‘ಗಾಂಧಿ ಹತ್ಯೆಯ ಸಂಚಿನಲ್ಲಿ ಸಾವರ್ಕರರ ಕೈವಾಡವಿರುವ ಬಗ್ಗೆ ದಾಖಲೆಗಳ ಅಭಾವದಿಂದ ಅವರು ಬಿಡುಗಡೆಯಾದರು ! – ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನುಡಿಮುತ್ತು

ಸ್ವಾತಂತ್ರ್ಯವೀರ ಸಾವರ್ಕರರನ್ನು ಗಾಂಧಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯವು ನಿರ್ದೋಷಿಯೆಂದು ಬಿಡುಗಡೆಗೊಳಿಸಿತ್ತು. ಹೀಗಿರುವಾಗ ಕಾಂಗ್ರೆಸ್ಸಿಗರಿಗೆ ನ್ಯಾಯವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ, ಎಂಬುದು ಇದರರ್ಥವಾಗುತ್ತದೆ ! ಅನೇಕ ವರ್ಷಗಳ ವರೆಗೆ ರಾಜ್ಯದ ಮುಖ್ಯಮಂತ್ರಿಯ ಹುದ್ದೆಯನ್ನು ಅಲಂಕರಿಸಿದ್ದ ವ್ಯಕ್ತಿಯು ನ್ಯಾಯವ್ಯವಸ್ಥೆಯನ್ನು ಈ ರೀತಿ ಅಗೌರವಿಸುವುದು ಪ್ರಜಾಪ್ರಭುತ್ವದ ದುರ್ದೈವವೇ ಆಗಿದೆ !

ಬೆಂಗಳೂರು – ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸ್ವಾತಂತ್ರ್ಯವೀರ ಸಾವರ್ಕರರಿಗೆ ಭಾರತದ ಸರ್ವೋಚ್ಚ ನಾಗರಿಕ ಪ್ರಶಸ್ತಿ ‘ಭಾರತರತ್ನ ನೀಡುವ ಭಾಜಪದ ಆಶ್ವಾಸನೆಯನ್ನು ಟೀಕಿಸಿದೆ. ಸಿದ್ಧರಾಮಯ್ಯನವರು ಇಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಪರಿಷತ್ತಿನಲ್ಲಿ ಮಾತನಾಡುತ್ತಾ, “ಮಹಾತ್ಮಾ ಗಾಂಧಿಯ ಹತ್ಯೆ ಸಂಚನ್ನು ರೂಪಿಸಿದ್ದ ಆರೋಪ ವಿರುವ ಸಾವರಕರರಿಗೆ ಭಾಜಪ ‘ಭಾರತರತ್ನ ನೀಡಲು ಚಿಂತನೆ ನಡೆಸುತ್ತಿದೆ. ಭಾಜಪ ಗೋಡ್ಸೆಯವರಿಗೂ ‘ಭಾರತರತ್ನ ಪ್ರಶಸ್ತಿಯಿಂದ ಗೌರವಿಸಬಹುದು. ಈ ದೇಶದಲ್ಲಿ ಏನು ನಡೆಯುತ್ತಿದೆ, ಎಂದು ನನಗೆ ತಿಳಿಯುತ್ತಿಲ್ಲ. ಸ್ವಾತಂತ್ರ್ಯವೀರ ಸಾವರ್ಕರರು ಹಿಂದೂ ಮಹಾಸಭೆಯ ಅಧ್ಯಕ್ಷರಾಗಿದ್ದರು. ಅವರು ಗಾಂಧಿಯವರ ಹತ್ಯೆಯಲ್ಲಿ ಕೈವಾಡವಿದ್ದ ಆರೋಪಿಗಳಲ್ಲಿ ಒಬ್ಬರಾಗಿದ್ದರು. ಬಳಿಕ ಸೂಕ್ತ ದಾಖಲೆಗಳು ಲಭ್ಯವಿಲ್ಲವೆಂದು ವರದಿಯಾಯಿತು. ಶೇ. ೯೯ ರಷ್ಟು ಪ್ರಕರಣಗಳಲ್ಲಿ ಇದೇ ರೀತಿ ಆಗುತ್ತದೆ ಎಂದು ಎಂದರು. (ಅನೇಕ ಕಾಂಗ್ರೆಸ್ಸಿಗರು ಸಿಖ್ಖರ ಹತ್ಯಾಕಾಂಡದಲ್ಲಿ ಮತ್ತು ಬೋಫೋರ್ಸ್ ಹಗರಣಗಳಲ್ಲಿ ಆರೋಪಿಗಳಾಗಿರುವಾಗ ಅವರಿಗೆ ಸ್ವಾತಂತ್ರ್ಯವೀರ ಸಾವರ್ಕರ ವಿಷಯದಲ್ಲಿ ಮಾತನಾಡುವ ಅಧಿಕಾರವಿದೆಯೇ ? – ಸಂಪಾದಕರು) ಈ ಕುರಿತು ಪ್ರತಿಕ್ರಿಯೆ ನೀಡಿ ರಾಜ್ಯದ ಭಾಜಪ ಮುಖ್ಯಮಂತ್ರಿ ಯಡಿಯೂರಪ್ಪನವರು, “ವಿಪಕ್ಷದ ಮುಖಂಡರಾದ ಬಳಿಕ ಸಿದ್ಧರಾಮಯ್ಯನವರು ಜವಾಬ್ದಾರಿಯನ್ನು ಮರೆತು ಮಾತನಾಡುತ್ತಿದ್ದಾರೆ. ಅವರಿಗೆ ಸಾವರ್ಕರರ ಬಗ್ಗೆ ಏನೂ ತಿಳಿದಿಲ್ಲ. ಸಿದ್ಧರಾಮಯ್ಯರು ಅಂಡಮಾನ ದ್ವೀಪಕ್ಕೆ ಹೋದರೆ ಅವರಿಗೆ ಅವರ ಬಗ್ಗೆ ಏನಾದರೂ ತಿಳಿಯ ಬಹುದು. ಸಿದ್ಧರಾಮಯ್ಯನವರು ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸಬೇಕು. ಈಗಲಾದರೂ ಅವರು ತಮ್ಮ ನಾಲಿಗೆಯನ್ನು ಹತೋಟಿಯಲ್ಲಿಡಬೇಕು ಇಲ್ಲದಿದ್ದರೆ, ಜನರೇ ಅವರಿಗೆ ಪಾಠ ಕಲಿಸುತ್ತಾರೆ ಎಂದರು.