ವಿವಿಧ ಸಂತರು, ಸದ್ಗುರು ಮತ್ತು ಪರಾತ್ಪರ ಗುರು ಹಾಗೂ ಸಮಾಜದಲ್ಲಿನ ವ್ಯಕ್ತಿಗಳು ಪೂ. ವಾಮನರ ಕುರಿತು ತೆಗೆದ ಪ್ರಶಂಸನೀಯ ಉದ್ಗಾರ ಮತ್ತು ಹೇಳಿದ ವೈಶಿಷ್ಟ್ಯಪೂರ್ಣ ಅಂಶಗಳು

`ಶಿಶುವು ಜನಿಸಿದ ಸ್ವಲ್ಪ ಸಮಯದ ಬಳಿಕ ನಾನು ರಾಮನಾಥಿ ಆಶ್ರಮದ ಸಾಧಕಿ ಕು. ಪ್ರಿಯಾಂಕಾ ಲೋಟಲೀಕರ ಇವರೊಂದಿಗೆ ಸಂಚಾರವಾಣಿ ಮುಖಾಂತರ ಮಾತನಾಡಿದೆನು. ಆಗ ಅಕಸ್ಮಾತ್ತಾಗಿ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರೊಂದಿಗೆ ನನ್ನ ಸಂಭಾಷಣೆಯಾಯಿತು. ತದನಂತರ ಕೆಲವು ಸಮಯದಲ್ಲಿ ಸದ್ಗುರು (ಸೌ.) ಅಂಜಲಿ ಗಾಡಗೀಳ, ಸದ್ಗುರು (ಕು) ಸ್ವಾತಿ ಖಾಡ್ಯೆ ಇವರು ನಾನು ಬಿಡಿಸಿದ ಮಗುವಿನ ಛಾಯಾಚಿತ್ರವನ್ನು ನೋಡಿದರು. ಆಗ ಅವರು ಹಾಗೂ ಸದ್ಗುರು (ಕು.) ಅನುರಾಧಾ ವಾಡೇಕರ, ಪರಾತ್ಪರ ಗುರು ಪಾಂಡೆ ಮಹಾರಾಜರು ಸಂಚಾರವಾಣಿಯಲ್ಲಿ ಮತ್ತು ರಾಮನಾಥಿ ಆಶ್ರಮಕ್ಕೆ ಬಂದ ಬಳಿಕ ಪೂ. ಮುಕುಲ ಗಾಡಗೀಳ ಇವರು ಮಗುವಿನ ಕುರಿತು ಮುಂದಿನಂತೆ ಉದ್ಗಾರ ತೆಗೆದರು.

ಪರಾತ್ಪರ ಗುರು ಪಾಂಡೆ ಮಹಾರಾಜ

೧. `ಮಗುವಿನ ಛಾಯಾಚಿತ್ರ ಬಹಳ ಸುಂದರವಾಗಿದೆ. ಇದು ಬಹಳ ಸಾತ್ತ್ವಿಕ ಜೀವವಾಗಿದೆ. ಇದು ಧ್ಯಾನಮಾರ್ಗಿಯಾಗಿದ್ದು ಈಗ ಧ್ಯಾನಾವಸ್ಥೆಯಲ್ಲಿದೆ’ – (ಪರಾತ್ಪರ ಗುರು) ಪಾಂಡೆ ಮಹಾರಾಜರು

೨. ಪರಾತ್ಪರ ಗುರು ಪಾಂಡೆ ಮಹಾರಾಜರು ಚಿ. ವಾಮನನನ್ನು ಕರೆದುಕೊಂಡು ದೇವದ ಆಶ್ರಮಕ್ಕೆ ಬರಲು ಹೇಳುವುದು ಹಾಗೂ ಅವರು `ಬನ್ನಿ, ಬನ್ನಿ ವಾಮನರಾವ್, ನಾವು ನಿಮ್ಮ ದಾರಿಯನ್ನೇ ಕಾಯುತ್ತಿದ್ದೆವು’, ಎಂದು ಹೇಳಿದಾಗ ಅವರ ಧ್ವನಿಯನ್ನು ಕೇಳಿ ವಾಮನನು ನಗುವುದು : ಪರಾತ್ಪರ ಗುರು ಪಾಂಡೆ ಮಹಾರಾಜರು (ಪ.ಪೂ. ಬಾಬಾ) ನನಗೆ ಸಂಚಾರವಾಣಿಕರೆ ಮಾಡಿ, ಚಿ. ವಾಮನನನ್ನು ಕರೆದುಕೊಂಡು ದೇವದ ಆಶ್ರಮಕ್ಕೆ ಆದಷ್ಟು ಬೇಗನೆ ಭೇಟಿಯಾಗಲು ಬನ್ನಿ”, ಎಂದು ಹೇಳಿದ್ದರು. ೧೦.೧೨.೨೦೧೮ ರಂದು ನಾವು ೩ ತಿಂಗಳ ವಾಮನನನ್ನು ಕರೆದುಕೊಂಡು ಪ.ಪೂ. ಬಾಬಾರವರನ್ನು ಭೇಟಿಯಾಗಲು ದೇವದ ಆಶ್ರಮಕ್ಕೆ ಹೋದೆವು. ವಾಮನನನ್ನು ನೋಡಿ ಪ.ಪೂ. ಬಾಬಾರವರು, `ಬನ್ನಿ ಬನ್ನಿ ವಾಮನರಾವ್ ನಾವು ನಿಮ್ಮ ದಾರಿಯನ್ನೇ ಕಾಯುತ್ತಿದ್ದೆವು” ಎಂದು ಹೇಳಿದರು. ಆಗ ಪರಾತ್ಪರ ಗುರು ಪಾಂಡೆ ಮಹಾರಾಜರ ಧ್ವನಿಯನ್ನು ಕೇಳಿಯೇ ವಾಮನನು ನಕ್ಕನು.

