ಪರಾತ್ಪರ ಗುರು ಡಾ. ಆಠವಲೆಯವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

೧. ಹಿಂದೂ ಧರ್ಮದಲ್ಲಿ ಧರ್ಮಪ್ರಸಾರದೊಂದಿಗೆ ಧರ್ಮದ ಆಳಕ್ಕೆ ಮತ್ತು ಸೂಕ್ಷ್ಮದ ಕಡೆಗೆ ಹೋಗುವುದಕ್ಕೆ ಹೆಚ್ಚು ಮಹತ್ವವಿದೆ’.

೨. ವ್ಯಕ್ತಿಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುವವರು ವೈದ್ಯಕೀಯ, ನ್ಯಾಯಾಲಯ ಮುಂತಾದ ಕ್ಷೇತ್ರಗಳಲ್ಲಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುವುದಿಲ್ಲ. ಕೇವಲ ಆಧ್ಯಾತ್ಮಿಕ ಪರಂಪರೆಯ ವಿಷಯದಲ್ಲಿ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ’.

೩. ಹಿಂದಿನ ಯುಗಗಳಲ್ಲಿ ಪ್ರಜೆಗಳು ಸಾತ್ತ್ವಿಕರಾಗಿದ್ದುದರಿಂದ ಋಷಿಗಳಿಗೆ ಸಮಷ್ಟಿ ಪ್ರಸಾರಕಾರ್ಯವನ್ನು ಮಾಡಬೇಕಾಗಿರಲಿಲ್ಲ. ಆದರೆ ಈಗಿನ ಕಲಿಯುಗದಲ್ಲಿ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಸಂತರಿಗೆ ಸಮಷ್ಟಿ ಪ್ರಸಾರ ಕಾರ್ಯವನ್ನು ಮಾಡಬೇಕಾಗುತ್ತಿದೆ’.

೪. ಬುದ್ಧಿಜೀವಿಗಳು ಬುದ್ಧಿಯ ಆಚೆಗಿನ ದೇವರಿಲ್ಲ’, ಎಂದು ಹೇಳುವುದು, ಇದು ಶಿಶುವಿಹಾರದಲ್ಲಿರುವ ಮಗುವು ವೈದ್ಯ, ವಕೀಲ ಮುಂತಾದವರು ಇಲ್ಲ’ವೆಂದು, ಹೇಳುವಂತಿದೆ !’

೫. ಈಶ್ವರನಲ್ಲಿ ಸ್ವಭಾವದೋಷ ಮತ್ತು ಅಹಂ ಇರುವುದಿಲ್ಲ. ಅವನೊಂದಿಗೆ ಏಕರೂಪವಾಗಬೇಕಿದ್ದರೆ ನಮ್ಮಲ್ಲಿಯೂ ಅವುಗಳು ಇರಬಾರದು.’

೬. ಚಿರಂತನ ಆನಂದಕ್ಕಾಗಿ ಸಾಧನೆ ಮಾಡದೇ ಪರ್ಯಾಯವಿಲ್ಲ ! ದೇವರ ಮೇಲೆ ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಚಿರಂತನವಾದ ಆನಂದವು ಪ್ರತಿಯೊಬ್ಬರಿಗೂ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ ಒಮ್ಮೆ ಇದು ಗಮನಕ್ಕೆ ಬಂದರೆ, ಸಾಧನೆ ಮಾಡದೆ ಬೇರೆ ದಾರಿಯಿಲ್ಲದಿರುವುದರಿಂದ ಮನುಷ್ಯನು ಸಾಧನೆಯ ಕಡೆಗೆ ಹೊರಳುತ್ತಾನೆ’.

೭. ಪಾಶ್ಚಾತ್ಯ ದೇಶಗಳು ಮಾಯೆಯಲ್ಲಿ ಮುಂದೆ ಹೋಗಲು ಕಲಿಸುತ್ತದೆ, ಆದರೆ, ಭಾರತವು ಈಶ್ವರಪ್ರಾಪ್ತಿಯ ಮಾರ್ಗದಲ್ಲಿ ಹೇಗೆ ಹೋಗಬೇಕು ಎಂದು ಕಲಿಸುತ್ತದೆ !’

