ಪರಾತ್ಪರ ಗುರು ಡಾ. ಆಠವಲೆಯವರ ಪಾದದಲ್ಲಿ ಆಗಿರುವ ಆಣಿಯು ಕೆಟ್ಟ ಶಕ್ತಿಗಳು ಮಾಡಿದ ಆಕ್ರಮಣವೇ ಆಗಿದೆ

ಶ್ರೀ. ದಿವಾಕರ ಆಗಾವಣೆ

೧. ಪರಾತ್ಪರ ಗುರು ಡಾ. ಆಠವಲೆ ಇವರ ಬಲಗಾಲಿನ ಅಡಿಭಾಗದಲ್ಲಿ ಆಣಿಯಾಗಿ ಅವರಿಗೆ ತುಂಬಾ ತೊಂದರೆಯಾಗುವುದು

ಕೆಲವು ದಿನಗಳಿಂದ ಪರಾತ್ಪರ ಗುರು ಡಾ. ಆಠವಲೆಯವರ ಬಲಗಾಲಿನ ಪಾದದ ಮೇಲೆ ಆಣಿಯಾಗಿದ್ದು ಅದರಿಂದ ಅವರಿಗೆ ತುಂಬಾ ತೊಂದರೆ ಯಾಗುತ್ತಿದೆ. ಆಣಿಯಿಂದಾಗಿ ಅವರಿಗೆ ಸರಿಯಾಗಿ ನಡೆಯಲು ಬರುವುದಿಲ್ಲ ಹಾಗೂ ಅದು ತುಂಬಾ ನೋಯಿಸುತ್ತಿರುತ್ತದೆ. ಪ್ರತ್ಯಕ್ಷ ಕಾಲಿಗೆ ಏನಾದರೂ ತಾಗಿದರೆ, ಏನಾದರೂ ಮೊನಚಾಗಿರುವುದು ಚುಚ್ಚಿದರೆ ಅಥವಾ ಜೆಲ್ಲಿಕಲ್ಲುಗಳ ಭೂಮಿಯ ಮೇಲೆ ನಡೆದಾಡಿದರೆ ಆಣಿಯಂತಹ ತೊಂದರೆಗಳಾಗುವುದು ಕಂಡುಬರುತ್ತದೆ; ಆದರೆ ಪರಾತ್ಪರ ಗುರು ಡಾ. ಆಠವಲೆಯವರು ಅನೇಕ ವರ್ಷಗಳಿಂದ ಅವರ ಕೋಣೆಯಲ್ಲಿಯೆ ಇರುತ್ತಾರೆ. ಪಾದದ ಮೇಲೆ ಆಣಿಯಾಗುವಷ್ಟು ಅವರು ನಡೆದಾಡುವುದಿಲ್ಲ ಅಥವಾ ಆ ರೀತಿಯಲ್ಲಿ ಕಾಲಿನ ಚಲನವಲನೆಯೂ ಆಗಿಲ್ಲ.

೨. ಪರಾತ್ಪರ ಗುರು ಡಾ. ಆಠವಲೆಯವರ ಪಾದದ ಮೇಲೆ ಆಣಿಯಾಗುವುದರ ಹಿಂದಿನ ಕಾರಣಗಳು

ಪರಾತ್ಪರ ಗುರು ಡಾ. ಆಠವಲೆಯವರ ಪಾದದ ಮೇಲೆ ಆಣಿ ಯಾಗುವುದರ ಹಿಂದಿನ ಕಾರಣವು ಶಾರೀರಿಕವಾಗಿಲ್ಲ, ಅದು ಆಧ್ಯಾತ್ಮಿಕವಾಗಿದೆ. ಇದು ಮುಂದಿನ ಅಂಶಗಳಿಂದ ಗಮನಕ್ಕೆ ಬರುತ್ತದೆ.

ಅ. ಯಾವುದೇ ರೀತಿಯ ಶಾರೀರಿಕ ಕಾರಣವಿಲ್ಲದಿರುವಾಗ ಪರಾತ್ಪರ ಗುರು ಡಾಕ್ಟರರ ಪಾದದ ಮೇಲೆ ಆಣಿಯಾಗುವುದು, ಅಂದರೆ ಕೆಟ್ಟ ಶಕ್ತಿಗಳು ಅವರ ಕಾಲಿನ ಮೇಲೆ ಮಾಡಿದ ಒಂದು ರೀತಿಯ ಆಕ್ರಮಣವೇ ಆಗಿದೆ.

ಆ. ಸಂತರ ದೇಹದಲ್ಲಿನ ದೈವೀ ಶಕ್ತಿಯು ಅವರ ಚರಣಗಳಿಂದ ಬಹಳಷ್ಟು ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗುತ್ತದೆ. ಈ ಶಕ್ತಿಯಿಂದ ವಾತಾವರಣದ ಎಲ್ಲ ದಿಕ್ಕುಗಳ ಮೇಲೆ ಪರಿಣಾಮವಾಗುತ್ತದೆ.

