ಆಪತ್ಕಾಲದಲ್ಲಿ ಪಂಚಮಹಾಭೂತಗಳ ಆರಾಧನೆಯ ಮಹತ್ವ

ಪ.ಪೂ. ಆಬಾ ಉಪಾಧ್ಯೆ

ಸಂಪೂರ್ಣ ಸೃಷ್ಟಿ ಮತ್ತು ಮಾನವಪ್ರಾಣಿಗಳು ಪಂಚಮಹಾಭೂತಗಳ ತತ್ತ್ವದಿಂದಲೇ ನಿರ್ಮಾಣವಾಗಿವೆ. ಅನೀತಿಯಿಂದಾಗಿ ಪಂಚಮಹಾಭೂತಗಳು ತಮ್ಮ ಶಾಂತಿಯನ್ನು ಬಿಟ್ಟು ರೌದ್ರ ರೂಪಗಳನ್ನು ತೋರಿಸಲು ಆರಂಭಿಸಿವೆ; ಆದ್ದರಿಂದ ಭೂಕಂಪ, ಅತಿಪ್ರಳಯ, ನೆರೆ ಹಾವಳಿ, ಸುನಾಮಿ, ಬರಗಾಲ ಇತ್ಯಾದಿ ಘಟನೆಗಳು ಪದೇ ಪದೇ ಘಟಿಸುತ್ತಿವೆ. ಅನೇಕ ಜನರು ಈ ಆಪತ್ತುಗಳಿಗೆ ಬಲಿಯಾಗುತ್ತಿದ್ದಾರೆ. ಇವೆಲ್ಲ ಲಕ್ಷಣಗಳೆಂದರೆ ಪೃಥ್ವಿಯ (ಮಾನವಪ್ರಾಣಿಗಳ) ನಾಶದ ನಾಂದಿಯಾಗಿದೆ. ಇದಕ್ಕಾಗಿ ನಾವು ಇತರ ದೇವತೆಗಳ ಹಾಗೆಯೆ ಪಂಚಮಹಾಭೂತಗಳ ಆರಾಧನೆಯನ್ನು ಮಾಡುವುದೂ ಆವಶ್ಯಕವಾಗಿದೆ. – ಪ.ಪೂ. ಸದಾನಂದ ಮಹಾರಾಜ (ಪ.ಪೂ. ಆಬಾ ಉಪಾಧ್ಯೆ ಇವರ ಮೂಲಕ)