ಮಂಗಳೂರಿನ ಮಾಲ್‌ನಲ್ಲಿ ‘ಹಿಂದೂ ರಾಷ್ಟ್ರ’ ಈ ವಿಷಯದ ಬಗ್ಗೆ ಮಾತನಾಡಿದ ಹಿಂದೂ ಯುವಕನ ಮೇಲೆ ಮೂವರು ಮತಾಂಧರಿಂದ ಹಲ್ಲೆ !

ರಾಜ್ಯದ ಒಂದು ನಗರದಲ್ಲಿ ಹಿಂದೂಗಳು ತಮ್ಮ ನ್ಯಾಯಯುತ ಹಕ್ಕಿನ ಬಗ್ಗೆ ಮಾತನಾಡಿದರೆ, ಮತಾಂಧರಿಗೆ ಹೊಟ್ಟೆ ಉರಿಯುತ್ತದೆ ! ಇದರ ಅರ್ಥ ಭಾರತದಲ್ಲಿ ಅಲ್ಲಲ್ಲಿ ‘ಸಣ್ಣ ಪಾಕಿಸ್ತಾನ’ಗಳು ನಿರ್ಮಾಣವಾಗಿರುವಂತೆ ಗೋಚರಿಸುತ್ತಿದೆ. ಮುಂದೆ ಹಿಂದೂಗಳಿಗೆ ಹಿಂದೂವಾಗಿ ಉಳಿಯಲೂ ಕಷ್ಟವಾಗುವ ಮೊದಲೇ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಮಾಡಲು ಹಿಂದೂಗಳು ಪ್ರಯತ್ನಿಸಬೇಕು !

ಮಂಗಳೂರು – ಇಲ್ಲಿ ಒಂದು ಮಾಲಿನಲ್ಲಿ ಮಂಜನಾಥ ಎಂಬ ಹಿಂದೂ ಯುವಕನು ಹಿಂದೂ ರಾಷ್ಟ್ರ ತರುವ ಬಗ್ಗೆ ಹೇಳಿಕೆಯನ್ನು ನೀಡಿದ್ದರಿಂದ ಆತನಿಗೆ ಮೊಯಿನುದ್ದೀನ್ ಸವಫಾನ, ಅಬ್ದುಲ್ ರಹಿಮ್ ಮತ್ತು ಮತ್ತೊಬ್ಬ ಮತಾಂಧನು ಹಲ್ಲೆ ಮಾಡಿದರು. ಪೊಲೀಸರು ಸವಫಾನ ಮತ್ತು ಅಬ್ದುಲ್‌ನನ್ನು ಬಂಧಿಸಿದರು. ಹಿಂದೂ ಯುವಕನ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಿತ್ತರವಾಗಿದೆ.

ಮಂಗಳೂರಿನಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆ ಖಂಡನೀಯ ! – ಹಿಂದೂ ಜನಜಾಗೃತಿ ಸಮಿತಿ

‘ಮಂಗಳೂರಿನ ಪಾಂಡೇಶ್ವರದ ಫೋರಮ್ ಪಿಜ್ಜಾ ಮಾಲ್‌ನಲ್ಲಿ ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದಕ್ಕಾಗಿ ಶ್ರೀ. ಮಂಜುನಾಥ ಶೆಣೈ ಎನ್ನುವವರ ಮೇಲೆ ಮತಾಂಧ ಯುವಕರ ಗುಂಪು ಹಲ್ಲೆ ಮಾಡಿದ್ದು ಅತ್ಯಂತ ಖಂಡನೀಯ. ಇಂದು ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ ಮುಸಲ್ಮಾನರಿಗೆ ಹಿಂದೂಗಳ ತೆರಿಗೆ ಹಣದಲ್ಲಿ ಹಜ್ಜ ಸಬ್ಸಿಡಿ, ಅವರ ಮದರಸಾಗಳಲ್ಲಿ ನಮ್ಮದೇ ತೆರಿಗೆ ಹಣದಲ್ಲಿ ಕುರಾನ್ ಕಲಿಸುವುದು, ಹಜ್ಜ ಭವನ ಮುಸ್ಲಿಂ ರಾಷ್ಟ್ರಗಳಲ್ಲಿ ಇಲ್ಲದಂತಹ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಯಾವುದೇ ಹಿಂದೂಗಳು ವಿರೋಧಿಸಿಲ್ಲ. ಆದರೆ ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಹಿಂದೂಗಳು ಭಾರತವನ್ನು ಹಿಂದೂ ರಾಷ್ಟ್ರ ಎಂದು ಹೇಳಿದ ಕೂಡಲೇ ಅವರ ಮೇಲೆ ಹಲ್ಲೆ ಮಾಡುವುದು ಹಿಂದೂಗಳು ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದಕ್ಕೆ ಇದು ನಿರ್ದಶಕವಾಗಿದೆ. ಭಾರತ ಒಂದು ಸ್ವಯಂಭೂ ಹಿಂದೂ ರಾಷ್ಟ್ರ. ಅದನ್ನು ಹೇಳುವ ಹಕ್ಕು ಹಿಂದೂಗಳಿಗಿಲ್ಲದಿರುವುದು ಮತ್ತು ಅದನ್ನು ಹೇಳಿದ ವ್ಯಕ್ತಿಗಳ ಮೇಲೆ ಹಲ್ಲೆ, ಹತ್ಯೆ ಮಾಡಲು ಪ್ರಯತ್ನಿಸುವುದು ಭಾರತ ಇಸ್ಲಾಮಿಕ್ ರಾಷ್ಟ್ರವಾಗುವ ಭಯ ಕಾಣುತ್ತಿದೆ’, ಎಂದು ಹಿಂದೂ ಜನಜಾಗೃತಿ ಸಮಿತಿ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಬಹುಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಮಾಡುವ ಮತಾಂಧ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸ ಬೇಕು ಮತ್ತು ಪೀಡಿತನಿಗೆ ಭದ್ರತೆ ನೀಡಬೇಕೆಂದು ಸಹ ಸಮಿತಿಯು ಆಗ್ರಹಿಸಿದೆ.