ಸಾಮಾನ್ಯ ವ್ಯಕ್ತಿ, ಸಾಧಕ ಮತ್ತು ಸಂತರು ಭಜನೆಗಳನ್ನು ಹಾಡುವುದರ ಹಿಂದಿನ ಭಾವ !

ಕು. ತೇಜಲ ಪಾತ್ರೀಕರ

೧. ಭಜನೆ ಹಾಡುವುದು ಎಂದರೆ ಭಗವಂತನನ್ನು ಪ್ರಸನ್ನಗೊಳಿಸುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ !

‘ಭಜನೆ ಹಾಡುವ ಉದ್ದೇಶವೇ ‘ಭಗವಂತನಿಗೆ ಮೊರೆಯಿಡುವುದು’ ಆಗಿದೆ. ‘ಭಜ’ ಎಂದರೆ ‘ಭಕ್ತಿ ಮಾಡುವುದು’, ಎಂದಾಗಿದ್ದು ‘ನ’ ಈ ಶಬ್ದವು ಕೃತಿದರ್ಶಕವಾಗಿದೆ, ಉದಾ. ನಮನ, ಮನನ, ದರ್ಶನ ಇತ್ಯಾದಿ. ಸಾಮಾನ್ಯವಾಗಿ ಭಜನೆಯನ್ನು ದೊಡ್ಡದಾಗಿ ಹಾಡುವುದರಿಂದ ಭಜನೆ ಮಾಡುವವರೊಂದಿಗೆ ಅದನ್ನು ಕೇಳುವವರ ಮನಸ್ಸಿನಲ್ಲಿಯೂ ಭಕ್ತಿ ನಿರ್ಮಾಣವಾಗ ತೊಡಗುತ್ತದೆ. ಇದೇ ಭಜನೆಗಳ ವೈಶಿಷ್ಟ್ಯವಾಗಿದೆ. ನವವಿಧ ಭಕ್ತಿಯಲ್ಲಿನ ಇತರ ಯಾವುದೇ ವಿಧದ ಭಕ್ತಿಯಿಂದಾಗಿ ಇದು ಸಾಧ್ಯವಾಗುವುದಿಲ್ಲ. ಆದ್ದರಿಂದ ಭಜನೆ ಮಾಡುವುದು ಭಗವಂತನನ್ನು ಪ್ರಸನ್ನಗೊಳಿಸುವ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಾಗಿದೆ. ಭಗವಂತನ ಆರಾಧನೆಗಾಗಿ ಸಂತರು ಭಜನೆಗಳನ್ನು ನಿರ್ಮಿಸಿದರು. ಸಂಗೀತದಿಂದ ಭಗವಂತನು ಬೇಗನೆ ಪ್ರಸನ್ನನಾಗುತ್ತಾನೆಂದು ಭಗವಂತನಿಗೆ ಮೊರೆಯಿಡಲು ಭಜನೆಗಳನ್ನು ಹಾಡುತ್ತಾರೆ.

ವಿವಿಧ ವ್ಯಕ್ತಿಗಳು ಭಜನೆಗಳನ್ನು ಹಾಡುವುದರ ಹಿಂದಿನ ಉದ್ದೇಶ

೨ ಅ. ಬುದ್ಧಿಜೀವಿ : ಈ ಜನರ ದೃಷ್ಟಿಯಿಂದ ‘ಭಜನೆ ಹಾಡುವುದು’, ಎಂದೇನಿರದೇ ‘ಕೇವಲ ಹಾಡು ಹಾಡುವುದು’, ಇಷ್ಟೇ ಇರುತ್ತದೆ. ಆದ್ದರಿಂದ ಅವರಿಂದ ಹಾಡುಗಳು ತಮಗಾಗಿ ಮತ್ತು ತಮ್ಮ ಸುಖಕ್ಕಾಗಿ ಹಾಡಲಾಗುತ್ತದೆ.

