ಸಾಧಕರಿಗೆ ಸಾಧನೆಯ ಬಗ್ಗೆ ಅಮೂಲ್ಯ ಮರ‍್ಗರ‍್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆಯವರು ಆಯಾ ಸಮಯದಲ್ಲಿ ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ

ಪರಾತ್ಪರ ಗುರು ಡಾ. ಆಠವಲೆ

ಭಾವದ ಮಹತ್ವ

`ಏಕ ಸಾಧೈ, ಸಬ್ ಸಾಧೈ |’, ಎಂದರೆ `ಒಂದು ಸಾಧಿಸಿದರೆ, ಎಲ್ಲವೂ ಸಾಧ್ಯವಾಗುತ್ತದೆ.’ ಈ ಉಕ್ತಿಗನುಸಾರ ಭಾವದ ಸ್ಥಿತಿಯನ್ನು ಸಾಧಿಸಿದರೆ ಎಲ್ಲವೂ ಸಾಧಿಸಲು ಆಗುತ್ತದೆ. `ಭಾವವಿದ್ದಲ್ಲಿ ದೇವರು !’ – (ಪರಾತ್ಪರ ಗುರು) ಡಾ. ಆಠವಲೆ

೧. ತೀವ್ರ ತೊಂದರೆಯಿರುವ ಓರ್ವ ಸಾಧಕನು ಕೇಳಿದ ಪ್ರಶ್ನೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಅವುಗಳಿಗೆ ನೀಡಿದ ಉತ್ತರ

೧ ಅ. ಸಾಧನೆ ಮಾಡುವಾಗ ಫಲದ ಅಪೇಕ್ಷೆ ಬೇಡ !

 ಓರ್ವ ಸಾಧಕ : ನಾನು ನಾಮಜಪಾದಿ ಉಪಾಯ ಮಾಡುತ್ತೇನೆ; ಆದರೆ ಕೆಟ್ಟ ಶಕ್ತಿಯು ಗೆಲ್ಲುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಯಾವಾಗ ನಾವು ಕೆಟ್ಟ ಶಕ್ತಿಗಳ ತೊಂದರೆಯನ್ನು ಎದುರಿಸಲು ಕಡಿಮೆ ಬೀಳುವೆವೋ, ಆಗ `ನಮ್ಮ ಸಾಧನೆ ಎಷ್ಟಿದೆ ಮತ್ತು ಯಾವ ಪಾತಾಳದ ಕೆಟ್ಟ ಶಕ್ತಿಯಾಗಿದೆ ?’, ಎಂಬುದನ್ನು ಗಮನಿಸಬೇಕು. ಸಾಧನೆ ಮಾಡುವುದು ನಮ್ಮ  ಕರ್ತವ್ಯವಾಗಿದೆ. ಫಲದ ಅಪೇಕ್ಷೆ ಇಟ್ಟುಕೊಳ್ಳುವುದು ಬೇಡ.

೧ ಆ. ತೀವ್ರ ತೊಂದರೆಯಿರುವ ಸಾಧಕನು ತನ್ನ ಸಾಧನೆಯನ್ನು ಹೆಚ್ಚಿಸಲು ಪ್ರಾಧಾನ್ಯತೆ ನೀಡಬೇಕು !

ಓರ್ವ ಸಾಧಕ : ಪ್ರಾರ್ಥನೆ ಮಾಡುವಾಗ ನಾನು `ಎಲ್ಲರ ರಕ್ಷಣೆಯಾಗಲಿ’ ಎಂದು ಹೇಳಿದರೆ, ನನ್ನ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣ ಆಗುವುದೇ ?

ಪರಾತ್ಪರ ಗುರು ಡಾ. ಆಠವಲೆ : ಸಮಷ್ಟಿಗಿಂತ ತನ್ನ ಸಾಧನೆಯ ಬಗ್ಗೆ ವಿಚಾರ ಮಾಡಬೇಕು. ನಿರ್ಗತಿಕನು ಇನ್ನೊಬ್ಬರಿಗೆ ಹಣ ನೀಡಿ ಸಹಾಯ ಮಾಡಲು ಆಗುವುದಿಲ್ಲ. ಅದೇ ರೀತಿ ತೀವ್ರ ತೊಂದರೆಯಿರುವ ಸಾಧಕನು ತನ್ನ ಸಾಧನೆಯನ್ನು ಹೆಚ್ಚಿಸಲು ಪ್ರಾಧಾನ್ಯತೆ ನೀಡಬೇಕು.

