ಚಿದಂಬರಮ್‌ರವರ ‘ಹಿಂದೂ ಭಯೋತ್ಪಾದನೆಯ’ ಅಪರಾಧ !

ಭಾವೂ ತೋರಸೇಕರ

ಕೆಲವು ತುಲನಾತ್ಮಕ ಅಂಶಗಳು !

೨೦೦೮ ರಲ್ಲಿ ನಡೆದ ೩೦೫ ಕೋಟಿ ರೂಪಾಯಿಗಳ ‘ಐಎನ್‌ಎಕ್ಸ್ ಮೀಡಿಯಾ’ ಭ್ರಷ್ಟಾಚಾರದ ಹಗರಣದಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಮ್‌ರವರು ಸಿಲುಕಿದ್ದಾರೆ. ಈ ಹಗರಣದಲ್ಲಿ ಇತ್ತೀಚೆಗೆ ಅವರನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಿದಂಬರಮ್ ರವರು ತನಿಖಾ ದಳ ಮತ್ತು ನ್ಯಾಯ ವ್ಯವಸ್ಥೆಯನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಂಡು ‘ಹಿಂದೂ ಭಯೋತ್ಪಾದನೆ’ಯ ಪೆಡಂಭೂತವನ್ನು ನಿರ್ಮಿಸಿದ ಬಗ್ಗೆ ಹಿರಿಯ ಪತ್ರರ‍್ತರಾದ ಭಾವೂ ತೋರಸೇಕರ ಇವರ ಗಮನ ಸೆಳೆಯುವ ಲೇಖನವನ್ನು ಇಲ್ಲಿ ಗೌರವಾದರಗಳೊಂದಿಗೆ ಪ್ರಕಟಿಸುತ್ತಿದ್ದೇವೆ. ಲೇಖನದ ಮೂಲಕ ಮಾಡಲಾಗಿರುವ ಮಾರ್ಮಿಕ ವಿಶ್ಲೇಷಣೆಯಿಂದ ಚಿದಂಬರಮ್‌ರವರ ಹಿಂದೂದ್ವೇಷ ಮತ್ತು ಸೇಡುಬುದ್ಧಿಯ ರಾಜಕಾರಣ ಸ್ಪಷ್ಟವಾಗುವುದು.

೧. ಹಿಂದೂ ಭಯೋತ್ಪಾದನೆಯನ್ನು ಸಾಬೀತುಪಡಿಸಲು ತನಿಖಾ ದಳಗಳ ದುರುಪಯೋಗ ‘ಸಂವಿಧಾನಬದ್ಧ’ ?

ಸ್ವಾಮಿ ಅಸೀಮಾನಂದರನ್ನು ಹೊಡೆದುಬಡಿದು, ಅವರಿಂದ ತಪ್ಪೊಪ್ಪಿಗೆಯ ಹೇಳಿಕೆಯನ್ನು ಪಡೆದುಕೊಂಡಿದ್ದರಿಂದ ಕರ್ನಲ್ ಪುರೋಹಿತ ಮತ್ತು ಸಾಧ್ವಿ ಪ್ರಜ್ಞಾಸಿಂಗ ಠಾಕೂರ ಇವರಿಗೆ ಜಾಮೀನು ಪಡೆಯಲು ಅವಕಾಶ ನೀಡದೆ ೮-೧೦ ವರ್ಷಗಳ ವರೆಗೆ ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು; ಆಗ ಕಾಂಗ್ರೆಸ್ಸಿನೊಂದಿಗೆ ಪ್ರಗತಿಪರ ಬುದ್ಧಿ ಜೀವಿಗಳ ವಿವೇಕಬುದ್ಧಿ ಎಲ್ಲಿ ಹೋಗಿತ್ತು ? ಚಿದಂಬರಮ್‌ರವರು ೧೬ ತಿಂಗಳುಗಳ ಕಾಲ ಜಾಮೀನಿನ ಪರದೆಯಡಿ ತಿರುಗಾಡುತ್ತಿದ್ದರು. ಆ ಸೌಲಭ್ಯ ಪುರೋಹಿತ ಅಥವಾ ಸಾಧ್ವಿಯವರಿಗೆ ದೊರೆಕಿತ್ತೇ ? ಆಗ ದೇಶದಲ್ಲಿ ಕಾನೂನಿನ ರಾಜ್ಯ ನಡೆದಿತ್ತೋ ಅಥವಾ ಜಾಮೀನ ನೀಡುವ-ನಿರಾಕರಿಸುವ ನ್ಯಾಯಾಲಯಗಳ ಮತ್ತು ತನಿಖಾ ದಳಗಳ ಆಡಳಿತ ನಡೆದಿತ್ತೋ ? ಆಗ ಯಾವ ಸೇಡಿನ ರಾಜಕಾರಣ ನಡೆದಿತ್ತು ? ಮಾಲೇಗಾವ್ ಸ್ಫೋಟ ಪ್ರಕರಣಕ್ಕೆ ೧೨ ವರ್ಷಗಳು ಉರುಳಿದರೂ, ಪ್ರಕರಣದ ದೋಷಾರೋಪಪಟ್ಟಿಯನ್ನು ಸಿದ್ಧಪಡಿಸಲು ಏಕೆ ಸಾಧ್ಯವಾಗಲಿಲ್ಲ ? ಅದರಲ್ಲಿ ಮುಖ್ಯ ಶಂಕಿತರಾಗಿ ಗೃಹಸಚಿವ ಚಿದಂಬರಮ್‌ರವರೇ ಇದ್ದರಲ್ಲ ? ಹಿಂದೂ ಭಯೋತ್ಪಾದನೆಯನ್ನು ಸಿದ್ಧಪಡಿಸಲು ತನಿಖಾ ದಳಗಳ ದುರುಪಯೋಗ ‘ಸಂವಿಧಾನಬದ್ಧ’ವಾಗಿರುತ್ತದೆಯೇ ?