೨ ಆ. ಬಹುತೇಕ ಗಾಯಕರು ಭಗವಂತನಿಗಾಗಿ ಹಾಡದೇ ತಮ್ಮ ಹಾಡುಗಳಿಗೆ ಪ್ರಶಂಸೆ ದೊರೆಯಲೆಂದು ಭಜನೆಗಳನ್ನು ಹಾಡುವುದು : ಇತ್ತೀಚೆಗೆ ಬಹಳಷ್ಟು ಗಾಯಕರು ಭಜನೆಗಳನ್ನು ಹಾಡುತ್ತಾರೆ; ಆದರೆ ಸಾಧನೆಯ ಅಭಾವದಿಂದಾಗಿ ಅವರ ಉದ್ದೇಶ ‘ಭಗವಂತನಿಗಾಗಿ ಭಜನೆ ಹಾಡುವುದು’ ಎಂದು ಇರುವುದಿಲ್ಲ, ಆದರೆ ‘ನಮ್ಮ ಗಾಯನದಿಂದ ಶ್ರೋತೃವರ್ಗವನ್ನು ಪ್ರಸನ್ನಗೊಳಿಸಿ ಅವರಿಂದ ಹೊಗಳಿಸಿಕೊಳ್ಳುವುದು ಇರುತ್ತದೆ’. ಭಜನೆಗಳ ವಿಷಯದಲ್ಲಿ ಪ್ರಸ್ತುತ ಇದೇ ಭಾಗವು ಸಮಾಜದಲ್ಲಿ ಪ್ರಚಲಿತವಾಗಿದೆ. ಆದುದರಿಂದ ಗಾಯಕರು ಭಜನೆ ಹಾಡುವುದು, ಇತರರಿಗಾಗಿ ಕಡಿಮೆ ಮತ್ತು ತಮ್ಮ ಗಾಯನಕ್ಕೆ ಇತರರ ಪ್ರಶಂಸೆ ಸಿಗಬೇಕೆಂದು ಹೆಚ್ಚು ಇರುತ್ತದೆ. ಸ್ವಲ್ಪದರಲ್ಲಿ, ಅದು ಅವರ ಸುಖಕ್ಕಾಗಿಯೇ ಇರುತ್ತದೆ ಮತ್ತು ಇತರರಿಗಾಗಿ ಕಡಿಮೆ ಮತ್ತು ಭಗವಂತನಿಗಾಗಿ ಇರುವುದೇ ಇಲ್ಲ.

೨ ಇ. ಸಾಧಕರು ತಮಗಾಗಿ, ಇತರರಿಗಾಗಿ ಮತ್ತು ಭಗವಂತನಿಗಾಗಿ ಭಜನೆ ಹಾಡುವುದು : ಸಾಧಕರ ದೃಷ್ಟಿಯಿಂದ ‘ಭಜನೆ ಹಾಡುವುದು’ ಭಗವಂತನನ್ನು ಮೊರೆಯಿಡುವುದಕ್ಕಾಗಿ ಇರುತ್ತದೆ. ‘ಏಕಾಂತದಲ್ಲಿ ಭಜನೆ ಹಾಡುವುದು’ ಇದು ತನಗಾಗಿ, ಅಂದರೆ ತನ್ನ ಈಶ್ವರನ ಬಗೆಗಿನ ಭಾವವನ್ನು ವ್ಯಕ್ತಪಡಿಸಲು ಇರುತ್ತದೆ. ‘ನನ್ನೊಂದಿಗೆ ಇತರರ ಭಾವವೂ ಜಾಗೃತವಾಗಬೇಕು’, ಎಂದು ಸಾಧಕನು ಸ್ವತಂತ್ರವಾಗಿ ಅಥವಾ ಒಟ್ಟಾಗಿ ಭಜನೆಗಳನ್ನು ಹಾಡುತ್ತಾನೆ. ಇದರಿಂದ ಭಾವಜಾಗೃತವಾಗುತ್ತದೆ. ಆದುದರಿಂದ ಸಾಧಕರು ಭಜನೆ ಹಾಡುವುದು, ತನಗಾಗಿ, ಇತರರಿಗಾಗಿ ಮತ್ತು ಭಗವಂತನಿಗಾಗಿಯೂ ಇರುತ್ತದೆ. ಸಂತರು ತಮಗಾಗಿ, ಇತರರಿಗಾಗಿ ಮತ್ತು ಭಗವಂತನಿಗಾಗಿ ಭಜನೆ ಹಾಡುವುದು, ಇವೆಲ್ಲವೂ ಒಂದೇ ಆಗಿರುವುದು

