ಸಮಾಜದಲ್ಲಿನ ತಥಾಕಥಿತ ಸಂತರ (ದುಃ)ಸ್ಥಿತಿ !

(ಸದ್ಗುರು) ರಾಜೇಂದ್ರ ಶಿಂದೆ

‘೨೦೦೮ ರಿಂದ ೨೦೧೯ ನೇ ಇಸವಿಯ ಅವಧಿಯಲ್ಲಿ ಗುರುದೇವರ ಕೃಪೆಯಿಂದ ಅಧ್ಯಾತ್ಮ ಮತ್ತು ಧರ್ಮ ಇವುಗಳ ಪ್ರಸಾರಸೇವೆಯ ನಿಮಿತ್ತ ಭಾರತದ ಅನೇಕ ರಾಜ್ಯಗಳಿಗೆ ಪ್ರಯಾಣಕ್ಕೆ ಹೋಗಬೇಕಾಯಿತು. ಆಗ ಸಮಾಜದಲ್ಲಿನ ಅನೇಕ ಸಂತರ, ಸ್ವಾಮೀಜಿಗಳ ಮತ್ತು ಮಹಾರಾಜರ ಭೇಟಿಯಾಯಿತು. ಆಗ ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಗಳಲ್ಲಿ ಬರೆದಿರುವಂತೆ ‘ಪ್ರಸ್ತುತ ಸಮಾಜದಲ್ಲಿನ ಶೇ. ೯೮ ರಷ್ಟು ಸಂತರು ಡಾಂಭಿಕರಿದ್ದಾರೆ’, ಎಂದು ಅನುಭವಿಸಲು ಸಿಕ್ಕಿತು. ಇಂತಹ ಸಂತರ ಸ್ಥಿತಿಯ ಬಗ್ಗೆ ಗಮನಕ್ಕೆ ಬಂದ ಅಂಶಗಳನ್ನು ಮುಂದೆ ನೀಡುತ್ತಿದ್ದೇನೆ.

ಪ್ರಸ್ತುತ ಸಮಾಜದಲ್ಲಿನ ತಥಾಕಥಿತ ಸಂತರು, ಮಹಾರಾಜರು ಮತ್ತು ಸ್ವಾಮೀಜಿಗಳ ಸ್ಥಿತಿ

೧ ಅ. ಉಡುಪು : ಹೆಚ್ಚಿನ ಬಾರಿ ಬಾಹ್ಯ ಲಕ್ಷಣಗಳ ಮೇಲೆ ಸಂತರ ಪರಿಚಯ ನಿರ್ಧರಿಸಲಾಗುತ್ತದೆ. ಅವರ ಉಡುಪು ಭಿನ್ನವಾಗಿರುತ್ತದೆ, ಉದಾ. ಕೇಸರಿ ವಸ್ತ್ರ ಧರಿಸುವುದು, ಕೊರಳಿನಲ್ಲಿ ರುದ್ರಾಕ್ಷಿಗಳ ಮಾಲೆ ಧರಿಸುವುದು, ಕೂದಲು ಉದ್ದವಾಗಿರುವುದು, ಗಡ್ಡ ಇರುವುದು, ಶರೀರದ ಮೇಲೆ ಭಸ್ಮದ ಪಟ್ಟಿಗಳು ಅಥವಾ ಹಣೆಯ ಮೇಲೆ ವಿವಿಧ ಆಕಾರದ ತಿಲಕಗಳು ಇತ್ಯಾದಿ.

೧ ಆ. ತನಗೆ ಮಹತ್ವ ನೀಡುವುದು ಸಂತರು ಮಾತನಾಡುವಾಗ ತಮಗೆ ಮಹತ್ವ ನೀಡಿ ಅಥವಾ ತಮ್ಮ ಉಲ್ಲೇಖವನ್ನು ‘ಸಂತರು’ ಅಥವಾ ‘ಸ್ವಾಮಿ’, ಎಂದು ಮಾಡುತ್ತಾರೆ. ಅದನ್ನು ಕೇಳುವಾಗ ಅವರಲ್ಲಿನ ಅಹಂಭಾವದ ಅರಿವಾಗುತ್ತದೆ.

