ನಂದನವನದ ದಿಕ್ಕಿನತ್ತ !

ಜಮ್ಮೂ-ಕಾಶ್ಮೀರ ಈ ರಾಜ್ಯದ ವಿಭಜನೆಯಾಗಿ ಅಕ್ಟೋಬರ್ ೩೧ ರಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ನಿರ್ಮಾಣವಾದವು. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರವು ಔಪಚಾರಿಕವಾಗಿ ಭಾರತದಲ್ಲಿ ವಿಲೀನವಾಗಿದ್ದರೂ ಈ ಪ್ರದೇಶದಲ್ಲಿ ಕಳೆದ ೭೦ ವರ್ಷಗಳಿಂದ ಪಾಕ್‌ಬೆಂಬಲಿತ ಜಿಹಾದಿ ಉಗ್ರವಾದ ಮತ್ತು ದೇಶದ್ರೋಹಿ ಬಂಡುಕೋರರಿಂದಾಗಿ ಉಸಿರುಗಟ್ಟುವ ವಾತಾವರಣವಿತ್ತು. ಕಲಮ್ ೩೭೦ ಮತ್ತು ೩೫ ಅ ಇವುಗಳ ಪರಿಣಾಮದಿಂದ ಜಮ್ಮು-ಕಾಶ್ಮೀರದ ಭಾರತದೊಂದಿಗಿರುವ ಹೊಕ್ಕಳಬಳ್ಳಿಯೆ ತುಂಡಾಗುವ ಸ್ಥಿತಿಯಲ್ಲಿತ್ತು; ಆದರೆ ಇವೆರಡೂ ಕಲಮ್‌ಗಳನ್ನು ಭಾಜಪ ಸರಕಾರವು ರದ್ದುಪಡಿಸಿದ ದಿನದಿಂದ ಈ ಪ್ರದೇಶದ ಸುತ್ತಲಿದ್ದ ದೇಶದ್ರೋಹಿಗಳ ಉರುಳು ಸಡಿಲಗೊಂಡಿತು. ಈಗ ೨ ಕೇಂದ್ರಾಡಳಿತ ಪ್ರದೇಶಗಳು ನಿರ್ಮಾಣವಾಗಿರುವುದರಿಂದ ಜಮ್ಮು-ಕಾಶ್ಮೀರದ ನಾಗರಿಕರು ಮುಕ್ತವಾಗಿ ಉಸಿರಾಡಬಹುದು. ಕಳೆದ ೭೦ ವರ್ಷಗಳಿಂದ ತನ್ನ ಅಸ್ತಿತ್ವವನ್ನು ಭಾರತದಿಂದ ಬೇರೆಯೆಂದೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ, ರಾಜ್ಯದ ಧ್ವಜ ಬೇರೆಯೆ ಇದ್ದ, ಬೇರೆಯೇ ಸಂವಿಧಾನವನ್ನು ನಿರ್ಮಾಣ ಮಾಡಿ ಭಾರತದ್ವೇಷವನ್ನು ಕಾಯ್ದುಕೊಂಡು ಬಂದಿದ್ದ, ಈ ರಾಜ್ಯದಲ್ಲಿ ಅಕ್ಟೋಬರ್ ೩೧ ರಿಂದ ಕ್ಷಣಾರ್ಧದಲ್ಲಿ ಕೇಂದ್ರ ಸರಕಾರದ ಎಲ್ಲ ಕಾನೂನುಗಳು ಅನ್ವಯವಾದವು. ಈ ಪ್ರದೇಶವು ಕೇಂದ್ರ ಸರಕಾರದ ನಿಯಂತ್ರಣಕ್ಕೊಳಗಾಯಿತು. ಇದನ್ನು ಭಾಜಪ, ಶಿವಸೇನೆ ಮತ್ತು ಸಮಸ್ತ ರಾಷ್ಟ್ರಪ್ರೇಮಿ ನಾಗರಿಕರು, ಸಂಘಟನೆಗಳ ಇಚ್ಛಾಶಕ್ತಿಯ ವಿಜಯ ಎನ್ನಬಹುದು. ಭಾರತದ ಮುಕುಟಮಣಿಯಾದ ಜಮ್ಮು-ಕಾಶ್ಮೀರವು ಕಳೆದ ಅನೇಕ ವರ್ಷಗಳಿಂದ ಜಿಹಾದಿಗಳ ರಣಾಂಗಣವಾಗಿತ್ತು. ಕೇಂದ್ರ ಸರಕಾರದ ದೃಢ ನಿರ್ಣಯದಿಂದ ಈ ಪ್ರದೇಶದ ರಕ್ತರಂಜಿತ ಪ್ರಯಾಣವು ಪುನಃ ನಂದನವನದ ದಿಕ್ಕಿಗೆ ತಿರುಗಬೇಕಾಗಿದೆ. ಎಲ್ಲ ದೇಶಪ್ರೇಮಿ ನಾಗರಿಕರು ಈ ಪ್ರಯತ್ನಗಳಿಗೆ ಕೈಜೋಡಿಸಬೇಕು.

