ಭಗವದ್ಗೀತೆಯ ವಚನಕ್ಕನುಸಾರ ರಾಷ್ಟ್ರವು ಬಲಿಷ್ಠವಾಗಬೇಕೆಂದು, ಸ್ವಾತಂತ್ರ್ಯವೀರ ಸಾವರ್ಕರರು ಮಂಡಿಸಿದ ಸ್ಫೂರ್ತಿದಾಯಕ ವಿಚಾರಗಳು

ಭಾರತದ ಬಗ್ಗೆ, ಭಗವಾನ ಶ್ರೀಕೃಷ್ಣ, ಭೀಷ್ಮ, ಆರ್ಯ ಚಾಣಕ್ಯ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಯಾವ ರಾಜಕೀಯ ನೀತಿಯಿತ್ತೊ, ಅದೇ ರಾಜಕೀಯ ನೀತಿ ಸಾವರ್ಕರರದ್ದೂ ಇತ್ತು. ‘ಯೆ ಯಥಾ ಮಾಂ ಪ್ರಪಧ್ಯಂತೆ ತಾಸ್ತಥೈವ ಭಜಾಮ್ಯಹಮ್ | (ಶ್ರೀಮದ್ಭಗವದ್ಗೀತೆ, ಅಧ್ಯಾಯ ೪, ಶ್ಲೋಕ ೧೧), ಅಂದರೆ ‘ಯಾವನು ನನ್ನೊಂದಿಗೆ ಯಾವ ರೀತಿ, ವರ್ತಿಸುತ್ತಾನೆಯೋ, ಅವನೊಂದಿಗೆ ನಾನು ಅದೇ ರೀತಿ ವರ್ತಿಸುತ್ತೇನೆ. ಈ ಗೀತೆಯ ವಚನವು ರಾಜಕೀಯ ನೀತಿಯ ಅಂಶವಾಗಿದೆ ಮತ್ತು ಇದುವೇ ಭಗವಾನ ಶ್ರೀಕೃಷ್ಣನ ತತ್ತ್ವವಾಗಿದೆ.

೧. ಸಾವರ್ಕರರ ರಾಜಕೀಯ ನೀತಿ

೧ ಅ. ಸಾವರ್ಕರರ ರಾಜಕೀಯ ನೀತಿಯ ಅಡಿಪಾಯವೇ ರಾಷ್ಟ್ರವಾಗಿದ್ದು, ಅವರು ದೇಶಕ್ಕೆ ದೇವತ್ವವನ್ನು ನೀಡಿದ್ದಾರೆ : ರಾಷ್ಟ್ರವೇ ಸಾವರ್ಕರರ ರಾಜಕೀಯ ನೀತಿಯ ಮುಖ್ಯ ಕೇಂದ್ರಬಿಂದುವಾಗಿದೆ. ಯಾವುದೇ ವಿಷಯವು ‘ರಾಷ್ಟ್ರದ ಹಿತದ್ದಾಗಿದ್ದರೆ, ಅದು ಸ್ವೀಕೃತ ಮತ್ತು ರಾಷ್ಟ್ರದ ಅಹಿತದ್ದಾಗಿದ್ದರೆ, ಅದು ತ್ಯಾಜ್ಯ ಇದು ಸಾವರ್ಕರರ ನಿಯಮವಾಗಿದೆ. ಇಷ್ಟೇ ಅಲ್ಲ, ಅವರ ದೇವರೂ ದೇಶವೇ ಆಗಿದೆ. ಅವರು, ‘ರಾಷ್ಟ್ರೀಯ ಕಾರ್ಯವನ್ನು ನಿರಂತರವಾಗಿ ಮಾಡುವುದೂ ಈಶ್ವರನ ಭಕ್ತಿಯೇ ಆಗಿದೆ, ಸಂಧ್ಯಾವಂದನೆಯೇ ಆಗಿದೆ. ನಾಮಜಪವೇ ಆಗಿದೆ. ಪೂಜೆಯೇ ಆಗಿದೆ ಎಂದು ಹೇಳುತ್ತಿದ್ದರು. ರಾಷ್ಟ್ರಕ್ಕೆ ಘಾತಕವಾಗಿರುವ ಪ್ರಾರ್ಥನೆಯೂ ಪಾಪವೇ ಆಗಿದೆ ಎಂಬುದು ಅವರ ವಿಚಾರವಾಗಿತ್ತು.