೩. ಪರಾತ್ಪರ ಗುರು ಪಾಂಡೆ ಮಹಾರಾಜರು ಸರ್ವಸಾಮಾನ್ಯ ಮಕ್ಕಳಿಗಿಂತ ಚಿ. ವಾಮನನ ಎತ್ತರ ಮತ್ತು ತೂಕ ಹೆಚ್ಚಿದೆಯೆಂದು ಹೇಳುವುದು : ವಾಮನನನ್ನು ನೋಡಿ ಪ.ಪೂ. ಬಾಬಾರವರು, `ಈ ಮಗು ೩ ತಿಂಗಳ ಮಗುವಿನಂತೆ ಕಾಣಿಸುವುದಿಲ್ಲ. ಅವನು ೬-೭ ತಿಂಗಳ ಮಗುವಿನಂತೆ ಕಾಣಿಸುತ್ತಾನೆ ಮತ್ತು ಅಲ್ಲದೇ ಆ ರೀತಿ ಸ್ಪಂದಿಸುತ್ತಾನೆ. ಸರ್ವಸಾಮಾನ್ಯ ಮಕ್ಕಳಿಗಿಂತ ಇವನ ಎತ್ತರವೂ ಬಹಳ ಹೆಚ್ಚಿದೆ. ಇವನ ಎತ್ತರ ಮತ್ತು ತೂಕವನ್ನು ನಿಯಮಿತವಾಗಿ ಅವಲೋಕಿಸುತ್ತಿರು ಮತ್ತು ಪ್ರತಿದಿನದ ಅವನ ಹಾವಭಾವ ಅಥವಾ ವಿಭಿನ್ನತೆಯ ಅರಿವಾಗುತ್ತಿದ್ದರೆ ಅದನ್ನು ಬರೆದಿಡು’, ಎಂದು ಹೇಳಿದರು.

೪. ಪ.ಪೂ. ಪಾಂಡೆ ಮಹಾರಾಜರು ಚಿ. ವಾಮನನ ಅಂಗೈ ಮತ್ತು ಅಂಗಾಲಿನ ರೇಖೆಗಳು ವೈಶಿಷ್ಟ್ಯಪೂರ್ಣವಾಗಿವೆಯೆಂದು ಹೇಳುವುದು : ಪ.ಪೂ. ಬಾಬಾರವರು ವಾಮನನ ಅಂಗೈ ಮತ್ತು ಅಂಗಾಲುಗಳ ರೇಖೆಗಳು ವೈಶಿಷ್ಟ್ಯ ಪೂರ್ಣವಾಗಿವೆಯೆಂದು ಹೇಳಿ, ಅವನ ಅಂಗಾಲುಗಳ ಛಾಯಾಚಿತ್ರವನ್ನು ತೆಗೆಯಲು ಹೇಳಿದರು. ಛಾಯಾಚಿತ್ರ ತೆಗೆಯುವ ಸಾಧಕನಿಗೆ ಛಾಯಾಚಿತ್ರ ತೆಗೆಯಲು ಸುಲಭವಾಗುವ ರೀತಿಯಲ್ಲಿ ವಾಮನನು ತನ್ನ ಕಾಲುಗಳನ್ನು ಸಾಧಕನ ಎದುರಿಗೆ ಹಿಡಿದನು. – ಸೌ. ಮಾನಸಿ ರಾಜಂದೇಕರ (ಮಗುವಿನ ತಾಯಿ), ಪುಣೆ (೨೩.೭.೨೦೧೯)

ಪರಾತ್ಪರ ಗುರು ಡಾ. ಆಠವಲೆ

೧. ಪರಾತ್ಪರ ಗುರು ಡಾ. ಆಠವಲೆಯವರ ಬಳಿ ಮಗುವನ್ನು ಕರೆದುಕೊಂಡು ಹೋದಾಗ ಅವರು ಮಗು ಮತ್ತು ಮಗುವಿನ ಸಹೋದರಿ ಶ್ರೀಯಾ ಇವರ ಕುರಿತು ತೆಗೆದ ಕೌತುಕೋದ್ಗಾರ !