೨. ಸೇಡುಬುದ್ಧಿ ಕೃತ್ಯದ ಬಹುದೊಡ್ಡ ಪುರಾವೆ !’

ಕರ್ನಲ್ ಪುರೋಹಿತ ಇವರು ಭಾರತೀಯ ಸೈನ್ಯದಲ್ಲಿನ ಒಬ್ಬ ಜವಾಬ್ದಾರಿಯುತ ಕರ್ತವ್ಯನಿಷ್ಠ ಸೇನಾಧಿಕಾರಿಯಾಗಿದ್ದರು. ಅವರಿಗೆ ದಯೆ ತೋರಿಸಿಲಾಯಿತೇ ? ಇಂದು ಚಿದಂಬರಮ್‌ರವರ ಸಮಾಜದಲ್ಲಿನ ಗೌರವ ಪ್ರತಿಷ್ಠೆಯ ಡಂಗುರ ಸಾರುವವರಿಗೆ ಕರ್ನಲ್ ರವರು ಒಬ್ಬ ಕುಖ್ಯಾತ ಅಪರಾಧಿಯೆಂದು ಅನಿಸಿತ್ತೇ ? ಅವರು ಸಿಬಿಐ ಅಥವಾ ಇತರ ತನಿಖಾ ದಳದವರು ಮನೆ ಬಾಗಿಲಿಗೆ ಬಂದಾಗ ಬಾಗಿಲನ್ನು ಮುಚ್ಚಿ ಬಿಲದಲ್ಲಿ ಅಡಗಿ ಕುಳಿತಿರಲಿಲ್ಲ. ಪೊಲೀಸರು ಅಥವಾ ತನಿಖಾ ದಳದವರ ಅತ್ಯಂತ ಅಮಾನವೀಯ ವರ್ತನೆಯನ್ನು ಕೂಡ ಅವರು ಸುಮ್ಮನೇ ಸಹಿಸಿಕೊಂಡರು. ಆದರೂ ನ್ಯಾಯಾಲಯವು ಅವರಿಗೆ ಜಾಮೀನು ನೀಡಲು ತುಂಬಾ ಸಮಯ ತೆಗೆದುಕೊಂಡಿತು; ಬಹುತೇಕ ಕಾಂಗ್ರೆಸ್ ಮತ್ತು ಚಿದಂಬರಮ್ ಇವರ ಸೇಡಿನ ನೀತಿಯ ಬಗ್ಗೆ ನ್ಯಾಯಾಲಯಕ್ಕೆ ನಾಚಿಕೆಯೆನಿಸಿ ಕರ್ನಲ್ ನವರಿಗೆ ಜಾಮೀನು ನೀಡಿತು. ಆಗಿನ ಸರ್ವೋಚ್ಛ ನ್ಯಾಯಾಲಯದ ಅಭಿಪ್ರಾಯವೇ ಸೇಡಿನ ಬಹುದೊಡ್ಡ ಪುರಾವೆಯಾಗಿದೆ. ‘ಯಾವುದೋ ಸಮಾಜವನ್ನು ಖುಷಿಪಡಿಸಲು ಒಬ್ಬ ನಾಗರಿಕನಿಗೆ ಅನಿರ್ದಿಷ್ಟವರೆಗೆ ಜಾಮೀನು ನಿರಾಕರಿಸಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಹೇಳಿತ್ತು. ಈ ಕುಕರ್ಮದ ಆರೋಪಿ ಗೃಹಸಚಿವ ಎಂದು ಚಿದಂಬರಮ್‌ರವರೇ ಇದ್ದರು.