೧ ಆ. ಸಾವರ್ಕರರು ಪತ್ರಕರ್ತರ ವಿದೇಶ ನೀತಿ ಬಗೆಗಿನ ಪ್ರಶ್ನೆಗೆ ‘ಅವರು ಹೇಗೆ, ನಾವು ಹಾಗೆ ಎಂದು ಪ್ರಖರ ಉತ್ತರವನ್ನು ಕೊಟ್ಟರು : ಅಲಿಪ್ತ, ಪಂಚಶೀಲ ಎಂಬ ತತ್ತ್ವಗಳ ಜಯಜಯಕಾರ ನಡೆದಿತ್ತು. ಸಂಪೂರ್ಣ ರಾಷ್ಟ್ರವು ಭ್ರಮೆಯನ್ನುಂಟು ಮಾಡುವ ಗಾಂಧಿವಾದದ ತಪ್ಪು ಮಾರ್ಗದಲ್ಲಿ ನಡೆಯುತಿತ್ತು. ಆಗ ಸಾವರ್ಕರಿಗೆ ಪತ್ರಕರ್ತರು, ‘ನಿಮ್ಮ ವಿದೇಶ ನೀತಿ ಹೇಗಿರುವುದು ? ಎಂದು ಪ್ರಶ್ನೆಯನ್ನು ಕೇಳಿದರು ಅದಕ್ಕೆ ಸಾವರ್ಕರರು, ‘ಯಾವಾಗಲೂ ಒಂದೇ ವಿದೇಶ ನೀತಿಯಿರುವುದು ಸಾಧ್ಯವಿಲ್ಲ. ಒಂದೇ ಶಬ್ದದಲ್ಲಿ ನನ್ನ ವಿದೇಶ ನೀತಿಯನ್ನು ಹೇಳಬೇಕಾದರೆ ಅದು, ‘Resiprocity’ ಅಂದರೆ ‘ಅವರು ಹೇಗೆ ನಾವು ಹಾಗೆ ಎಂದು ಹೇಳಿದರು. ನಿಜವಾದ ರಾಜಕಾರಣವು ಸಹಕಾರಿಯಾಗಿರುವುದಿಲ್ಲ ಅಥವಾ ಅಸಹಕಾರಿಯೂ ಆಗಿರುವುದಿಲ್ಲ. ಸಹಕಾರದಿಂದ ಪ್ರಶ್ನೆ ನಿವಾರಣೆಯಾಗುತ್ತಿದ್ದರೆ, ಸಹಕಾರವನ್ನು ಮಾಡಬೇಕು; ಅಸಹಕಾರದಿಂದ ಪ್ರಶ್ನೆ ನಿವಾರಣೆಯಾಗುತ್ತಿದ್ದರೆ, ಅಸಹಕಾರ ಮಾಡಬೇಕು; ಆದರೆ ತಾತ್ಕಾಲಿಕ ಸಹಕಾರಕ್ಕೆ ಸಹಕಾರ, ಅಸಹಕಾರಕ್ಕೆ ಅಸಹಕಾರ, ಹೀಗೆ ಹೇಗೆ ಸ್ಥಿತಿ ಇರುತ್ತದೆ, ಹಾಗೆ ವರ್ತಿಸಬೇಕು, ಇದುವೇ ಪ್ರತಿಸಹಕಾರ. ಯಾವ ರಾಷ್ಟ್ರವು ನಮ್ಮೊಂದಿಗೆ ಮಿತ್ರತ್ವದಿಂದ ವರ್ತಿಸುತ್ತದೆಯೊ, ಅದರೊಂದಿಗೆ ನಾವು ಮಿತ್ರತ್ವದಿಂದ ವರ್ತಿಸುವೆವು. ಯಾವ ರಾಷ್ಟ್ರವು ನಮ್ಮೊಂದಿಗೆ ಶತ್ರುತ್ವದಿಂದ ವರ್ತಿಸುತ್ತದೆಯೋ, ಅದರೊಂದಿಗೆ ನಾವು ಶತ್ರುತ್ವದಿಂದಲೇ ವರ್ತಿಸುವೆವು. ಶತ್ರುವಿನ ಶತ್ರು ನಮ್ಮ ಮಿತ್ರ ಹಾಗೂ ಶತ್ರುವಿನ ಮಿತ್ರ ನಮ್ಮ ಶತ್ರು.

