ಟಿಪ್ಪು ಸುಲ್ತಾನನು ಹಿಂದೂಗಳ ಮೇಲೆ ನಡೆಸಿದ ದೌರ್ಜನ್ಯಗಳು ಪಠ್ಯಕ್ರಮದ ಮೂಲಕ ಬೆಳಕಿಗೆ ತರಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಶ್ರೀ. ರಮೇಶ ಶಿಂದೆ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವರು ಟಿಪ್ಪೂ ಸುಲ್ತಾನನ ವಿಷಯದಲ್ಲಿ ಪಠ್ಯಪುಸ್ತಕಗಳಲ್ಲಿ ಬರೆದಿರುವ ಎಲ್ಲ ಮಾಹಿತಿಗಳನ್ನು ತೆಗೆಯುವ ಘೋಷಣೆ ಮಾಡಿದ್ದಾರೆ. ಕರ್ನಾಟಕ ಸರಕಾರದ ಈ ನಿರ್ಣಯವು ಯೋಗ್ಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ಕರ್ನಾಟಕ ಸರಕಾರವನ್ನು ಅಭಿನಂದಿಸುತ್ತಿದೆ. ಈಗ ಕರ್ನಾಟಕ ಸರಕಾರ ಇನ್ನೊಂದು ಹೆಜ್ಜೆಯಿಟ್ಟು ಟಿಪ್ಪು ಸುಲ್ತಾನನು ಹಿಂದೂಗಳ ಮೇಲೆ ನಡೆಸಿದ ಅಪಾರ ದೌರ್ಜನ್ಯಗಳನ್ನು ಕೂಡ ಪಠ್ಯಪುಸ್ತಕಗಳಲ್ಲಿ ಮುದ್ರಿಸಬೇಕು. ಟಿಪ್ಪು ಸುಲ್ತಾನನ ವಿಷಯದಲ್ಲಿ ಇಂದಿನವರೆಗೆ ಒಳ್ಳೆಯ ರಾಜ ಹಾಗೂ ಅವನು ಜಾತ್ಯತೀತನಾಗಿದ್ದನು ಎಂಬ ಚಿತ್ರಣವನ್ನು ಜನರ ಮುಂದೆ ನಿರ್ಮಾಣ ಮಾಡಲಾಗಿತ್ತು, ಈಗ ಅದು ಹೇಗೆ ತಪ್ಪಾಗಿತ್ತು, ಎಂಬ ಸತ್ಯ ವಿಷಯವನ್ನು ಪಠ್ಯಪುಸ್ತಕಗಳಲ್ಲಿ ಸಮಾವೇಶಗೊಳಿಸುವ ಅವಶ್ಯಕತೆಯಿದೆ.