ಆಡಳಿತ ವ್ಯವಸ್ಥೆಯಲ್ಲಿನ ಪ್ರತ್ಯೇಕತಾವಾದಿಗಳನ್ನುದೂರಗೊಳಿಸಿರಿ !

ಹೊಸ ರಚನೆಗನುಸಾರ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಇರುವುದು, ಲಡಾಖ್‌ನಲ್ಲಿ ಅದು ಇರುವುದಿಲ್ಲ. ಜಮ್ಮು-ಕಾಶ್ಮೀರ ವಿಧಾನಸಭೆಗೆ ಈಗ ಒಟ್ಟು ೧೧೪ ವಿಧಾನಸಭಾ ಕ್ಷೇತ್ರಗಳಿರುವವು. ಪಾಕ್ ಆಕ್ರಮಿತ ಕಾಶ್ಮೀರಕ್ಕಾಗಿ ೨೪ ಕ್ಷೇತ್ರಗಳಿರುವವು ಮತ್ತು ಉಳಿದ ೯೦ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು. ಉಪ ರಾಜ್ಯಪಾಲರು ಎರಡೂ ಪ್ರದೇಶಗಳ ಆಡಳಿತವನ್ನು ನಿರ್ವಹಿಸುವರು. ರಾಜ್ಯಸ್ತರದಲ್ಲಿರುವ ೧೫೩ ಕಾನೂನುಗಳು ರದ್ದಾಗಿ ಕೇಂದ್ರದ ಕನಿಷ್ಟ ೧೦೬ ಕಾನೂನುಗಳು ಜ್ಯಾರಿಗೆ ಬರುವವು. ವಿಧಾನ ಪರಿಷತ್ತು ರದ್ದಾಗಿ ವಿದಾನಸಭೆಯ ಕಾರ್ಯಕಾಲವೂ ಇತರ ರಾಜ್ಯಗಳಂತೆ ೫ ವರ್ಷಗಳದ್ದಾಗುವುದು. ಈ ಹೊಸ ವ್ಯವಸ್ಥೆಗನುಸಾರ ಹೊಸ ಭಾರತದಲ್ಲಿನ ಹೊಸ ಕಾಶ್ಮೀರದ ಚಿತ್ರಣ ಪರಿವರ್ತನೆಯಾಗುವುದು. ಈ ವಿಷಯವು ಸಮಾಧಾನಕರವಾಗಿದೆ. ಜಮ್ಮು-ಕಾಶ್ವೀರದ ವಿಕಾಸ ಕಾರ್ಯವು ಇಂದಿನವರೆಗೆ ಜಿಹಾದಿ ಉಗ್ರವಾದ, ದೇಶದ್ರೋಹಿ, ಪ್ರತ್ಯೇಕತಾವಾದಿ ಮತ್ತು ಅವರ ಸಮರ್ಥಕರಿಂದಾಗಿ ನೆನೆಗುದಿಯಲ್ಲಿತ್ತು. ಹೊಸ ವ್ಯವಸ್ಥೆ ನಿರ್ಮಾಣ ಮಾಡುವಾಗ ಹಳೆಯ ವ್ಯವಸ್ಥೆಯಲ್ಲಿನ ಕೊರತೆಗಳನ್ನು ದೂರಗೊಳಿಸುವ ದೃಷ್ಟಿಯಿಂದ ಪರಿಹಾರೋಪಾಯಗಳನ್ನು ಮಾಡಬೇಕು. ಮುಖ್ಯವಾಗಿ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗಳು ಮತ್ತು ಅಧಿಕಾರಿಗಳಲ್ಲಿನ ಉಗ್ರವಾದಿಪ್ರೇಮಿಗಳನ್ನು ಕಳೆ ಕಿತ್ತಂತೆ ಹೆಕ್ಕಿ ದೂರ ಎಸೆಯುವ ವ್ಯವಸ್ಥೆಯಾಗಬೇಕು. ಪೊಲೀಸ್-ಆಡಳಿತ ವಿಭಾಗಗಳಲ್ಲಿ ರಾಷ್ಟ್ರಪ್ರೇಮಿ ಸಿಬ್ಬಂದಿಗಳನ್ನು ಸೇರಿಸಿದರೆ ವ್ಯವಸ್ಥೆಯ ವೇಗ ಹೆಚ್ಚಾಗುವುದು. ಜಮ್ಮ-ಕಾಶ್ಮೀರದ ವಿಕಾಸಕ್ಕಾಗಿ ಇಲ್ಲಿಯವರೆಗೆ ನೀರಿನಂತೆ ಹಣವನ್ನು ಹರಿಸಲಾಗುತ್ತಿತ್ತು; ಆದರೆ ಅದು ಅಭಿವೃದ್ಧಿಯ ಬದಲು ಕೆಲವು ಪ್ರತ್ಯೇಕತಾವಾದಿ ರಾಜಕಾರಣಿಗಳ ಕುಟುಂಬಗಳಲ್ಲಿ ಇಂಗುತ್ತಿತ್ತು. ಅಲ್ಲಿನ ನಾಗರಿಕರು ಕೇವಲ ವಿಕಾಸ ಯೋಜನೆಗಳ ಹೆಸರುಗಳನ್ನು ಕೇಳುತ್ತಿದ್ದರು; ಆದರೆ ಈ ಯೋಜನೆಯು ಪ್ರತ್ಯಕ್ಷವಾಗಿ ಭೂಮಿಯ ಮೇಲೆ ಅವತರಿಸಿದ್ದನ್ನು ಅವರು ಕಾಣಲೇ ಇಲ್ಲ. ಕೇಂದ್ರಾಡಳಿತ ಪ್ರದೇಶದ ನಿರ್ಮಾಣದಿಂದ ಇಂದಿವರೆಗಿನ ಸ್ವೇಚ್ಛಾಚಾರ ವೃತ್ತಿಯ ಭ್ರಷ್ಟ ಆಡಳಿತಕ್ಕೆ ಕಡಿವಾಣ ಬೀಳುವುದು.