೩. ಶಾಹರಿಂದ ಚಿದಂಬರಮ್ ವರೆಗೆ !

ಗುಂಡಿನ ಚಕಮಕಿಯಲ್ಲಿ ಮರಣ ಹೊಂದಿದ ಸೋಹ್ರಾಬುದ್ದೀನ ಅಥವಾ ಇಶ್ರತ್ ಜಹಾಂ ಇವರ ಹತ್ಯೆಯ ಆರೋಪವನ್ನು ಗುಜರಾತಿನ ಅಂದಿನ ಗೃಹಸಚಿವರಾಗಿದ್ದ ಅಮಿತ ಶಾಹರ ಮೇಲೆ ಹೊರಿಸಲು ಯಾವ ತನಿಖಾ ದಳ ಮತ್ತು ನ್ಯಾಯ ವ್ಯವಸ್ಥೆಯನ್ನು ಉಪಯೋಗಿಸಲಾಗಿತ್ತೋ, ಅದನ್ನೇ ಇಂದು ಚಿದಂಬರಮ್‌ರವರಿಗೆ ಬಡ್ಡಿ ಸಮೇತ ಹಿಂದಿರುಗಿಸುವಂತೆ ಮಾಡಿದೆಯಲ್ಲವೇ ? ಇಂದಿನ ಆರ್ಥಿಕ ಹಗರಣ ೧೦ ವರ್ಷಗಳಷ್ಟು ಹಳೆಯದ್ದಾಗಿದ್ದರೂ, ಗುಜರಾತ ಘರ್ಷಣೆಯ ಪ್ರಕರಣವೂ ಹಳೆಯದೇ ಆಗಿದೆ. ಇತ್ತೀಚೆಗಷ್ಟೇ ಮರಣ ಹೊಂದಿದ ನ್ಯಾಯಮೂರ್ತಿ ಲೋಯಾರವರ ಮೃತ್ಯುವನ್ನು ಬಂಡವಾಳ ಮಾಡಿಕೊಂಡು ಯಾವ ಹುಗಿದಿರುವ ಶವವನ್ನು ಹೊರತೆಗೆಯಲಾಗಿತ್ತು ? ಆಗ ಅದರಲ್ಲಿ ಯಾವ ವಿವಿಧ ವಾಹಿನಿಗಳು ಮತ್ತು ಮಾಧ್ಯಮಗಳು ಪರಿಶುದ್ಧ ರಾಜಕಾರಣ ನಡೆಸುತ್ತಿದ್ದವು ? ಅಮಿತ ಶಾಹರನ್ನು ಆರೋಪಿಯನ್ನಾಗಿ ಮಾಡಿ ೮ ತಿಂಗಳು ಜೈಲಿನಲ್ಲಿ ಬಂಧಿಸಿಟ್ಟಿದ್ದರು, ಅದರಲ್ಲಿ ಯಾವ ಪುರಾವೆಗಳು ಅಥವಾ ಸಾಕ್ಷಿಗಳು ನ್ಯಾಯಾಲಯಕ್ಕೆ ಒಪ್ಪಿಗೆಯಾದವು ?

೪. ನ್ಯಾಯವ್ಯವಸ್ಥೆ ಮತ್ತು ತನಿಖಾ ದಳಗಳ ದುರುಪಯೋಗ !