೨. ಅವರು ತಮ್ಮ ಬೇರೆಯೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತಾರೆ. ಅವರ ಆಸನ ಬೇರೆ ಇರುತ್ತದೆ. ನೀರು ಕುಡಿಯುವ ಲೋಟ ಬೇರೆಯೇ ಇರುತ್ತದೆ. ಅವರ ಪ್ರತಿಯೊಂದು ಸೇವೆಗಾಗಿ ಅವರೊಂದಿಗೆ ಅವರ ಶಿಷ್ಯರ ತಂಡವಿರುತ್ತದೆ. ಕೈ ತೊಳೆಯಲು, ಕೈ ಮೇಲೆ ನೀರು ಹಾಕಲು ಶಿಷ್ಯರಿರುತ್ತಾರೆ. ಆಸನದ ಮೇಲೆ ಕುಳಿತುಕೊಳ್ಳಬೇಕಾದರೂ ಅದರ ಮೇಲೆ ಅವರ ಗಾದಿಯನ್ನು ಹಾಸುವ ಶಿಷ್ಯ ಬೇರೆಯೇ ಇರುತ್ತಾನೆ. ಇದರಿಂದ ‘ಯಾವುದೇ ಕೃತಿಯನ್ನು ತಾವಾಗಿಯೇ ಮಾಡುವುದು ಅವರಿಗೆ ಕನಿಷ್ಠದ್ದಾಗಿದೆ ಎಂದು ಅನಿಸುತ್ತದೆ’, ಎಂದು ಗಮನಕ್ಕೆ ಬರುತ್ತದೆ.

೩. ಬಹುತೇಕ ಸಂತರ ಬಳಿ ಹೋದಾಗ ಪ್ರತಿಯೊಂದು ವಿಷಯಕ್ಕಾಗಿ ಹಣ ಕೊಡಬೇಕಾಗುತ್ತದೆ, ಉದಾ. ದರ್ಶನ ಪಡೆಯುವುದು, ಪಾದ ಪೂಜೆ ಮಾಡುವುದು, ಅವರೊಂದಿಗೆ ಭೋಜನಕ್ಕೆ ಕುಳಿತುಕೊಳ್ಳಲು ಇತ್ಯಾದಿ.

೧ ಇ. ಅವರ ನಡವಳಿಕೆಯಲ್ಲಿ ಆಡಂಬರವು ಹೆಚ್ಚಿರುತ್ತದೆ.

೧ ಈ. ಮಿತವ್ಯಯದ ಅಭಾವ : ಅವರ ಕಾರ್ಯದಲ್ಲಿ ಈಶ್ವರನ ‘ಮಿತವ್ಯಯ’ ಈ ಗುಣದ ತೀವ್ರ ಅಭಾವ ಕಂಡು ಬರುತ್ತದೆ. ಪ್ರವಚನ ಅಥವಾ ಇತರ ಕಾರ್ಯಕ್ರಮಗಳ ಸಮಯದಲ್ಲಿ ದೊಡ್ಡ ದೊಡ್ಡ ಮಂಟಪಗಳು, ಸಮಾರಾಧನೆ ಮತ್ತು ಅಲಂಕಾರ ಹಾಗೂ ಕಾರ್ಯಕ್ರಮಗಳ ಪ್ರಚಾರ ಮಾಡಲು ದೊಡ್ಡ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಲಾಗುತ್ತದೆ. ಈ ಹಣವನ್ನು ಧರ್ಮಕಾರ್ಯಕ್ಕಾಗಿ ಉಪಯೋಗಿಸಿದರೆ ಬಹಳ ದೊಡ್ಡ ಕಾರ್ಯವಾಗಬಹುದು.