೧ ಇ. ಗಾಂಧೀಜಿಯವರ ಮುಸಲ್ಮಾನರ ಓಲೈಕೆಯ ವಿರುದ್ಧದ ನಿಲುವನ್ನು ಇಟ್ಟುಕೊಂಡು ಅದನ್ನು ನಿಷ್ಠೆಯಿಂದ ಪಾಲಿಸುವುದು : ಗಾಂಧಿಯವರ ಪ್ರತಿಯೊಂದು ನಿಲುವನ್ನು ಮುಸಲ್ಮಾನರು ವಿರೋಧಿ ಸುತ್ತಿದ್ದರು. ರಾಷ್ಟ್ರದ್ರೋಹ ಮಾಡುತ್ತಿದ್ದರು, ಆದರೆ ಗಾಂಧಿ ಅವರನ್ನೇ ಓಲೈಸುತ್ತಿದ್ದರು; ಆದರೆ ಸ್ವಾ. ಸಾವರ್ಕರರು ಮಾತ್ರ ‘ಅವರು ಹೇಗೆ, ನಾವು ಹಾಗೆ ಎಂಬ ನ್ಯಾಯದಿಂದ ಅವರನ್ನು ಗದರಿಸುತ್ತಿದ್ದರು. ‘ಬಂದರೆ ನಿಮ್ಮೊಂದಿಗೆ, ಬರದಿದ್ದರೆ ನಿಮ್ಮನ್ನು ಬಿಟ್ಟು, ಅಡ್ಡ ಬಂದರೆ ನಿಮ್ಮನ್ನು ತುಳಿದು ನಾವು ನಮ್ಮ ಕಾರ್ಯವನ್ನು ಯಶಸ್ವಿಗೊಳಿಸುವೆವು. ರಾಜಕೀಯ ನೀತಿಯಲ್ಲಿ ನೀತಿ-ಅನೀತಿ, ನ್ಯಾಯ-ಅನ್ಯಾಯ, ಸುಸಂಗತಿ-ಸಂಗತಿ ಹೀಗೆ ಏನೂ ಇರುವುದಿಲ್ಲ. ಯಾವ ಸಮಯದಲ್ಲಿ ಯಾವುದು ದೇಶದ ಹಿತದ್ದಾಗಿರುತ್ತದೆಯೊ, ಅದನ್ನು ಆಚರಣೆಯಲ್ಲಿ ತರಬೇಕು.

೨. ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ನಿಷ್ಠೆಯಿರುವ ಸಾವರ್ಕರರು ರಾಷ್ಟ್ರಕ್ಕಾಗಿ ಉಪದೇಶ ಮಾಡಿದ ಧ್ಯೇಯವಾಕ್ಯಗಳು !

