ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಭಾವಪರ‍್ಣ ವಾತಾವರಣದಲ್ಲಿ ನೆರವೇರಿದ `ಪಂಚಮಹಾಭೂತ ಯಜ್ಞ’

ಸನಾತನ ಆಶ್ರಮ, ರಾಮನಾಥಿ (ಗೋವಾ) – ‘ಪರಾತ್ಪರ ಗುರು ಡಾ. ಜಯಂತ ಆಠವಲೆಯವರಿಗೆ ಧೀರ್ಗಯುಷ್ಯಲಭಿಸಬೇಕು, ಪಂಚಮಹಾ ಭೂತಗಳ ಪ್ರಕೋಪದಿಂದ ಸಾಧಕರ ರಕ್ಷಣೆಯಾಗಬೇಕು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕು’ ಎಂಬುದಕ್ಕಾಗಿ ಪ.ಪೂ. ಆಬಾ ಉಪಾಧ್ಯೆ ಇವರ ಆಜ್ಞೆಯಂತೆ ೧೨ ಸಪ್ಟೆಂಬರ್ ೨೦೧೯ ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಭಾವಪೂರ್ಣ ವಾತಾವರಣದಲ್ಲಿ ‘ಪಂಚಮಹಾಭೂತ ಯಜ್ಞ’ವನ್ನು ಮಾಡಲಾಯಿತು. ಈ ಯಜ್ಞದ ಪೌರೋಹಿತ್ಯವನ್ನು ಸನಾತನ ಪುರೋಹಿತ ಪಾಠಶಾಲೆಯ ಸಂಚಾಲಕ ಶ್ರೀ.ದಾಮೋದರ ವಝೆ ಗುರೂಜಿ ಮತ್ತು ಸನಾತನ ಪುರೋಹಿತ ಪಾಠ ಶಾಲೆಯ ಪುರೋಹಿತರು ಮಾಡಿದರು. ಆರಂಭದಲ್ಲಿ ಸನಾತನದ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಯಜ್ಞದ ಸಂಕಲ್ಪ ಮಾಡಿದರು. ೫ ಕಳಶಗಳ ಮೇಲಿನ ಬೆಳ್ಳಿಯ ಪ್ರತಿಮೆಗಳಲ್ಲಿ ಪಂಚತತ್ತ್ವಗಳ ಆವಾಹನೆ ಮತ್ತು ಪೂಜೆ ಮಾಡಲಾಯಿತು. ಅನಂತರ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚಮಹಾಭೂತಗಳಿಗೆ ಹವನ ಮಾಡಲಾಯಿತು. ಯಜ್ಞವು ಪೂರ್ಣಾಹುತಿಯೊಂದಿಗೆ ಮುಕ್ತಾಯವಾಯಿತು. ಈ ಯಜ್ಞಕ್ಕೆ ಸನಾತನದ ಸಂತರು ಹಾಗೂ ಆಶ್ರಮದ ಸಾಧಕರು ಉಪಸ್ಥಿತರಾಗಿದ್ದರು.