಗಳನ್ನು ಹೋಲಿಸಿದರೆ ಅಯೋಧ್ಯೆಯ ರಾಮಮಂದಿರ ಹಾಗೂ ಬಾಬರಿ ಮಸೀದಿಯ ವಿವಾದವನ್ನು ಆದ್ಯತೆಯಿಂದ ನೋಡಬಹುದು. ಇದು ದೇಶದಲ್ಲಿನ ಕೋಟಿಗಟ್ಟಲೆ ಹಿಂದೂಗಳಿಗೆ ಶ್ರದ್ದಾಸ್ಥಾನವಾಗಿದೆ. ಈ ಸ್ಥಳದಲ್ಲಿ ಮರ್ಯಾದಾಪುರುಷೋತ್ತಮ ಶ್ರೀರಾಮನ ಜನನವಾಯಿತು, ಎಂಬುದು ಹಿಂದೂಗಳ ನಂಬಿಕೆ. ೧೫೨೮-೨೯ ನೇ ಇಸವಿಯ ಅವಧಿಯಲ್ಲಿ ಮೊಗಲ್ ಬಾದಶಾಹ ಬಾಬರ್‌ನ ಸೇನಾಪತಿ ಮೀರ್ ಬಾಕೀ ಈತನು ಬಾಬರ್‌ನ ಹೆಸರಿನಲ್ಲಿ ಇಲ್ಲಿ ಮಸೀದಿಯನ್ನು ಕಟ್ಟಿದನು. ಹಿಂದೆ ಈ ಜಾಗದಲ್ಲಿ ರಾಮಮಂದಿರವಿತ್ತು, ಅದನ್ನು ಕೆಡವಿ ಅಲ್ಲಿ ಬಾಬರಿ ಮಸೀದಿಯನ್ನು ಕಟ್ಟಲಾಯಿತು ಎಂದು ಕೋಟಿಗಟ್ಟಲೆ ಜನರ ಹೇಳಿಕೆಯಾಗಿದೆ. ಇಲ್ಲಿ ಮಸೀದಿ ಕಟ್ಟುವಾಗ ಎರಡೂ ಧರ್ಮಗಳ ಜನರಲ್ಲಿ ಉದ್ವಿಗ್ನತೆ ನಿರ್ಮಾಣವಾಗಿತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಡಿಸೆಂಬರ್ ೧೯೪೯ ರಲ್ಲಿ ಮಸೀದಿಯಲ್ಲಿ ರಾಮಲಲ್ಲಾನ ಸ್ಥಾಪನೆಯಾಯಿತು. ಹಿಂದೂಗಳ ಹೇಳಿಕೆಯಂತೆ ರಾಮಲಲ್ಲಾ ಈ ಸ್ಥಳದಲ್ಲಿ ಸ್ವತಃ ಪ್ರಕಟಗೊಂಡನು. ಅನಂತರ ರಾಮ ಮಂದಿರ ಹಾಗೂ ಬಾಬರಿ ಮಸೀದಿಯ ವಿಷಯದ ವಿವಾದವು ನ್ಯಾಯಾಲಯದಲ್ಲಿ ಅಲೆಯುತ್ತಿದೆ. ೬ ಡಿಸೆಂಬರ್ ೧೯೯೨ ರಂದು ಕೆಲವು ಉತ್ಸಾಹಿ ಜನರ ಗುಂಪು ಬಾಬರಿ ಮಸೀದಿಯ ಕಟ್ಟಡವನ್ನು ಕೆಡವಿತು. ಅನಂತರ ದೇಶಾದ್ಯಂತ ಗಲಭೆ ಭುಗಿಲೆದ್ದಿತ್ತು. ಈ ಪ್ರಕರಣವು ಇನ್ನೂ ನ್ಯಾಯಾಲಯದಲ್ಲಿದೆ ಹಾಗೂ ನ್ಯಾಯಾಲಯದ ಹೊರಗೆ ಇದರ ವಿವಾದವನ್ನು ಬಗೆಹರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದೆ.