‘ರಾಮನಾಥಿ ಆಶ್ರಮದಲ್ಲಿ ಮಗುವಿನ ನಾಮಕರಣ ವಿಧಿಯನಂತರ ಪ.ಪೂ. ಗುರುದೇವರನ್ನು ಭೇಟಿಯಾದಾಗ ಮಗುವಿನ ಮಡಿಯ ರೇಷ್ಮೆ ವಸ್ತ್ರವನ್ನು ನೋಡಿ ಅವರು ಬಹಳ ಪ್ರಶಂಸಿಸಿದರು. ಅವರು ನನಗೆ, “ಮಗುವನ್ನು ಎಷ್ಟು ಸುಂದರವಾಗಿ ಸಿದ್ಧಗೊಳಿಸಿದ್ದೀಯಾ ! ಸಂತರಿಗೆ ಮಗುವಿಗೆ ಹೆಸರು ಇಡುವಂತೆ ಹೇಳಿದ್ದೀಯಾ, ಬಹಳ ಒಳ್ಳೆಯ ಕೆಲಸ ಮಾಡಿದೆ: ಏಕೆಂದರೆ ಸಂತರು ನಾಮಕರಣ ಮಾಡಿದರೆ ನಮಗೆ ಆ ಮಗುವಿನ ಕುರಿತು ಚಿಂತೆ ಇರುವುದಿಲ್ಲ. ಸಂತರೇ ಮಗುವಿನ ಎಲ್ಲ ಕಾಳಜಿ ವಹಿಸುತ್ತಾರೆ” ಎಂದು ಹೇಳಿದರು. ಮಗುವನ್ನು ಮತ್ತು ಶ್ರೀಯಾಳನ್ನು (ಮಗುವಿನ ಸಹೋದರಿ) ನೋಡಿ ಪ.ಪೂ. ಗುರುದೇವರು ನನಗೆ, ‘ಇವೆರಡೂ ಮಕ್ಕಳು ತಂದೆ-ತಾಯಿಯರೇ ನಮಸ್ಕರಿಸುವಂತೆ ಮಾಡುವವರಿದ್ದಾರೆ. ಶ್ರೀಯಾ ಬೇಗನೆ ಸಂತಳಾಗುವಳು”, ಎಂದು ಹೇಳಿದರು.

೨. ನಾಮಕರಣ ಶಾಸ್ತ್ರ ಮುಗಿದ ಬಳಿಕ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ನಡೆದ ಆನಂದದಾಯಕ ಭೇಟಿ !

ನಾಮಕರಣ ಶಾಸ್ತ್ರ ಮುಗಿದ ಬಳಿಕ ಸಾಯಂಕಾಲ ಪರಾತ್ಪರ ಗುರು ಡಾಕ್ಟರರೊಂದಿಗೆ ನಮ್ಮ ಭೇಟಿಯಾಯಿತು ಮತ್ತು ಅವರನ್ನು ನೋಡಿ ಚಿ. ವಾಮನನಿಗೆ ಬಹಳ ಆನಂದವಾಯಿತು. ಅವನು ಅವರೆಡೆಗೆ ತದೇಕಚಿತ್ತದಿಂದ ನೋಡುತ್ತಿದ್ದನು ಮತ್ತು ಅವರ ಮಾತುಗಳು ಅರ್ಥವಾಗುತ್ತಿರುವಂತೆ ಸ್ಪಂದಿಸುತ್ತಿದ್ದನು. ಪ.ಪೂ. ಗುರುದೇವರ ಬಳಿಯಿರುವಾಗ ಅವನ ದೃಷ್ಟಿ ಸ್ಥಿರವಾಗಿತ್ತು. ಗುರುದೇವರು ನೀಡಿದ ಉಡುಗೊರೆಯನ್ನು ಅವನು ಕೈಯಲ್ಲಿ ಹಿಡಿಯಲು ಪ್ರಯತ್ನಿಸಿದನು. ವಾಮನನು ತನ್ನ ಎಡಗಾಲನ್ನು ಪ.ಪೂ. ಗುರುದೇವರಿಗೆ ಒರಗಿಸಿಟ್ಟಿದ್ದನು. ಆಗ ‘ಅವನು ಅವರಿಂದ ಶಕ್ತಿ ಮತ್ತು ಚೈತನ್ಯವನ್ನು ಪಡೆಯುತ್ತಿದ್ದಾನೆ’, ಎಂದು ನನಗೆ ಅನಿಸಿತು. ಪ.ಪೂ. ಗುರುದೇವರು ವಾಮನನನ್ನು ಮೇಲಕ್ಕೆತ್ತಿ ಹಿಡಿದರು. ಎರಡು ತಿಂಗಳ ಮಗುವಿಗೆ ತನ್ನ ಕುತ್ತಿಗೆಯನ್ನು ಹಿಡಿದುಕೊಳ್ಳಲು ಬರುವುದಿಲ್ಲ; ಆದರೆ ವಾಮನನು ಸುಮಾರು ೫ ನಿಮಿಷಗಳ ವರೆಗೆ ತನ್ನ ಕುತ್ತಿಗೆಯನ್ನು ಹಿಡಿದಿದ್ದನು. ಅವನಿಗೆ ಪ.ಪೂ. ಗುರುದೇವರ ಕಡೆಯಿಂದ ತಿರುಗಿ ನನ್ನ ಬಳಿಗೆ ಬರಲು ಇಷ್ಟವಿರಲಿಲ್ಲ’. ಸೌ. ಮಾನಸಿ ರಾಜಂದೇಕರ (ಮಗುವಿನ ತಾಯಿ), ಪುಣೆ

