ತಿವಾರಿ ಇವರ ಹತ್ಯೆಯ ಷಡ್ಯಂತ್ರ !

ಇತ್ತೀಚೆಗೆ ಹಿಂದೂ ಸ್ವರಾಜ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮತ್ತು ಹಿಂದೂ ಮಹಾಸಭೆಯ ಮಾಜಿ ನಾಯಕರಾದ ಕಮಲೇಶ ತಿವಾರಿ ಇವರ ಕುತ್ತಿಗೆ ಕೊಯ್ದು ಮತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಯನ್ನು ಮಾಡಲಾಯಿತು. ಹಿಂದುತ್ವನಿಷ್ಠ ತಿವಾರಿ ಇವರ ಈ ಹತ್ಯೆಯ ನಂತರ ದೇಶದಲ್ಲಿನ ಕೋಲಾಹಲವೆದ್ದಿತು. ತಿವಾರಿ ಇವರು ಧರ್ಮಕಾರ್ಯಕ್ಕಾಗಿ ತಮ್ಮ ಪಿತ್ರಾರ್ಜಿತ ಭೂಮಿಯನ್ನು ಸಮರ್ಪಿಸಿದ್ದರು ಮತ್ತು ಹಗಲುರಾತ್ರಿಯೆನ್ನದೇ ಈ ಕಾರ್ಯಕ್ಕಾಗಿ ಅರ್ಪಿಸಿಕೊಂಡಿದ್ದರು. ಕ್ರೈಸ್ತ ಮತ್ತು ಮುಸಲ್ಮಾನರಿಗೆ ಯಾವ ರೀತಿ ಅವರ ಧರ್ಮದ ಪ್ರಸಾರ ಮಾಡುವುದು, ರಕ್ಷಣೆ ಮಾಡುವುದು ಇವುಗಳಿಗಾಗಿ ವಿದೇಶದಿಂದ ನಿಧಿ, ಧರ್ಮಬಾಂಧವರಿಂದ ಬಹಳಷ್ಟು ಆರ್ಥಿಕ ಮತ್ತು ಇತರ ಸಹಾಯ ದೊರಕುತ್ತದೋ, ಆ ರೀತಿ ಹಿಂದೂಗಳ ಪಾಲಿಗೆ ಬರುವುದಿಲ್ಲ. ಆದುದರಿಂದ ಧರ್ಮಕಾರ್ಯವನ್ನು ಮಾಡಲು ತಮ್ಮ ಕುಟುಂಬದ, ಉತ್ಪನ್ನದ ವಿಚಾರ ಮಾಡದೇ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಅವರಿಗೆ ಕಾರ್ಯ ಮಾಡಬೇಕಾಗುತ್ತದೆ. ಇಂತಹ ಹಿಂದುತ್ವನಿಷ್ಠರು ಅಪರೂಪವಾಗಿರುತ್ತಾರೆ. ಕಮಲೇಶ ತಿವಾರಿಯವರು ಅವರ ಪೈಕಿ ಒಬ್ಬರಾಗಿದ್ದರು. ಕಮಲೇಶ ತಿವಾರಿಯವರು ೨೦೧೫ ನೇ ಇಸವಿಯಲ್ಲಿ ಆಝಮ್ ಖಾನ್ ಇವರ ಸಂಘ ಮತ್ತು ಹಿಂದೂ ಧರ್ಮ ಇವುಗಳ ವಿರುದ್ಧದ ಹೇಳಿಕೆಯ ಬಗ್ಗೆ ಮಾತನಾಡುವಾಗ ಪೈಗಂಬರ್ ಇವರ ವಿರುದ್ಧ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಆರೋಪವಿತ್ತು. ಆದುದರಿಂದ ಅವರಿಗೆ ೯ ತಿಂಗಳು ಸೆರೆಮನೆಯಲ್ಲಿಯೂ ಇರಬೇಕಾಯಿತು. ಆ ಬಗ್ಗೆ ಬಿಜನೌರದ ಉಲೆಮಾ ಅನವಾರೂಲ್ ಹಕ್ ಮತ್ತು