ಗುಜರಾತಿನ ಅಂದಿನ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿಯವರನ್ನು ೮ ಗಂಟೆಗಳ ಕಾಲ ವಿಶೇಷ ತನಿಖಾ ದಳವು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ದಿಗಿಲು ಹುಟ್ಟಿಸಿತ್ತು. ಗುಜರಾತ ಗಲಭೆಯ ಆರೋಪ ಇಂದಿಗೂ ಮುಂದುವರಿದಿದೆ. ಇಂತಹ ನೂರಾರು ಆರೋಪಗಳ ಪುರಾವೆಗಳು ಎಂದಾದರೂ ಮುಂದೆ ಬಂದಿವೆಯೇ ? ಹಿಂದೂ ಭಯೋತ್ಪಾದನೆಯ ಚರ್ಚೆಯನ್ನು ಮಾಡುವವರು ಎಂದಾದರೂ ಪುರಾವೆಗಳನ್ನು ತಂದಿದ್ದಾರೆಯೇ ? ಆದರೆ ಇದೇ ನ್ಯಾಯವ್ಯವಸ್ಥೆ ಮತ್ತು ತನಿಖಾ ದಳಗಳನ್ನು ಸೇಡುಬುದ್ಧಿಯಿಂದ ಉಪಯೋಗಿಸಿ ಪೀಡಿಸಿದರಲ್ಲವೇ ? ಶಿವರಾಜ ಪಾಟೀಲರು ಯಾವ ಇಶ್ರತ್‌ಳನ್ನು ‘ತೋಯಬಾ’ ಎಂದು ಸಂಸತ್ತಿನಲ್ಲಿ ಹೇಳಿದ್ದರೋ, ಅವಳನ್ನೇ ನಿರಪರಾಧಿಯೆಂದು ತೋರಿಸಲು ಚಿದಂಬರಮ್‌ರವರು ಎಷ್ಟೆಲ್ಲ ಕಾಗದಪತ್ರಗಳಲ್ಲಿ ಎಷ್ಟೆಲ್ಲ ಬದಲಾವಣೆಗಳನ್ನು ಮಾಡಿದರು ? ಅದಕ್ಕಾಗಿ ಎಷ್ಟು ಹಿರಿಯ ಪೊಲೀಸ್ ಮತ್ತು ಇತರ ಅಧಿಕಾರಿಗಳ ಬಲಿ ತೆಗೆದುಕೊಂಡರು ? ಗುಪ್ತಚರ ವಿಭಾಗ ಮತ್ತು ಗುಜರಾತಿನ ೧೨ ಕ್ಕಿಂತ ಹೆಚ್ಚು ಪೊಲೀಸ್ ಅಧಿಕಾರಿಗಳ ಜೀವನವನ್ನೇ ಹಾಳು ಮಾಡುವಾಗ ಚಿದಂಬರಮ್‌ರವರು ದೇಶಕ್ಕೆ ಏನು ಒಳಿತು ಮಾಡಿದರು ? ಅವರು ಪ್ರತಿಸಲವೂ ದೇಶದ ನ್ಯಾಯವ್ಯವಸ್ಥೆ ಮತ್ತು ತನಿಖಾ ದಳಗಳ ಕೇವಲ ದುರುಪಯೋಗವನ್ನೇ ಮಾಡಿದ್ದಾರೆ ?

೫. ಪುರೋಹಿತ ಮತ್ತು ಚಿದಂಬರಮ್‌ರಿಗಾಗಿ ಬೇರೆ ಬೇರೆ ಕಾನೂನು ಮತ್ತು ಬೇರೆ ಬೇರೆ ನ್ಯಾಯವ್ಯವಸ್ಥೆ ಹೇಗೆ ?

ಚಿದಂಬರಮ್ ಮತ್ತು ಇತರರಲ್ಲಿ ಒಂದು ಮೂಲಭೂತ ವ್ಯತ್ಯಾಸವಿದೆ. ಕರ್ನಲ್, ಸಾಧ್ವಿ, ಅಮಿತ ಶಾಹ ಇವರಲ್ಲಿ ಯಾರೂ ತಪ್ಪಿ ಕೂಡ ನಾಟಕ ಮಾಡಲಿಲ್ಲ. ಅವರಲ್ಲಿ ಯಾರೂ ತನಿಖಾ ದಳದವರು ಮನೆಬಾಗಿಲಿಗೆ ಬಂದಾಗ ಅಡಗಿ ಕುಳಿತುಕೊಳ್ಳಲಿಲ್ಲ. ಜಾಮೀನು ನಿರಾಕರಿಸಿದರೆಂದು ಓಡಿ ಹೋಗಲಿಲ್ಲ. ಕೇವಲ ಚಿದಂಬರಮ್ ಮಾತ್ರ ‘ಪವಿತ್ರ’ ಮತ್ತು ‘ಗೌರವಾನ್ವಿತ’ ಗೃಹಸ್ಥರಾಗಿದ್ದಾರೆ, ಪೊಲೀಸರು ತಮ್ಮ ಮನೆಗೆ ಬರುತ್ತಾರೆ ಎಂಬುದು ತಿಳಿದ ಕೂಡಲೇ ಅವರ ಬೆವರಿಳಿಯಿತು. ಈ ಮನುಷ್ಯ ವಿಜಯ ಮಲ್ಯಾ ಮತ್ತು ನೀರವ ಮೋದಿಯವರಂತೆ ತಮ್ಮ ಸಂಚಾರವಾಣಿಯನ್ನು ಸ್ಥಗಿತಗೊಳಿಸಿ ಓಡಿ ಹೋದರು. ತಮ್ಮ ವಾಹನ ಚಾಲಕ ಮತ್ತು ಸಹಾಯಕರನ್ನು ಮಧ್ಯದಲ್ಲಿಯೇ ಎಲ್ಲಿಯೋ ಬಿಟ್ಟು ೨೭ ಗಂಟೆಗಳ ವರೆಗೆ ನಾಪತ್ತೆಯಾದರು. ಇಡೀ ದೇಶವು ಚಿದಂಬರಮ್‌ರವರ ‘ಪುರುಷಾರ್ಥ’ದ ನಿರೀಕ್ಷೆ ಮಾಡುತ್ತಿರುವಾಗ ಈ ಸ್ವಾತಂತ್ರ್ಯದ ರಕ್ಷಕರು ನಾಪತ್ತೆಯಾಗಿದ್ದರು. ಸರ್ವೋಚ್ಛ ನ್ಯಾಯಾಲಯದಿಂದ ಜಾಮೀನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರ ಒಬ್ಬರಿಗಿಂತ ಒಬ್ಬ ಹೆಸರಾಂತ ಸಹೋದ್ಯೋಗಿ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಅತಿಆಸೆಯಿಂದ ಓಡಾಡುತ್ತಿದ್ದರು. ನಿನ್ನೆಯವರೆಗೆ ಯಾರು ಕರ್ನಲ್ ಅಥವಾ ಸಾಧ್ವಿಯವರನ್ನು ಪುರಾವೆಗಳಿಲ್ಲದೇ ಅಥವಾ ಆರೋಪಗಳಿಲ್ಲದೇ ಕಾರಾಗೃಹಕ್ಕೆ ತಳ್ಳಲು ತಮ್ಮ ಬುದ್ಧಿಯನ್ನು ಖರ್ಚು ಮಾಡಿದ್ದರೋ; ಅವರೇ ‘ಜಾಮೀನು ನಮ್ಮ ಜನ್ಮಸಿದ್ಧ ಅಧಿಕಾರವಾಗಿದೆ’ ಎನ್ನುವ ಯುಕ್ತಿವಾದ ಮಾಡಲು ಪ್ರಯತ್ನಿಸುತ್ತಿದ್ದರು. ಜನರಿಗೆ ಇದೆಷ್ಟು ಮನೋರಂಜನೆ ಕೊಟ್ಟಿರಬಹುದಲ್ಲವೇ ? ಈ ದೇಶದಲ್ಲಿ ಪುರೋಹಿತ ಮತ್ತು ಚಿದಂಬರಮ್‌ರಿಗಾಗಿ ಬೇರೆ ಬೇರೆ ಕಾನೂನು ಮತ್ತು ನ್ಯಾಯವ್ಯವಸ್ಥೆ ಇದೆಯೇ ?