ಪೂ.(ಡಾ.) ಮುಕುಲ ಗಾಡಗೀಳ

ಪೂ. (ಡಾ.) ಮುಕುಲ ಗಾಡಗೀಳ ಇವರು ‘ಮಗು ಅದರ ವಯಸ್ಸಿಗಿಂತ ಬಹಳ ದೊಡ್ಡದು ಎನಿಸುತ್ತದೆ’, ಎಂದು ಹೇಳುವುದು : ಆಶ್ರಮಕ್ಕೆ ಹೋದಾಗ ನಾವು ಮಗುವಿನೊಂದಿಗೆ ಪೂ. (ಡಾ.) ಮುಕುಲ ಗಾಡಗೀಳರ ಕೋಣೆಗೆ ಹೋದೆವು. ಪೂ. ಕಾಕಾರವರು ಮಗುವನ್ನು ಎತ್ತಿಕೊಂಡರು. ಅವರು ಮಗುವಿನೊಂದಿಗೆ ಮಾತನಾಡುತ್ತಿರುವಾಗ ಮಗು ಅವರ ಪರಿಚಯವಿರುವಂತೆ ಅವರೆಡೆಗೆ ನೋಡುತ್ತಿತ್ತು ಮತ್ತು ಧ್ವನಿ ಮಾಡಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿತ್ತು. ಪೂ. ಕಾಕಾರವರು ಮಾತನಾಡುತ್ತಿರುವಾಗ ಮಗು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿತು. ಈ ಮೊದಲು ಮಗುವು ಹೀಗೆ ಎಂದಿಗೂ ಮಾಡಿರಲಿಲ್ಲ. ಈ ಕೃತಿಯನ್ನು ನೋಡಿ ಪೂ. ಕಾಕಾರವರು, ‘ಈ ಮಗು ತನ್ನ ಬಳಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಅದು ಎಲ್ಲರಿಗೂ ಎಲ್ಲವನ್ನೂ ಕೊಡುವುದು. ಮಗುವಿನ ಮುಖದ ಮೇಲಿನ ಹಾವಭಾವ, ಅದಕ್ಕಿರುವ ತಿಳುವಳಿಕೆ ಮತ್ತು ಅದರ ಚಟುವಟಿಕೆಗಳಿಂದ ಮಗು ಅದರ ವಯಸ್ಸಿಗಿಂತ (೨ ತಿಂಗಳಿಗಿಂತ) ಹೆಚ್ಚು ದೊಡ್ಡದೆನಿಸುತ್ತದೆ”, ಎಂದರು. ಪೂ. ಕಾಕಾರವರ ಕೋಣೆಯಲ್ಲಿ ಮಗು ಬಹಳ ಆನಂದದಿಂದ ಇತ್ತು. – ಶ್ರೀ. ಅನಿರುದ್ಧ ರಾಜಂದೇಕರ, ಪುಣೆ

ದೇವರು ನಿಮಗೆ ಎರಡು (ಕು. ಶ್ರೀಯಾ ಮತ್ತು ಮಗು) ಸಾತ್ತ್ವಿಕ ಜೀವಗಳನ್ನು ನೀಡಿದ್ದಾನೆ ! – (ಸದ್ಗುರು) ಕು. ಅನುರಾಧಾ ವಾಡೇಕರ