೨ ಅ. ಅಮೇರಿಕಾದಂತಹ ಶಕ್ತಿಶಾಲಿ ರಾಷ್ಟ್ರಗಳು ಅಂಗೀಕರಿಸುತ್ತಿರುವ ‘ದೇಶದಲ್ಲಿ ಶಾಂತತೆ ಇರಬೇಕು, ಹೊರಗೆ ಯುದ್ಧ ಮಾಡಬೇಕು ! ಈ ರಾಜಕೀಯ ನೀತಿಯನ್ನು ಪುರಸ್ಕರಿಸುವುದು ರಾಷ್ಟ್ರಕ್ಕೆ ಹಿತಕರವಾಗಿದೆ ! : ಸಾವರ್ಕರರಿಗೆ ಪ್ರಜಾಪ್ರಭುತ್ವದ ಮೇಲೆ ಅಪಾರ ನಿಷ್ಠೆ ಇತ್ತು. ಅವರು ಹೀಗೆ ಹೇಳುತ್ತಾರೆ, ‘ನಮ್ಮ ರಾಷ್ಟ್ರವು ಈ ಮುಂದಿನ ಧ್ಯೇಯ ವಾಕ್ಯಗಳನ್ನು ವಾಕ್ಯಗಳನ್ನು ಆಚರಿಸಬೇಕು. Constiution inside, revolution outside. Law within, sword outside. Peace within, war outside’, ಅಂದರೆ ‘ದೇಶದಲ್ಲಿ ಸಂವಿಧಾನ ಇರಬೇಕು, ಹೊರಗೆ ಕ್ರಾಂತಿ ಇರಬೇಕು. ದೇಶದಲ್ಲಿ ಕಾನೂನಿನ ರಾಜ್ಯವಿರಬೇಕು ಹಾಗೂ ಹೊರಗೆ ಖಡ್ಗಗಳ ರಾಜ್ಯವಿರಬೇಕು. ದೇಶದಲ್ಲಿ ಶಾಂತಿ ಇರಬೇಕು, ಹೊರಗೆ ಯುದ್ಧ ಮಾಡಬೇಕು. ಅಹಿಂಸೆ ಮತ್ತು ಶಾಂತಿಯ ಜಪ ಮಾಡುವ ತಿಳಿಗೇಡಿಗಳಿಗೆ ಇದನ್ನು ಓದಿ ತಲೆತಿರುಗಬಹುದು; ಆದರೆ ಅಮೇರಿಕಾ, ರಶ್ಯಾದಂತಹ ಶಕ್ತಿಶಾಲಿ ರಾಷ್ಟ್ರಗಳು ಈ ರಾಜಕೀಯ ನೀತಿಯನ್ನೇ ಅಂಗೀಕರಿಸುತ್ತಿವೆ. ಹೊರಗಿನ ದೇಶಗಳಲ್ಲಿ ಯಾದವೀ ಕಲಹವೆಬ್ಬಿಸಿ, ಯುದ್ಧವನ್ನು ಮಾಡಿಸಿ ಸರಕಾರಗಳನ್ನು ಬೀಳಿಸುತ್ತಿವೆ. ತಮ್ಮ ದೇಶದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಬೇರೆ ದೇಶಗಳಲ್ಲಿ ಅರಾಜಕತೆಯನ್ನು ನಿರ್ಮಾಣ ಮಾಡುತ್ತಿವೆ. ನಮ್ಮ ದೇಶದಲ್ಲಿ ಉಗ್ರವಾದಿಗಳು ಬಹಳಷ್ಟು ಗದ್ದಲ, ದಂಗೆಗಳನ್ನು ಎಬ್ಬಿಸುತ್ತಿದ್ದಾರೆ. ಬಾಂಬ್‌ಸ್ಫೋಟ ಮಾಡುತ್ತಿದ್ದಾರೆ. ನಾವು ಅವರ ದೇಶದಲ್ಲಿ ಅದನ್ನೇ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಅದು ನಿಲ್ಲುವುದು. ಇಸ್ರೇಲ್ ದೇಶವು ೧೩ ಶತ್ರುರಾಷ್ಟ್ರಗಳಿಂದ ಸುತ್ತುವರಿದಿದೆ. ಅವರು ಈ ರಾಜಕೀಯ ನೀತಿಯನ್ನೇ ಅನುಸರಿಸುತ್ತಿದೆ. ಆದ್ದರಿಂದ ಅವರು ಸುರಕ್ಷಿತರಾಗಿದ್ದಾರೆ.

