ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

೧. ಎಲ್ಲಿ ‘ಕುಟುಂಬ ಅಥವಾ ಜಾತಿಬಾಂಧವರ ಹಿತವನ್ನು ನೋಡುವ ಸಂಕುಚಿತ ವೃತ್ತಿಯ ಮನುಷ್ಯರು ಮತ್ತು ಎಲ್ಲಿ ಅನಂತ ಕೋಟಿ ಬ್ರಹ್ಮಾಂಡದ ಪ್ರಾಣಿಮಾತ್ರರ ಹಿತವನ್ನು ಕಾಪಾಡುವ ಈಶ್ವರ’.

೨. ‘ಮಾನವೀಯತೆಯನ್ನು ಕಲಿಸುವ ಸಾಧನೆಯನ್ನು ಬಿಟ್ಟು ಎಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣನೀತಿಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ’.

೩. ‘ರಾಜಕೀಯ ಪಕ್ಷಗಳು ‘ಇದನ್ನು ಕೊಡುತ್ತೇವೆ ಅದನ್ನು ಕೊಡುತ್ತೇವೆ’, ಎಂದು ಹೇಳಿ ಜನತೆಯನ್ನು ಸ್ವಾರ್ಥಿ ಮತ್ತು ಕೊನೆಗೆ ದುಃಖದಲ್ಲಿರುತ್ತವೆ. ತದ್ವಿರುದ್ಧ ಸಾಧನೆಯು ನಿಧಾನವಾಗಿ ಸರ್ವಸ್ವದ ತ್ಯಾಗವನ್ನು ಮಾಡಲು ಕಲಿಸಿ ಚಿರಂತನವಾಗಿರುವ ಆನಂದದ ಈಶ್ವರಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳುವುದು ಎಂದು ಕಲಿಸುತ್ತದೆ’.

೪. ‘ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲ ಶ್ರೇಷ್ಠವಾಗಿದ್ದರೂ ಹಿಂದೂಗಳು ಸಾಧನೆಯನ್ನು ಮರೆತಿರುವುದರಿಂದ ಚಿಟಿಕೆಯಷ್ಟಿರುವ ಮತಾಂಧರು ಮತ್ತು ಆಂಗ್ಲರು ಕೆಲವೇ ವರ್ಷಗಳಲ್ಲಿ ಇಡೀ ಭಾರತದಲ್ಲಿ ರಾಜ್ಯವಾಳಿದರು ! ಹೀಗೆ ಪುನಃ ಆಗಬಾರದೆಂದು ಹಿಂದೂಗಳು ಸಾಧನೆಯನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ’. – (ಪರಾತ್ಪರ ಗುರು) ಡಾ. ಆಠವಲೆ