೬. ಪ್ರಗತಿಪರರ ‘ಸಭ್ಯತೆ’ ಮತ್ತು ಸುಸಂಸ್ಕೃತತೆ’ !

ಉಚ್ಚ ನ್ಯಾಯಾಲಯವೇ ಅನೇಕ ಸಲ ಕರ್ನಲ್ ರವರ ಜಾಮೀನು ನಿರಾಕರಿಸಿತು. ಸರ್ವೋಚ್ಛ ನ್ಯಾಯಾಲಯವೂ ಕರ್ನಲ್ರ ಜಾಮೀನು ನಿರಾಕರಿಸಿತು. ಆದರೆ ಅವರು ಎಂದಿಗೂ ನ್ಯಾಯಾಲಯದ ಮೇಲೆ ಸಂದೇಹ ವ್ಯಕ್ತಪಡಿಸಲಿಲ್ಲ. ಇದಕ್ಕೆ ‘ಸಭ್ಯತೆ’ ಎನ್ನುತ್ತಾರೆ. ಲಾಲೂ ಪ್ರಸಾದ ಯಾದವರನ್ನೂ ಚಿದಂಬರಮ್‌ರವರಿಗಿಂತ ಸಭ್ಯರು ಎಂದು ಹೇಳುವ ಪ್ರಮೇಯ ಬಂದಿದೆ. ಏಕೆಂದರೆ ಲಾಲೂ ಕೂಡ ಎಂದಿಗೂ ಬಂಧನದ ಪ್ರಸಂಗ ಬಂದಾಗ ಅಡಗಿ ಕುಳಿತುಕೊಳ್ಳಲಿಲ್ಲ ಅಥವಾ ಓಡಿ ಹೋಗುವ ನಾಟಕವಾಡಲಿಲ್ಲ. ನ್ಯಾಯಾಲಯದಿಂದ ಚಿದಂಬರಮ್ ಓಡಿ ಹೋದರು ಮತ್ತು ತಮ್ಮ ಸುಳಿವು ಸಿಗಬಾರದೆಂದು ಅವರು ತಮ್ಮ ಸಂಚಾರಿವಾಣಿಯನ್ನು ಸ್ಥಗಿತಗೊಳಿಸಿದ್ದರು. ಇದರ ವಿರುದ್ಧ ಲಾಲೂರವರ ಸಭ್ಯತೆಯನ್ನು ನೋಡಿರಿ. ತಮ್ಮ ಜಾಮೀನಿನ ಅವಧಿ ಮುಗಿದು, ಶಿಕ್ಷೆಯ ಸಮಯ ಬಂದಾಗ ಲಾಲು ಪಾಟ್ನಾದಿಂದ ರಾಂಚಿ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾದರು. ತದ್ವಿರುದ್ಧ ಚಿದಂಬರಮ್ ರವರು ಉಚ್ಚ ನ್ಯಾಯಾಲಯ ಜಾಮೀನು ನಿರಾಕರಿಸಿತು ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಸಮಾಧಾನ ಸಿಗಲಿಲ್ಲವೆಂದು ನಾಪತ್ತೆಯಾದರು. ಅವರು ತಮ್ಮ ಮನೆಗೆ ಹೋಗಲಿಲ್ಲ ಹಾಗೂ ಎಲ್ಲಿಯೂ ಅವರ ಸುಳಿವು ಸಿಗುತ್ತಿರಲಿಲ್ಲ. ಇದನ್ನು ಪ್ರಗತಿಪರರ ಭಾಷೆಯಲ್ಲಿ ‘ಸಭ್ಯತೆ’ ಎನ್ನುತ್ತಾರೆ. ಇದು ಇಂದು ಪ್ರಗತಿಪರರ ಸುಸಂಸ್ಕೃತಿಯಾಗಿದೆ. ಇದಕ್ಕೆ ಕಾನೂನಿನ ಪಾಲನೆ ಎನ್ನುತ್ತಾರೆ. ಸ್ವಲ್ಪದರಲ್ಲಿ ಹೇಳುವುದಾದರೆ, ನಾಚಿಕೆಗೇಡಿತನವನ್ನು ಇಂದು ಮರ್ಯಾದೆಯೆಂದು ಸಂಬೋಧಿಸುವ ಸಂಕಟ ಪ್ರಗತಿಪರರಿಗೆ ಬಂದಿದೆ. ಸುದೈವದಿಂದ ದೇಶದ ಸಾಮಾನ್ಯ ಜನತೆ ಇಂದಿಗೂ ಅಷ್ಟು ಬುದ್ಧಿವಾದಿಗಳಾಗಿಲ್ಲ ಆದುದರಿಂದ ದೇಶ ಸುರಕ್ಷಿತವಾಗಿದೆ.