ದೇಶದ್ರೋಹಿಗಳ ಹೆಡೆಮುರಿ ಕಟ್ಟಬೇಕು

ಕಾಶ್ಮೀರದ ವಿಷಯದಲ್ಲಿ ಇಂದಿನ ವರೆಗೆ ದೇಶದ್ರೋಹಿಗಳ ಬಗ್ಗೆ ಭಯವಿತ್ತು. ಆದರೆ ೩೭೦ ಕಲಮ್ ರದ್ದುಪಡಿಸುವ ಐತಿಹಾಸಿಕ ಘೋಷಣೆಯಾದ ನಂತರ ಈಗ ೩ ತಿಂಗಳಲ್ಲಿ ಯಾವುದೇ ದೊಡ್ಡ ಪ್ರತಿಕ್ರಿಯೆ ಬಂದಿರುವುದು ಕಂಡುಬಂದಿಲ್ಲ. ಏನೂ ಇಲ್ಲದಿದ್ದರೂ, ತಥಾಕಥಿತ ಮಾನವತಾವಾದಿಗಳು, ರಾಷ್ಟ್ರವಿರೋಧಿಗಳು, ಅಧಿಕಾರಲೋಲುಪರು ಮಾತ್ರ ಈ ನಿರ್ಣಯವನ್ನು ವಿರೋಧಿಸಲು ಪ್ರಂiತ್ನಿಸಿದರು. ಅವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಾ ಮತಾಂಧರ ಪಕ್ಷವನ್ನು ವಹಿಸಿದರು. ಭಾರತವಿರೋಧಿ ಗುಂಪುಗಳು ಅಂತರರಾಷ್ಟ್ರೀಯ ಸ್ತರದಲ್ಲಿ ಕಲಮ್ ೩೭೦ ರ ವಿಷಯದಲ್ಲಿ ಧ್ವನಿಯೆತ್ತಲು ಪ್ರಯತ್ನಿಸಿದವು; ಆದರೆ ಸರಕಾರ ಮತ್ತು ದೇಶದ ರಾಷ್ಟ್ರಪ್ರೇಮಿ ನಾಗರಿಕರು ‘ಜಮ್ಮು-ಕಾಶ್ಮೀರ ಮತ್ತು ಕಲಮ್ ೩೭೦ ಇದು ಭಾರತದ ಆಂತರಿಕ ವಿಷಯವಾಗಿದೆ’, ಎಂದು ಹೇಳುತ್ತಾ ವಿರೋಧಿಗಳ ಬಾಯಿ ಮುಚ್ಚಿಸಿದರು. ಸರಕಾರದ ಸ್ತರದಲ್ಲಿಯೂ ಈ ವಿರೋಧಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಲಾಗಿದೆ. ಈ ನಿರ್ಣಯದಿಂದ ಜನಸಾಮಾನ್ಯರಲ್ಲಿಯೂ ಒಂದು ರೀತಿಯ ರಾಷ್ಟ್ರಪ್ರೇಮದ ಅಲೆ ಎಬ್ಬಿಸಿತು. ದೇಶದ್ರೋಹಿಗಳ ಹೆಡೆಮುರಿ ಕಟ್ಟಿದರೆ, ರಾಷ್ಟ್ರವಿರೋಧಿ ಧ್ವನಿ ಕ್ಷೀಣಿಸುತ್ತದೆ, ಎಂಬುದು ಇದರಿಂದ ಕಂಡು ಬರುತ್ತದೆ. ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ಯುರೋಪಿಯನ್ ನಿಯೋಗದ ಸಂಸದರು ಕೂಡ ‘ಕಾಶ್ಮೀರದ ಪ್ರಗತಿಯು ಯೋಗ್ಯ ದಿಕ್ಕಿನಲ್ಲಿದ್ದು ಅಲ್ಲಿನ ಜನರಿಗೆ ಶಾಂತಿ ಮತ್ತು ವಿಕಾಸ ಬೇಕಾಗಿದೆ’, ಎಂದು ನಿರೀಕ್ಷಣೆಯನ್ನು ದಾಖಲಿಸಿದ್ದಾರೆ. ‘ಕಾಶ್ಮೀರವು ಇನ್ನೊಂದು ಅಫ್ಘಾನಿಸ್ತಾನವಾಗಬೇಕು’ ಎಂಬುದು ನಮ್ಮ ಇಚ್ಛೆಯಲ್ಲ. ಉಗ್ರವಾದದ ವಿರುದ್ಧದ ಹೋರಾಟದಲ್ಲಿ ನಾವು ಭಾರತದ ಜೊತೆಗಿದ್ದೇವೆ’, ಎಂದು