೩ ಅ. ತನಗಾಗಿ : ಸಂತರು ಭಜನೆಗಳನ್ನು ಹಾಡುತ್ತಾರೆ, ಆಗ ಅವರು ಈಶ್ವರನೊಂದಿಗೆ ಏಕರೂಪವಾಗುವುದರಿಂದ ಆತ್ಮಾನಂದದಲ್ಲಿ ಲೀನವಾಗಲು ಅವರು ಭಜನೆಗಳನ್ನು ಹಾಡುತ್ತಾರೆ.

೩ ಆ. ಇತರರನ್ನು ಭಗವಂತನೊಂದಿಗೆ ಜೋಡಿಸುವುದು : ‘ಇತರರಿಗಾಗಿ ಭಜನೆಗಳನ್ನು ಹಾಡುವುದು’ ಇದರಿಂದ ಸಂತರು ಇತರರಿಂದಲೂ ಭಜನೆಗಳನ್ನು ಹಾಡಿಸಿಕೊಳ್ಳುತ್ತಾರೆ ಮತ್ತು ಸಮಷ್ಟಿಯನ್ನು ಭಜನೆಗಳ ಮಾಧ್ಯಮದಿಂದ ಭಗವಂತನೊಂದಿಗೆ ಜೋಡಿಸುವ ಪ್ರಯತ್ನ ಮಾಡುತ್ತಾರೆ. ಇದರ ಲಾಭ ಭಜನೆ ಹಾಡುವವರಿಗೆ ಆಗುತ್ತದೆ.

೩ ಇ. ಭಗವಂತನಿಗಾಗಿ ಭಜನೆ ಹಾಡುವುದು : ಸಂತರು ಈಶ್ವರನ ಅಸ್ಸಿಮ ಭಕ್ತರಿರುತ್ತಾರೆ. ಅವರು ಭಗವಂತನಿಗೆ ಮೊರೆಯಿಡಲು ಭಜನೆಗಳನ್ನು ಹಾಡುತ್ತಾರೆ. ಬಾಹ್ಯವಾಗಿ ಅವರು ಇತರರಿಗಾಗಿ ಭಜನೆಗಳನ್ನು ಹಾಡುತ್ತಿದ್ದರೂ ಅವರು ಒಳಗಿನಿಂದ ಸಂಪೂರ್ಣವಾಗಿ ಭಗವಂತನೊಂದಿಗೆ ಏಕರೂಪವಾಗಿ ಭಜನೆಗಳನ್ನು ಹಾಡುತ್ತಿರುತ್ತಾರೆ.

ಈ ಮೂರೂ ಸ್ಥಿತಿಗಳ ಉದಾಹರಣೆಯೆಂದರೆ ಪ.ಪೂ. ಭಕ್ತರಾಜ ಮಹಾರಾಜರು !

ಸ್ವಲ್ಪದರಲ್ಲಿ ಸಂತರು ಮತ್ತು ಸಾಧಕರೇ ಭಜನೆಗಳ ಉಪಯೋಗವನ್ನು ನಿಜವಾದ ಅರ್ಥದಿಂದ ತಮಗಾಗಿ, ಇತರರಿಗಾಗಿ ಮತ್ತು ಭಗವಂತನಿಗಾಗಿ ಮಾಡಿಕೊಳ್ಳಬಹುದು.’ – ಕು. ತೇಜಲ ಪಾತ್ರೀಕರ, ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೨೯.೪.೨೦೧೯)