೭. ಚಿದಂಬರಮ್ ವಿಚಾರಣೆಗೆ ೧೦ ವರ್ಷಗಳ ವಿಳಂಬವೇಕೆ ?

‘ಐಎನ್‌ಎಕ್ಸ್ ಮೀಡಿಯಾ’ ಭ್ರಷ್ಟಾಚಾರ ಪ್ರಕರಣವು ೨೦೦೮ ರಲ್ಲಿ ನಡೆಯಿತು ಮತ್ತು ತನಿಖೆ ೨೦೧೭ ರಲ್ಲಿ ಪ್ರಾರಂಭವಾಯಿತು. ಇಷ್ಟು ವರ್ಷಗಳ ವರೆಗೆ ‘ಸಿಬಿಐ’ (ಕೇಂದ್ರೀಯ ತನಿಖಾ ದಳ) ಅಥವಾ ‘ಈಡಿ’

(ಜಾರಿ ನಿರ್ದೇಶನಾಲಯ) ನಿದ್ರೆಯನ್ನು ಮಾಡುತ್ತಿತ್ತೇ ? ಎಷ್ಟು ವಾಸ್ತವದ ಪ್ರಶ್ನೆಯಾಗಿದೆಯಲ್ಲ ? ಇದರಲ್ಲಿ ೨೦೧೪ ರ ವರೆಗೆ ಸಿಬಿಐ ಅಥವಾ ಈಡಿಯ ಮೇಲೆ ಯಾರ ಅಧಿಕಾರ ನಡೆಯುತ್ತಿತ್ತು ? ೨೦೦೮ ರಿಂದ ೨೦೧೪ ರ ವರೆಗೆ ಈಡಿ ಅಥವಾ ಸಿಬಿಐ ನಿದ್ರೆಯನ್ನು ಮಾಡುತ್ತಿದ್ದವು, ಏಕೆಂದರೆ ಅವರಿಗೆ ಹಣಕಾಸು ಸಚಿವ ಅಥವಾ ಗೃಹಸಚಿವರಾಗಿದ್ದ ಚಿದಂಬರಮ್ ಜೋಗುಳವನ್ನು ಹಾಡುತ್ತಿದ್ದರು. ಎಷ್ಟು ವಿಷಾದದ ವಿಷಯವಾಗಿದೆಯಲ್ಲ ? ಆ ಎರಡು ಶಿಶುಗಳನ್ನು ನಿದ್ರೆಯಿಂದ ಎಬ್ಬಿಸಿ ಕೆಲಸ ಮಾಡುವಂತೆ ಮಾಡುವುದು ! ಆಗಲಾದರೋ ಚಿದಂಬರಮ್‌ರು ಸಿಬಿಐ ಮೂಲಕ ಕರ್ನಲ್ ಮತ್ತು ಸಾಧ್ವಿಯವರನ್ನು ‘ಹಿಂದೂ ಭಯೋತ್ಪಾದಕರು’ ಎಂದು ಸಾಬೀತು ಪಡಿಸಲು ಮಗ್ನರಾಗಿದ್ದರು. ತಮ್ಮ ಅಧಿಕಾರ ಅಥವಾ ಬುದ್ಧಿಗನುಸಾರ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಚಿದಂಬರಮ್‌ರವರು ಯಾವ ಖಾತೆ ಅಥವಾ ವಿಭಾಗಕ್ಕೆ ನೀಡಿದ್ದರೇ ? ನೀಡಿದ್ದರೆ, ಮೂಲದಲ್ಲಿಯೇ ಈ ಪ್ರಕರಣವು ಅವರ ಮೇಲೆ ಬರುತ್ತಿರಲೇ ಇಲ್ಲ.

