ದೀಪಾವಳಿಯ ಮಂಗಳದಿನದಂದು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ಶ್ರೀ ಲಕ್ಷ್ಮೀ-ಕುಬೇರ ಪೂಜೆ !

ಶ್ರೀ ಲಕ್ಷ್ಮೀ-ಕುಬೇರ ಪೂಜೆಯ ಸಮಯದಲ್ಲಿ ಆರತಿಯನ್ನು ಬೆಳಗುತ್ತಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಆರತಿಯನ್ನು ಹಾಡುತ್ತಿರುವ ಶ್ರೀ. ಅಮರ ಜೋಶಿ

 

ರಾಮನಾಥಿಯ ಸನಾತನದ ಆಶ್ರಮದಲ್ಲಿ ನೆರವೇರಿದ ಶ್ರೀ ಮಹಾಲಕ್ಷ್ಮೀದೇವಿಯ ಪೂಜಾವಿಧಿಯಲ್ಲಿನ ಪೂಜೆಗೆಂದು ಸ್ಥಾಪಿಸಲಾದ ಶ್ರೀ ಮಹಾಲಕ್ಷ್ಮೀದೇವಿಯ ಮೂರ್ತಿ

ರಾಮನಾಥಿ (ಗೋವಾ) – ದೀಪಾವಳಿಯ ಮಂಗಳದಿನದಂದು ಅಂದರೆ ಅಕ್ಟೋಬರ್ ೨೭ ರಂದು ಇಲ್ಲಿನ ಸನಾತನದ ಆಶ್ರಮದಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಶ್ರೀ ಲಕ್ಷ್ಮೀ-ಕುಬೇರ ಇವರ ಪೂಜೆಯನ್ನು ಮಾಡಿದರು. ಶ್ರೀ. ಅಮರ ಜೋಶಿ ಇವರು ಪೂಜೆಯ ಪೌರೋಹಿತ್ಯವನ್ನು ನಿರ್ವಹಿಸಿದರು. ‘ಶ್ರೀ ಮಹಾಲಕ್ಷ್ಮೀದೇವಿಯ ಕೃಪೆಯಾಗಬೇಕು, ಅಲಕ್ಷ್ಮೀಯು (ದಾರಿದ್ರ್ಯ) ದೂರವಾಗಬೇಕು ಮತ್ತು ಧರ್ಮಕಾರ್ಯಕ್ಕಾಗಿ ಸಮೃದ್ಧಿ ಲಭಿಸಬೇಕು’, ಎಂಬ ಸಂಕಲ್ಪವನ್ನು ಪೂಜೆಯ ಸಮಯದಲ್ಲಿ ಮಾಡಲಾಯಿತು.

ಗಮನಾರ್ಹ ಅಂಶಗಳು

೧. ಈ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಧರಿಸಿದ ‘ಶ್ರೀವತ್ಸ ಪದಕ’ದ ಪೂಜೆಯನ್ನೂ ಮಾಡಲಾಯಿತು.

೨. ಪೂಜೆಯ ಸಮಯದಲ್ಲಿ ಸಾಧಕರಿಗೆ ಶ್ರೀ ಮಹಾಲಕ್ಷ್ಮೀದೇವಿಯ ಸೂಕ್ಷ್ಮದಲ್ಲಿ ಅಸ್ತಿತ್ವದ ಅರಿವಾಗಿ ಅವಳ ಕೃಪೆಯ ಧಾರೆಯ ಅನುಭೂತಿ ಬಂದಿತು.

೩. ಪೂಜೆಯ ಸಮಯದಲ್ಲಿ ‘ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ದೇವಿಯ ‘ಹಿರಣ್ಯವರ್ಣಾ’ (ಸುವರ್ಣದಂತೆ ಕಾಂತಿಯಿರುವ) ರೂಪದಂತೆ ಕಾಣಿಸುತ್ತಿದ್ದಾರೆ’, ಎಂದು ಸಾಧಕರಿಗೆ ಅರಿವಾಯಿತು.

೪. ಪೂಜೆಯ ಸ್ಥಳದಲ್ಲಿ ಶ್ರೀ ಮಹಾಲಕ್ಷ್ಮೀದೇವಿಯ ಬಗ್ಗೆ ಭಾವಜಾಗೃತ ಮಾಡುವ ಭಕ್ತಿಗೀತೆಗಳನ್ನು ಹಾಕಲಾಗಿತ್ತು.

೫. ಪೂಜೆಯ ದಿನ ಆಶ್ರಮದಲ್ಲಿನ ಹಾಸುಗಲ್ಲಿನ ಮೇಲೆ ದೈವೀ ಕಣಗಳು ದೊರಕಿದವು.

ಸಾಧಕರು ಅನುಭವಿಸಿದ ಅಲೌಕಿಕ ಚೈತನ್ಯ ಸಮಾರಂಭ !

‘ಶಿವಂ ಭೂತ್ವಾ ಶಿವಂ ಯಜೆತ್ |’ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಇದರ ಅರ್ಥ, ಶಿವ ಅಂದರೆ ದೇವರೊಂದಿಗೆ ಏಕರೂಪವಾಗಿಯೇ ಶಿವನ (ದೇವರ) ಪೂಜೆ ಮಾಡಬೇಕು. ಮಹರ್ಷಿಗಳು ಜೀವನಾಡಿಪಟ್ಟಿಯ ಮಾಧ್ಯಮದಿಂದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರನ್ನು ಮಹಾಲಕ್ಷ್ಮೀ ಸ್ವರೂಪವೆಂದು ಗೌರವಿಸಿದ್ದಾರೆ. ‘ಮಹಾಲಕ್ಷ್ಮೀ ದೇವಿಯ ತತ್ತ್ವವಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಶ್ರೀಲಕ್ಷ್ಮೀ-ಕುಬೇರ ಇವರ ಪೂಜೆಯನ್ನು ಮಾಡಿದರು. ದೇವಿಯು ತನ್ನ ಪೂಜೆಯನ್ನು ತಾನೇ ಮಾಡಿಕೊಳ್ಳುತ್ತಿರುವ ಅಲೌಕಿಕ ಚೈತನ್ಯ ಸಮಾರಂಭವು ಪರಾತ್ಪರ ಗುರುಗಳ ಕೃಪೆಯಿಂದ ಅನುಭವಿಸಲು ಸಿಕ್ಕಿತು’, ಎಂದು ಸಾಧಕರಿಗೆ ಅರಿವಾಯಿತು.