೨. ಮಥುರಾದ ಶ್ರೀ ಕೇಶವದೇವ ದೇವಾಲಯ

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಮೇಲಿರುವ ‘ಕೇಶವದೇವ ದೇವಾಲಯ ಹಾಗೂ ಶಾಹ್ ಮಸೀದಿ ವಿವಾದ ಇದು ಕೂಡ ಕೆಲವು ಪ್ರಮುಖ ವಿವಾದಗಳ ಪೈಕಿ ಒಂದಾಗಿದೆ. ಭಗವಾನ್ ಶ್ರೀಕೃಷ್ಣನ ಜನ್ಮಸ್ಥಾನ ದಲ್ಲಿರುವ ಈ ದೇವಾಲಯಕ್ಕೆ ಕೇಶವರಾಯ ದೇವಾಲಯ ಎಂದು ಹೇಳಲಾಗುತ್ತದೆ. ಈ ದೇವಾಲಯದೊಂದಿಗೆ ಕೋಟಿಗಟ್ಟಲೆ ಹಿಂದೂಗಳ ಭಾವನೆಗಳು ಜೋಡಿಸಲ್ಪಟ್ಟಿದೆ. ಇಲ್ಲಿ ಭಗವಾನ್ ಶ್ರೀಕೃಷ್ಣ ಆರಾಧ್ಯ ದೇವತೆ ಯಾಗಿದೆ. ಹೆಚ್ಚು ಕಡಿಮೆ ೫ ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಙ್ಕನಾಭನು ಈ ದೇವಾಲಯವನ್ನು ಕಟ್ಟಿದನು. ಚಂದ್ರಗುಪ್ತ ದ್ವಿತೀಯನ ಆಡಳಿತಾವಧಿಯಲ್ಲಿ ಈ ಸ್ಥಳದಲ್ಲಿ ದೊಡ್ಡ ದೇವಾಲಯವನ್ನು ಕಟ್ಟಲಾಯಿತು. ಚಂದ್ರಗುಪ್ತ ವಿಕ್ರಮಾದಿತ್ಯನ ಕಾಲದಲ್ಲಿ ಇಲ್ಲಿ ಬೇರೆ ದೇವಾಲಯಗಳನ್ನು ನಿರ್ಮಿಸಲಾಯಿತು, ಅದನ್ನು ೧೦೧೭ ನೇ ಇಸವಿಯಲ್ಲಿ ಗಜನೀ ಕೆಡವಿದನು. ಅನಂತರ ೧೧೫೦ ನೇ ಇಸವಿಯಲ್ಲಿ ವಿಜಯಪಾಲ್ ದೇವನ ಆಡಳಿತಾವಧಿಯಲ್ಲಿ ಜಜ್ಜಾನು ಮೂರನೇ ಬಾರಿ ದೇವಾಲಯವನ್ನು ಕಟ್ಟಿದನು. ಚೈತನ್ಯ ಮಹಾಪ್ರಭು ಇದೇ ದೇವಾಲಯದಲ್ಲಿ ದರ್ಶನ ಪಡೆದು ಕೊಂಡಿದ್ದರು, ಎಂದು ಹೇಳಲಾಗುತ್ತದೆ. ಓರ್ಛಾದಲ್ಲಿನ ಬೀರ್‌ಸಿಂಹ ದೇವ ಬುಂದೆಲಾರವರು ಮೊಗಲ್ ಬಾದಶಾಹ ಜಹಾಂಗೀರ್‌ನ ಕಾಲದಲ್ಲಿ ೩೩ ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ದೇವಾಲಯವನ್ನು ನಿರ್ಮಿಸಿದರು. ೧೬೭೦ ನೇ ಇಸವಿಯಲ್ಲಿ ಮೊಗಲ್ ಬಾದಶಾಹನು ಈ ದೇವಾಲಯದ ಮೇಲೆ ದಾಳಿ ನಡೆಸಿ ದೇವಾಲಯವನ್ನು ಒಡೆದು ಹಾಕಿದನು. ಅನಂತರ ಭಗ್ನಗೊಂಡ ದೇವಾಲಯದ ಸ್ಥಳದಲ್ಲಿ ಮಸೀದಿಯನ್ನು ಕಟ್ಟಲಾಯಿತು. ಈ ಮಸೀದಿಯ ಹೆಸರು ಶಾಹ ಮಸೀದಿಯೆಂದು ಇಡಲಾಯಿತು. ಕೋಟಿಗಟ್ಟಲೆ ಜನರ ಆರಾಧ್ಯ ದೇವತೆಯಾದ ಶ್ರೀಕೃಷ್ಣನ ಜನ್ಮಭೂಮಿಯಲ್ಲಿ ಇಂದು ಕೂಡ ಈ ಮಸೀದಿಯಿದೆ. ಅನಂತರ ಅನೇಕ ಬಾರಿ ಈ ಸ್ಥಳದಲ್ಲಿ ದೇವಾಲಯವನ್ನು ಕಟ್ಟಲು ಪ್ರಯತ್ನಿಸಲಾಯಿತು. ಈಗಿನ ದೇವಾಲಯವನ್ನು ೧೯೬೫ ನೇ ಇಸವಿಯಲ್ಲಿ ನಿರ್ಮಿಸಲಾಗಿದೆ.

೩. ಜೌನಪೂರ್‌ದಲ್ಲಿನ ಅಟಾಲಾದೇವಿ ದೇವಾಲಯ

ಜೌನಪೂರ್‌ದಲ್ಲಿ ಅಟಾಲಾದೇವಿ ದೇವಾಲಯದ ಭಗ್ನಾವಶೇಷದ ಮೇಲೆ ಶರ್ಕೀ ರಾಜವಂಶದ ಇಬ್ರಾಹಿಮ್ ನಾಯಬ್ ಬಾರಬಕ್‌ನು ಅಟಾಲಾ ಮಸೀದಿಯನ್ನು ಕಟ್ಟಿದನು. ಅವನು ಸುಲ್ತಾನ್ ಮೂರನೇ ಫಿರೋಜ್ ಶಾಹ ತುಘಲಕ್‌ನ ಸಹೋದರನಾಗಿದ್ದನು. ಇಬ್ರಾಹಿಮ್‌ನು ಈ ಸ್ಥಳದಲ್ಲಿದ್ದ ಪ್ರಾಚೀನ ದೇವಾಲಯವನ್ನು ೧೩೬೪ ರಲ್ಲಿ ಒಡೆದು ೧೩೭೭ ರಲ್ಲಿ ಮಸೀದಿಯನ್ನು ಕಟ್ಟಲು ಪ್ರಾರಂಭಿಸಿದನು. ೧೪೦೮ ನೇ ಇಸವಿಯಲ್ಲಿ ಈ ಮಸೀದಿಯ ಕಟ್ಟಡ ಪೂರ್ಣಗೊಂಡಿತು. ಮಸೀದಿ ಕಟ್ಟುವ ಮೊದಲು ಅಲ್ಲಿ ಅಟಲಾದೇವಿಯ ದೇವಸ್ಥಾನವಿತ್ತು. ದೇವಸ್ಥಾನ ಬೀಳಿಸಿದ ನಂತರ ದೇವಿಯ ಪೂಜೆ ನಿಂತಿತು. ಮಸೀದಿಯ ಹೊರಗಿನ ಗೋಡೆ ಬದಲಾದರೂ ಒಳಗಿನ ಗೋಡೆ ಹಾಗೂ ಕಂಬಗಳಲ್ಲಿ ಇಂದೂ ರಾಜಾ ವಿಜಯಚಂದ್ರನು ಕಟ್ಟಿಸಿದ ದೇವಾಲಯದ ಅಚ್ಚು ಕಾಣಿಸುತ್ತದೆ.