ಸದ್ಗುರು (ಕು.) ಸ್ವಾತಿ ಖಾಡ್ಯೆ

೧. ಸದ್ಗುರು ಸ್ವಾತಿ ಖಾಡ್ಯೆ ಇವರು, ‘ಈ ಮಗು ಸಂತನೇ ಆಗಿದ್ದಾನೆ’, ಎಂದು ಹೇಳಿ ಮಗುವಿನೊಂದಿಗೆ ಛಾಯಾಚಿತ್ರವನ್ನು ತೆಗೆಸಿಕೊಳ್ಳುವುದು : ೫.೧೧.೨೦೧೮ ರಂದು ಲಕ್ಷ್ಮೀ ಪೂಜೆಯ ದಿನದಂದು ಸದ್ಗುರು ಸ್ವಾತಿ ಖಾಡ್ಯೆಯವರು ನಮ್ಮ ಮನೆಗೆ ಬಂದಿದ್ದರು. ಆಗ ಅವರು ಮಗುವನ್ನು ತೊಡೆಯ ಮೇಲೆ ಎತ್ತಿಕೊಂಡರು. ಆಗ ನಿದ್ದೆಯಲ್ಲಿಯೇ ಮಗುವು ತನ್ನ ಎರಡೂ ಕಿವಿಗಳನ್ನು ಹಿಡಿದುಕೊಂಡಿತು. ಅದನ್ನು ನೋಡಿ ಸದ್ಗುರು ಸ್ವಾತಿ ಅಕ್ಕನವರು, “ಇವನು ಕ್ಷಮಾಯಾಚನೆ ಮಾಡುತ್ತಿದ್ದಾನೆ. ಎಷ್ಟು ಸಾತ್ತ್ವಿಕ ಮಗುವಾಗಿದೆ !” ಎಂದು ಹೇಳಿದರು. ಅಂದು ಮಗು ತುಂಬಾ ಸಮಯ ಸದ್ಗುರು ಸ್ವಾತಿ ಖಾಡ್ಯೆಯವರ ಬಳಿಯಿತ್ತು. ಆ ಸಮಯದಲ್ಲಿ ಮಗುವನ್ನು ನೋಡಿ ಸದ್ಗುರು ಸ್ವಾತಿ ಅಕ್ಕನವರು, “ನನ್ನೊಂದಿಗೆ ಇವನ ಛಾಯಾಚಿತ್ರವನ್ನು ತೆಗೆಯೋಣ. ನಂತರ ಧ್ವನಿಚಿತ್ರಮುದ್ರಿಕೆ (ಸಿ.ಡಿ) ತಯಾರಿಸುವಾಗ ಉಪಯೋಗವಾಗುವುದು. ಈ ಮಗು ‘ಸಂತ’ನೇ ಆಗಿರಬಹುದು. ಈ ಮಗು ಹೆಚ್ಚೆಚ್ಚು ಸಮಯ ಕೈಯಿಂದ ಆಪ ಮತ್ತು ತೇಜ ತತ್ತ್ವದ ಮುದ್ರೆಯನ್ನು ಮಾಡುತ್ತಿದೆ”, ಎಂದು ಹೇಳಿದರು.

೨. ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಚಿ. ವಾಮನನಿಗೆ ಮನೆಯಲ್ಲಿ ಕರೆಯುವ ಹೆಸರು ‘ಶ್ರೀರಂಗ’ ಎಂದು ಇಡುವುದು: ೨೪.೧೨.೨೦೧೮ ರಂದು ನಮ್ಮ ಮನೆಗೆ ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಬಂದಿದ್ದರು. ಅವರು, “ನಾವು ಚಿ. ವಾಮನನಿಗೆ ಮನೆಯಲ್ಲಿ ಕರೆಯುವ ಹೆಸರು ‘ಶ್ರೀರಂಗ’ ಎಂದು ಇಡೋಣವೇ ?” ಎಂದು ಕೇಳಿದರು. ಅದಕ್ಕೆ ನಾವು ‘ಆಯಿತು’ ಎಂದೆವು. ೨೬.೧೨.೨೦೧೮ ರಂದು ಸಾಯಂಕಾಲ ನಾನು ತೊಟ್ಟಿಲನ್ನು ಅಲಂಕರಿಸಿದೆನು. ಸದ್ಗುರು ಸ್ವಾತಿ ಅಕ್ಕನವರು ವಾಮನನನ್ನು ತೊಟ್ಟಿಲಿಗೆ ಹಾಕಿದರು ಮತ್ತು ‘ಶ್ರೀರಂಗ’ ಎಂದು ಕರೆದರು. ಆಗ ವಾಮನನು ನಕ್ಕನು. ಆಗ ನನ್ನ ಮನಸ್ಸಿನಲ್ಲಿ ‘ನಮ್ಮ ಮೇಲೆ ಎಷ್ಟು ಭಗವಂತನ ಕೃಪೆಯಿದೆ ! ಈ ಮಗುವಿಗೆ ಮನೆಯಲ್ಲಿ ಕರೆಯುವ ಹೆಸರನ್ನು ಇಡಲೂ ನಮಗೆ ಯೋಗ್ಯತೆಯಿಲ್ಲ. ದೇವರು ಆ ಹೆಸರನ್ನು ಕೂಡ ಸದ್ಗುರುಗಳ ಮಾಧ್ಯಮದಿಂದ ಇಟ್ಟನು’, ಎಂಬ ವಿಚಾರ ಬಂದಿತು. ‘ಈ ಹೆಸರಿಡುವುದು, ಇದೂ ಪರ‍್ವನಿಯೋಜನೆಯೇ ಆಗಿದೆ’, ಎಂದು ನಮ್ಮಿಬ್ಬರಿಗೂ ಅರಿವಾಯಿತು. – ಶ್ರೀ. ಅನಿರುದ್ಧ ರಾಜಂದೇಕರ, ಪುಣೆ (ನವೆಂಬರ್ ೨೦೧೮)

