ಅಯೋಧ್ಯೆಯಲ್ಲಿನ ನಿಯೋಜಿತ ರಾಮಮಂದಿರ

ನವೆಂಬರ್ ೪ ರಿಂದ ಸಂಪೂರ್ಣ ದೇಶವೇ ಕಾಯುತ್ತಿರುವ ರಾಮಜನ್ಮಭೂಮಿ ಖಟ್ಲೆಯ ತೀರ್ಪು ಆರಂಭವಾಗಿದೆ. ‘ಕಳೆದ ೫೦೦ ವರ್ಷಗಳಿಂದ ಬಾಕಿಯಿರುವ ರಾಮಮಂದಿರವನ್ನು ಕಟ್ಟುವ ಮಾರ್ಗ ಈಗ ಸುಗಮವಾಗಲಿದೆ, ಎಂದು ಕೋಟಿಗಟ್ಟಲೆ ಹಿಂದೂಗಳ ಆಶಾಭಾವನೆಯಾಗಿದೆ. ‘ಇಸ್ಲಾಮೀ ಆಕ್ರಮಣಕಾರ ಬಾಬರ್‌ನು ರಾಮ ಮಂದಿರವನ್ನು ಬೀಳಿಸಿ ಅಲ್ಲಿ ಮಸೀದಿಯನ್ನು ಕಟ್ಟಿದನು. ಆದ್ದರಿಂದ ರಾಮ ಜನ್ಮಭೂಮಿಯು ಹಿಂದೂಗಳಿಗೆ ಸೇರಿದ ಹಕ್ಕಿನ ಭೂಮಿಯಾಗಿದೆ’, ಎಂಬುದು ಹಿಂದೂಗಳ ಶ್ರದ್ಧೆಯುಕ್ತ ಭಾವನೆಯಾಗಿದೆ. ಸುಲ್ತಾನ್ ಹಾಗೂ ಮೊಗಲ್ ದಾಳಿಕೋರರು ದೇವಾಲಯಗಳನ್ನು ಕೆಡವಿ ಅಲ್ಲಿನ ಹಿಂದೂ ಸಂಸ್ಕೃತಿಯ ಸಂಕೇತಗಳನ್ನು ನಾಶ ಮಾಡಲು ಪ್ರಯತ್ನಿಸಿದರು. ಕೇವಲ ರಾಮಮಂದಿರವಷ್ಟೇ ಅಲ್ಲ, ದೇಶದ ಇತರ ಸ್ಥಳಗಳಲ್ಲಿಯೂ ಈ ರೀತಿ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ಕಟ್ಟಿರುವಂತಹ ಅಸಂಖ್ಯಾತ ಪುರಾವೆಗಳನ್ನು ನೋಡಬಹುದು. ಕೇವಲ ಹಿಂದೂಗಳಷ್ಟೇ ಅಲ್ಲ ಮುಸಲ್ಮಾನ ಸಮಾಜ ಕೂಡ ಅದಕ್ಕೆ ಪುಷ್ಟಿ ನೀಡುತ್ತಿದೆ. ಸುಮಾರು ೨ ವರ್ಷಗಳ ಹಿಂದೆ ಉತ್ತರಪ್ರದೇಶ ಶಿಯಾ ಕೇಂದ್ರೀಯ ವಕ್ಫ ಬೋರ್ಡ್‌ನ ಅಧ್ಯಕ್ಷರಾದ ಸೈಯದ್ ವಸೀಮ್ ರಿಝವೀಯವರು ಒಂದು ಪ್ರಸ್ತಾಪವನ್ನು ತಂದಿದ್ದರು. ಅದರಂತೆ ದೇಶದಲ್ಲಿ ವಿವಿಧ ದೇವಾಲಯಗಳನ್ನು ಧ್ವಂಸ ಮಾಡಿ ಕಟ್ಟಲಾದ ೯ ಮಸೀದಿಗಳನ್ನು ಹಿಂದೂಗಳಿಗೆ ಮರಳಿ ನೀಡಲು ಬೇಡಿಕೆ ಸಲ್ಲಿಸಿದ್ದರು. ಆ ವಿಷಯದಲ್ಲಿ ಹಿಂದಿ ‘ದೈನಿಕ ಭಾಸ್ಕರ್ನಲ್ಲಿ ಪ್ರಕಟಿಸಲಾದ ಲೇಖನವನ್ನು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ. ಕಾಶಿ ವಿಶ್ವನಾಥ ದೇವಾಲಯ ವಾರಾಣಸಿಯ ಗಂಗಾ ನದಿಯ ದಡದಲ್ಲಿರುವ ದಶಾಶ್ವಮೇಧ ಘಾಟ್‌ನ ಉತ್ತರ ದಿಕ್ಕಿನಲ್ಲಿರುವ ಲಲಿತಾ ಘಾಟ್‌ನ ಸಮೀಪದಲ್ಲಿ ಮೊಗಲ್ ಬಾದಶಾಹ ಔರಂಗಜೇಬನು ೧೬೬೯ ನೇ ಇಸವಿಯಲ್ಲಿ ಮತ್ತೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಿ ಅದರ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿದನು. ಈ ಮಸೀದಿಯ ಹೆಸರು ಜ್ಞಾನವಾಪಿ ಮಸೀದಿಯಾಗಿದೆ. ವಾರಾಣಸಿ ನಗರದಲ್ಲಿರುವ ಈ ಮಸೀದಿ ಜಾಮಾ ಮಸೀದಿಯಾಗಿದೆ. ಈ ಮಸೀದಿಯ ಗೋಡೆಯ ಮೇಲೆ ದೇವಾಲಯದ ಅವಶೇಷಗಳು ಸ್ಪಷ್ಟವಾಗಿ ಕಾಣಿಸುತ್ತವೆ. ‘ಈಗ ಅಲ್ಲಿರುವ ಮಸೀದಿಯೇ ಹಿಂದಿನ ನಿಜವಾದ ಕಾಶಿ ವಿಶ್ವನಾಥ ದೇವಾಲಯವಾಗಿತ್ತು, ಎಂದು ಹಿಂದೂಗಳ ನಂಬಿಕೆ. ಇಲ್ಲಿನ ದೇವಾಲಯವನ್ನು ಎಷ್ಟೋ ಬಾರಿ ಕೆಡವಿ ಮತ್ತು ಪುನಃ ಕಟ್ಟಲಾಗಿದೆ. ಔರಂಗಜೇಬನು ಕೆಡವಿದ ದೇವಾಲಯವನ್ನು ಬಾದಶಾಹ ಅಕ್ಬರ್‌ನ ಕಾಲದಲ್ಲಿ ರಾಜಾ ಮಾನಸಿಂಹನು ಕಟ್ಟಿದ್ದಾನೆಂದು ಹೇಳಲಾಗುತ್ತದೆ. ಮಾನಸಿಂಹನ ಮೊಮ್ಮಗ ಜಯಸಿಂಹ (ಮೊದಲ) ಇವನು ಮರಾಠರ ರಾಜ ಛತ್ರಪತಿ ಶಿವಾಜಿ ಮಹಾರಾಜರು ಆಗ್ರಾದಿಂದ ಓಡಿ ಹೋಗಲು ಸಹಾಯ ಮಾಡಿದ್ದರು. ಇದರ ಸೇಡು ತೀರಿಸಿಕೊಳ್ಳಲು ಔರಂಗಜೇಬನು ದೇವಾಲಯವನ್ನು ಕೆಡವಿದನು. ಈಗಿರುವ ಕಾಶಿ ವಿಶ್ವನಾಥ ದೇವಾಲಯವನ್ನು ೧೭೮೦ ರಲ್ಲಿ ಅಹಿಲ್ಯಾಬಾಯಿ ಹೋಳಕರ್ ರವರು ಕಟ್ಟಿದರು. ಇತಿಹಾಸಕಾರರು ಜ್ಞಾನವಾಪಿ ಮಸೀದಿಯ ಹಿಂದಿನ ಗೋಡೆಯ ಮೇಲೆ ಪ್ರಾಚೀನ ದೇವಾಲಯದ ಅವಶೇಷಗಳ ಕೆಲವು ಕುರುಹುಗಳು ಸಿಕ್ಕಿವೆ. ಕೆಲವು ತಜ್ಞರ ಹೇಳಿಕೆಯಂತೆ ಇದೇ ಪ್ರಾಚೀನ ಕಾಶಿ ವಿಶ್ವನಾಥ ದೇವಾಲಯವಾಗಿದೆ.