೮. ಆರ್ಥಿಕ ಅಪರಾಧಿಗಳ ಮುಖ್ಯಸ್ಥನಾಗಿರುವ ಸಾಕ್ಷಿ ?

‘ರೇನಕೋಟ ಧರಿಸಿ ಮನಮೋಹನ ಸಿಂಗರು ಸ್ನಾನ ಮಾಡುತ್ತಿದ್ದರು’, ಈ ಮೋದಿಯವರ ಶಬ್ದ ಅನೇಕರಿಗೆ ಚುಚ್ಚಿತ್ತು. ಅದರ ಅರ್ಥವು ಈಗ ಇದರಿಂದ ಹೊರಗೆ ಬರಬಹುದು. ‘ಚೌಕಿದಾರ ಚೋರ ಹೈ’ ಎಂದು ಕಳೆದ ವರ್ಷವಿಡೀ ರಾಹುಲ ಏಕೆ ಬೊಬ್ಬೆ ಹೊಡೆಯುತ್ತಿದ್ದರು ಎಂಬುದರ ಅರ್ಥವೂ ಈಗ ಹೊರಗೆ ಬರಬಹುದು. ಅಧಿಕಾರ ಕೈಗೆ ಬಂದಾಗ ದೇಶವನ್ನು ಲೂಟಿ ಮಾಡುವುದಿರುತ್ತದೆ. ಹಾಗೂ ಮೋದಿ ಸರಕಾರದ ಕಾಲದಲ್ಲಿ ಯಾರಿಗೂ ಹಾಗೆ ಮಾಡಲು ಸಾಧ್ಯವಾಗದ ಕಾರಣ, ಕಳ್ಳರಿಗೆ ಅದೇ ‘ಕಳ್ಳತನ’ ಎನಿಸುವುದೆಲ್ಲವೇ ? ಚಿದಂಬರಮ್ ರವರು ದೇಶದ ಗೌರವಾನ್ವಿತರ ಮುಖಕ್ಕೆ ಮಸಿ ಬಳಿದಿದ್ದಾರೆ. ಏಕೆಂದರೆ ಇಂದಿನವರೆಗೆ ಅವರಷ್ಟು ಅತ್ಯುನ್ನತ ಹುದ್ದೆಯನ್ನು ಹೊಂದಿರುವವರಿಗೆ ನ್ಯಾಯಾಲಯವು ಜಾಮೀನ ನಿರಾಕರಿಸಿದಾಗ ಸಾಮಾನ್ಯ ಅಪರಾದಿಗಳಂತೆ ಓಡಿ ಹೋಗುತ್ತಿರಲಿಲ್ಲ ಅಥವಾ ಅವರ ಶೋಧಕ್ಕಾಗಿ ಹೀಗೆ ಡಜನ್‌ಗಟ್ಟಲೆ ಪೊಲೀಸ ಸಿಬ್ಬಂದಿಗಳನ್ನು ನೇಮಿಸಬೇಕಾಗುತ್ತಿರಲಿಲ್ಲ. ಒಬ್ಬ ನಿಪುಣ ಅಪರಾಧಿಯಂತೆ ಚಿದಂಬರಮ್ ನಡೆದುಕೊಂಡರು ಮತ್ತು ಅವರ ‘ಮೋಡಸ್ ಆಪರೆಂಡಿ’ ಮಲ್ಯ ಅಥವಾ ನೀರವ ಮೋದಿ ಅಂತಹವರೊಂದಿಗೆ ಹೊಂದಾಣಿಕೆಯಾಗುತ್ತಿದೆ. ಇದಕ್ಕೆ ಯೋಗಾಯೋಗವೆನ್ನಲು ಸಾಧ್ಯವಿಲ್ಲ. ತಮ್ಮ ಕೃತಿಯಿಂದ ಓಡಿ ಹೋಗಿರುವ ಆ ದಿವಾಳಿಖೋರ ಆರ್ಥಿಕ ಅಪರಾಧಿಗಳ ಹಿರಿಯಣ್ಣನೆನ್ನುವಂತೆ ಚಿದಂಬರಮ್ ತೋರಿಸಿಕೊಟ್ಟಿದ್ದಾರೆ.