೩. ಶಸ್ತ್ರಬಲವೇ ನಿಜವಾದ ಬಲ !

೩ ಅ. ತಮ್ಮ ಶಸ್ತ್ರಬಲದ ಮೇಲೆ ನಿಂತಿರುವ ರಾಷ್ಟ್ರಗಳೇ ನಿಜವಾಗಿ ಸ್ವತಂತ್ರವಾಗಿದ್ದು ಹಿಂದೂ ರಾಷ್ಟ್ರದ ಶಸ್ತ್ರಬಲವು ಎಲ್ಲ ರಾಷ್ಟ್ರಗಳ ಶಸ್ತ್ರಬಲಕ್ಕಿಂತ ಸಾಮರ್ಥ್ಯಶಾಲಿಯಾಗಿರಬೇಕು ! : ಸ್ವಾತಂತ್ರ್ಯ ಸಿಕ್ಕಿದ ನಂತರ ಸಾವರ್ಕರರು ಹೀಗೆ ಹೇಳಿದ್ದರು, ‘ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ, ಪ್ರಬಲ ಹಾಗೂ ಪ್ರಚಂಡ ಶಸ್ತ್ರಬಲವನ್ನು ನಿರ್ಮಾಣ ಮಾಡಬೇಕು. ಇಂದು ಎಲ್ಲ ಮನುಕುಲವು ರಾಷ್ಟ್ರವಾದ ಹಾಗೂ ಶಸ್ತ್ರವಾದದ ಅಡಿಪಾಯದ ಮೇಲೆ ನಿಂತಿದೆ. ಯಾವ ರಾಷ್ಟ್ರಗಳು ತಮ್ಮ ಶಸ್ತ್ರಬಲದಲ್ಲಿ ನಿಂತಿವೆಯೊ, ಅವುಗಳೇ ನಿಜವಾಗಿ ಸ್ವತಂತ್ರವಾಗಿವೆ. ನಿಜವಾದ ಸ್ವತಂತ್ರ ರಾಷ್ಟ್ರವೆಂದು ತಲೆಯೆತ್ತಿ ಜೀವಿಸಲಿಕ್ಕಿದ್ದರೆ, ಪೊಳ್ಳು ಹಾಗೂ ದುರ್ಬಲ ಶಾಂತಿಪಾಠದ ಹಿಂದೆ ಓಡಾಡುವ ನಿಮ್ಮ ಅಭ್ಯಾಸವನ್ನು ಬಿಡಬೇಕು. ನಮ್ಮ ಹಿಂದೂ ರಾಷ್ಟ್ರದ ಶಸ್ತ್ರಬಲವು ಎಲ್ಲ ರಾಷ್ಟ್ರಗಳ ಶಸ್ತ್ರಬಲಕ್ಕಿಂತ ಹೆಚ್ಚು ಸಾಮರ್ಥ್ಯಶಾಲಿಯಾಗಿರಬೇಕು.