೪. ರುದ್ರ ಮಹಾಲಯ ದೇವಸ್ಥಾನ, ಪಾಟನ್ (ಗುಜರಾತ್)

ಗುಜರಾತದಲ್ಲಿನ ಪಾಟನ್ ಜಿಲ್ಲೆಯ ಸಿದ್ಧಪೂರ್‌ನಲ್ಲಿರುವ ರುದ್ರ ಮಹಾಲಯ ದೇವಾಲಯ ಅಥವಾ ರುದ್ರಮಲ್ ದೇವಾಲಯದ ಭಗ್ನಾವ ಶೇಷವಿದೆ. ೯೪೩ ನೇ ಇಸವಿಯಲ್ಲಿ ಚಾಲುಕ್ಯ ರಾಜವಂಶದಲ್ಲಿನ ಮುಲಾರಾಜಾನು ಈ ದೇವಾಲಯದ ಕಟ್ಟಡ ಕೆಲಸವನ್ನು ಆರಂಭಿಸಿದ್ದನು. ೧೧೪೦ ರಲ್ಲಿ ಜಯಸಿಂಹ ಸಿದ್ಧಿರಾಜನ ಆಡಳಿತಾವಧಿಯಲ್ಲಿ ಅದು ಪೂರ್ಣಗೊಂಡಿತು. ಮೊದಲನೇ ಅಲ್ಲಾವುದ್ದೀನ್ ಖಿಲ್ಜೀ ಅನಂತರ ಅಹಮದ್ ಶಾಹ ಪ್ರಥಮ ಇವನು ೧೪೧೦ ರಿಂದ ೧೪೪೦ ಈ ಅವಧಿಯಲ್ಲಿ ಈ ದೇವಾಲಯವನ್ನು ಅಪವಿತ್ರಗೊಳಿಸಿ ಅದನ್ನು ಧ್ವಂಸಗೊಳಿಸಿದನು. ಇಷ್ಟೇ ಅಲ್ಲ ಈ ದೇವಾಲಯದ ಕೆಲವು ಭಾಗಗಳನ್ನು ಭಗ್ನಗೊಳಿಸಿ ಅದರ ಮೇಲೆ ಜಾಮಾ ಮಸೀದಿಯನ್ನು ಕಟ್ಟಿದನು. ಈ ಮಸೀದಿಯಲ್ಲಿ ದೇವಾಲಯಕ್ಕೆ ಸಂಬಂಧಪಟ್ಟ ಕೆಲವು ಅವಶೇಷಗಳು ಇಂದು ಕೂಡ ಕಾಣಿಸುತ್ತವೆ.

೫. ಭದ್ರಕಾಳಿ ದೇವಾಲಯ, ಕರ್ಣಾವತಿ (ಗುಜರಾತ್)

ಕರ್ಣಾವತಿ (ಅಹಮದಾಬಾದ್) ಇಲ್ಲಿರುವ ಜಾಮಾ ಮಸೀದಿಯನ್ನು ಅಹಮದ್ ಶಾಹಾನು ೧೪೨೪ ನೇ ಇಸವಿಯಲ್ಲಿ ಕಟ್ಟಿದನು. ಈ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿದ್ದರೂ ಹಿಂದೆ ಅಲ್ಲಿ ಭದ್ರಕಾಳಿದೇವಿಯ ದೇವಾಲಯವಿತ್ತು. ಹಿಂದೆ ವಿವಿಧ ಸಮಯದಲ್ಲಿ ಈ ನಗರವನ್ನು ಭದ್ರಾ, ಕರ್ಣಾವತಿ, ರಾಜನಗರ ಹಾಗೂ ಅಸಾವಲ್ ಎಂಬ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಅನಂತರ ಮುಸಲ್ಮಾನ ಶಾಸಕರ ಕಾಲದಲ್ಲಿ ಈ ನಗರದ ಹೆಸರನ್ನು ಬದಲಾಯಿಸಿ ಅಹಮದಾಬಾದ್ ಎಂದು ಇಡಲಾಯಿತು. ಈ ಸ್ಥಳದಲ್ಲಿರುವ ಭದ್ರಕಾಳಿ ದೇವಿಯ ಹೆಸರಿನಿಂದ ಈ ನಗರದ ಹೆಸರನ್ನು ಭದ್ರಾ ಎಂದು ಇಡಲಾಯಿತು. ರಾಜಸ್ಥಾನದಲ್ಲಿನ ಮಾಲವಾದಲ್ಲಿನ ರಾಜಪೂತ್ ಪರಮಾರ್ ರಾಜನು ಈ ಭದ್ರಕಾಳಿ ದೇವಾಲಯವನ್ನು ಕಟ್ಟಿದನು. ಈ ರಾಜರು ೯ ರಿಂದ ೧೪ ನೇ ಶತಕದ ತನಕ ಈ ಸ್ಥಳದಲ್ಲಿ ರಾಜ್ಯ ನಡೆಸಿದರು.

