Rest in peace (RIP) ಇದರ ನಿಜವಾದ ರ‍್ಥವನ್ನು ತಿಳಿಯಿರಿ !

೧. ಹುಟ್ಟಿನಿಂದಲೇ ಆಂಗ್ಲರ ಗುಲಾಮರಾಗಿರುವ ಭಾರತೀಯರು !

`ಇತ್ತೀಚೆಗೆ ಯಾರಾದರೂ ಮೃತಪಟ್ಟರೆ ನಮ್ಮಲ್ಲಿ RIP ಎಂದು ಬರೆದು ಶ್ರದ್ಧಾಂಜಲಿಯನ್ನು ಸಲ್ಲಿಸುವ ಪದ್ಧತಿ ಪ್ರಾರಂಭವಾಗಿದೆ. ಅಂದರೆ ವಿದ್ವಾಂಸರು-ಸಾಹಿತಿಗಳು ಕೂಡ ಈ `ಫ್ಯಾಶನ್‍ಗೆ ಬಲಿ’ಯಾಗಿದ್ದಾರೆ. ನಾವೆಷ್ಟು `ಭಯಾನಕ’ವಾಗಿ ಬರೆಯುತ್ತಿದ್ದೇವೆ, ಎಷ್ಟು `ವಿನಾಶಕಾರಿ’ ಮಾತನಾಡುತ್ತಿದ್ದೇವೆ, ಎಂಬ ಬಗ್ಗೆ ಯಾರಿಗೂ ಏಕೆ ಏನೂ ಅನಿಸುವುದಿಲ್ಲ ? ಜನ್ಮದಿಂದ ಆಂಗ್ಲರ ಗುಲಾಮರಾಗಿರುವವರೇ, ನಿಮ್ಮ ಮೃತ್ಯುವೂ ಆಂಗ್ಲರ ಗುಲಾಮವಾಗಿದೆಯೇ ? ನಿಮ್ಮನ್ನು ಹೂಳುತ್ತಾರೋ ? ಸುಡುತ್ತಾರೋ ?

೨. ಪ್ರತಿಯೊಬ್ಬರಿಗೂ ಅವರ ಧರ್ಮ-ಪಂಥದಂತೆ ಶ್ರದ್ಧಾಂಜಲಿ ಸಲ್ಲಿಸಿ !

ದಯವಿಟ್ಟು ಹಿಂದೂ ವ್ಯಕ್ತಿಗೆ ಅವನ ಮೃತ್ಯುವಿನ ಬಳಿಕ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಬೇಡಿರಿ ! ಮೃತಪಟ್ಟ ಬಳಿಕ ಯಾರನ್ನು ಭೂಮಿಯಲ್ಲಿ ಹೂಳುತ್ತಾರೆಯೋ, ಆ ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಪಂಥದ ಬಾಂಧವರಲ್ಲಿ RIP ಎಂದು ಹೇಳುವ ಪದ್ಧತಿಯಿದೆ. RIP ಎಂದರೆ Rest in peace ! ದಯವಿಟ್ಟು ಹಿಂದೂ ವ್ಯಕ್ತಿಗಳು ಮೃತಪಟ್ಟ ಬಳಿಕ ಹೀಗೆ ಬರೆಯಬೇಡಿರಿ ! `ಜಗತ್ತಿನಲ್ಲಿ ಯಾರೇ ಇರಲಿ, ಒಮ್ಮೆ ಅವನು ಮೃತಪಟ್ಟರೆ, ಅವನ ಧರ್ಮದಂತೆ ಅವನ ಮೇಲೆ ಕೊನೆಯ ಕರ್ಮಗಳನ್ನು ನೆರವೇರಿಸುವುದು, `ಮೃತಪಟ್ಟವರ’ ಅಧಿಕಾರವಾಗಿದೆ ! ಹೀಗೆ ಯಾರ ಉದ್ಗಾರವಾಗಿದೆಯೆಂದು ತಿಳಿದಿದೆಯೇ ? ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲ್‍ಖಾನನ ಹೊಟ್ಟೆಯನ್ನು ಬಗೆದಾಗ, ಸತ್ತ ಅಫ್ಝಲ್‍ನ ದೇಹವನ್ನು ಸೈನಿಕರು ಸುಡಲು ಹೊರಟಿದ್ದರು. ಆಗ ಶಿವಾಜಿ ಮಹಾರಾಜರು ವಿರೋಧಿಸಿ, `ಅಫ್ಝಲ ಖಾನನ ಮೃತಪಟ್ಟ ನಂತರ ಅವನೊಂದಿಗಿರುವ ಶತ್ರುತ್ವ ಮುಗಿಯಿತು. ಈಗ ಈ ದೇಹ ಒಬ್ಬ ಮುಸಲ್ಮಾನನ ವ್ಯಕ್ತಿಯದ್ದಾಗಿದೆ. ಅವನ ಮೃತ ಶರೀರವನ್ನು ಸುಟ್ಟು ಅದರ ವಿಡಂಬನೆ ಮಾಡಬಾರದು’, ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಮುಸಲ್ಮಾನ ಧರ್ಮಶಾಸ್ತ್ರದಂತೆ ಛತ್ರಪತಿಯು ಅಫ್ಝಲ್‍ಖಾನನನ್ನು ಭೂಮಿಯಲ್ಲಿ ಹೂಳಿ ಅದರ ಮೇಲೆ ಮುಸಲ್ಮಾನ ಪರಂಪರೆಯಂತೆ ಗೋರಿಯನ್ನು ಕಟ್ಟಿದರು. ಛತ್ರಪತಿ ಶಿವಾಜಿ ಮಹಾರಾಜರು `ಪ್ರತಿಯೊಂದು ಮೃತ ಶರೀರಕ್ಕೆ ಅವರವರ ಧರ್ಮರೀತ್ಯಾ ಅಂತಿಮಸಂಸ್ಕಾರಗಳನ್ನು ನಡೆಸಬೇಕು, ಇದು ಪ್ರತಿಯೊಬ್ಬ ಮೃತಪಟ್ಟವರ ಅಧಿಕಾರವಾಗಿದೆ’, ಎಂದು ಹೇಳುತ್ತಿದ್ದರು. ಆದರೆ ನಾವು ಮಾತ್ರ ಇದೇನು ಮಾಡುತ್ತಿದ್ದೇವೆ ?