ಪೂ. ಸೌರಭ ಅಣ್ಣನವರ ಭೇಟಿಯಿಂದ ಚಿ. ವಾಮನ ಮತ್ತು ಪೂ. ಅಣ್ಣ ಇವರಿಬ್ಬರಿಗೂ ಆನಂದವಾಗುವುದು ಮತ್ತು ವಾಮನನು ಪೂ. ಸೌರಭ ಅಣ್ಣನವರ ಎದೆಯ ಮೇಲೆ ತಲೆ ಒರಗಿಸುವುದು : ಚಿ. ವಾಮನನಿಗೆ ಪೂ. ಸೌರಭ ಅಣ್ಣನವರನ್ನು ಭೇಟಿಯಾದಾಗ ಅವನಿಗೆ ಬಹಳ ಆನಂದವಾಯಿತು. ಪೂ. ಅಣ್ಣನವರಂತೆಯೇ ಧ್ವನಿ ತೆಗೆದು ವಾಮನನು, ಅವರ ಮಾತಿಗೆ ಸ್ಪಂದಿಸುತ್ತಿದ್ದನು. ಸೌ. ಪ್ರಾಜಕ್ತಾ ಜೋಶಿಯವರು ವಾಮನನನ್ನು ಪೂ. ಅಣ್ಣನವರ ಮಂಚದ ಮೇಲೆ ಅವರ ಪಕ್ಕದಲ್ಲಿ ಮಲಗಿಸಿದರು. ಆಗ ವಾಮನನು ಅವರ ಕೈ ಮುಟ್ಟಲು ಪ್ರಯತ್ನಿಸತೊಡಗಿದನು. ವಾಮನನ ಈ ಪ್ರಯತ್ನವನ್ನು ನೋಡಿ ಪೂ. ಅಣ್ಣನವರಿಗೆ ಬಹಳ ಆನಂದವಾಯಿತು. ಸ್ವಲ್ಪ ಸಮಯದ ಬಳಿಕ ಅವರು ತಮ್ಮ ಜಪಮಾಲೆಯನ್ನು ವಾಮನನಿಗೆ ಕೊಟ್ಟರು. ವಾಮನನು ಅದನ್ನು ತನ್ನ ಕೊರಳಿಗೆ ಹಾಕಿಕೊಂಡನು ಮತ್ತು ಅವನು ಪೂ. ಅಣ್ಣನವರನ್ನು ನೋಡಿ ನಗತೊಡಗಿದನು. ಇದನ್ನು ನೋಡಿ ಪೂ. ಅಣ್ಣನವರಿಗೂ ಆನಂದವಾಯಿತು. ಸ್ವಲ್ಪ ಸಮಯದ ಬಳಿಕ ವಾಮನನು ಪೂ. ಅಣ್ಣನವರ ಬಳಿಗೆ ಹೋಗಲು ಪ್ರಯತ್ನಿಸತೊಡಗಿದನು. ಆಗ ಸೌ. ಜೋಶಿಕಾಕೂ ಇವರು ಅವನನ್ನು ಪೂ. ಅಣ್ಣನವರ ಎದೆಯ ಬಳಿಗೆ ಸಾವಕಾಶವಾಗಿ ಹಿಡಿದರು. ಆಗ ವಾಮನನು ಪೂ. ಅಣ್ಣನವರ ಎದೆಗೆ ತಲೆ ಒರಗಿಸಿದನು. – ಶ್ರೀ. ಅನಿರುದ್ಧ ರಾಜಂದೇಕರ, ಪುಣೆ

ಭಗವಾನ ಡೋಣೆ ಮಹಾರಾಜರ ವಿಷಯದಲ್ಲಿ ಬಂದ ಅನುಭೂತಿ

ಶ್ರೀ ಹಾಲಸಿದ್ಧನಾಥರ ಭವಿಷ್ಯವಾಣಿ ಪ್ರಾರಂಭವಾದಾಗ ಭಗವಾನ ಡೋಣೆ ಮಹಾರಾಜರು ಚಿ. ವಾಮನನ ಕುರಿತು ಭವಿಷ್ಯ ನುಡಿದು ‘ಈ ಮಗು ಸಾಕ್ಷಾತ್ ಈಶ್ವರನ ಅಂಶವಾಗಿದೆ’, ಎಂದು ಹೇಳಿರುವ ದೃಶ್ಯ ಕಾಣಿಸುವುದು : ೨೫.೧.೨೦೧೯ ರಂದು ರಾಮನಾಥಿ ಆಶ್ರಮದಲ್ಲಿ ಶ್ರೀ ಹಾಲಸಿದ್ಧನಾಥ ದೇವರು ಮತ್ತು ಅವರ ಭಕ್ತಾದಿಗಳ ಆಗಮನವಾಯಿತು. ಆ ಸಮಯದಲ್ಲಿ ಪೂ. ಭಗವಾನ ವಾಘಾಪುರೆ (ಡೋಣೆ) ಮಹಾರಾಜರ ಮಾಧ್ಯಮದಿಂದ ಶ್ರೀ ಹಾಲಸಿದ್ಧನಾಥರು ಭವಿಷ್ಯ(ಅಂದರೆ ಮುಂಬರುವ ಕಾಲದಲ್ಲಿ ಘಟಿಸಲಿರುವ ವಿಷಯ ಅಥವಾ ಘಟನೆಗಳ ಕುರಿತು ಪದ್ಯದ ರೂಪದಲ್ಲಿ ನುಡಿಯುವುದು) ನುಡಿದರು. ಆಗ ನನಗೆ ಮುಂದಿನ ದೃಶ್ಯ ಕಾಣಿಸಿತು.