೩ ಆ. ‘ನಾವು ಅಲಿಪ್ತರಾಗಿದ್ದೇವೆ ಎಂದು ಹೇಳಿ ಸೈನ್ಯಬಲದ ಬಗ್ಗೆ ಉದಾಸೀನರಾಗಿರುವವರಿಗೆ ಸ್ವಾ. ಸಾವರ್ಕರರು ಮನಃಪೂರ್ವಕ ಮತ್ತು ಅತ್ಯಂತ ದೂರದೃಷ್ಟಿಯಿಂದ ಮಾಡಿದ ಮಾರ್ಗದರ್ಶನ : ಶಸ್ತ್ರಗಳ ಬಲದ ವಿಧ್ವಂಸವು ಶಾಂತಿಸೂಕ್ತಗಳಿಂದ ಆಗುವುದಿಲ್ಲ, ಅದರ ಒಂದೂ ಕಾಲುಪಟ್ಟು ಶಸ್ತ್ರಬಲದಿಂದಲೇ ಆಗುತ್ತದೆ. ಅಮೇರಿಕಾ, ರಶ್ಯಾ ಇವು ದೊಡ್ಡ ರಾಷ್ಟ್ರಗಳೇಕಾಗಿವೆ ? ಏಕೆಂದರೆ ಅವರಲ್ಲಿ ಅಣ್ವಸ್ತ್ರಗಳು ಮತ್ತು ಸೈನ್ಯಬಲವಿದೆ. ‘ನಾವು ಯಾರ ಮೇಲೆಯೂ ಆಕ್ರಮಣ ಮಾಡುವುದಿಲ್ಲ, ಹಾಗಾದರೆ ನಮ್ಮ ಮೇಲೆ ಯಾರು ಆಕ್ರಮಣ ಮಾಡುವರು ? ಸೈನ್ಯಬಲದ ಅವಶ್ಯಕತೆಯೇನಿದೆ ? ನಾವು ತಟಸ್ಥರಾಗಿದ್ದೇವೆ ಎಂದು ಹೇಳುವವರಿಗೆ ಸಾವರ್ಕರರು ಹೇಳುತ್ತಾರೆ ‘ನಾವು ಅಲಿಪ್ತರಾಗಿದ್ದೇವೆ ? ವಾಹ ರೆ ! ವಾಹ ! ಗುಬ್ಬಚ್ಚಿಗಳು ನಾವು ಅಲಿಪ್ತರಾಗಿದ್ದೇವೆ ಎಂದು ಘೋಷಣೆ ಮಾಡಿದರೆ, ಮೊಲಗಳು ಅವುಗಳ ಮೇಲೆ ಹಲ್ಲೆ ಮಾಡುವುದನ್ನು ಬಿಡುತ್ತವೆಯೇ ? ಆದ್ದರಿಂದ ಶಸ್ತ್ರಸಜ್ಜಾಗಿರಬೇಕು. ಯುವಕರಿಗೆ ಸೈನಿಕ ಶಿಕ್ಷಣವನ್ನು ಕೊಡಬೇಕು. ಭೂದಳ, ವಾಯುದಳ ಮತ್ತು ನೌಕಾದಳವನ್ನು ಸುಸಜ್ಜಿತಗೊಳಿಸಬೇಕು. ಶಸ್ತ್ರಾಸ್ತ್ರಗಳ ನೂರಾರು ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಒಂದು ಕೋಟಿ ಹಿಂದೂಗಳ ಸೈನ್ಯವನ್ನು ನಿರ್ಮಿಸಬೇಕು. ಬಲಶಾಲಿಗಳಾದರೆ ಮಾತ್ರ ಅಲಿಪ್ತರಾಗಿರುವುದಕ್ಕೆ ಅರ್ಥವಿರುತ್ತದೆ.