೧ ಉ. ಓಲೈಸುವಿಕೆ

೧. ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಸಾಧಕರನ್ನು ಮತ್ತು ವ್ಯಕ್ತಿಗಳನ್ನು ಎಷ್ಟು ಗೌರವಿಸಲಾಗುತ್ತದೋ, ಅದಕ್ಕಿಂತಲೂ ಹೆಚ್ಚು ಗೌರವ ಮತ್ತು ಮಹತ್ವವನ್ನು ರಾಜಕಾರಣಿಗಳಿಗೆ ಕೊಡುತ್ತಾರೆ.

೨. ಭಾವಭಕ್ತಿ ಇರುವ, ಸಾಧನೆಯಿರುವ ವ್ಯಕ್ತಿಗಳಿಗೆ ಆದ್ಯತೆ ನೀಡುವ ಬದಲು, ಯಾರು ಹೆಚ್ಚು ಹಣವನ್ನು ಅರ್ಪಿಸುವರೋ, ಅವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಲಾಗುತ್ತದೆ.

೧ ಊ. ಅವರು ಮಾಡುವ ಸಾಧನೆ ಅಥವಾ ಧರ್ಮ ಇವುಗಳ ಪ್ರಸಾರದ ಕಾರ್ಯದಲ್ಲಿ ಕೊರತೆ ಕಂಡು ಬರುತ್ತದೆ. ಅದನ್ನು ಸರಿಯಾಗಿ ಮಾಡುವ ಬದಲು ‘ದೊಡ್ಡ ಕಾಣಿಕೆಯನ್ನು ಪಡೆದು ಪ್ರವಚನ ನೀಡುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ’, ಎಂದು ಗಮನಕ್ಕೆ ಬರುತ್ತದೆ.

೧ ಎ. ‘ನುಡಿದಂತೆ ನಡೆಯುವವರ ಚರಣಗಳಿಗೆ ವಂದನೆ’ ಈ ವಚನಕ್ಕನುಸಾರ ವರ್ತನೆ ಇಲ್ಲದಿರುವುದು : ಅವರಲ್ಲಿ ಸಾಧನೆಯ ಲಕ್ಷಣಗಳ ಅಭಾವ ಕಂಡು ಬರುತ್ತದೆ, ಉದಾ. ಭಾವ, ಭಕ್ತಿ, ನಮ್ರತೆ, ಲೀನತೆ, ಪ್ರೀತಿ ಇತ್ಯಾದಿ ಗುಣಗಳು ಅವರಲ್ಲಿ ಕಂಡು ಬರುವುದಿಲ್ಲ.

೧ ಏ. ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದಲ್ಲಿ ಸಹಭಾಗಿಯಾಗುವ ಇಚ್ಛೆ ಇಲ್ಲದಿರುವುದು : ರಾಷ್ಟ್ರ ಮತ್ತು ಧರ್ಮ ಇವುಗಳ ದಯನೀಯ ಸ್ಥಿತಿಯ ಬಗ್ಗೆ ಅವರಿಗೆ ಹೇಳಿದಾಗ ಅವರು, “ನೀವು ಉತ್ತಮ ಕಾರ್ಯವನ್ನು ಮಾಡುತ್ತಿದ್ದೀರಿ. ನಿಮಗೆ ನಮ್ಮ ಆಶೀರ್ವಾದವಿದೆ”, ಎಂದು ಹೇಳಿದರು. ಈ ಕಾರ್ಯದಲ್ಲಿ ಅಥವಾ ಹಿಂದೂ ಧರ್ಮದ ಪ್ರತ್ಯಕ್ಷ ದುಃಸ್ಥಿತಿಯನ್ನು ಬದಲಾಯಿಸಲು ಕೃತಿಯ ಸ್ತರದಲ್ಲಿ ಅವರು ಏನೂ ಮಾಡುವ ಸಿದ್ಧತೆ ತೋರಿಸುವುದಿಲ್ಲ. ಹೆಚ್ಚಿನ ಸಂತರು ಕೇವಲ ಮಾರ್ಗದರ್ಶನ ಮಾಡುವ ಸ್ಥಿತಿಯಲ್ಲಿರುತ್ತಾರೆ.