‘ಆಶ್ರಮದ ಸಭಾಗೃಹದಲ್ಲಿ ಪೂ. ಡೋಣೆ ಮಹಾರಾಜರು, ಪರಾತ್ಪರ ಗುರು ಡಾ. ಆಠವಲೆ, ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಆಶ್ರಮದ ಎಲ್ಲ ಸಂತರು ಉಪಸ್ಥಿತರಿದ್ದಾರೆ. ನಾನು ಚಿ. ವಾಮನನನ್ನು ಎತ್ತಿಕೊಂಡು ಶ್ರೀ ಹಾಲಸಿದ್ಧನಾಥರ ದರ್ಶನಕ್ಕಾಗಿ ಹೋದೆನು. ಆಗ ಪೂ. ಡೋಣೆ ಮಹಾರಾಜರು ಅಕಸ್ಮಾತ್ತಾಗಿ ವಾಮನನ ಕುರಿತು ಭವಿಷ್ಯವನ್ನು ನುಡಿಯಲು ಪ್ರಾರಂಭಿಸಿದರು. ಅವರು ವಾಮನನನ್ನು ನೋಡಿ ಅಲ್ಲಿದ್ದ ಓರ್ವ ಸಾಧಕಿಗೆ, ‘ಈ ತೇಜಸ್ವಿ ಮಗು ಯಾರು ?’ ಎಂದು ಕೇಳಿದರು, ಬಳಿಕ ಅವರು ನನಗೆ ಮಗುವಿನ ಹೆಸರು ಕೇಳಿದರು ಮತ್ತು ‘ಇದು ಸಾಮಾನ್ಯ ಮಗುವಾಗಿರದೇ ಇದು ಸಾಕ್ಷಾತ್ ಈಶ್ವರನ ಅಂಶವಾಗಿದೆ. ಪ.ಪೂ. ಗುರುದೇವರ ಇಚ್ಛೆಯಿಂದ ಅವರ ಕಾರ್ಯ ಮಾಡಲು ಮಗು ಜನ್ಮ ಪಡೆದಿದೆ’, ಎಂದು ಹೇಳಿದರು. ಮುಂದೆ ಬಹಳಷ್ಟು ಸಮಯ ಅವರು ವಾಮನನ ಕುರಿತು ಮಾತನಾಡುತ್ತಿದ್ದರು. ಆ ಸಮಯದಲ್ಲಿ ವಾಮನನು ಪ.ಪೂ. ಗುರುದೇವರ ತೊಡೆಯ ಮೇಲೆ ಕುಳಿತಿದ್ದನು’. ತದನಂತರ ಸೌ. ಪ್ರಿಯಾಂಕಾ ರಾಜಹಂಸ ಅವಳಿಗೂ ಕೂಡ ಇದೇ ರೀತಿ ಕನಸು ಬಿದ್ದಿರುವುದಾಗಿ ಹೇಳಿದಳು. ‘ಪರಾತ್ಪರ ಗುರುದೇವಾ, ನನಗೆ ಈ ದೃಶ್ಯ ಏಕೆ ಕಾಣಿಸಿತು ?’ ಎಂದು ಗೊತ್ತಿಲ್ಲ; ಆದರೆ ಇದನ್ನು ನಾನು ತೆರೆದ ಕಣ್ಣುಗಳಿಂದ ನೋಡಿದೆನು. – ಶ್ರೀ. ಅನಿರುದ್ಧ ರಾಜಂದೇಕರ.

