ಸಾಮರ್ಥ್ಯಶಾಲಿ ಭಾರತೀಯ ಸಂಸ್ಕೃತಿ !

ಸೀರೆ ಎಂದಾಕ್ಷಣ ನಮ್ಮ ಕಣ್ಣೆದುರು ಸುಸಂಸ್ಕೃತ ಭಾರತೀಯ ಸ್ತ್ರೀ ಬರುತ್ತಾಳೆ ! `ಸೀರೆಯಿಂದ ಭಾರತೀಯ ಸ್ತ್ರೀಯ ಶ್ರೇಷ್ಠ ಕುಲದ ಸೌಂದರ್ಯ ನಿಜವಾದ ಅರ್ಥದಲ್ಲಿ ಅರಳುತ್ತದೆ’, ಎಂದು ಹೇಳಲಾಗುತ್ತದೆ. ಪ್ರಸ್ತುತ ಕಾಲದಲ್ಲಿ ಭಾರತೀಯ ಮಹಿಳೆ ಸೀರೆಗಿಂತ ಶರ್ಟ್-ಪ್ಯಾಂಟ್, ಬಿಗಿಯಾದ ಉಡುಪನ್ನು ಧರಿಸುವುದಕ್ಕೆ ಆದ್ಯತೆ ನೀಡುತ್ತಿರುವುದರಿಂದ ಸಂಸ್ಕೃತಿಯ ದೃಷ್ಟಿಯಿಂದ ಸೀರೆ ವಿಷಯದಲ್ಲಿ ಒಂದು ರೀತಿ ಇಳಿಮುಖವಾಗುತ್ತಿದೆ. `ನಮ್ಮ ಫ್ಯಾಶನ್ ಮಂತ್ರ ಬದಲಾಗುತ್ತಿದೆ. ನಾವು ಸೀರೆಯ ಸೌಂದರ್ಯ ಆರಾಮದಾಯಕವಾಗಿರುವ ಉಡುಪುಗಳಿಗೆ ಮಹತ್ವನೀಡುತ್ತೇವೆ’ – ಇತಿ ಮಹಿಳಾವರ್ಗ !’ ಆದರೆ ಇದೇ ಮಹಿಳಾವರ್ಗವು ತಮ್ಮ ಮೇಲೆ ದೌರ್ಜನ್ಯ ನಡೆದರೆ ಪುರುಷರತ್ತ ಬೊಟ್ಟು ಮಾಡಿ `ನಮ್ಮ ಬಟ್ಟೆಗಳ ಕಡೆಗೆ ಏಕೆ ನೋಡುತ್ತೀರಿ ? ನಾವು ಯಾವುದೇ ಬಟ್ಟೆಯನ್ನು ಹಾಕಿಕೊಳ್ಳುತ್ತೇವೆ, ಅದು ನಮಗೆ ಸಂವಿಧಾನವು ನೀಡಿದ ಮೂಲಭೂತ ಅಧಿಕಾರವಾಗಿದೆ. ನಮ್ಮ ಉಡುಪಿನ ವಿಷಯದಲ್ಲಿ ಆಕ್ಷೇಪಿಸುವವರು ನೀವ್ಯಾರು ?’, ಎಂದು ದರ್ಪದಿಂದ ನುಡಿಯುತ್ತಾರೆ. `ನಾವು ಯಾವುದೇ ಬಟ್ಟೆ ಹಾಕಿಕೊಳ್ಳಲಿ, ಪುರುಷರ ದೃಷ್ಟಿಯೇ ಕೆಟ್ಟದ್ದಾಗಿದೆ. ಅದಕ್ಕೆ ನಾವೇನು ಮಾಡಬೇಕು ?’, ಎಂದು ಟೀಕಿಸುವ ಅಭಿಪ್ರಾಯವನ್ನೂ ಪ್ರದರ್ಶಿಸಲಾಗುತ್ತದೆ. ಒಂದು ಕಡೆಗೆ ಪುರುಷರ ಹೆಗಲಿಗೆ ಹೆಗಲು ಕೊಟ್ಟು ಸಮಾನತೆಯ ಭಾಷಣ ಮಾಡುವುದು ಮತ್ತು ಇನ್ನೊಂದೆಡೆ ಅವಿವೇಕದಿಂದ ಉತ್ತರಿಸುವುದು. ಇಂತಹ ಪರಿಸ್ಥಿತಿಯಲ್ಲಿ `ಮಹಿಳೆಯರು