೩ ಇ. ಆಕ್ರಮಕ ಜಗತ್ತನ್ನು ಎದುರಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದೇಶದ ಸೈನ್ಯಬಲವನ್ನು ಸಜ್ಜಾಗಿಡುವುದು ಹಾಗೂ ರಾಜಕಾರಣಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವ ಇಚ್ಛಾಶಕ್ತಿಯನ್ನು ನಿರ್ಮಾಣವಾಗುವುದು ಆವಶ್ಯಕವಾಗಿದೆ ! : ಸಂಪೂರ್ಣ ಜಗತ್ತು ಆಕ್ರಮಕವಾಗಿದೆ, ಆದ್ದರಿಂದ ಅವರಿಗೆ ಪ್ರತಿದಾಳಿಯಿಂದ ಉತ್ತರ ಕೊಡಬೇಕು. ((When the whole world is unjust, you must also be unjust.) ‘ನಾವು ಯಾರ ಮೇಲೆಯೂ ಆಕ್ರಮಣವನ್ನು ಮಾಡುವುದಿಲ್ಲ ಈ ಭಾಷೆ ಮತ್ತು ಕೃತಿಯು ಹುಚ್ಚುತನದ್ದಾಗಿದೆ. ಅಮೇರಿಕಾ ಆಕ್ರಮಣ ಮಾಡುತ್ತದೆ. ರಶ್ಯಾ ಆಕ್ರಮಣ ಮಾಡುತ್ತದೆ. ಚೀನಾ ಆಕ್ರಮಣ ಮಾಡುತ್ತದೆ. ಇಸ್ರೇಲ್ ಆಕ್ರಮಣ ಮಾಡುತ್ತದೆ. ನಮ್ಮದು ಮಾತ್ರ ಅನಾಕ್ರಮಣ, ಅಲಿಪ್ತ ? ಇದು ಮೂರ್ಖತನವಾಗಿದೆ. ಪ್ರಜಾಪ್ರಭುತ್ವದ ಹಿಂದೆ ಶಕ್ತಿಯಿದ್ದರೆ ಮಾತ್ರ, ಅದು ಉಳಿಯುತ್ತದೆ. ಶಕ್ತಿ ಇಲ್ಲದಿದ್ದರೆ ಅದು ನಾಶವಾಗುತ್ತದೆ; ಆದ್ದರಿಂದ ದೇಶದ ಸೈನ್ಯಬಲವನ್ನು ಹೆಚ್ಚಿಸಬೇಕು. ಅವರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕೊಡಬೇಕು. ಅವುಗಳನ್ನು ಉಪಯೋಗಿಸುವ ಇಚ್ಛಾಶಕ್ತಿಯು ರಾಜಕಾರಣಿಗಳಲ್ಲಿರಬೇಕು.

೩ ಈ. ಶಿವಾಜಿ ಮಹಾರಾಜರ ಹಾಗೆ ರಾಜಕೀಯ ನೀತಿಯನ್ನು ಪರಿಸ್ಥಿತಿಗನುಸಾರ ಬದಲಾಯಿಸುವುದು : ರಾಜಕಾರಣ ಮತ್ತು ಯುದ್ಧ ಇವುಗಳಲ್ಲಿ ತತ್ತ್ವವೆಂದು ಸುಸಂಬದ್ದತೆಯನ್ನು (ಅಚ್ಚುಕಟ್ಟುತನವನ್ನು) ಇಡಬೇಕು; ಆದರೆ ‘ರಾಜಕಾರಣ ಮತ್ತು ಯುದ್ಧಗಳಲ್ಲಿ ಕುಶಲತೆಯೆಂದು ಅಚ್ಚುಕಟ್ಟುತನವನ್ನು ಪಾಲಿಸಲೇಬೇಕು ಎಂದು ಹೇಳುವುದರಲ್ಲಿ ಆರ್ಥವಿಲ್ಲ. ತದ್ವಿರುದ್ಧ ಒಬ್ಬ ಆಂಗ್ಲ ವಿಚಾರವಾದಿಗಳು ಹೀಗೆ ಹೇಳಿದ್ದಾರೆ, ‘ಅಚ್ಚುಕಟ್ಟುತನವು ಕತ್ತೆಯ ಗುಣವಾಗಿದೆ. ಇದು ಕೇವಲ ರಾಜಕಾರಣಕ್ಕಾಗಿ ಮಾತ್ರ ಯೋಗ್ಯವಾಗಿದೆ. ಸಂತ-ಮಹಾತ್ಮರ ಮಾತಿನಲ್ಲಿ, ಕೃತಿಯಲ್ಲಿ ಅಚ್ಚುಕಟ್ಟುತನ ಇರಲೇ ಬೇಕು; ಆದರೆ ‘ವಾರಾಮಙ್ಗನೇವ ನೃಪನೀತಿರನೆಕರೂಪಾ | (ನೀತಿಶತಕ, ಶ್ಲೋಕ ೪೭), ಅಂದರೆ ‘ರಾಜಕಾರಣವು ವೇಶ್ಯೆಯಂತೆ ಅನೇಕ ರೂಪಗಳದ್ದಾಗಿದೆ. ಅಲ್ಲಿ ಪತಿವ್ರತೆಯ ಅವಶ್ಯಕತೆಯೇನಿದೆ ? ಆಗ್ರಾದಿಂದ ಓಡಿ ಬಂದ ನಂತರ ಛ. ಶಿವಾಜಿ ಮಹಾರಾಜರು ಔರಂಗಜೇಬನಿಗೆ ಕ್ಷಮಾಯಾಚನೆಯ ಪತ್ರವನ್ನು ಕಳುಹಿಸಿದರು; ಆದರೆ ಆಚರಣೆಯಲ್ಲಿ ಮಾತ್ರ ಅದರ ವಿರುದ್ಧ ಮಾಡಿದರು. ಕೃಷ್ಣನೀತಿ, ಚಾಣಕ್ಯನೀತಿ ಇದನ್ನೇ ಹೇಳುತ್ತದೆ ಹಾಗೂ ಸಾವರ್ಕರರು ಕೂಡ ಇದನ್ನೇ ಹೇಳುತ್ತಾರೆ, ‘ಎದುರಿಗಿನ ಶತ್ರು ಹೇಗೆ ವರ್ತಿಸುತ್ತಾನೆಯೋ, ಹಾಗೆ ವರ್ತಿಸುವುದೇ ನಿಜವಾದ ರಾಜಕೀಯ ನೀತಿಯಾಗಿದೆ.