೧ ಇ. ಕಾಲಮಹಾತ್ಮೆಗನುಸಾರ ಕೆಟ್ಟ ಶಕ್ತಿಗಳು ಸೋಲಲಿವೆ !

ಓರ್ವ ಸಾಧಕ : ಆಧ್ಯಾತ್ಮಿಕ ತೊಂದರೆಗಳೊಂದಿಗೆ ನನ್ನ ಮಾನಸಿಕ ತೊಂದರೆಯೂ ಹೆಚ್ಚಾಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ : ಈಗ ಏಳನೇ ಪಾತಾಳದಲ್ಲಿನ ಕೆಟ್ಟ ಶಕ್ತಿಗಳು ಸೋಲತೊಡಗಿವೆ. ಆದ್ದರಿಂದ ಅವುಗಳ ಶಕ್ತಿ ಹೆಚ್ಚಾಗಿದೆ. ಕಾಲಮಹಾತ್ಮೆಗನುಸಾರ ಎಲ್ಲವೂ ಆಗುವುದು. ತಾಳಿರಿ ಮತ್ತು ನೋಡಿರಿ ! ರಾತ್ರಿಯಿಡಿ `ಸೂರ್ಯನು ಯಾವಾಗ ಉದಯಿಸುವನು ?’, ಎಂದು ದಾರಿ ನೋಡುತ್ತಾ ಕೂಡುವುದರಿಂದ ಏನಾಗುವುದು ? ಸೂರ್ಯನು ಉದಯಿಸುವವನೇ ಇದ್ದಾನೆ.

೧ ಈ. ತೀವ್ರ ತೊಂದರೆಯಿರುವ ಸಾಧಕರು ಹೆಚ್ಚೆಚ್ಚು ನಾಮಜಪಾದಿ ಉಪಾಯ ಮಾಡುವುದು ಆವಶ್ಯಕ !

ಓರ್ವ ಸಾಧಕ : ನಾನು ಎಷ್ಟು ಗಂಟೆ ಉಪಾಯ ಮಾಡಲಿ ?

ಪರಾತ್ಪರ ಗುರು ಡಾ. ಆಠವಲೆ : ಯಾರ ತೊಂದರೆಯ ತೀವ್ರತೆ ಹೆಚ್ಚಿದೆ, ಅವರು ಪೂರ್ಣವೇಳೆ ಉಪಾಯ ಮಾಡಬೇಕು. ಉಪಾಯವನ್ನು ಸತತವಾಗಿ ಮಾಡಲು ಸಾಧ್ಯವಾಗದಿದ್ದರೆ, ೧ – ೨ ಗಂಟೆಗಳ ನಂತರ ಸ್ವಲ್ಪ ಸೇವೆ, ಪುನಃ ಉಪಾಯ ಹೀಗೆ ಮಾಡುತ್ತಿರಬೇಕು.

೧ ಉ. ಸಾಧನೆಯಲ್ಲಿ ಯಾವಾಗಲೂ ರ‍್ತಮಾನದ ವಿಚಾರ ಮಾಡಬೇಕು !

ಓರ್ವ ಸಾಧಕ : ೫೨ ವರ್ಷಗಳ ಸಾಧನೆಯ ನಂತರ ಮೋಕ್ಷಗುರು ಭೇಟಿಯಾಗುತ್ತಾರೆ, ಎಂದು ನಾನು ಕೇಳಿದ್ದೆನು. `ನನ್ನ ಜನ್ಮವು ವ್ಯರ್ಥವಾಗುವುದು’, ಎಂದು ನನಗೆ ಭಯವಾಗುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಸಾಧನೆಯಲ್ಲಿ ಸತತ ವರ್ತಮಾನದ ವಿಚಾರ ಮಾಡಬೇಕು. ಭೂತ ಮತ್ತು ಭವಿಷ್ಯಕಾಲಗಳ ವಿಚಾರ ಮಾಡಬಾರದು. ತೊಂದರೆ ಹೆಚ್ಚಾದ ಕೂಡಲೇ ಉಪಾಯವನ್ನು ಕೇಳಬೇಕು.