೨. ಒಂದು ಪಂಥದ ಅಧಿಕಾರಿ ವ್ಯಕ್ತಿಯ ಅಹಂಯುಕ್ತ ನಡವಳಿಕೆಯನ್ನು ತೋರ್ಪಡಿಸುವ ಪ್ರಸಂಗ

ಒಂದು ಸ್ಥಳದಲ್ಲಿ ಧರ್ಮಜಾಗೃತಿ ಸಭೆಗೆ ಒಂದು ಸಂಪ್ರದಾಯದ, ಪಂಥದ ಧರ್ಮಾಚಾರ್ಯರು ಬಂದಿದ್ದರು. ಆಗ ಅವರ ಅನುಯಾಯಿಗಳು ‘ಅವರನ್ನು ವ್ಯಾಸಪೀಠದ ಮೇಲೆ ಕೂಡಿಸಿರಿ’, ಎಂದು ಆಗ್ರಹ ಮಾಡಿದರು. ಅವರ ಅನುಯಾಯಿಗಳು “ನಮ್ಮ ಧರ್ಮವು ಹಿಂದೂ ಧರ್ಮಕ್ಕಿಂತ ಶ್ರೇಷ್ಠವಿದೆ. ಆದುದರಿಂದ ನಮ್ಮ ಸ್ವಾಮೀಜಿಗಳಿಗಾಗಿ ಉಚ್ಚಾಸನ (ಅಂದರೆ ಇತರರಿಗಿಂತ ಎತ್ತರವಾಗಿರುವ) ಇಡಬೇಕಾಗುತ್ತದೆ”, ಎಂದು ಹೇಳಿದರು. ವ್ಯಾಸಪೀಠದ ಕ್ಷಮತೆ ಕಡಿಮೆ ಇದ್ದುದರಿಂದ ‘ಹೇಗೆ ಮಾಡಬೇಕು ?’, ಎಂಬ ಪ್ರಶ್ನೆ ಮೂಡಿತು. ಆಗ ಅವರು, “ಒಂದು ಮಂಚ ಇಟ್ಟು ಅದರ ಮೇಲೆ ಆಸನವನ್ನು ಇಡಬಹುದು”, ಎಂದು ಹೇಳಿದರು. ವ್ಯಾಸಪೀಠದ ಸ್ಥಿತಿಯಿಂದಾಗಿ ಅದೂ ಅಸಾಧ್ಯವಿತ್ತು. ಕೊನೆಗೆ ಒಂದು ಮೇಜು ಇಟ್ಟು ಅವರನ್ನು ಅದರ ಮೇಲೆ ಕುಳಿತುಕೊಳ್ಳಲು ಹೇಳಿದರು. ಕಾಣಲು ಸಹ ಅದು ಅಯೋಗ್ಯವಾಗಿತ್ತು. ಎಲ್ಲ ವಕ್ತಾರರು ಆಸನದ ಮೇಲೆ ಮತ್ತು ಅವರೆದುರಿನ ಮೇಜಿನ ಮೇಲೆ ಆ ಸ್ವಾಮೀಜಿಗಳು ಕುಳಿತ್ತಿದ್ದರು. ಆಗ ‘ಇಷ್ಟು ಅಹಂ ಇದ್ದರೆ ಇಂತಹವರಿಗೆ ಈಶ್ವರಪ್ರಾಪ್ತಿಯಾಗಬಹುದೇ ? ಮತ್ತು ಇದರಿಂದ ಅವರು ಅನುಯಾಯಿಗಳೆದುರು ಯಾವ ಆದರ್ಶವನ್ನಿಡುವರು ?’, ಎಂಬ ವಿಚಾರ ಮನಸ್ಸಿನಲ್ಲಿ ಬಂದಿತು. ಡಿಸೆಂಬರ್ ೨೦೦೮ ರಲ್ಲಿ ಒಂದು ದೇವಸ್ಥಾನದಲ್ಲಿ ಸಭೆಯ ಆಯೋಜನೆಯನ್ನು ಮಾಡಲಾಗಿತ್ತು. ಆ ಸಮಯದಲ್ಲಿ ಸಭೆ ಆರಂಭವಾದಾಗ ಓರ್ವ ಮುನಿಗಳು ಬಂದಿದ್ದರು. ಆಯೋಜನೆಯಲ್ಲಿ ಅವರ ಹೆಸರು ಇರಲಿಲ್ಲ; ಆದರೆ ಇದ್ದಕ್ಕಿದ್ದಂತೆ ಬಂದಾಗ ಅವರ ಅನುಯಾಯಿಗಳು ‘ಅವರಿಗೆ ವ್ಯಾಸಪೀಠದ ಮೇಲೆ ಕೂಡಿಸಬೇಕು’, ಎಂದು ಆಗ್ರಹ ಮಾಡಿದ್ದರು.

