ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಚರಣಗಳ ಗುರುತು ಭೂಮಿಯ ಮೇಲೆ ಮೂಡಿದಾಗ ಅವುಗಳಲ್ಲಿ ವಿವಿಧ ಶುಭಚಿಹ್ನೆಗಳು ಮೂಡುವುದು !

ಸದ್ಗುರು (ಸೌ.) ಬಿಂದಾ ಸಿಂಗಬಾಳ

ಪ್ರಾಚೀನ ಕಾಲದಿಂದ ಅನೇಕ ದೇವತೆಗಳ ಅದೇ ರೀತಿ ದ್ವಾಪರ ಯುಗದಲ್ಲಿನ ಪಾಂಡವರ ಕೈಮತ್ತು ಹೆಜ್ಜೆಗಳ ಗುರುತುಗಳು ಇಂದಿಗೂ ಭಾರತದ ಅನೇಕ ಸ್ಥಳಗಳಲ್ಲಿ ಕಾಣಿಸುತ್ತವೆ, ಉದಾ. ಶ್ರೀಲಂಕಾದಲ್ಲಿ ಹನುಮಾನನ ಚರಣಗಳ ಗುರುತು, ಶಿರೋಳ (ಸಾಂಗಲಿ, ಮಹಾರಾಷ್ಟ್ರ)ದಲ್ಲಿ ಒಂದು ಶಿಲೆಯ ಮೇಲೆ ದತ್ತಗುರುಗಳ ಕೈಗಳ ಗುರುತು ಹಾಗೂ ತಮಿಳು ನಾಡಿನಲ್ಲಿ ಕನ್ಯಾಕುಮಾರಿ ದೇವಿಯ ಚರಣಗಳ ಗುರುತು. ಇದೇ ರೀತಿ ೧೦.೩.೨೦೧೮ ರಂದು ಗೋವಾದ, ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಸೌರಯಾಗದ ದಿನದಂದು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಚರಣಗಳ ಗುರುತು ಭೂಮಿಯ ಮೇಲೆ ಮೂಡಿದಾಗ, ಅವುಗಳಲ್ಲಿ ವಿವಿಧ ಶುಭಚಿಹ್ನೆಗಳು ಕಾಣಿಸುತ್ತಿದ್ದವು. ಆಗ ಆ ಸಂದರ್ಭದಲ್ಲಿ ಆಧ್ಯಾತ್ಮಿಕ ಸ್ತರದಲ್ಲಾಗುವ ಪರಿಣಾಮ, ಸೂಕ್ಷ್ಮ ಪರೀಕ್ಷಣೆ ಮತ್ತು ಅರಿವಾದ ಅಂಶಗಳನ್ನು ಮುಂದೆ ಕೊಡಲಾಗಿದೆ.

೧. ದೇವತೆಗಳ ಚರಣಗಳ ಅಥವಾ ಕೈಗಳ ಗುರುತುಗಳು ಭೂಮಿಯ ಮೇಲೆ ಮೂಡುವ ಹಿಂದಿನ ಆಧ್ಯಾತ್ಮಿಕ ಕಾರಣಮಿಮಾಂಸೆ