೯. ಸಿಬ್ಬಲ್-ಸಿಂಘವಿ ಇವರಿಂದಲೇ ಆಗಿರುವ ಚಿದಂಬರಮ್‌ರವರ ದೈನ್ಯಾವಸ್ಥೆ !

ಕೊನೆಯ ಅಂಶ ! ಮಂಗಳವಾರ ಮಧ್ಯಾಹ್ನ ಮೂರುವರೆಯ ಸಮಯದಲ್ಲಿ ದೆಹಲಿ ನ್ಯಾಯಾಲಯವು ಚಿದಂಬರಮ್‌ರವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು ಮತ್ತು ಅದರ ಮೇಲೆ ಅಪೀಲು ಮಾಡಲು ಅವರ ಸಹೋದ್ಯೋಗಿಯಾಗಿರುವ ಕಪಿಲ ಸಿಬ್ಬಲ್‌ರು ಸರ್ವೊಚ್ಚ ನ್ಯಾಯಾಲಯಕ್ಕೆ ಧಾವಿಸಿದರು. ಇದು ಒಂಟೆಯ ಬೆನ್ನು ಮೇಲಿನ ಕಡ್ಡಿಯಾಗಿತ್ತು. ಇತ್ತೀಚೆಗೆ ಸಿಂಘವಿ ಮತ್ತು ಸಿಬ್ಬಲ್ ಇವರು ಪ್ರತಿಯೊಂದು ಕಾನೂನಿನ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯದಲ್ಲಿ ನಿರಂತರವಾಗಿ ಸೋಲನ್ನು ಅನುಭವಿಸಿದ್ದಾರೆ. ಬಹುತೇಕ ಹೊರಿಸಲಾಗಿರುವ ಆರೋಪದ ಅಪರಾಧಕ್ಕಿಂತ ಚಿದಂಬರಮ್‌ರವರು ತಮ್ಮ ಪರವಾಗಿ ನ್ಯಾಯವಾದಿಗಳನ್ನು ನಿಯುಕ್ತಿಗೊಳಿಸುವಲ್ಲಿ ಬಹುದೊಡ್ಡ ತಪ್ಪು ಮಾಡಿದ್ದಾರೆ. ಸಿಬ್ಬಲ್ ರನ್ನು ಸರ್ವೊಚ್ಚ ನ್ಯಾಯಾಲಯಕ್ಕೆ ಕಳುಹಿಸುವುದೆಂದರೆ ಜಾಮೀನು ಸಿಗದ ಹಾಗೆ ಮಾಡುವುದು ಎಂಬಂತಾಗಿದೆ. ಇತ್ತೀಚೆಗೆ ಸರ್ವೊಚ್ಚ ನ್ಯಾಯಾಲಯದಲ್ಲಿ ಸಿಬ್ಬಲ್‌ರವರ ವರ್ತನೆ ಹೇಗಿದೆಯೆಂದರೆ ಅವರನ್ನು ಹೊರದೂಡುವುದರಲ್ಲಿಯೇ ನ್ಯಾಯಮೂರ್ತಿಗಳ ಒಲವಿರುತ್ತದೆ. ಇಂತಹ ಮನುಷ್ಯನು ಚಿದಂಬರಮ್‌ರವರ ರಕ್ಷಣೆಗೆ ಬರುವುದರಿಂದಲೇ ಅವರ ತೊಂದರೆಗಳು ಭಯಾನಕವಾಗಿದ್ದವು. ಇನ್ನು ಮುಂದೆಯೂ ಸಿಬ್ಬಲ್- ಸಿಂಘವೀಯವರೇ ಚಿದಂಬರಮ್‌ರವರ ಪರವಾಗಿ ವಾದಿಸುವ ಸಾಧ್ಯತೆಯಿರುವುದರಿಂದ ಈಗ ಯಾರೂ ಈ ಮಾಜಿ ಅರ್ಥಮಂತ್ರಿ-ಗೃಹಮಂತ್ರಿಯನ್ನು ರಕ್ಷಿಸಲು ಸಾಧ್ಯವಿಲ್ಲ. – ಶ್ರೀ. ಭಾವೂ ತೋರಸೆಕರ, ಹಿರಿಯ ಪತ್ರರ‍್ತರು, ಮುಂಬಯಿ.