ಸಾಧಕರಿಗಾಗಿ ಮಹಾಪ್ರಸಾದವನ್ನು ತಯಾರಿಸಿ ನೀಡುವ ಇಚ್ಛೆ ಇರುವಾಗ ಬೆಂಗಳೂರಿನ ಡಾ. (ಸೌ.) ಸುನೀತಾ ಅಮೃತೇಶ ಇವರಿಗೆ ದೇವರು ಮಾಡಿದ ಸಹಾಯ ಬಗ್ಗೆ ಬಂದ ಅನುಭೂತಿ !

ಡಾ. (ಸೌ.) ಸುನೀತಾ ಅಮೃತೇಶ

೧. ಸಾಧಕರಿಗಾಗಿ ಮಹಾಪ್ರಸಾದವನ್ನು ತಯಾರಿಸುವ ಇಚ್ಛೆಯಾಗುವುದು ಮತ್ತು ಮನೆಗೆಲಸದಲ್ಲಿ ಸಹಾಯ ಮಾಡಲು ಯಾರೂ ಇಲ್ಲದಿರುವಾಗ ‘ಇದು ಸಾಧ್ಯ ವಾಗಬಹುದೇ ?’, ಎಂದೆನಿಸುವುದು : ‘ರಾಮನಾಥಿ ಆಶ್ರಮದಲ್ಲಿ ಗುರುಪೂರ್ಣಿಮಾ ಮಹೋತ್ಸವ ಮತ್ತು ತದನಂತರ ಆಗಸ್ಟ್ ೨೦೧೮ ರಲ್ಲಿ ಆಯೋಜಿಸಿದ ಶಿಬಿರ ಇವುಗಳಿಗೆ ಉಪಸ್ಥಿತಳಾಗಿದ್ದು ನಾನು ಬೆಂಗಳೂರಿಗೆ ಬಂದೆನು. ಆಗಿನಿಂದ ನನಗೆ ಶ್ರೀಕೃಷ್ಣ ಮತ್ತು ಸನಾತನದ ಸಾಧಕರಿಗಾಗಿ ಮಹಾಪ್ರಸಾದವನ್ನು ತಯಾರಿಸಿ ಕೊಡುವ ಇಚ್ಛೆಯಿತ್ತು. ಮೊದಲಿಗೆ ನನಗೆ ಮನೆಗೆಲಸದಲ್ಲಿ ಸಹಾಯ ಮಾಡಲು ಕೆಲಸದವಳಿದ್ದಳು; ಆದರೆ ಈಗ ನನಗೆ ಮನೆಗೆಲಸದಲ್ಲಿ ಸಹಾಯ ಮಾಡಲು ಯಾರೂ ಇರಲಿಲ್ಲ. ಆದುದರಿಂದ ‘ನನಗೆ ಇದೆಲ್ಲವನ್ನೂ ಮಾಡುವುದು ಸಾಧ್ಯವೇ ?’, ಎಂಬ ಸಂದೇಹ ಮನಸ್ಸಿನಲ್ಲಿ ಬರುತ್ತಿತ್ತು.