೬. ಅದಿನಾ ಮಸೀದಿ, ಪಂಡುವಾ (ಬಂಗಾಲ)

ಬಂಗಾಲದಲ್ಲಿನ ಮಾಲದಾ ಜಿಲ್ಲೆಯಲ್ಲಿರುವ ಮದೀನಾ ಮಸೀದಿ ಈಗ ಶಿಥಿಲಾವಸ್ಥೆಯಲ್ಲಿದೆ. ಬಾಂಗ್ಲಾದೇಶದ ಗಡಿಯ ಬಳಿಯವ ಮಸೀದಿಯು ಒಂದು ಕಾಲದಲ್ಲಿ ಭಾರತೀಯ ಉಪಮಹಾದ್ವೀಪದಲ್ಲಿನ ಎಲ್ಲಕ್ಕಿಂತ ದೊಡ್ಡ ಮಸೀದಿಯಾಗಿರಬಹುದೇನೋ. ೧೪ ನೇ ಶತಮಾನದಲ್ಲಿ ಈ ಮಸೀದಿಯು ಬಂಗಾಲದ ರಾಜ್ಯಾಡಳಿತದ ವಿಶೇಷ ಮಸೀದಿಯಾಗಿತ್ತು. ಅಲ್ಲಿನ ಪಂಡುವಾ ಎಂಬ ಪ್ರಾಚೀನ ನಗರದಲ್ಲಿ ಈ ಮಸೀದಿಯ ಅವಶೇಷವಿದೆ. ಇಲಯಾಸ್ ಶಾಹಿ ರಾಜವಂಶದ ಎರಡನೇ ಸುಲ್ತಾನ್ ಸಿಕಂದರ್ ಶಾಹನ ಕಾಲದಲ್ಲಿ ಈ ಮಸೀದಿ ಕಟ್ಟಲಾಗಿತ್ತು. ಈ ಮಸೀದಿ ಹಿಂದೂ ದೇವಾಲಯ ಅಥವಾ ಬೌದ್ಧ ದೇವಾಲಯಗಳ ಅವಶೇಷಗಳ ಮೇಲೆ ಕಟ್ಟಲಾಯಿತು, ಎಂಬ ನಂಬಿಕೆಯಿದೆ.

೭. ವಿಜಯ ಮಂದಿರ, ವಿದಿಶಾ (ಮಧ್ಯಪ್ರದೇಶ)

ದೇಶದಲ್ಲಿನ ವಿಶಾಲ ಪರಿಸರದಲ್ಲಿರುವ ದೇವಾಲಯಗಳಲ್ಲಿ ವಿಜಯ ಮಂದಿರವೂ ಒಂದಾಗಿದೆ. ಚಾಲುಕ್ಯ ವಂಶದಲ್ಲಿನ ರಾಜಾ ಕೃಷ್ಣನ ಪ್ರಧಾನಮಂತ್ರಿಯಾಗಿದ್ದ ವಾಚಸ್ಪತಿಯು ವಿದಿಶ ವಿಜಯವನ್ನು ಚಿರಂತನಗೊಳಿಸಲು ಈ ಸ್ಥಳದಲ್ಲಿ ಭೆಲ್ಲಿಸ್ಮಾಮಿನ್ (ಸೂರ್ಯ)ನ ವಿಶಾಲ ದೇವಾಲಯವನ್ನು ಕಟ್ಟಲಾಯಿತು. ಅನಂತರ ೧೦ ರಿಂದ ೧೧ ನೇ ಶತಮಾನದ ಸಮಯದಲ್ಲಿ ಪರಮಾರ್ ಶಾಸಕರು ಈ ದೇವಾಲಯದ ಪುನಃ ನಿರ್ಮಾಣ ಮಾಡಿದರು. ಇಸವಿ ೧೨೩೩-೩೪ ರ ಸಮಯದಲ್ಲಿ ಈ ದೇವಾಲಯವನ್ನು ಧ್ವಂಸಗೊಳಿಸಲಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬನು ಈ ದೇವಾಲಯದ ಮೇಲೆ ತೋಪಿನಿಂದ ಗುಂಡು ಹಾರಿಸಿ ಅದರ ಕಲ್ಲಿನಿಂದ ಮಿನಾರ್‌ಅನ್ನು ಕಟ್ಟಿದನು ಹಾಗೂ ದೇವಾಲಯವನ್ನು ಮಸೀದಿಯಾಗಿ ರೂಪಾಂತರಗೊಳಿಸಿದನು. ಗುಲಾಮ್ ಅಲ್ತಮಶ್, ಅಲ್ಲಾವುದ್ದೀನ್ ಖಿಲ್ಜಿ, ಮಹಮೂದ್ ಖಿಲ್ಜಿ, ಬಹಾದೂರ್ ಶಾಹ ಹಾಗೂ ಔರಂಗಜೇಬ ಈ ಎಲ್ಲಾ ಮುಸಲ್ಮಾನ ಆಡಳಿತಗಾರರು ವಿಜಯ ಮಂದಿರದ ಮೇಲೆ ಆಕ್ರಮಣ ಮಾಡಿದ್ದಾರೆ.