೩. REST IN PEACE ಅರ್ಥ !

REST IN PEACE ಎಂದರೆ `ಶಾಂತವಾಗಿ ಮಲಗಿರು !’ ಎಂದಾಗಿದೆ. `ಹೇ ಮೃತಾತ್ಮವೇ, ನಿನ್ನ ಶರೀರವನ್ನು ನಾವು ಭೂಮಿಯಲ್ಲಿ `ಹೂಳಿದ್ದೇವೆ’ ಮತ್ತು `ಕಯಾಮತ್’ನ ದಿನದಂದು ಮೇಲಿರುವವನು ನಿನಗೆ ನ್ಯಾಯವನ್ನು ನೀಡುವನು. ಈಗ ನೀನು ಭೂಮಿಯಲ್ಲಿ ಶಾಂತವಾಗಿ ಮಲಗಿ. ಕಯಾಮತ್ ದಿನದ ದಾರಿಯನ್ನು ಕಾಯುತ್ತಿರು ! ಹೀಗೇಕೆ ಹೇಳುತ್ತಾರೆಂದರೆ `ಹೂಳುವವರು’ ಮತ್ತು `ಯಾರನ್ನು ಹೂಳಿದ್ದಾರೆಯೋ, ಅವನು ಜೀವಂತವಾಗಿದ್ದಾಗ’, ಅವರು ಯಾರೂ ಪುನರ್ಜನ್ಮವನ್ನು ನಂಬುವುದಿಲ್ಲ. ಕಯಾಮತ್ ವರೆಗೆ ಮೃತಪಟ್ಟವನಿಗೆ ಹೂಳಿರುವ ಜಾಗದಿಂದ ಬಿಡುಗಡೆಯಿಲ್ಲವೆಂದು ಅವರ ಧರ್ಮ ತಿಳಿಸುತ್ತದೆ.

೪. ಹಿಂದೂ ಧರ್ಮ ಮತ್ತು ಇತರ ಪಂಥದಲ್ಲಿರುವ ವ್ಯತ್ಯಾಸ !

ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿರಿ ! ಹಿಂದೂ ಧರ್ಮದಲ್ಲಿ ಮೃತ ವ್ಯಕ್ತಿಯನ್ನು ಹೂಳುವುದಿಲ್ಲ, ಸುಡುತ್ತಾರೆ. ಈ ಜನ್ಮದಿಂದ ಸುಟ್ಟು ಪುನರ್ಜನ್ಮಕ್ಕಾಗಿ ಆತ್ಮವನ್ನು ಮುಕ್ತಗೊಳಿಸುತ್ತಾರೆ ! ಹಿಂದೂಗಳು ಅವನನ್ನು RIP ಎಂದು ಹೇಗೆ ಹೇಳಬಹುದು ? ಏಕೆಂದರೆ ಆತ್ಮವು ಸದ್ಗತಿಗೆ ಹೋಗಿದೆಯೆಂದು ನಮ್ಮ ಧರ್ಮದಲ್ಲಿ ಹೇಳುತ್ತಾರೆ. ಆತ್ಮ ಮುಕ್ತವಾಯಿತು, ಅದರ ಮುಂದಿನ ಜನ್ಮದ ಪ್ರವಾಸ ಚೆನ್ನಾಗಿ ಆಗಲಿ ಎಂದು ಹೇಳಬೇಕು. ಹಿಂದೂಗಳು ಆತ್ಮವನ್ನು ಬಂಧಿಸಿ ಹೂಳುವುದಿಲ್ಲ, ಮೃತಪಟ್ಟ ವ್ಯಕ್ತಿಯು ಮುಂದಿನ ಜನ್ಮವನ್ನು ಪಡೆಯಬೇಕೆಂದು ಮುಕ್ತಗೊಳಿಸುತ್ತಾರೆ; ಆದರೆ ಇತರ ಧರ್ಮದಲ್ಲಿ ಯಾರನ್ನು `ಹೂಳುತ್ತಾರೋ’ ಆ ಮೃತಾತ್ಮಕ್ಕೆ `ಭೂಮಿಯಲ್ಲಿ ಶಾಂತವಾಗಿ ಮಲಗಿರು’ ಎಂದು ಹೇಳಿ, `ಕಯಾಮತ್ ವರೆಗೆ ನಿನಗೆ ಬಿಡುಗಡೆಯಿಲ್ಲ !’ ಎಂದು ಹೇಳುತ್ತಾರೆ. ಹಿಂದೂಗಳು ಇದಕ್ಕಾಗಿ ಗರುಡ ಪುರಾಣವನ್ನು ಓದಬೇಕು. ಅದು `ಮೃತ್ಯು’ವಿನ ವಿಷಯದಲ್ಲಿದೆ. ಅದನ್ನು ಓದಿದರೆ, ಯಾರೂ RIP ಎಂದು ಹೇಳುವ ಧೈರ್ಯವನ್ನು ಮಾಡಲಾರರು !

೫. ಹಿಂದೂ ಮೃತಾತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿ !

ಹಿಂದೂಗಳು `ಭಾವಪೂರ್ಣ ಶ್ರದ್ಧಾಂಜಲಿ’ ಎನ್ನಬೇಕು. `ದೇವರು ಮೃತಾತ್ಮಕ್ಕೆ ಸದ್ಗತಿ ನೀಡಲಿ’, ಎಂದು ಹೇಳಬೇಕು. ಅಂದರೆ ಯಾವ ವ್ಯಕ್ತಿ ಮೃತಪಟ್ಟಿದ್ದಾನೆಯೋ ಆ ವ್ಯಕ್ತಿಯು ಪುಣ್ಯಗತಿಯನ್ನು ಹೊಂದಬೇಕು. ಅವನ ಮುಂದಿನ ಜನ್ಮವನ್ನು ಪಡೆಯುವ ಪ್ರಯಾಣ ನಿರ್ವಿಘ್ನವಾಗಿ ನಡೆಯಲಿ! ಇಷ್ಟೇ ಏಕೆ? ಯಾವುದೇ ಸಜ್ಜನ, ಪುಣ್ಯವಂತ ಹಿಂದೂ ವ್ಯಕ್ತಿ ಮೃತಪಟ್ಟರೆ, ಆಗ ಅವರಿಗೆ ದೇವರು ಮೇಲಿಂದ ಮೇಲೆ ಜನ್ಮ-ಮರಣದ ಅಂದರೆ ಪುನರ್ಜನ್ಮದ ಚಕ್ರವನ್ನು ನೀಡದೇ `ಮುಕ್ತ’ಗೊಳಿಸಬೇಕು, ಎಂದೂ ಪ್ರಾರ್ಥಿಸಬಹುದಾಗಿದೆ.

೬. ಯಾವುದೇ ವ್ಯಕ್ತಿಯ ಮರಣದ ಬಳಿಕ RIP ಎಂದು ಬರೆದು, ನುಡಿದು ಅವನನ್ನು `ಕುಲಗೆಡಿಸ’ಬಾರದು !

RIP ಎಂದು ಬರೆಯುವುದು, ನಮ್ಮ ಸ್ವಧರ್ಮಿಯ ಮೃತರ`ವಿಡಂಬನೆ’ಯಾಗಿದೆ ಎನ್ನುವುದನ್ನು ಗಮನದಲ್ಲಿಡಬೇಕು ! ಎಚ್ಚರದಿಂದಿರಿ ! ಎಚ್ಚರಿಸಿ ಮತ್ತು ಹಿಂದೂ ವ್ಯಕ್ತಿ ಮೃತಪಟ್ಟ ಬಳಿಕ RIP ಎಂದು ಬರೆಯುವುದನ್ನು ವಿರೋಧಿಸಿರಿ ! ದಯವಿಟ್ಟು ಮೃತಪಟ್ಟ ಹಿಂದೂ ವ್ಯಕ್ತಿಗೆ ಅವನ ಮರಣದ ಬಳಿಕ RIP ಎಂದು ಬರೆದು, ಮಾತನಾಡಿ `ಕುಲಗೆಡಿಸ’ಬೇಡಿ ! ಎಂದು ಕೈಮುಗಿದು ತಮ್ಮಲ್ಲಿ ಕಳಕಳಿಯ ವಿನಂತಿ !