೨. ಓರ್ವ ಸಾಧಕಿಯು ಕೇಳಿದ ಪ್ರಶ್ನೆ ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಅವುಗಳಿಗೆ ನೀಡಿದ ಉತ್ತರ

೨ ಅ. ಸಾಧನೆ ಹೆಚ್ಚಾದ ಹಾಗೆ ಮನಸ್ಸಿನ ನರ‍್ವಿಚಾರ ಸ್ಥಿತಿ ತನ್ನಿಂದ ತಾನೆ ಸಾಧ್ಯವಾಗುತ್ತದೆ !

ಓರ್ವ ಸಾಧಕಿ : ಓರ್ವ ಸಂತರು ನನಗೆ `ನಿರ್ವಿಚಾರ ಸ್ಥಿತಿಯಲ್ಲಿರು’, ಎಂದು ಹೇಳಿದರು. ಅಂದರೆ ಹೇಗೆ ಇರುವುದು ?

ಪರಾತ್ಪರ ಗುರು ಡಾ. ಆಠವಲೆ : `ನಿರ್ವಿಚಾರ ಸ್ಥಿತಿಯಲ್ಲಿರುವುದು’, ಇದು ಧ್ಯೇಯವಾಗಿದೆ. ಶೇ. ೭೦, ಶೇ. ೮೦ ಮತ್ತು ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ `ಸಗುಣ-ನರ‍್ಗುಣಕ್ಕೆ ಭೇದವಿಲ್ಲ’, ಎಂಬ ಸ್ಥಿತಿ ಇರುತ್ತದೆ. ಆ ಮುಂದಿನ ವಿಚಾರವನ್ನು ಈಗ ಮಾಡುವುದು ಬೇಡ. ಸಾಧನೆ ಹೆಚ್ಚಾದ ಹಾಗೆ, ಅದು ಮುಂದೆ ತನ್ನಿಂದತಾನೆ ಸಾಧ್ಯವಾಗುತ್ತದೆ. ಅದಕ್ಕಾಗಿ ಬೇರೆ ಪ್ರಯತ್ನ ಮಾಡಬೇಕಾಗುವುದಿಲ್ಲ.

೨ ಆ. ಸಾಧನೆ ಹೆಚ್ಚಾದರೆ, ಅಪೇಕ್ಷೆ ಕಡಿಮೆಯಾಗುವುದು !

ಓರ್ವ ಸಾಧಕಿ : ದೇವರು ಎಷ್ಟೆಲ್ಲ ಕೊಡುತ್ತಾನೆ, ಆದರೂ ನನ್ನ ಅಪೇಕ್ಷೆ ಕಡಿಮೆಯಾಗುವುದೇ ಇಲ್ಲ.

ಪರಾತ್ಪರ ಗುರು ಡಾ. ಆಠವಲೆ : ಅಂದರೆ ಸಾಧನೆ ಕಡಿಮೆ ಬೀಳುತ್ತದೆ. ಸಾಧನೆ ಹೆಚ್ಚಾದರೆ, ಅಪೇಕ್ಷೆ ಕಡಿಮೆಯಾಗಲಿಕ್ಕೇ ಇದೆ.

೨ ಇ. ಸ್ವೇಚ್ಛೆ ಬೇಡ, ಆದರೆ ಪರೇಚ್ಛೆ ಮತ್ತು ಈಶ್ವರೇಚ್ಚೆ ಮಹತ್ವದ್ದು !

ಓರ್ವ ಸಾಧಕಿ : ನನ್ನ ಆಧ್ಯಾತ್ಮಿಕ ಮಟ್ಟ ಯಾವಾಗ ಹೆಚ್ಚಾಗುವುದು ?