೮. ಮಸ್ಜಿದ್ ಕುವ್ವತ್-ಉಲ್-ಇಸ್ಲಾಮ್ (ಕುತುಬಮಿನಾರ್) ದೆಹಲಿ

ದೆಹಲಿಯ ಸುಲ್ತಾನನು ಇಲ್ಲಿನ ಲಾಲಕೋಟ್ (೨೭ ಹಿಂದೂ ಹಾಗೂ ಜೈನ ದೇವಾಲಯ)ಗಳ ಭಗ್ನಾವಶೇಷಗಳ ಮೇಲೆ ‘ಕುತುಬ್ ಕಾಂಪ್ಲೆಕ್ಸ್ ಕಟ್ಟಿದನು. ೭೩೯ ನೇ ಇಸವಿಯಲ್ಲಿ ತೋಮರ್ ವಂಶದ ಅಂಗಪಾಲ ಹಾಗೂ ಪೃಥ್ವಿರಾಜ ಚೌಹಾನನು ಈ ಸ್ಥಳದಲ್ಲಿ ದೇವಾಲಯಗಳನ್ನು ಕಟ್ಟಿದ್ದರು. ಈ ಕಾಂಪ್ಲೆಕ್ಸ್‌ದಲ್ಲಿರುವ ಕುತುಬ್‌ಮಿನಾರ್‌ಅನ್ನು ಕುತುಬುದ್ದೀನ್ ಬಖ್ತಿಯಾರ್‌ನ ಚಿಕ್ಕಮ್ಮನ ಹೆಸರಿನಲ್ಲಿ ಕಟ್ಟಲಾಯಿತು. ಅನಂತರ ಕುತುಬುದ್ದೀನ್ ಐಬಕ್ ಮಮಲುಕ್ ರಾಜವಂಶದಿಂದ ದೆಹಲಿಯ ಮೊದಲ ಸುಲ್ತಾನನಾದನು. ಅವನ ಉತ್ತರಾಧಿಕಾರಿ ಇಲ್ತುಮಿಶ್ ಹಾಗೂ ಅನಂತರ ತುಘಲಕ್ ರಾಜವಂಶದ ಸುಲ್ತಾನನಾದ ಫಿರೋಜ್ ಶಾಹ ತುಘಲಕ್‌ನು ೧೩೬೮ ನೇ ಇಸವಿಯಲ್ಲಿ ಇಲ್ಲಿ ಮಿನಾರ್‌ಅನ್ನು ಕಟ್ಟಿದನು. – ಶ್ರೀ. ದಿಗಪಾಲ ಸಿಂಹ ಆಧಾರ : ರಾಷ್ಟ್ರೀಯ ಹಿಂದಿ ‘ದೈನಿಕ ಭಾಸ್ಕರ್ (೩.೩.೨೦೧೮)