೮. ಪಟಾಕಿಗಳಿಗಾಗಿ ಹಣವನ್ನು ಖರ್ಚು ಮಾಡದೇ ಸಾಧನೆಯನ್ನು ಮಾಡುವ ಬಡವರಿಗೆ ಅಥವಾ ಸಾಧನೆಯನ್ನು ಕಲಿಸುವ ಧಾರ್ಮಿಕ ಸಂಸ್ಥೆಗಳಿಗೆ ದಾನವನ್ನು ನೀಡಿ.’

೯. ನೌಕರಿಯಲ್ಲಿ ಸ್ವಲ್ಪ ಸಂಬಳ ಸಿಗಬೇಕೆಂದು ೭-೮ ಗಂಟೆಗಳ ಕಾಲ ನೌಕರಿ ಮಾಡಬೇಕಾಗುತ್ತದೆ, ಆದರೆ ಸರ್ವಜ್ಞ, ಸರ್ವವ್ಯಾಪಿ ಮತ್ತು ಸರ್ವಸಾಮರ್ಥ್ಯಶಾಲಿಯಾಗಿರುವ ಈಶ್ವರನ ಪ್ರಾಪ್ತಿಗಾಗಿ ಜೀವನವನ್ನು ನೀಡಬೇಡವೇ ?’

೧೦. ಸಾಮ್ಯವಾದಿಗಳಿಗೆ ಪ್ರಾರಬ್ಧ ಮುಂತಾದ ಶಬ್ದಗಳೇ ತಿಳಿದಿಲ್ಲದಿರುವಾಗ, ಅವರು ಸಾಮ್ಯವಾದ’ ಎಂಬ ಶಬ್ದವನ್ನು ಉಪಯೋಗಿಸುತ್ತಾರೆ ಮತ್ತು ಹಾಸ್ಯಾಸ್ಪದಕ್ಕೆ ಒಳಗಾಗುತ್ತಾರೆ !

೧೧. ‘ವೃದ್ಧಾಪ್ಯ ಬಂದಾಗ ‘ವೃದ್ಧಾಪ್ಯವೆಂದರೇನು ?’, ಎಂದು ಅನುಭವಿಸಲು ಸಿಗುತ್ತದೆ. ಅದನ್ನು ಅನುಭವಿಸಿದಾಗ, ‘ವೃದ್ಧಾಪ್ಯವನ್ನು ನೀಡುವ ಪುನರ್ಜನ್ಮ ಬೇಡ’, ಎಂದು ಅನಿಸತೊಡಗುತ್ತದೆ; ಆದರೆ ಆಗ ಸಾಧನೆಯನ್ನು ಮಾಡಿ ಪುನರ್ಜನ್ಮವನ್ನು ತಪ್ಪಿಸುವ ಸಮಯವು ಕಳೆದುಹೋಗಿರುತ್ತದೆ.

೧೨. ಯಾರು ಸರ್ವಧರ್ಮಗಳ ಅಭ್ಯಾಸವನ್ನಷ್ಟೇ ಅಲ್ಲದೇ, ಅದರ ವಾಚನವನ್ನೂ ಮಾಡಿರುವುದಿಲ್ಲವೋ, ಅವರೇ ಸರ್ವಧರ್ಮ ಸಮಭಾವವೆಂದು ಹೇಳುತ್ತಾರೆ !’

೧೩. ಹಿಂದೂ ರಾಷ್ಟ್ರದಲ್ಲಿ (ಈಶ್ವರೀ ರಾಜ್ಯದಲ್ಲಿ) ನಿಯತಕಾಲಿಕೆಗಳು, ದೂರದರ್ಶನ, ಜಾಲತಾಣಗಳು ಮುಂತಾದವುಗಳ ಉಪಯೋಗವನ್ನು ಕೇವಲ ಧರ್ಮಶಿಕ್ಷಣ ಮತ್ತು ಸಾಧನೆಯ ಸಂದರ್ಭದಲ್ಲಿ ಮಾಡಲಾಗುವುದು. ಇದರಿಂದ ಅಪರಾಧಿಗಳು ಇರಲಾರರು ಮತ್ತು ಎಲ್ಲರೂ ಭಗವಂತನ ಅನುಸಂಧಾನದಲ್ಲಿರುವುದರಿಂದ ಆನಂದದಿಂದ ಇರುವರು.’ – (ಪರಾತ್ಪರ ಗುರು) ಡಾ. ಆಠವಲೆ