ಕೂಡ ಅವರು ಹೇಳಿದರು. ಕಳೆದ ಕೆಲವು ದಿನಗಳಲ್ಲಿ ಉಗ್ರವಾದಕ್ಕೆ ಅಂಕುಶ ಹಾಕುವುದರಲ್ಲಿ ಯಶಸ್ಸು ಸಿಕ್ಕಿದರೂ, ಅದು ಸಾಕಾಗದು. ಭಾರತದ್ವೇಷ ಮತ್ತು ಜಿಹಾದ್ ಎಂಬುದು ಒಂದು ವೃತ್ತಿಯಾಗಿದೆ. ಸಂಪೂರ್ಣ ಭಾರತವನ್ನು ‘ಗಜವಾ-ಎ-ಹಿಂದ್’ ಮಾಡಲು ಮತಾಂಧರ ಪ್ರಯತ್ನ ನಡೆಯುತ್ತಿದೆ. ‘ನಿರುದ್ಯೋಗದಿಂದ ಸ್ಥಳೀಯ ನಾಗರಿಕರು ಉಗ್ರವಾದದ ಕಡೆಗೆ ಹೊರಳುತ್ತಿದ್ದಾರೆ’, ಎಂದು ಇಷ್ಟರ ವರೆಗೆ ಹರಟೆ ಹೊಡೆಯಲಾಗುತ್ತಿತ್ತು; ಆದರೆ ನಿರುದ್ಯೋಗದಿಂದಲ್ಲ, ಧರ್ಮದ್ವೇಷದಿಂದ ಅಲ್ಲಿನ ಮತಾಂಧರು ಶಸ್ತ್ರಗಳನ್ನು ಕೈಗೆತ್ತಿಕೊಂಡಿದ್ದಾರೆ, ಎಂಬುದು ವಾಸ್ತವಿಕತೆಯಾಗಿದೆ. ಆದ್ದರಿಂದ ಈ ರಾಜ್ಯದಲ್ಲಿ ನಿಜವಾಗಿಯೂ ಶಾಂತಿ ನಿರ್ಮಾಣ ಮಾಡುವುದು ಸರಕಾರದ ಮುಂದಿನ ಸವಾಲಾಗಿದೆ. ಅದಕ್ಕಾಗಿ ಸರಕಾರ ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಸಂಪೂರ್ಣ ಕಿತ್ತೊಗೆಯುವ ಧೋರಣೆಯನ್ನು ಅಂಗೀಕರಿಸಬೇಕಾಗಿದೆ. ಜಿಹಾದಿ ಉಗ್ರವಾದದ ವಿರುದ್ಧದ ಹೋರಾಟವನ್ನು ನಿರಂತರ ಮುಂದುವರಿಸಬೇಕಾಗುವುದು. ಕಾಶ್ಮೀರವನ್ನು ಪ್ರಜ್ವಲಿಸುತ್ತಿಡುವ ಪಾಕಿಸ್ತಾನಕ್ಕೆ ಶಾಶ್ವತವಾದ ಪಾಠ ಕಲಿಸುವುದೇ ಇದರ ನಿವಾರಣೆಯಾಗಿದೆ. ಸರಕಾರ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಾಣ ಮಾಡಲು ಆಯ್ದ ಮುಹೂರ್ತವು ಉಲ್ಲೇಖನೀಯವಾಗಿದೆ. ಅಕ್ಟೋಬರ್ ೩೧ ಈ ದಿನವನ್ನು ಉಕ್ಕಿನ ಪುರುಷ ಸರದಾರ ವಲ್ಲಭಭಾಯಿ ಪಟೇಲರ ಜಯಂತಿಯ ದಿನವೆಂದು ಆಚರಿಸಲಾಗುತ್ತದೆ. ವಲ್ಲಭಭಾಯಿ ಪಟೇಲರು ದೇಶದ ಐಕ್ಯಕ್ಕಾಗಿ ನೀಡಿದ ಯೋಗದಾನವು ಮಹತ್ವಪೂರ್ಣವಾಗಿದೆ. ಅದೇ ದಿನ ಭಾರತದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಆರಂಭವಾಗುವುದು, ಇದು ಆಶಾದಾಯಕವಾಗಿದೆ. ಈ ಆಶೆಯ ಮುಂದಿನ ಕಿರಣವೆಂದು ಪಾಕ್‌ಆಕ್ರಮಿತ ಕಾಶ್ಮೀರದಲ್ಲಿ ತ್ರಿವರ್ಣ ಹಾರಿಸಬೇಕು !