೨೦೦೫ ರಿಂದ ೨೦೧೨ ಈ ೭ ವರ್ಷಗಳ ಅವಧಿಯಲ್ಲಿ ೪ ಸಾವಿರ ಕ್ರೈಸ್ತ ಯುವತಿಯರು ‘ಲವ್ ಜಿಹಾದ್’ಗೆ ಬಲಿ !

ಉಗ್ರವಾದಿ ಚಟುವಟಿಕೆಗಳಿಗಾಗಿ ಕ್ರೈಸ್ತ ಯುವತಿಯರನ್ನು ಬಳಸಲಾಗುತ್ತದೆ ! – ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದಿಂದ ಕೇಂದ್ರೀಯ ಗೃಹಸಚಿವಾಲಯಕ್ಕೆ ಪತ್ರ

ಇಷ್ಟು ದೊಡ್ಡ ಪ್ರಮಾಣದಲ್ಲಿ ಘಟನೆಗಳು ನಡೆಯುತ್ತಿದ್ದರೂ ಒಂದೇ ಒಂದು ಕ್ರೈಸ್ತ ಸಂಘಟನೆ ಮತ್ತು ಚರ್ಚ್ ಈ ವಿಷಯದಲ್ಲಿ ಏಕೆ ಧ್ವನಿಯೆತ್ತುವುದಿಲ್ಲ ?

‘ಪ್ರೇಮದ ವಿಷಯದಲ್ಲಿ ಉದ್ದೇಶಪರ‍್ವಕವಾಗಿ ‘ಲವ್ ಜಿಹಾದ್’ ಎಂದು ಹೇಳಲಾಗುತ್ತದೆ’ ಎಂದು ಹೇಳುತ್ತಾ ಲವ್ ಜಿಹಾದ್‌ದನ್ನು ವಿರೋಧಿಸುವ ಹಿಂದೂ ಸಂಘಟನೆಗಳನ್ನು ವಿರೋಧಿಸುವವರು ಈಗ ತುಟಿಬಿಚ್ಚುವರೇ ?

ನವ ದೆಹಲಿ – ಉಗ್ರವಾದಿ ಚಟುವಟಿಕೆಗಳಿಗಾಗಿ ಕ್ರೈಸ್ತ ಯುವತಿಯರನ್ನು ಉಪಯೋಗಿಸಲಾಗುತ್ತದೆ, ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಜಾರ್ಜ್ ಕುರಿಯನ್ ಇವರು ಕೇಂದ್ರೀಯ ಗೃಹಮಂತ್ರಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅವರು ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ವಿಭಾಗದ ಮೂಲಕ (ಎನ್‌ಐಎ) ವಿಚಾರಣೆ ಮಾಡಬೇಕೆಂದು ವಿನಂತಿಸಿದ್ದಾರೆ. ಆಯೋಗವು ಬರೆದಿರುವ ಪತ್ರದಲ್ಲಿ ಹೇಳಲಾಗಿದೆಯೇನೆಂದರೆ, ಕೇರಳದಲ್ಲಿ ಕ್ರೈಸ್ತ ಯುವತಿಯರು ‘ಲವ್ ಜಿಹಾದ್’ಗೆ ಸಹಜವಾಗಿ ಬಲಿಯಾಗುತ್ತಿದ್ದಾರೆ. ಕ್ರೈಸ್ತ ಯುವತಿಯರು ಇಸ್ಲಾಮ್ ಧರ್ಮಿಯರಿಗೆ ಒಂದು ‘ಸಾಫ್ಟ್ ಟರ‍್ಗೆಟ್’ ಆಗಿದ್ದಾರೆ. ಕೇರಳದ ಬಿಶಪ್ ಕೆಥಾಲಿಕ್ ಕಾನ್ಫರೆನ್ಸ್ ಈ ವಿಷಯದಲ್ಲಿ ಒಂದು ವರದಿಯನ್ನು ತಯಾರಿಸಿದೆ. ಈ ವರದಿಗನುಸಾರ ೨೦೦೫ ರಿಂದ ೨೦೧೨ ಈ ೭ ವರ್ಷಗಳ ಅವಧಿಯಲ್ಲಿ ೪ ಸಾವಿರ ಕ್ರೈಸ್ತ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗಿದ್ದಾರೆ. ಇವರೆಲ್ಲರನ್ನೂ ಪ್ರೇಮಜಾಲದಲ್ಲಿ ಸಿಲುಕಿಸಿ ನಂತರ ಅವರನ್ನು ಮುಸಲ್ಮಾನರನ್ನಾಗಿ ಮಾಡಲಾಯಿತು. ಹೆಚ್ಚಿನ ಪ್ರಕರಣಗಳಲ್ಲಿ ಈ ಯುವತಿಯರ ಬುದ್ಧಿಭ್ರಮಣೆ ಮಾಡಲಾಗಿದೆ.’ ಈ ಅಪಾಯಕಾರಿ ಕೃತ್ಯವನ್ನು ತಡೆಯುವ ಅವಶ್ಯಕತೆಯಿದೆ. ಈಗ ಇಸ್ಲಾಮೀ ಮತಾಂಧರಿಂದ ನಡೆಯುವ ಮತಾಂತರದ ಆಂದೋಲನವನ್ನು ತಡೆಗಟ್ಟಲು ಕಾನೂನು ರೂಪಿಸುವ ಕಾಲ ಬಂದಿದೆ. ಅದೇ ರೀತಿ ಇಂತಹ ಪ್ರಕರಣಗಳನ್ನು ಎನ್.ಐ.ಎ. ಮೂಲಕ ವಿಚಾರಣೆ ಮಾಡುವ ಅವಶ್ಯಕತೆಯಿದೆ.