ಆಧುನಿಕ ಉಡುಪುಗಳನ್ನು ಧರಿಸುವಾಗ ಭಾರತೀಯ ಸಂಸ್ಕೃತಿಯಲ್ಲಿನ ಸಭ್ಯತೆಯನ್ನು ಕಾಪಾಡುವ ಉಡುಪಿನ ಕಡೆಗೆ ಮೂಕಸಮ್ಮತಿ ನೀಡಬೇಡಿರಿ’, ಎಂಬ ಸಲಹೆಯನ್ನು ಯಾರಾದರೂ ನೀಡಿದರೆ ಅದರಲ್ಲಿ ತಪ್ಪೇನು ? `ಸೀರೆಯನ್ನುಟ್ಟ ಭಾರತೀಯ ಸ್ತ್ರೀಯು ಎಲ್ಲರ ಮನಸ್ಸಿನ ಮೇಲೆ ರಾಜ್ಯ ಮಾಡುತ್ತಾಳೆ’, ಎಂದು ಹೇಳಬೇಕೆನಿಸುತ್ತದೆ.

ಸೀರೆಯನ್ನು ಬೆಂಬಲಿಸುವ ವಿದೇಶಿಯರು !

ಸೀರೆಯನ್ನು ತ್ಯಜಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಗೀಕರಿಸುವ ಭಾರತೀಯ ಸ್ತ್ರೀಯರಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ದಲ್ಲಿನ ಪಾಶ್ಚಾತ್ಯ ಸ್ತ್ರೀಯರೇ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲಿಯೂ ಸ್ತ್ರೀಯರ ದೌರ್ಜನ್ಯ ನಡೆಯುತ್ತಲೇ ಇದೆ; ಆದರೆ ಅವರು ದೌರ್ಜನ್ಯಗಳನ್ನು ವಿರೋಧಿಸುವ ಅವರ ಪದ್ಧತಿ ಭಾರತೀಯರಿಗಾಗಿ ಆದರ್ಶ ಮತ್ತು ವಿನೂತನವಾಗಿದೆ. ಅಲ್ಲಿಯ ಸಾವಿರಾರು ಸ್ತ್ರೀಯರು `ಸೀರೆ ಸ್ಟ್ರೋಲ್’ ಈ ಉತ್ಸವದ ಮಾಧ್ಯಮದಿಂದ ಸೀರೆಯನ್ನುಟ್ಟು ದೌರ್ಜನ್ಯಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಸ್ತ್ರೀಯರ ವಿಷಯದಲ್ಲಾಗುವ ಹಿಂಸೆ ಅಥವಾ ದೌರ್ಜನ್ಯಗಳನ್ನು ಬೆಳಕಿಗೆ ತರಲು ಪ್ರಸ್ತುತ ರಾಷ್ಟ್ರೀಯ ಸ್ತರದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಪ್ರಯತ್ನವಾಗುತ್ತಿದೆ. ಆದುದರಿಂದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾ ಫೊಸಾ ಇವರೂ `ಸೀರೆ ಸ್ಟ್ರೋಲ್’ ಈ ಚಳುವಳಿಗೆ ಬೆಂಬಲವನ್ನು ಸೂಚಿಸಿದರು. ಪ್ರಸ್ತುತ ಅಲ್ಲಿ ಸೀರೆಯನ್ನುಡುವ ಸ್ತ್ರೀಯರ ಸಂಖ್ಯೆ ಹಚ್ಚುತ್ತಲೇ ಇದೆ. `ಸೀರೆ’ ಇದು ನಮ್ಮಲ್ಲಿ ವಿವಿಧ ಸಮಾಜಗಳನ್ನು ಒಂದುಗೂಡಿಸುವ ಮತ್ತು ಜೋಡಿಸುವ ಕೊಂಡಿಯಾಗುತ್ತಿದೆ’, ಎಂದು ಇಲ್ಲಿನ ಮಹಿಳೆಯರ ಅಭಿಪ್ರಾಯವಾಗಿದೆ. ಒಳ್ಳೆಯದಾಯಿತು ಅಲ್ಲಿ ಇಲ್ಲಿಯಂತಹ ಪ್ರಗತಿಪರ ಮತ್ತು ಮಹಿಳಾಮುಕ್ತಿಯವರಿಲ್ಲ, ಇಲ್ಲದಿದ್ದರೆ ಅವರು `ಸೀರೆಯ ಸ್ವಾತಂತ್ರ‍್ಯಕ್ಕೆ ಮೂಗುದಾರ ಹಾಕುತ್ತಿದ್ದರು’, ಎಂದು ಹೇಳುತ್ತಾ ಸೀರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಮಿತಿಮೀರಿವೆ; ಆದರೆ ಈ ವಿರೋಧದಲ್ಲಿ ನಮ್ಮ ಕಡೆಗೆ ಸೀರೆಯನ್ನು ತೊಟ್ಟ ಸ್ತ್ರೀಯರ ಚಳುವಳಿಯನ್ನು ಏಕೆ ಹಮ್ಮಿಕೊಳ್ಳುವುದಿಲ್ಲ ? ತದ್ವಿರುದ್ಧ ಪಾಶ್ಚಾತ್ಯ ಉಡುಪುಗಳ ವೈಭವೀಕರಣ ಮಾಡುವ ಮಹಿಳೆಯರ ಗುಂಪಿನಲ್ಲಿ ಪ್ರಗತಿಪರರು, ಮಹಿಳಾಮುಕ್ತಿಯವರೂ ತಕ್ಷಣ ಸ್ಪಂದಿಸಿ ಅಭಿವ್ಯಕ್ತಿ ಸ್ವಾತಂತ್ರ‍್ಯದ ಮೇಲೆ ಆಕ್ರಮಣವಾದ ಬಗ್ಗೆ ಕೂಗಾಡಿ ತಕ್ಷಣ ಮುಕ್ತರಾಗುತ್ತಾರೆ. ಜೋಹಾನ್ಸಬರ್ಗ್ದಂತೆ ಅಮೇರಿಕಾದ ಓರ್ವಮಹಿಳೆಯ ಉದಾಹರಣೆಯು ಗಮನಸೆಳೆಯುವಂತಿದೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಮಧ್ಯಂತರದಲ್ಲಿ ತಮ್ಮ ೧೦೦ ದಿನಗಳ ಕಾಲಾವಧಿಯನ್ನು ಪೂರ್ಣಗೊಳಿಸಿದ್ದರು; ಆದರೆ ಅವರ ಮುಸಲ್ಮಾನ ವಿರೋಧಿ ಭೂಮಿಕೆಯ ಹಾಗೂ ಜಗತ್ತಿನಲ್ಲಿನ ಇತರ ಜನರನ್ನು ತುಚ್ಛವಾಗಿ ನೋಡುವುದು ಮತ್ತು ನಿರಾಶ್ರಿತರ ಬಗ್ಗೆ ಅವರ ಮನಸ್ಸಿನಲ್ಲಿರುವ ದ್ವೇಷ ಇವುಗಳ ವಿರುದ್ಧ ಅಲ್ಲಿಯ ಸ್ಟೆಸಿ ಜೆಕಾಬ್ ಎಂಬ ಮಹಿಳೆಯು ಅವರನ್ನು ವಿರೋಧಿಸಿದಳು; ಆದರೆ ಸೀರೆಯನ್ನುಟ್ಟು ಅವಳು ಈ ವಿರೋಧವನ್ನು ವ್ಯಕ್ತಪಡಿಸಿದ್ದಳು. ಈ ಬಗ್ಗೆ ಅವಳು ಅಭಿಮಾನದಿಂದ, “ವಿವಿಧ ಧರ್ಮದ ಜನರು ಒಗ್ಗಟ್ಟಿನಿಂದ ಬಾಳುತ್ತಿರುವ ಭಾರತವು ನನಗೆ ಬಹಳ ಇಷ್ಟವಾಯಿತು. ಭಾರತೀಯ ಮಹಿಳೆಯರ `ಸೀರೆ’ ಈ ಉಡುಪನ್ನು ನಾನು ಮಾರುಹೋದೆನು. ಆದ್ದರಿಂದ ನಾನು ಈಗ ಇಲ್ಲಿ ಸೀರೆಯನ್ನುಟ್ಟು ತಿರುಗಾಡುತ್ತೇನೆ. ಇಂದು ಅನೇಕ ಭಾರತೀಯರ ಮೇಲೆ ಇಲ್ಲಿ ಆಕ್ರಮಣಗಳಾಗುತ್ತಿವೆ. ಅವರಿಗೆ ಇಲ್ಲಿ ಸುರಕ್ಷಿತವೆನಿಸುವುದಿಲ್ಲ; ಆದರೆ ನಾನು ಭಾರತೀಯ ಉಡುಪನ್ನು ತೊಟ್ಟು ಅವರೊಂದಿಗೆ ತಿರುಗಾಡುತ್ತೇನೆ. ಅವರ ಬೆಂಬಲಕ್ಕೆ ನನ್ನಂತಹ ಅನೇಕ ಅಮೇರಿಕಾದ ನಾಗರಿಕರಿರುವರು. ಆದ್ದರಿಂದಲೇ ನಾನು ಸೀರೆಯನ್ನು ಟ್ರಂಪ್ ವಿರೋಧಿ ಶಸ್ತ್ರವನ್ನಾಗಿ ಬಳಸುತ್ತಿದ್ದೇನೆ”, ಎಂದು ಹೇಳಿದಳು. ಇದರಿಂದಲೇ ಭಾರತೀಯತೆಯ ಸಾಮಥ್ರ‍್ಯವು ಕಂಡುಬರುತ್ತದೆ

ಭಾರತೀಯ ಸಂಸ್ಕೃತಿಯ ಮಹತ್ವವನ್ನು ತಿಳಿಯಿರಿ !

ಜೋಹಾನ್ಸಬರ್ಗ್ ಮತ್ತು ಅಮೇರಿಕಾದಲ್ಲಿನ ಮಹಿಳೆಯರ ಉದಾಹರಣೆಯಿಂದ ಸೀರೆಗೆ ದೊರಕುವ ಸನ್ಮಾನ ಭಾರತೀಯರಿಗಾಗಿ ಖಂಡಿತ ಪ್ರೇರಣೆ ನೀಡುವಂತಹುದಾಗಿದೆ. `ದೌರ್ಜನ್ಯಗಳನ್ನು ವಿರೋಧಿಸಲು ತೊಟ್ಟ ಸೀರೆಯು ಅತ್ಯಾಚಾರವನ್ನು ಕಡಿಮೆ ಮಾಡಲು ಅಷ್ಟೇ ಪೂರಕ ಮತ್ತು ಪೋಷಕವೆಂದು ನಿರ್ಧರಿಸಲಾಗುತ್ತದೆ’, ಈ ಮರ್ಮವನ್ನು ಸಾವಿರಾರು ವಿದೇಶಿ ಮಹಿಳೆಯರು ಅರಿತಿದ್ದಾರೆ. ಸದ್ಯ ಭಾರತೀಯ ಮಹಿಳೆಯರಿಗೆ ಸೀರೆಯ ಸಾಮಥ್ರ‍್ಯ ತಿಳಿಯುವ ದಿನವೇ ಸುದಿನವಾಗುವುದು ಎಂದು ಹೇಳಬಹುದು ! ವಾಸ್ತವದಲ್ಲಿ ಪಾರಂಪರಿಕ ವಸ್ತ್ರವಾಗಿರುವ ಸೀರೆಯ ವಿಷಯದಲ್ಲಿ ನಮ್ಮಲ್ಲಿ ಅಭಿಮಾನವು ಏಕೆ ಅಂಕುರಿಸಿಲ್ಲ ? ಇದು ಸಹ ಚಿಂತೆಯ ವಿಷಯವಾಗಿದೆ. ಪಾರತಂತ್ರ‍್ಯವಾಗಿರುವ ಯಾವುದಾದರೊಂದು ರಾಷ್ಟ್ರ ಯಾವಾಗ ಸ್ವತಂತ್ರವಾಗುತ್ತದೋ, ಆಗ ಅಲ್ಲಿನ ನಾಗರಿಕರ ರಾಷ್ಟ್ರೀಯ ಅಸ್ಮಿತೆ, ಸ್ವಾಭಿಮಾನವು ಹೆಚ್ಚಾಗಿರುತ್ತದೆ; ಏಕೆಂದರೆ ಬಹಳಷ್ಟು ವರ್ಷ ಪಾರತಂತ್ರ‍್ಯದಲ್ಲಿದ್ದುದರಿಂದ ತಮ್ಮ ಸಂಸ್ಕೃತಿಯ ಮೇಲಾದ ಆಘಾತವನ್ನು ಆ ರಾಷ್ಟ್ರದ ನಾಗರಿಕರು ತಮ್ಮ ಕಣ್ಣುಗಳಿಂದ ನೋಡಿರುತ್ತಾರೆ. ಆದ್ದರಿಂದ ಯಾವಾಗ ದೇಶವು ಸ್ವತಂತ್ರವಾಗುತ್ತದೋ, ಆಗ ಆ ದೇಶದ ನಾಗರಿಕರು ತಮ್ಮ ಸಂಸ್ಕೃತಿಯನ್ನು ಕಾಪಾಡಲು ಕಷ್ಟವನ್ನು ಸಹಿಸುವುದು ಕಂಡುಬರುತ್ತದೆ. ಭಾರತದ ವಿಷಯದಲ್ಲಿ ನೋಡುವುದಾದರೆ ಮಾತ್ರ ಈ ರೀತಿ ಏನೂ ಆಗಲಿಲ್ಲ ಎನ್ನಬೇಕಾಗುವುದು; ಇದಕ್ಕೆ ಕಾರಣವೆಂದರೆ ಮೆಕಾಲೆ ಶಿಕ್ಷಣಪದ್ಧತಿ ! ಈ ಅಭ್ಯಾಸಕ್ರಮದಿಂದಾಗಿ ಭಾರತೀಯರ ನಮ್ಮ ರಾಷ್ಟ್ರದೊಂದಿಗೆ ಸಂಸ್ಕೃತಿ ರೂಪದಿಂದ ಜೋಡಿಸಲ್ಪಡುವ ಕೊಂಡಿಯು ಇಂದು ತುಂಡಾಗಿದೆ. ಅದನ್ನು ಪುನಃ ಜೋಡಿಸಲು ಶಿಕ್ಷಣಪದ್ಧತಿಯಲ್ಲಿ ಸುಧಾರಣೆ ಮಾಡುವುದು ಆವಶ್ಯಕವಾಗಿದೆ ! ಈ ಎಲ್ಲ ಅಂಶಗಳನ್ನು ನೋಡಿದರೆ ಭಾರತೀಯತ್ವದ ಸಾಮಥ್ರ‍್ಯವನ್ನು ಗುರುತಿಸಲು ಮತ್ತು ನೈತಿಕಮೌಲ್ಯಗಳು, ಪರಂಪರೆ, ಹಾಗೂ ಸಮಾಜಹಿತ ವನ್ನು ಕಾಪಾಡಲು ವಿದೇಶಿಯರ ಆರ‍್ಶವನ್ನು ಮತ್ತು ಭಾರತೀಯ ಸಂಸ್ಕೃತಿಯ ಆಧಾರ ಪಡೆದು ಪ್ರಯತ್ನಿಸಬೇಕಾಗಿದೆ. ಆ ರೀತಿ ಆದಾಗ ಮಾತ್ರ ಅದು ನಿಜವಾದ ರ‍್ಥದಲ್ಲಿ ಭಾರತೀಯತದ ಗೌರವ ಸಾಬೀತಾಗುವುದು.