೪. ಸ್ವಾ. ಸಾವರ್ಕರರ ದೂರದೃಷ್ಟಿ

೪ ಅ. ‘ಎಲ್ಲ ಮಾನವರು ಒಂದಾಗಿ ಒಂದು ಮಾನವರಾಷ್ಟ್ರ ವಾಗಬೇಕೆಂದು ನಮಗೂ ಅನಿಸುತ್ತದೆ. ನಮ್ಮ ವೇದಾಂತವು ಅದಕ್ಕೂ ಮುಂದೆ ಹೋಗಿ ಸಜೀವ-ನಿರ್ಜೀವ ಸೃಷ್ಟಿಯನ್ನು ಒಂದು ಎಂದು ತಿಳಿಯುತ್ತದೆ; ಆದರೆ ನಾವು ದೇಶಕಾಲ ಪರಿಸ್ಥಿತಿಗನುಸಾರ ವ್ಯವಹರಿಸಬೇಕು. (ಕ್ರಿ.ಶ.೧೯೪೩)

೪ ಆ. ‘ರಾಷ್ಟ್ರವಾದವು ಇನ್ನೂ ೫೦೦ ವರ್ಷಗಳ ವರೆಗಾದರೂ ಜೀವಂತವಿರುವುದಿದೆ. ಅನಂತರ ಏನಾಗುವುದು, ಹೇಳಲು ಬರುವುದಿಲ್ಲ. ಅನಂತರ ಪೃಥ್ವಿ ಒಂದಾಗಿ ಮಂಗಳ ಗ್ರಹ ಇನ್ನೊಂದು ರಾಷ್ಟ್ರವಾಗ ಬಹುದು. (ಕ್ರಿ.ಶ.೧೯೪೩) ಎಷ್ಟಿದು ದೂರದೃಷ್ಟಿ ! – ವಾ.ನಾ. ಉತ್ಪಾತ (‘ಧರ್ಮಭಾಸ್ಕರ ದೀಪಾವಳಿ ವಿಶೇಷಾಂಕ, ನವೆಂಬರ್-ಡಿಸೆಂಬರ್ ೨೦೧೨)