ಮುಫ್ತಿ ನಯೀಮ್ ಕಾಸಿಮ್ ಇವರು ಪ್ರಸಾರವಾಹಿನಿಗಳ ಎದುರೇ ಕಮಲೇಶ ತಿವಾರಿಯವರ ರುಂಡ ಮತ್ತು ಮುಂಡವನ್ನು ಬೇರ್ಪಡಿಸುವ ಬೆದರಿಕೆಯೊಡ್ಡಿದ್ದರು. ಇವರಿಬ್ಬರೂ ಅದಕ್ಕಾಗಿ ಒಂದೂವರೆ ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದರು. ಮುಸಲ್ಮಾನ ಸಂಘಟನೆಗಳು ರಸ್ತೆಗಿಳಿದು ಆಕ್ರಮಕವಾಗಿ ನಿಷೇಧವನ್ನು ವ್ಯಕ್ತಪಡಿಸಿದ್ದವು. ಒಬ್ಬ ಚಿಕ್ಕ ಮುಸಲ್ಮಾನ ಹುಡುಗನ ವಿಡಿಯೋ ಪ್ರಸಾರ ಮಾಡಲಾಗಿತ್ತು. ಇದರಲ್ಲಿ ಆ ಹುಡುಗನು ‘ತಿವಾರಿಯವರಿಗೆ ಬೆದರಿಕೆ ಹಾಕುತ್ತಿದ್ದಾನೆ, ಎಂಬ ಚಿತ್ರಣವಿತ್ತು.

ವ್ಯಾಪಕ ಒಳಸಂಚು !

ಎಮ್‌ಐಎಮ್ ಅಸಾದುದ್ದೀನ್ ಓವೈಸಿ ಇವರು ಒಂದು ಸಭೆಯಲ್ಲಿ ಕಮಲೇಶ ತಿವಾರಿ ಇವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ತಿವಾರಿ ಇವರ ಹತ್ಯೆಯ ಪ್ರಕರಣದಲ್ಲಿ ೫ ಮತಾಂಧರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಇಮಾಮ್ ಇದ್ದಾರೆ. ಮತಾಂಧರ ಪೈಕಿ ಅಶಫಾಕ್ ಇವನು ರೋಹಿತ ಸೋಲಂಕಿ ಹೆಸರಿನಿಂದ ನಕಲಿ ಫೇಸಬುಕ್ ಖಾತೆಯನ್ನು ತೆರೆದು ಕಮಲೇಶ ತಿವಾರಿ ಇವರೊಂದಿಗೆ ಮೈತ್ರಿ ಮಾಡಿಕೊಂಡಿದ್ದನು. ಹತ್ಯೆಯಾದ ದಿನ ಸಂಬಂಧಿಕರು ಕಮಲೇಶ ತಿವಾರಿ ಇವರನ್ನು ಭೇಟಿಯಾಗಿ ಅವರೊಂದಿಗೆ ಚಹಾ ಸೇವಿಸಿದ್ದರು ಮತ್ತು ನಂತರ ಅವರ ಹತ್ಯೆ ಮಾಡಿದರು. ತಿವಾರಿ ಇವರಿಗೆ ಮಿಠಾಯಿಯನ್ನು ನೀಡುವ ನೆಪದಿಂದ ಒಂದು ಪೆಟ್ಟಿಗೆಯಲ್ಲಿ ಆಯುಧಗಳನ್ನು ತಂದ ಬಗ್ಗೆ ಪ್ರಾಥಮಿಕ ಮಾಹಿತಿಯಿದೆ. ಈ ಸಮಯದಲ್ಲಿ ತಿವಾರಿ ಇವರಿಗೆ ಭೇಟಿಯಾಗಲು ಬಂದ ಮತಾಂಧರು ಕೇಸರಿ ಬಟ್ಟೆಗಳನ್ನು ತೊಟ್ಟಿದ್ದರು. ಅವರು ಕೆಲವು ತಿಂಗಳುಗಳಿಂದ ತಿವಾರಿ ಇವರ ಪಕ್ಷದಲ್ಲಿ ಕಾರ್ಯ ಮಾಡುತ್ತಿರುವಂತೆ ಸೋಗು ಹಾಕಿ ಸಂಪರ್ಕದಲ್ಲಿದ್ದಾರೆಂಬ ಮಾಹಿತಿಯೂ ಇದೆ. ಇದರಿಂದ ಮತಾಂಧರ ಸಿದ್ಧತೆ ಗಮನಕ್ಕೆ ಬರುತ್ತದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರತ ಕೆಲವು ಮತಾಂಧರು ತಿವಾರಿಯವರ ಹತ್ಯೆಯ ನಂತರ ಆನಂದ ವ್ಯಕ್ತಪಡಿಸಿದರು. ಅಸಾದುದ್ದಿನ ಓವೈಸಿ ಇವರು ‘ಮಿಯಾಭಾಯೀ, ಮಿಯಾಭಾಯೀ, ಈ ಹಾಡಿಗೆ ಕುಣಿದು ಆನಂದ ವ್ಯಕ್ತಪಡಿಸುವ ವಿಡಿಯೋ ಭಿತ್ತರವಾಗಿದೆ. ಯಾವುದೋ ಒಂದು ಅಭಿಯಾನವು ಯಶಸ್ವಿಯಾದಂತೆ ಅವರ ವರ್ತನೆಯಿತ್ತು. ಆಝಮಗಢನ ಮುಸಲ್ಮಾನರು ವಿಜಯದ ಆನಂದವನ್ನು ವ್ಯಕ್ತಪಡಿಸುತ್ತಾ ಮಿಠಾಯಿಯನ್ನು ಹಂಚಿದ ಬಗ್ಗೆ ವಾರ್ತೆ ಇದೆ. ಮತಾಂಧರು ‘ಇದು ಕೇವಲ ಟ್ರೆಲರ್ ಆಗಿದೆ, ಚಲನಚಿತ್ರ ಇನ್ನೂ ಬಾಕಿಯಿದೆ, ಎಂಬ ಹೇಳಿಕೆಯನ್ನು ನೀಡಿದ ಬಗ್ಗೆ ಮಾಹಿತಿಯು ಸಹ ಇದೆ. ಉತ್ತರಪ್ರದೇಶದ ಪೊಲೀಸರು ಇದರ ತನಿಖೆ ಮಾಡುತ್ತಿದ್ದಾರೆ. ಇಂತಹ ಜನಸಮೂಹವು ಭಾರತೀಯ ಸಮಾಜದ ಒಂದು ಘಟಕವಾಗಿದೆ, ಎಂಬುದು ದುರ್ದೈವವಾಗಿದೆ. ಅವರ ಈ ಕೃತಿಗಳಿಂದ ಭಾರತದಲ್ಲಿನ ಹಿಂದೂಗಳು ಎಷ್ಟು ಅಸುರಕ್ಷಿತರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅಬ್ದುಲ ರಝ್ಝಾಕ್ ಖಾನ್ ಈ ಮೌಲ್ವಿಯು ‘ಟೈಮ್ಸ್ ನೌ ವಾಹಿನಿಯಲ್ಲಿನ ಚರ್ಚಾಕೂಟದಲ್ಲಿ ತಿವಾರಿಯವರ ಹತ್ಯೆಯನ್ನು ಖಂಡಿಸುವುದು ದೂರದ ಮಾತಾಯಿತು, ‘ಅವರು ಮೃತ್ಯುವಿಗೆ ಪಾತ್ರರಾಗಿದ್ದರು, ಎಂಬ ಖೇದಕರ ಹೇಳಿಕೆಯನ್ನು ನೀಡಿದರು. ತಿವಾರಿ ಇವರ ಹತ್ಯೆಯ ನಂತರ ‘ಪುರಸ್ಕಾರ ವಾಪಸಿ ಗ್ಯಾಂಗ್ ಮತ್ತು ಪ್ರಗತಿ(ಅಧೋಗತಿ)ಪರರು, ಮುಸಲ್ಮಾನರಿಗೆ ಸ್ವಲ್ಪ ತರಚಿದ ಗಾಯವಾದರೂ ಆಕಾಶಪಾತಾಳ ಒಂದು ಮಾಡುವವರು, ಈಗ ತುಟಿಬಿಚ್ಚುತ್ತಿಲ್ಲ. ತಿವಾರಿ ಇವರ ಹತ್ಯೆಗೆ ಸಂಬಂಧಿಸಿದ ಎಲ್ಲ ಮತಾಂಧರು ಮತ್ತು ತದನಂತರ ಶಾಂತವಾಗಿರುವ ಈ ಎಲ್ಲರ ಬಗ್ಗೆ ಸಂದೇಹದ ಹಲ್ಲಿಯು ಲೋಚಗುಟ್ಟುತ್ತದೆ. ವಿಚಾರವಂತರ ಪೈಕಿ ಯಾರೂ ಒಂದು ಶಬ್ದದಲ್ಲಿ ಖಂಡಿಸಲಿಲ್ಲ. ಸಾಮಾನ್ಯವಾಗಿ ಗುಂಪು ಹತ್ಯೆಯನ್ನು ಮಾಡಿದ ನಂತರ ‘ದೇಶದಲ್ಲಿ ಅಸಹಿಷ್ಣುತೆ ಇದೆ, ಎಂದು ಭಾಸಿಸಲಾಗುತ್ತದೆ. ತದ್ವಿರುದ್ಧ ಮಹಮ್ಮದ ಪೈಗಂಬರ್ ಇವರ ಬಗ್ಗೆ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ ಪ್ರಕರಣದಲ್ಲಿ ಬರ್ಬರವಾಗಿ ಹತ್ಯೆಗೀಡಾದರೂ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಅಲ್ಲದೇ ಹಿಂದೂಗಳನ್ನೇ ಅಸಹಿಷ್ಣುಗಳೆಂದು ತಿರ್ಮಾನಿಸಲಾಗುತ್ತದೆ. ತಿವಾರಿ ಇವರ ವಕೀಲರಾದ ವಿಷ್ಣು ಶಂಕರ ಜೈನ ಇವರು ‘ಯಾವ ವರ್ತಮಾನಪತ್ರಿಕೆಯು ತಿವಾರಿ ಇವರ ಹೇಳಿಕೆಯನ್ನು ಮುದ್ರಿಸಿತ್ತೋ ಅದೇ ಒಂದು ದೊಡ್ಡ ಒಳಸಂಚಾಗಿತ್ತು. ಅವರ ಮೂಲ ಹೇಳಿಕೆ ಯಾರ ಕಡೆಗೂ ಲಭ್ಯವಿರಲಿಲ್ಲ, ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಅಂದರೆ ಇದರ ಮೂಲವು ಎಲ್ಲಿಯ ವರೆಗಿದೆ, ಎಂದು ಗಮನಕ್ಕೆ ಬರುತ್ತದೆ. ತಿವಾರಿ ಅವರು ಸೆರೆಮನೆಯಲ್ಲಿರುವಾಗಿನಿಂದ ಇವರ ಜೀವಕ್ಕೆ ಅಪಾಯವಿದ್ದರೂ, ಪೊಲೀಸರು ಮತ್ತು ಆಡಳಿತವು ಅವರ ರಕ್ಷಣೆಯ ಕಾಳಜಿಯನ್ನು ಏಕೆ ವಹಿಸಲಿಲ್ಲ ? ಉತ್ತರಪ್ರದೇಶದ ಪೊಲೀಸ್ ಮಹಾಸಂಚಾಲಕರು ‘ಆಕ್ಷೇಪಾರ್ಹ ಹೇಳಿಕೆಯಿಂದಾಗಿ ತಿವಾರಿಯವರ ಹತ್ಯೆಯಾಯಿತು, ಎಂಬ ಪ್ರಾಥಮಿಕ ಮಾಹಿತಿಯನ್ನು ನೀಡುವಾಗ ಹೇಳಿದ್ದಾರೆ. ಪೊಲೀಸರಿಂದ ಆವಶ್ಯಕವಿರುವ ಸಂರಕ್ಷಣೆ ಪೂರೈಸಲಾಗಲಿಲ್ಲ, ಎಂದು ತಿವಾರಿಯವರೇ ಓರ್ವ ಹಿಂದುತ್ವನಿಷ್ಠರೊಂದಿಗೆ ಮಾತನಾಡುವಾಗ ಹೇಳಿದ್ದರು. ತಿವಾರಿಯವರಿಗೆ ತಮಗಿರುವ ಅಪಾಯದ ಪೂರ್ಣ ಕಲ್ಪನೆಯಿತ್ತು. ಆದುದರಿಂದಲೇ ಅವರು ಪೊಲೀಸರಿಗೆ ಸೂಚಿಸಿದ್ದರು; ಆದರೆ ಪೊಲೀಸರು-ಆಡಳಿತವು ಅವರಿಗೆ ಸಂರಕ್ಷಣೆ ಪೂರೈಸಲು ವಿಫಲರಾದರು.

