ಈಶ್ವರನು ಮಾಡುವುದೆಲ್ಲ ಒಳ್ಳೆಯದಕ್ಕಾಗಿ, ಇದರ ಬಗ್ಗೆ ಸಾಧಕನಿಗೆ ಪೂರ್ಣ ಶ್ರದ್ಧೆ ಇರುತ್ತದೆ

(ಪರಾತ್ಪರ ಗುರು) ಡಾ. ಆಠವಲೆ

‘ಆಪತ್ಕಾಲದಲ್ಲಿ ಸಾಮಾನ್ಯ ವ್ಯಕ್ತಿಗೆ ಕುಟುಂಬದವರ ಕಾಳಜಿ ಅನಿಸುತ್ತದೆ; ಆದರೆ ಆಗ ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಸಾಧಕರಿಗೆ ಸಾಧಕರ, ಅಂದರೆ ಈಶ್ವರನ ಕುಟುಂಬದ ಅಂದರೆ ಅವನ ಭಕ್ತರ ಕಾಳಜಿ ಅನಿಸುತ್ತದೆ. ಸಾಧನೆಯಲ್ಲಿ ಇನ್ನಷ್ಟು ಹೆಚ್ಚು ಪ್ರಗತಿಯಾದ ನಂತರ ಆ ಕಾಳಜಿಯೂ ಅನಿಸುವುದಿಲ್ಲ; ಏಕೆಂದರೆ ‘ಈಶ್ವರನು ಮಾಡುವುದೆಲ್ಲ ಒಳ್ಳೆಯದಕ್ಕಾಗಿ, ಎಂದು ಅವನಿಗೆ ಪೂರ್ಣ ಶ್ರದ್ಧೆ ಇರುತ್ತದೆ. – (ಪರಾತ್ಪರ ಗುರು) ಡಾ. ಆಠವಲೆ

ಇತರರಿಗೆ ಕಲಿಸುವುದಕ್ಕಿಂತ ಸ್ವತಃ ಕಲಿಯುವುದರಲ್ಲಿ ಹೆಚ್ಚು ಆನಂದ ಸಿಗುತ್ತದೆ !

‘ಇತರರಿಗೆ ಕಲಿಸುವುದಕ್ಕಿಂತ ಸ್ವತಃ ಕಲಿಯುವುದರಲ್ಲಿ ನನಗೆ ಹೆಚ್ಚು ಆನಂದ ಸಿಗುತ್ತದೆ. ಹಾಗಾಗಿ ನಾನು ಎಲ್ಲಿಯೂ ಪ್ರವಚನ ನೀಡುತ್ತಾ ತಿರುಗಾಡಲಿಲ್ಲ. ನನಗೆ ದಣಿವಿನಿಂದಾಗಿ ಕಳೆದ ೧೧ ವರ್ಷ ಗಳಿಂದ ಹೊರಗೆ ಹೋಗಲು ಆಗಲಿಲ್ಲ. ಅದರಿಂದಲೂ ನನಗೆ ಬಹಳ ಲಾಭವಾಯಿತು. ಇಲ್ಲಿಯ ವರೆಗೆ ದೇವರಿಂದ ೮೦೦೦ ಗ್ರಂಥಗಳಾಗು ವಷ್ಟು ಕಲಿಯಲು ಸಿಕ್ಕಿತು. – (ಪರಾತ್ಪರ ಗುರು) ಡಾ. ಆಠವಲೆ