ಇ. ಪರಾತ್ಪರ ಗುರು ಪದದಲ್ಲಿರುವ ಪರಾತ್ಪರ ಗುರು ಡಾಕ್ಟರರ ಕಾಲಿನ ಪಾದಗಳಿಂದ ಹೊರಡುವ ದೈವೀ ಶಕ್ತಿಯ ಸ್ಪಂದನಗಳು ಪಾತಾಳದ ವರೆಗೆ ಹೋಗುತ್ತವೆ. ಆದುದರಿಂದ ಭೂಮಿಯ ಕೆಳಗಿರುವ ಪಾತಾಳದಲ್ಲಿನ ಕೆಟ್ಟ ಶಕ್ತಿಗಳಿಗೆ ಅವುಗಳನ್ನು ಸಹಿಸಲಾಗುವುದಿಲ್ಲ. ಪಾತಾಳದಲ್ಲಿನ ಕೆಟ್ಟಶಕ್ತಿಗಳು ಮತ್ತು ಪರಾತ್ಪರ ಗುರು ಡಾಕ್ಟರರ ಚೈತನ್ಯದ ಸೂಕ್ಷ್ಮಯುದ್ಧದ ಸ್ಥೂಲದಲ್ಲಿನ ಪರಿಣಾಮವೆಂದರೆ ಪರಾತ್ಪರ ಗುರು ಡಾಕ್ಟರರ ಕಾಲಿನ ಮೇಲಾಗಿರುವ ಆಣಿ. ಇದರಿಂದ ಸಾಧಕರ ರಕ್ಷಣೆಗಾಗಿ ಪರಾತ್ಪರ ಗುರು ಡಾಕ್ಟರರಂತಹ ಶೇಷ್ಠ ಗುರುಗಳು ಎಲ್ಲ ಅರಿಷ್ಟವನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಾರೆ ಮತ್ತು ಸಾಧಕರನ್ನು ಸಂಕಟದಿಂದ ಮುಕ್ತಗೊಳಿಸುತ್ತಾರೆ ಎಂಬುದು ಗಮನಕ್ಕೆ ಬರುತ್ತದೆ.

೩. ಸಪ್ತರ್ಷಿ ಜೀವನಾಡಿವಾಚನದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಕಾಲುಗಳ ಕಾಳಜಿಯನ್ನು ವಿಶೇಷವಾಗಿ ತೆಗೆದುಕೊಳ್ಳಬೇಕು, ಎಂದು ಮಹರ್ಷಿಗಳು ೨-೩ ಸಲ ಹೇಳುವುದು ಮತ್ತು ನಂತರ ಅವರ ಕಾಲಿಗೆ ಆಣಿಯಾಗಿರುವುದು ತಿಳಿಯುವುದು

೧೬.೪.೨೦೧೮ ರಂದು ಚೆನ್ನೈಯಲ್ಲಿ ಪೂ. ಡಾ. ಓಂ ಉಲಗನಾಥನ್ರವರು ಸಪ್ತರ್ಷಿ ಜೀವನಾಡಿವಾಚನದಲ್ಲಿ (ನಾಡಿವಾಚನ ಕ್ರಮಾಂಕ ೧೩೫ ರಲ್ಲಿ) ಮಹರ್ಷಿಗಳು ನೀವು ಪರಾತ್ಪರ ಗುರು ಡಾ. ಆಠವಲೆಯವರ ಕಾಲುಗಳ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು, ಎಂದು ೨-೩ ಸಲ ನಮಗೆ ಹೇಳಿದ್ದರು ಮತ್ತು ಅದೇ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರ ಕಾಲಿಗೆ ಆಣಿಯಾಗಿರುವುದು ತಿಳಿಯಿತು.

೪. ಕೆಲವು ಸಂತರ ಕಾಲುಗಳ ಮೇಲೆ ಕೆಟ್ಟಶಕ್ತಿಗಳು ಆಕ್ರಮಣ ಮಾಡಿರುವುದರ ಉದಾಹರಣೆಗಳು

ಅ. ೩-೪ ತಿಂಗಳುಗಳ ಹಿಂದೆ ಪುಣೆಯ ಸಂತರಾದ ಪ.ಪೂ. ಶ್ರೀಕೃಷ್ಣ ಕರ್ವೆಗುರುಜೀಯವರಿಗೂ ಇದೇ ರೀತಿಯ ಆಣಿಯ ತೊಂದರೆಯಾಗಿತ್ತು. ಈ ಆಣಿಗಳನ್ನು ತೆಗೆಯಲು ಅವರ ಕಾಲಿನ ಮೇಲೆ (ಪಾದದ

ಮೇಲೆ) ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.

ಆ. ಕೆಲವು ವರ್ಷಗಳ ಹಿಂದೆ ಪಾನವಳ-ಬಾಂದಾದಲ್ಲಿನ (ಮಹಾರಾಷ್ಟ್ರ) ಪ.ಪೂ. ದಾಸ ಮಹಾರಾಜರಿಗೆ ಅಪಘಾತವಾಗಿ ಕಾಲಿಗೆ ತುಂಬಾ ದೊಡ್ಡ ಗಾಯವಾಗಿತ್ತು ಮತ್ತು ಅವರಿಗೆ ಈಗಲೂ ಅದರ ತೊಂದರೆಯಾಗುತ್ತಿದೆ. – ಶ್ರೀ. ದಿವಾಕರ ಆಗವಣೆ, ಚೆನ್ನೈ, ತಮಿಳುನಾಡು. (೧೯.೪.೨೦೧೮)