ಗೋಂದವಲೆಯ ದೇವಸ್ಥಾನದ ಅರ್ಚಕರು

ಚಿ. ವಾಮನ ೬ ತಿಂಗಳ ಮಗುವಾಗಿದ್ದಾಗ, ನಾವು ಒಮ್ಮೆ ವಾಮನನನ್ನು ಕರೆದುಕೊಂಡು ಗೋಂದವಲೆಗೆ ಹೋಗಿದ್ದೆವು. ಆ ಸಮಯದಲ್ಲಿ ದೇವಸ್ಥಾನದಲ್ಲಿ ಗದ್ದಲವಿರಲಿಲ್ಲ. ನಾವು ದರ್ಶನ ಪಡೆಯಲು ಸಾಲಿನಲ್ಲಿ ಹೋಗುತ್ತಿರುವಾಗ ವಾಮನನು ಸಂಪೂರ್ಣ ಶಾಂತ ಮತ್ತು ಸ್ಥಿರವಾಗಿದ್ದನು. ನಾವು ದರ್ಶನ ಪಡೆಯುತ್ತಿರುವಾಗ ಅಲ್ಲಿಯ ಅರ್ಚಕರು ಬಹಳ ಸಮಯದ ವರೆಗೆ ವಾಮನನ ಕಡೆಗೆ ನೋಡುತ್ತಿದ್ದನು. ಅಲ್ಲಿಯ ಒಬ್ಬ ಅರ್ಚಕರು ಮತ್ತೊಬ್ಬ ಅರ್ಚಕರಿಗೆ ‘ಶುದ್ಧ ಬೀಜಾ ಪೋಟಿ ! ಫಳೆ ರಸಾಳ ಗೋಮಟಿ !’ (ತುಕಾರಾಮಗಾಥಾ) ಹೀಗೆ ಹೇಳುತ್ತಾರಲ್ಲವೇ ?, ಅದರ ಉದಾಹರಣೆಯನ್ನು ನೋಡಿರಿ”, ಎಂದು ಹೇಳಿದರು. ಬಳಿಕ ಅವರು ವಾಮನನನಿಗೆ ಕೈಜೋಡಿಸಿ ನಮಸ್ಕರಿಸಿದರು.

ಸ್ವಾಮಿ ಸ್ವರೂಪಾನಂದರ ಸಮಾಧಿಸ್ಥಳದಲ್ಲಿ ಭೇಟಿಯಾದ ಓರ್ವ ಅಜ್ಜನವರು

ನಾವು ಪಾವಸದಲ್ಲಿ ಸ್ವಾಮಿ ಸ್ವರೂಪಾನಂದರ ಸಮಾಧಿಮಂದಿರಕ್ಕೆ ಹೋಗಿದ್ದೆವು. ಅಲ್ಲಿ ದರ್ಶನ ಪಡೆಯುತ್ತಿರುವಾಗ ಓರ್ವ ಅಜ್ಜನವರು ಕಾಣಿಸಿದರು. ಅವರು ಬಹಳ ಸಾತ್ತ್ವಿಕ ಮತ್ತು ಪ್ರೇಮಮಯಿಯಾಗಿ ಕಾಣಿಸುತ್ತಿದ್ದರು. ಚಿ. ವಾಮನ ಆ ಅಜ್ಜನವರನ್ನು ನೋಡಿ ಸತತ ನಗುತ್ತಿದ್ದನು. ಆ ಅಜ್ಜನವರು ಕೂಡ ವಾಮನನನ್ನು ನೋಡಿ ನಕ್ಕರು ಮತ್ತು ಅವನೊಂದಿಗೆ ಮಾತನಾಡಿದರು. ಬಳಿಕ ಅವರು ನನಗೆ, “ಇವನ ಹೆಸರೇನು ? ನಿಮ್ಮ ಮಗು ಬಹಳ ವಿಭಿನ್ನವಾಗಿದೆ. ಅವನ ಮುಖದಲ್ಲಿ ಎಷ್ಟು ತೇಜವಿದೆ !”ಎಂದು ಹೇಳಿದರು. ‘ಅಜ್ಜನವರು ಎತ್ತಿಕೊಳ್ಳಬೇಕು’ ; ಎಂದು ವಾಮನನು ಅವರೆಡೆಗೆ ನೋಡಿ ಮುಂದೆ ಬಗ್ಗುತ್ತಿದ್ದನು. ಆಗ ಅವರು ವಾಮನನನ್ನು ಎತ್ತಿಕೊಂಡರು ಮತ್ತು “ನಮ್ಮಿಬ್ಬರದು ಯಾವುದೋ ಜನ್ಮದ ನಂಟಿರಬೇಕು; ಆದ್ದರಿಂದ ಇವನು ನನ್ನ ಹತ್ತಿರ ಬಂದನು”, ಎಂದು ಹೇಳಿದರು. ಹೋಗುವಾಗ ಅವರು ವಾಮನನಿಗೆ ಮತ್ತು ನನಗೆ ಕೈಮುಗಿದು ನಮಸ್ಕಾರ ಮಾಡಿದರು. ಹೊರಡುವಾಗ ಅವರು ವಾಮನನಿಗೆ ‘ಮಗು, ನಾನು ಬರುತ್ತೇನೆ, ನನ್ನ ನೆನಪಿರಲಿ’ ಎಂದು ಹೇಳಿ ಹೋದರು. – ಸೌ. ಮಾನಸಿ ರಾಜಂದೇಕರ, ಪುಣೆ

ಈ ಲೇಖನದಲ್ಲಿ ಪ್ರಕಟಿಸಲಾಗಿರುವ ಅನುಭೂತಿಗಳು ಭಾವ ಇರುವಲ್ಲಿ ದೇವರು ಎನ್ನುವ ವಚನದಂತೆ ಸಾಧಕರ ವೈಯಕ್ತಿಕ ಅನುಭೂತಿಗಳಾಗಿವೆ. ಅವುಗಳು ಎಲ್ಲರಿಗೂ ಬರುವವು ಎಂದೇನಿಲ್ಲ – ಸಂಪಾದಕರು.