ಪರಾತ್ಪರ ಗುರು ಡಾ. ಆಠವಲೆ : ಫಲದ ಅಪೇಕ್ಷೆ ಬೇಡ. ನಾವು ಕರ್ಮ ಮಾಡುತ್ತಿರಬೇಕು. ಮಟ್ಟವು ಸ್ವೇಚ್ಛೆಯಾಯಿತು. ಅದು ಬೇಡ, ಆದರೆ ಪರೇಚ್ಛೆ ಮತ್ತು ಈಶ್ವರೇಚ್ಛೆ ಮಹತ್ವದ್ದು ! `ನಿರಪೇಕ್ಷ ಸಾಧನೆ ಮಹತ್ವದ್ದಾಗಿದೆ’, ಇದನ್ನೇ ಮನಸ್ಸಿನ ಮೇಲೆ ಬಿಂಬಿಸಬೇಕು. ಬುದ್ಧಿಯಿಂದ ವಿಚಾರ ಮಾಡುವುದು ಬೇಡ. ಯಾವ ಮಾರ್ಗದರ್ಶನ ಸಿಗುವುದೋ, ಅದನ್ನು ಕೃತಿಯಲ್ಲಿ ತರಬೇಕು. ಮನಸ್ಸಿನಲ್ಲಿ ಯಾವ ವಿಚಾರ ಅಥವಾ ಪ್ರಶ್ನೆ ಇದೆಯೋ, ಅದು ಸಹ ಸ್ವೇಚ್ಛೆಯಾಗಿದೆ. ಪ್ರಶ್ನೆ ಬೇಡ. ಕೇವಲ ಸಾಧನೆ ಮಾಡಬೇಕು. ಕೇವಲ ನಾಮಜಪ ಮತ್ತು ಸ್ವಯಂಸೂಚನೆಗಳ ಸತ್ರ ಮಾಡು. ಈಗ ಬುದ್ಧಿಗೆ ಏನು ತಿಳಿಯಿತೋ, ಅದನ್ನು ಮನಸ್ಸಿನ ಮೇಲೆ ಬಿಂಬಿಸಲು ಸತ್ರ ಮಾಡು.

೨ ಈ. ಮನಸ್ಸಿನ ಸ್ಥಿತಿಯ ಬಗ್ಗೆ

ಓರ್ವ ಸಾಧಕಿ : `ವರ್ತಮಾನದಲ್ಲಿರಬೇಕು’, ಹೀಗಿದ್ದರೂ, ನಾನು ವಿಚಾರಗಳಲ್ಲಿ ಸಿಲುಕುತ್ತಾ ಹೋಗುತ್ತೇನೆ.

ಪರಾತ್ಪರ ಗುರು ಡಾ. ಆಠವಲೆ : ಸಾಧನೆಯಿಂದ ಮನೋಲಯವಾದಾಗ, ಹಾಗಾಗುವುದಿಲ್ಲ.

ಓರ್ವ ಸಾಧಕಿ : ನನ್ನ ಮನಸ್ಸಿಗೆ ಕೆಟ್ಟದೆನಿಸುತ್ತದೆ.

ಪರಾತ್ಪರ ಗುರು ಡಾ. ಆಠವಲೆ : ಅದಕ್ಕಾಗಿ `ಅ ೨’ ರಂತೆ ಸ್ವಯಂಸೂಚನೆ ಕೊಡು.

೨ ಉ. ಸಾಧನೆಯೆಂದು ಇತರರ ತಪ್ಪು ಯಾವಾಗ ಹೇಳಬೇಕು ?

ಓರ್ವ ಸಾಧಕಿ : ಸಾಕ್ಷಿಭಾವದಿಂದ ನೋಡಬೇಕು, ಎಂದರೆ ಇತರರ ದೋಷ ಕಂಡರೂ ಸುಮ್ಮನಿರಬೇಕೇನು ?

ಪರಾತ್ಪರ ಗುರು ಡಾ. ಆಠವಲೆ : ಇತರರ ದೋಷದಿಂದಾಗಿ ನಮಗೆ ವಿಕಲ್ಪ ಅಥವಾ ಸಿಟ್ಟು ಬರುತ್ತಿದ್ದರೆ, (ತನ್ನ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತಿದ್ದರೆ) ಸಾಕ್ಷಿಭಾವದಿಂದ ವರ್ತಿಸಬೇಕು ಮತ್ತು ತಮ್ಮ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತಿದ್ದರೆ, ಸಾಕ್ಷಿಭಾವಬೇಡ.

