ನೀವು ನಮ್ಮ ಕನಸು ಮತ್ತು ಬಾಲ್ಯವನ್ನು ಕಸಿದುಕೊಂಡಿದ್ದೀರಿ ! – ಜಗತ್ತಿನ ಎಲ್ಲ ಮುಖಂಡರ ಕಿವಿಹಿಂಡಿದ ಯುವ ಪರಿಸರ ಕಾರ್ಯಕರ್ತೆ

ವಿಶ್ವ ಸಂಸ್ಥೆಯು ಆಯೋಜಿಸಿದ್ದ ಪರಿಸರ ಕೃತಿ ಪರಿಷತ್ತು ವಿಜ್ಞಾನದ ತಥಾಕಥಿತ ಪ್ರಗತಿಯಿಂದ ಇಂದು ಪೃಥ್ವಿಯ ಮೇಲಿನ ಪರಿಸರ ನಾಶವಾಗುತ್ತಿದೆ ಮತ್ತು ಇದಕ್ಕೆ ಈಗಲೇ ಪರಿಹಾರೋಪಾಯ ಮಾಡದಿದ್ದರೆ, ಈಗ ಯುವಕರಿಗೆ ಪೃಥ್ವಿಯ ವಿನಾಶ ನಿಶ್ಚಿತವಾಗಿದೆ’ ಎಂದು ಯುವಕರಿಗೆ ಅರಿವಾಗಿದೆ. ವಿಜ್ಞಾನವಾದಿಗಳು ಮತ್ತು ಮುಖಂಡರಿಗೆ ಇದು ಯಾವಾಗ ಅರಿವಾಗುವುದು ?

ನ್ಯೂಯಾರ್ಕ್ : ನನಗೆ `ಗ್ಲೋಬಲ್ ವರ‍್ಮಿಂಗ್’ (ಜಾಗತಿಕ ತಾಪಮಾನದ ಹೆಚ್ಚಳ) ನಿಂದ ನೀವು ನಮ್ಮನ್ನು ಪೀಡಿಸಿದ್ದೀರಿ. ನೀವು ನಮ್ಮ ಕನಸು ಮತ್ತು ಬಾಲ್ಯವನ್ನು ನಿಮ್ಮ ಪೊಳ್ಳು ಶಬ್ದಗಳಿಂದ ಕಸಿದುಕೊಂಡಿದ್ದೀರಿ. ಜನರು ಸಹಿಸುತ್ತಿದ್ದಾರೆ. ಮರಣೋನ್ಮುಖರಾಗಿದ್ದಾರೆ. ಇಡೀ ಪರಿಸರ ನಾಶವಾಗುತ್ತಿದೆ. ನೀವು ಕೇವಲ ಹಣ ಮತ್ತು ಆರ್ಥಿಕ ಅಭಿವೃದ್ಧಿಯ ಕಪೋಲಕಲ್ಪಿತ ವಿಷಯಗಳನ್ನು ಹೇಳುತ್ತೀರಿ. ಹೀಗೆ ಹೇಳಲು ಎಷ್ಟು ಧರ‍್ಯ ನಿಮಗೆ ? ಒಂದು ವೇಳೆ ನೀವು ಏನನ್ನೂ ಮಾಡದಿದ್ದರೆ, ನಿಮ್ಮನ್ನು ಯುವಪೀಳಿಗೆ ಕ್ಷಮಿಸುವುದಿಲ್ಲ. ಜಗತ್ತು ಈಗ ಎಚ್ಚೆತ್ತುಕೊಂಡಿದೆ ಮತ್ತು ವಿಷಯಗಳು ಬದಲಾಗುತ್ತಿವೆ’ ಎಂದು ಸ್ವೀಡನ್‍ನ ೧೬ ವರ್ಷದ ಯುವ ಪರಿಸರ ಕಾರ್ಯಕರ್ತೆ ಗ್ರೇಟಾ ಥನಬರ್ಗ ಇವರು ಜಗತ್ತಿನ ಎಲ್ಲ ಮುಖಂಡರನ್ನು ಕಟುವಾಗಿ ಟೀಕಿಸಿದ್ದಾರೆ. ಆ ಸಮಯದಲ್ಲಿ ಅವಳಿಗೆ ಕಣ್ಣೀರು ಬರುತ್ತಿತ್ತು. `ಗ್ಲೋಬಲ್ ವರ‍್ಮಿಂಗ್’ ತಡೆಯಲು ವಿಶ್ವ ಸಂಸ್ಥೆಗಳು ಹಮಾಮಾನ ಕೃತಿ ಪರಿಷತ್ತನ್ನು ಆಯೋಜಿಸಿತ್ತು. ಅದರಲ್ಲಿ ಅವರು ಮಾತನಾಡುತ್ತಿದ್ದರು.

Kannada Weekly | Offline reading | PDF