ದೇವತೆಗಳ ಚರಣಗಳ ಅಥವಾ ಕೈಗಳ ಗುರುತುಗಳು ಭೂಮಿಯ ಮೇಲೆ ಯಾವುದಾದರೊಂದು ನಿರ್ದಿಷ್ಟ ಸ್ಥಳದಲ್ಲಿಯೇ ಮೂಡಿರುವುದನ್ನು ನಾವು ನೋಡಿದ್ದೇವೆ. ಈ ಗುರುತುಗಳು ಯಾವ ಸ್ಥಳದಲ್ಲಿ ಮೂಡುತ್ತವೆಯೋ, ಆ ಸ್ಥಳದ ಭೂಮಿಯಲ್ಲಿ ದೂರದವರೆಗೆ ಆ ಸ್ಪಂದನಗಳು ಕಾರ್ಯನಿರತವಿದ್ದು, ಅನೇಕ ಯುಗಗಳ ವರೆಗೆ ಆ ಶಕ್ತಿಯು ಅಲ್ಲಿ ಕಾರ್ಯನಿರತವಾಗಿರುತ್ತದೆ. ಪ್ರಸ್ತುತ ಹೆಚ್ಚುತ್ತಿರುವ ರಜ-ತಮಗಳ ಪ್ರಾಬಲ್ಯದಿಂದಾಗಿ ವಾತಾವರಣವು ಕಲುಷಿತಗೊಳ್ಳುತ್ತಿದೆ. ಗುರುತುಗಳಿಂದ ಪ್ರಕ್ಷೇಪಿತಗೊಳ್ಳುವ ಕಾರ್ಯನಿರತ ತೇಜೋಲಹರಿಗಳು ವಾಯುಮಂಡಲದಲ್ಲಿರುವ ಸೂಕ್ಷ್ಮತರ ತೇಜರೂಪಿ ರಜ-ತಮಾತ್ಮಕ ಲಹರಿಗಳನ್ನು ವಿಘಟನೆಗೊಳಿಸುತ್ತವೆ ಹಾಗೂ ಗುರುತುಗಳಿಂದ ಪ್ರಕ್ಷೇಪಿತಗೊಳ್ಳುವ ಸ್ಪಂದನಗಳು ವಾಯುಮಂಡಲದಲ್ಲಿ ದೀರ್ಘಕಾಲದ ವರೆಗೆ ಅಸ್ತಿತ್ವದಲ್ಲಿರುತ್ತವೆ. ಇದರಿಂದ ಪಂಚತತ್ತ್ವಗಳ ಸ್ತರದಲ್ಲಿ ಸಾಧಕರಲ್ಲಿ ಮತ್ತು ಅವರ ಸುತ್ತಲೂ ಕವಚವು ನಿರ್ಮಾಣವಾಗುತ್ತದೆ.

೨. ಭೂಮಿಯ ಮೇಲೆ ಮೂಡಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಚರಣಗಳ ಗುರುತುಗಳ ವಿಶಿಷ್ಟ ಆಕಾರದ ಕಾರ್ಯ !

ಸ್ವಸ್ತಿಕ ಮತ್ತು ಓಂ ಶುಭಚಿಹ್ನೆಗಳು ಕಾಣಿಸುವ ಹೆಜ್ಜೆಗಳ ಗುರುತುಗಳ ಛಾಯಾಚಿತ್ರ (ಕೆಳಗೆ ಗೋಲಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ)

ಅ. ಸೌರಯಾಗದಿಂದ ಕಾರ್ಯನಿರತವಾದ ಊರ್ಜೆಯಿಂದಾಗಿ ದೇಹದಿಂದ ಬೆವರಿನ ಸ್ವರೂಪದಲ್ಲಿ ಆಪತತ್ತ್ವದ ಊರ್ಜೆ ಹೊರಹೊಮ್ಮಿತು ಮತ್ತು ಭೂಮಿಯ ಮೇಲೆ ಮೂಡಿರುವ ಚರಣಗಳ ಗುರುತುಗಳ ವಿಶಿಷ್ಟ ಆಕಾರದಿಂದ ಆ ಊರ್ಜೆಯ ತೇಜತತ್ತ್ವದ ಸ್ತರದಲ್ಲಿ ಘನೀಕೃತಗೊಂಡು ಸಗುಣ-ಸಾಕಾರ ರೂಪದ ಧಾರಣೆ ಮಾಡಿತು. ಭೂಮಿಯ ಮೇಲೆ ಮೂಡಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳರ ಚರಣಗಳ ಗುರುತುಗಳಿಂದ ನಿರ್ಮಾಣವಾಗುವ ತೇಜೋಲಹರಿಗಳು ವಾಯುಮಂಡಲದಲ್ಲಿನ ರಜ-ತಮಾತ್ಮಕ ಲಹರಿಗಳೊಂದಿಗೆ ಯುದ್ಧಸ್ವರೂಪದಲ್ಲಿ ಹೋರಾಡಿ, ಅವುಗಳ ಉಚ್ಚಾಟನೆ ಮಾಡುವ ಕಾರ್ಯವನ್ನು ಮಾಡುತ್ತಿರುವುದರಿಂದ ಜೀವಗಳ ದೇಹದ ಸುತ್ತಲಿನ ಆವರಣವು ವಿಘಟನೆಯಾಗುತ್ತಿರುವುದು ಅರಿವಾಯಿತು.

