ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಜಯಂತ ಆಠವಲೆ

೧. ನಿಜವಾದ ಸುಖ ಕೇವಲ ಸಾಧನೆಯಿಂದಲೇ ಸಿಗುತ್ತದೆ, ಭ್ರಷ್ಟ ಮಾರ್ಗದಿಂದ ಗಳಿಸಿದ ಹಣದಿಂದಲ್ಲ.

೨. ಯಾವುದಾದರೂ ಭೌತಿಕ ಶೋಧನೆಗಾಗಿ ವಿಜ್ಞಾನಿಗಳಿಗೆ ವರ್ಷಾನುವರ್ಷ ಸಂಶೋಧನೆಯನ್ನು ಮಾಡಬೇಕಾಗುತ್ತದೆ ಮುಂದೆ ಇತರ ವಿಜ್ಞಾನಿಗಳು ಅದರಲ್ಲಿ ಬದಲಾವಣೆಯನ್ನೂ ಮಾಡುತ್ತಾರೆ. ತದ್ವಿರುದ್ಧ ಋಷಿಮುನಿಗಳು ಸೂಕ್ಷ್ಮದಿಂದ ಪಡೆದ ಜ್ಞಾನದಿಂದಾಗಿ ಅದರ ಸಂಶೋಧನೆಯನ್ನು ಮಾಡಬೇಕಾಗಿರದೇ ಕ್ಷಣದಲ್ಲಿ ಸೂಕ್ಷ್ಮಾತೀಸೂಕ್ಷ್ಮದ ಎಲ್ಲ ಪ್ರಶ್ನೆಗಳ ಉತ್ತರವು ಸಿಗುತ್ತದೆ ಮತ್ತು ಅದು ಅಂತಿಮ ಸತ್ಯವಾಗಿರುವುದರಿಂದ ಯಾರಿಗೂ ಅದರಲ್ಲಿ ಬದಲಾವಣೆಯನ್ನು ಮಾಡಲು ಬರುವುದಿಲ್ಲ.

೩. ನಮಗೆ ದೇವರ ಸಹಾಯವು ಏಕೆ ಸಿಗುತ್ತಿಲ್ಲ ?, ಇದನ್ನು ಹಿಂದೂಗಳು ವಿಚಾರ ಮಾಡಬೇಕು ಮತ್ತು ಸಹಾಯ ಸಿಗುವುದಕ್ಕಾಗಿ ಸಾಧನೆಯನ್ನು ಆರಂಭಿಸಬೇಕು.

೪. ಶಾಲೆಯಿಂದ ಪದವ್ಯೋತ್ತರ ಶಿಕ್ಷಣದ ವರೆಗೆ ಯಾವುದೇ ಶಿಕ್ಷಣದಲ್ಲಿ ಮನುಷ್ಯತ್ವವನ್ನು ಕಲಿಸದಿರುವುದರಿಂದ ಪ್ರತಿಯೊಂದು ಕ್ಷೇತ್ರದಲ್ಲಿ ಜನರನ್ನು ದೋಚುವ ವ್ಯಾಪಾರಿಗಳು ಮತ್ತು ನೌಕರಿ ಮಾಡುವ ಕೆಲಸಗಾರರು ತಯಾರಾಗಿದ್ದಾರೆ.

೫. ‘ಪೃಥ್ವಿಯ ಮೇಲಿನ ಕೆಲಸಗಳು ಸಹ ಯಾರ ಪರಿಚಯವಿಲ್ಲದೆ ಆಗುವುದಿಲ್ಲ, ಹಾಗಿದ್ದರೆ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಅಡಚಣೆಗಳು ದೇವರ ಪರಿಚಯವಿಲ್ಲದೇ ದೇವರು ಬಗೆಹರಿಸುವನೇ ? – (ಪರಾತ್ಪರ ಗುರು) ಡಾ. ಆಠವಲೆ