೨ ಊ. ದೇಹತ್ಯಾಗದ ನಂತರ ಸಂತರು ನೇರ ಮೇಲಿನ ಲೋಕಕ್ಕೆ ಹೋಗುವುದು ಮತ್ತು ಅವರ ಆತ್ಮಾ ದೇವರೊಂದಿಗೆ ಏಕರೂಪವಾಗುತ್ತಿರುವುದು

ಓರ್ವ ಸಾಧಕಿ : ಓರ್ವ ಸಂತರು ದೇಹತ್ಯಾಗ ಮಾಡಿದ ನಂತರ ಅದಕ್ಕೆ ಸಂಬಂಧಿಸಿದ ಒಂದು ಸೂಕ್ಷ್ಮ ಪರೀಕ್ಷಣೆಯಲ್ಲಿ, ಸಂತರು ಯಮರಾಜನಿಗೆ, `ನೀನು ನಿನ್ನ ಕರ‍್ಯ ಮಾಡು. ನಾನು ಆತ್ಮಾ ಅಮರನಿದ್ದೇನೆ”, ಎಂದು ಹೇಳಿದರು ಎಂದು ಕೊಡಲಾಗಿತ್ತು. ಹಾಗಾದರೆ ಯಮರಾಜನು ಏನು ಒಯ್ಯುತ್ತಾನೆ ?

ಪರಾತ್ಪರ ಗುರು ಡಾ. ಆಠವಲೆ : ಸಂತರಿಗೆ ಯಮರಾಜನು ಅನ್ವಯಿಸುವುದಿಲ್ಲ. ಸಂತರು ನೇರ ಮೇಲಿನ ಲೋಕಕ್ಕೆ ತಾವಾಗಿಯೇ ಹೋಗುವರು. ಸಂತರ ಆತ್ಮವು ದೇವರೊಂದಿಗೆ ಏಕರೂಪವಾಗುತ್ತದೆ. ಸಾಮಾನ್ಯ ಮನುಷ್ಯನಿಗೆ ಲಿಂಗದೇಹವಿರುತ್ತದೆ. ಯಮರಾಜನು ಅದನ್ನು ತೆಗೆದುಕೊಂಡು ಹೋಗುತ್ತಾನೆ.

೨ ಎ. ಬುದ್ಧಿಯಿಂದ ವಿಚಾರ ಬೇಡ; ಕೇವಲ `ಸಾಧನೆಯಾಗುತ್ತಿದೆಯಲ್ಲ ?’, ಎಂಬ ಕಡೆಗೆ ಲಕ್ಷ ಕೇಂದ್ರೀಕರಿಸಬೇಕು !

ಓರ್ವ ಸಾಧಕಿ : ನೀವು ಈಗ ನಿರ್ಗುಣದಲ್ಲಿರುವಿರಿ ಎಂದಾದರೆ ನನಗೆ ಚಿಂತೆಯಾಯಿತು.

ಪರಾತ್ಪರ ಗುರು ಡಾ. ಆಠವಲೆ : ಈಶ್ವರ ಎಲ್ಲ ಕಡೆಗೆ ಇರುವನು. ಅವನು ಇಲ್ಲದಂತಹ ಒಂದು ಕ್ಷಣವೂ ಇಲ್ಲ ಮತ್ತು ಅಂತಹ ಒಂದು ಜಾಗವೂ ಇಲ್ಲ. ಬುದ್ಧಿಯಿಂದ ವಿಚಾರ ಮಾಡುವುದು ಬೇಡ. ಕೇವಲ `ಸಾಧನೆಯಾಗುತ್ತಿದೆಯಲ್ಲ ?’, ಎಂಬ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಬಹುತೇಕ ಯಾವುದೇ ಪ್ರಶ್ನೆಯು ಸಾಧನೆಗಾಗಿ ಉಪಯೋಗವಾಗುವುದಿಲ್ಲ. ಆದ್ದರಿಂದ ಕೇವಲ ಪ್ರಶ್ನೆಗಾಗಿ ಪ್ರಶ್ನೆ ಕೇಳುವುದು ಬೇಡ. (ಪರಾತ್ಪರ ಗುರು) ಡಾ. ಆಠವಲೆ