ಇತರ ಹಿಂದುತ್ವನಿಷ್ಠರಿಗೆ ಅಪಾಯ

ತಿವಾರಿ ಇವರ ಹತ್ಯೆ ಮಾಡಿ ಬಹುಸಂಖ್ಯಾತ ಹಿಂದೂಗಳಿಗೆ ಒಂದು ಸಂದೇಶವನ್ನು ನೀಡುವ ಪ್ರಯತ್ನ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಕೆಲವು ದಿನಗಳಲ್ಲಿ ಒಟ್ಟು ೩ ಹಿಂದುತ್ವನಿಷ್ಠರ ಹತ್ಯೆಯಾಗಿದೆ. ಅವರಲ್ಲಿ ಇಬ್ಬರು ಭಾಜಪದ ಪದಾಧಿಕಾರಿಗಳಾಗಿದ್ದರು. ‘ಬಿಗ್ ಬಾಸ್ನಲ್ಲಿನ ಅಶ್ಲೀಲತೆಯ ವಿರುದ್ಧ ಮುಂಬೈಗೆ ಬಂದು ವಿರೋಧಿಸುವ ಉತ್ತರ ಪ್ರದೇಶದ ಉಪದೇಶ ರಾಣಾ ಹೆಸರಿನ ಹಿಂದುತ್ವನಿಷ್ಠರಿಗೆ ‘ಈಗ ನಿನ್ನ ಸರದಿ, ಎಂಬ ಬೆದರಿಕೆ ಕರೆ ಬಂದಿದೆ. ಅದೇ ರೀತಿ ಸುದರ್ಶನ ವಾಹಿನಿಯ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆ ಇವರಿಗೂ ಬೆದರಿಕೆ ನೀಡುವ ವಿಡಿಯೋ ಸಿಕ್ಕಿದೆ. ದೇಶದಲ್ಲಿ ಹಿಂದೂಗಳ, ಹಿಂದೂ ಸಂಘಟನೆಗಳ ಸಂಖ್ಯೆ ಹೆಚ್ಚಿರುವಾಗಲೂ ಕೇವಲ ವ್ಯಾಪಕ ಸಂಘಟನೆಯ ಅಭಾವದಿಂದಾಗಿ ಹಿಂದೂಗಳು ಬಲಹೀನರಿದ್ದಾರೆ ಎಂದೆನಿಸುತ್ತದೆ. ಮತಾಂಧರು ಇದರ ಲಾಭವನ್ನು ಪಡೆದು ಅವರು ಹಿಂದುತ್ವನಿಷ್ಠರನ್ನು ಹೆಕ್ಕಿ ಹೆಕ್ಕಿ ಹತ್ಯೆ ಮಾಡುತ್ತಾರೆ. ಆದುದರಿಂದ ಪರಿಣಾಮಕಾರಿ ಹಿಂದೂ ಸಂಘಟನೆಯೇ ಮತ್ತು ಆಧ್ಯಾತ್ಮಿಕ ಉಪಾಸನೆಯೇ ಹಿಂದೂಗಳ ಸಂರಕ್ಷಣಾಕವಚವಾಗುವುದು, ಇದರಲ್ಲಿ ಸಂದೇಹವೇ ಇಲ್ಲ !