೨. ವಿವಾಹ ವಾರ್ಷಿಕೋತ್ಸವ ನಿಮಿತ್ತ ಬೆಂಗಳೂರು ಸೇವಾಕೇಂದ್ರದಲ್ಲಿನ ಸಾಧಕರಿಗೆ ಮಹಾಪ್ರಸಾದವನ್ನು ನೀಡುವುದೆಂದು ನಿರ್ಧರಿಸುವುದು ಮತ್ತು ಪೂರ್ವಸಿದ್ಧತೆಯು ಮಧ್ಯರಾತ್ರಿ ಎರಡೂವರೆ ಗಂಟೆಗೆ ಪೂರ್ಣಗೊಳ್ಳುವುದು : ಒಂದು ದಿನ ನನ್ನ ಮನಸ್ಸಿನಲ್ಲಿ, ‘ನಾಳೆ ಅಂದರೆ ೨೭.೪.೨೦೧೯ ರಂದು ನಮ್ಮ ವಿವಾಹದ ೩೦ ನೇ ವಾರ್ಷಿಕೋತ್ಸವವಿದೆ. ಅದರ ನಿಮಿತ್ತ ಎಲ್ಲ ಸಾಧಕರಿಗೆ ಮಹಾಪ್ರಸಾದವನ್ನು ನೀಡುವ ನನ್ನ ಇಚ್ಛೆ ಪೂರ್ಣವಾಗುತ್ತದೆ’, ಎಂಬ ವಿಚಾರ ಬಂದಿತು. ಅದಕ್ಕನುಸಾರ ನಾನು ಬೆಂಗಳೂರು ಸೇವಾಕೇಂದ್ರದಲ್ಲಿನ ಸೌ. ಭವ್ಯಾ ಇವರಿಗೆ ನನ್ನ ಮನಸ್ಸಿನಲ್ಲಿನ ಇಚ್ಛೆಯನ್ನು ವ್ಯಕ್ತಪಡಿಸಿದೆನು. ಅವರು ಸಹ ಅದಕ್ಕೆ ಒಪ್ಪಿಕೊಂಡರು. ನನ್ನ ಇಚ್ಛೆ ಪೂಣವಾಗುವುದೆಂದು ನನಗೆ ಆನಂದವಾಯಿತು. ನಾನು ‘ಬಿಸಿಬೇಳೆ ಭಾತ್’ ಮತ್ತು ‘ಹೆಸರುಬೇಳೆಯ ಪಾಯಸ’ ಈ ಪದಾರ್ಥಗಳನ್ನು ತಯಾರಿಸುವುದೆಂದು ನಿರ್ಧರಿಸಿದೆ. ನಾನು ಅದಕ್ಕಾಗಿ ಬೇಕಾಗುವ ಎಲ್ಲ ಸಾಮಾನುಗಳನ್ನು ಪೇಟೆಗೆ ಹೋಗಿ ತಂದೆನು. ನನ್ನ ಸಹಾಯಕ್ಕೆ ಯಾರೂ ಇಲ್ಲದ ಕಾರಣ ನಾನು ‘ಉಪಹಾರ ಗೃಹದಿಂದ ಮೊಸರನ್ನವನ್ನು ತರಿಸುವುದು’, ಎಂದು ನಿರ್ಧರಿಸಿದೆ. ಮರುದಿನಕ್ಕಾಗಿ ಆವಶ್ಯಕ ಪೂರ್ವಸಿದ್ಧತೆಯು ಪೂರ್ಣಗೊಳ್ಳಲು ರಾತ್ರಿಯ ೨.೩೦ ಗಂಟೆಯಾಗಿತ್ತು.

೩. ಸಹಾಯಕ್ಕಾಗಿ ಯಾರೂ ಇಲ್ಲದಿರುವಾಗ ಮತ್ತು ಮೊಣಕಾಲು ಮತ್ತು ಸೊಂಟ ಬಹಳ ನೋಯುತ್ತಿರುವಾಗ ಒಬ್ಬಳೇ ಅಡುಗೆ ಮಾಡುವುದು ಮತ್ತು ಸೇವಾಕೇಂದ್ರಕ್ಕೆ ಭೋಜನದ ಡಬ್ಬಿಯನ್ನು ತೆಗೆದುಕೊಂಡು ಹೋಗುವುದು : ನಾನು ಬೆಳಗ್ಗೆ ೬.೩೦ ಗಂಟೆಗೆ ಹಾಲು ತರಲು ಹೋದೆನು. ಆಗ ‘ಮಹಾಪ್ರಸಾದಕ್ಕಾಗಿ ಉಪಹಾರಗೃಹದಿಂದ ಮೊಸರನ್ನವನ್ನು ತರುವುದು ಯೋಗ್ಯವಲ್ಲ’, ಎಂದೆನಿಸಿ ನಾನು ಮೊಸರನ್ನವನ್ನು ಮನೆಯಲ್ಲಿಯೇ ತಯಾರಿಸಲು ನಿರ್ಧರಿಸಿದೆ. ನನಗೆ ೩೦ ಸಾಧಕರಿಗಾಗಿ ಅಡುಗೆ ಮಾಡುವುದಿತ್ತು. ನಾನು ಅಡುಗೆ ಮಾಡಲು ಪ್ರಾರಂಭಿಸಿದೆ. ಮಾಡಿದ ಅಡುಗೆಯನ್ನು ತುಂಬಿ ಕೊಂಡೊಯ್ಯಲು ನಾನು ದೊಡ್ಡ ಡಬ್ಬಗಳನ್ನು ತೊಳೆದು, ಒರೆಸಿಟ್ಟೆನು. ನನ್ನ ಮೊಣಕಾಲು ಮತ್ತು ಸೊಂಟ ತುಂಬಾ ನೋವಾಗುತ್ತಿದ್ದರೂ, ನಾನು ಇಷ್ಟು ಸಾಧಕರಿಗಾಗಿ ಅಡುಗೆ ಮಾಡಲು ಸಾಧ್ಯವಾಯಿತು. ನಂತರ ನಾನು ರಿಕ್ಷಾದಿಂದ ಭೋಜನದ ಡಬ್ಬಿಗಳನ್ನು ಸೇವಾಕೇಂದ್ರಕ್ಕೆ ತೆಗೆದುಕೊಂಡು ಹೋದೆನು.

೪. ಎಲ್ಲ ಸಾಧಕರು ಶ್ರೀಕೃಷ್ಣನಿಗೆ ನೈವೇದ್ಯವನ್ನು ತೋರಿಸಿ ಮಹಾಪ್ರಸಾದವನ್ನು ಸೇವಿಸಿದರು. ‘ಅಡುಗೆ ತುಂಬಾ ರುಚಿಯಾಗಿದ್ದು ಅದನ್ನು ಭಾವಪೂರ್ಣವಾಗಿ ಮಾಡಿದ್ದೀರಿ ಎಂದು ಅನಿಸುತ್ತದೆ’, ಎಂದು ಎಲ್ಲ ಸಾಧಕರು ನನಗೆ ಹೇಳಿದರು.

೫. ‘ಸಂತ ಸಖುಬಾಯಿ ಇವರಿಗೆ ವಿಠ್ಠಲನು ಸಹಾಯ ಮಾಡುತ್ತಿರುವಂತೆ ದೇವರು ನನಗೆ ಸಹಾಯ ಮಾಡಿದನು’, ಎಂದು ಅನಿಸುವುದು : ಆಗ ನನಗೆ ಸಂತ ಸಖುಬಾಯಿಯ ಸ್ಮರಣೆಯಾಯಿತು. ಸಂತ ಸಖುಬಾಯಿಗೆ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಸಂತ ಸಖುಬಾಯಿಯ ಅತ್ತೆಯವರು ಮತ್ತು ಪತಿ ಅವರಿಗೆ ಬಹಳ ಕೆಲಸಗಳನ್ನು ಹೇಳಿ ಅವುಗಳನ್ನು ಬೆಳಗಿನ ವರೆಗೆ ಪೂರ್ಣ ಮಾಡಲು ಹೇಳುತ್ತಿದ್ದರು. ಆಗ ಅವರು ವಿಠ್ಠಲನಿಗೆ ಪ್ರಾರ್ಥನೆ ಮಾಡುತ್ತಿದ್ದರು. ಆಗ ವಿಠ್ಠಲನು ಸಂತ ಸಖುಬಾಯಿಯವರ ಕೆಲಸಗಳನ್ನು ಪೂರ್ಣ ಮಾಡುತ್ತಿದ್ದನು. ಸಂತ ಸಖುಬಾಯಿಯವರಂತೆ ನನಗೂ ಆ ರೀತಿಯ ಅನುಭೂತಿ ಬಂದಿತು. ದೇವರು ನನ್ನಿಂದ ಎಲ್ಲವನ್ನೂ ಮಾಡಿಸಿಕೊಂಡು ನನ್ನ ಇಚ್ಛೆಯನ್ನು ಪೂರ್ಣಗೊಳಿಸಿದನು. ಇದಕ್ಕಾಗಿ ನಾನು ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞಳಿದ್ದೇನೆ.’ – ಡಾ. (ಸೌ.) ಸುನೀತಾ ಅಮೃತೇಶ, ಬೆಂಗಳೂರು (೨೫.೮.೨೦೧೯)