ಆ. ಗುರುತುಗಳಿಂದ ನಿರ್ಮಾಣವಾಗುವ ತೇಜೋಲಹರಿಗಳು ಇಚ್ಛಾ-ಕ್ರಿಯಾ ಶಕ್ತಿಯೊಂದಿಗೆ ಸಂಬಂಧಿಸಿರುತ್ತದೆ. ಆದುದರಿಂದ ಮರುದಿನ ದೇವತೆಗಳು ಆ ತೇಜೋಲಹರಿಗಳನ್ನು ಮಾರಕ-ತಾರಕ ತತ್ತ್ವಗಳ ಸ್ತರದಲ್ಲಿ ಭೂಮಂಡಲ ಮತ್ತು ವಾಯುಮಂಡಲದಲ್ಲಿ ಚೈತನ್ಯವನ್ನು ಹರಡುವ ಕಾರ್ಯವನ್ನು ಮಾಡುತ್ತವೆ. ಈ ಲಹರಿಗಳು ಪ್ರಕಾಶದ ಸ್ತರದಲ್ಲಿ ಕಾರ್ಯನಿರತವಾಗಿರುತ್ತವೆ. ಇದರಿಂದ ಜೀವಕ್ಕೆ ತೊಂದರೆ ನೀಡುವ ದೊಡ್ಡ ಕೆಟ್ಟ ಶಕ್ತಿಗಳು ನಿರ್ಮಾಣ ಮಾಡಿರುವ ಬಂಧನ ಮತ್ತು ಸ್ಥಾನಗಳು ಇವುಗಳ ವಿಘಟನೆಯಾಗುತ್ತದೆ.

ಇ. ಗುರುತುಗಳಿಂದ ನಿರ್ಮಾಣವಾಗುವ ಚೈತನ್ಯವು ವಾಯುಮಂಡಲದಲ್ಲಿ ದೀರ್ಘಕಾಲದ ವರೆಗೆ ಚೈತನ್ಯವನ್ನು ಹಿಡಿದಿಟ್ಟುಕೊಳ್ಳುವ ಕಾರ್ಯವನ್ನು ಮಾಡುತ್ತದೆ. ಇದರಿಂದ ಜೀವಕ್ಕೆ ಆಧ್ಯಾತ್ಮಿಕ ಅನುಭೂತಿಯನ್ನು ಪಡೆಯಲು ಸಾಧ್ಯವಾಗಿ ಅದರ ಉತ್ಸಾಹವು ವೃದ್ಧಿಸುತ್ತದೆ.

೩. ಭೂಮಿಯ ಮೇಲೆ ಸದ್ಗುರು (ಸೌ.) ಬಿಂದಾ ಸಿಂಗಬಾಳರ ಚರಣಗಳ ಗುರುತು ಮೂಡಿರುವಲ್ಲಿ ಮೂಡಿದ ಶುಭಚಿಹ್ನೆಗಳ ಕಾರ್ಯ !

ಭೂಮಿಯ ಮೇಲೆ ಮೂಡಿರುವ ಸದ್ಗುರು (ಸೌ.) ಬಿಂದಾ ಸಿಂಗಬಾಳರ ಚರಣಗಳ ಗುರುತುಗಳಲ್ಲಿ ಮೂಡಿರುವ ‘ಓಂ’ಕಾರದಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಕಾರ್ಯವು ಘಟಿಸುತ್ತಿದೆಯೆಂದು ಅರಿವಾಯಿತು. ಸಮಷ್ಟಿಯ ಸಂರಕ್ಷಣೆಗಾಗಿ ತೇಜೋಮಯ ಕಣಗಳ ಉತ್ಪತ್ತಿಗೊಳಿಸಿ, ಸ್ಥಿತಿಸ್ವರೂಪ ತೇಜವಲಯಗಳನ್ನು ಕಾರ್ಯನಿರತಗೊಳಿಸಿ, ಲಯದರ್ಶಕ ತೇಜಲಹರಿಗಳ ಮಾಧ್ಯಮದಿಂದ ತೊಂದರೆದಾಯಕ ಕಪ್ಪು ಶಕ್ತಿಗಳನ್ನು ನಾಶಗೊಳಿಸುವ ಕಾರ್ಯವು ನೆರವೇರುತ್ತದೆ. ‘ಸ್ವಸ್ತಿಕ’ ಮತ್ತು ‘ಓಂ’ ಶುಭಚಿಹ್ನೆಗಳ ಮಾಧ್ಯಮದಿಂದ ಯಜ್ಞವು ನಿಜವಾದ ಅರ್ಥದಿಂದ ಪರಿಪೂರ್ಣ ಮತ್ತು ಸಾಕಾರವಾಗಿರುವ ಬಗ್ಗೆ ದೇವರು ನೀಡಿರುವ ಅನುಭೂತಿಯಾಗಿದೆ’. – ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (ಮಾರ್ಚ್ ೨೦೧೯)