೩. ಈಗಿನ ಸಂತರು, ಸ್ವಾಮೀಜಿಗಳು ಮತ್ತು ಮಹಾರಾಜರು ಇಂದಿನ ಹಿಂದೂ ಧರ್ಮದ ದಯನೀಯ ಸ್ಥಿತಿಯ ಅಧ್ಯಯನ ಮಾಡಿ ತಮ್ಮ ಅನುಯಾಯಿಗಳಿಗೆ ಧರ್ಮರಕ್ಷಣೆಗಾಗಿ ಕೃತಿಶೀಲರನ್ನಾಗಿ ಮಾಡಿದರೆ ಹಿಂದೂಗಳಿಗೆ ಒಳ್ಳೆಯ ದಿನಗಳು ಬರಲು ಸಮಯವು ತಗಲುವುದಿಲ್ಲ !

ಭಗವಾನ ಶ್ರೀಕೃಷ್ಣ, ಪ್ರಭು ಶ್ರೀರಾಮ ಇವರು ಅವತಾರಿಯಾಗಿದ್ದರೂ ಅವರು ಧರ್ಮರಕ್ಷಣೆಗಾಗಿ ಕಾರ್ಯ ಮಾಡಿದ್ದಾರೆ. ಈ ಉದಾಹರಣೆಯನ್ನು ಕಣ್ಣೆದುರು ಇಟ್ಟುಕೊಂಡು ಇಂತಹ ತಥಾಕಥಿತ ಸಂತರು ಕಾರ್ಯ ಮಾಡಬೇಕು. ಸಮಾಜದಲ್ಲಿ ಅನುಯಾಯಿ ಗಳ ಸಂಖ್ಯೆ ಬಹಳಷ್ಟಿರುವ ಅನೇಕ ಸಂತರು, ಸ್ವಾಮೀಜಿಗಳು ಮತ್ತು ಮಹಾರಾಜರು ಇದ್ದಾರೆ. ಅವರು ಇಂದಿನ ಹಿಂದೂ ಧರ್ಮದ ದಯನೀಯ ಸ್ಥಿತಿಯ ಅಧ್ಯಯನ ಮಾಡಿ ತಮ್ಮ ಅನುಯಾಯಿಗಳನ್ನು ಧರ್ಮರಕ್ಷಣೆಗಾಗಿ ಕೃತಿಶೀಲರನ್ನಾಗಿ ಮಾಡಿದರೆ ಹಿಂದೂಗಳಿಗೆ ಉತ್ತಮ ದಿನಗಳು ಬರಲು ಸಮಯ ತಗಲುವುದಿಲ್ಲ !’ – (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨.೧೧.೨೦೧೮)