ಕಾಂಗ್ರೆಸ್ಸಿಗರು ಕ್ರಾಂತಿವೀರರನ್ನು ಎಂದಾದರೂ ಸೆರೆಮನೆಗೆ ಹೋಗಿ ಭೇಟಿಯಾಗಿದ್ದರೇ ?

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

1. ಕಾಂಗ್ರೆಸ್ಸಿಗರು ಕ್ರಾಂತಿವೀರರನ್ನು ಎಂದಾದರೂ ಸೆರೆಮನೆಗೆ ಹೋಗಿ ಭೇಟಿಯಾಗಿದ್ದರೇ ?

305 ಕೋಟಿ ರೂಪಾಯಿಗಳ ಐ.ಎನ್.ಎಕ್ಸ್. ಮೀಡಿಯಾ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧನದಲ್ಲಿರುವ ಕಾಂಗ್ರೆಸ್‍ನ ಮುಖಂಡ ಪಿ. ಚಿದಂಬರಮ್ ಇವರನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಹ ಇವರು ತಿಹಾರ ಸೆರೆಮನೆಗೆ ಹೋಗಿ ಭೇಟಿಯಾದರು.

2. ಚರ್ಚ್ ಮತ್ತು ಕ್ರೈಸ್ತ ಸಂಘಟನೆಗಳು ಈಗೇಕೆ ಸುಮ್ಮನಿವೆ ?

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಜಾರ್ಜ ಕುರಿಯನ್ ಇವರು ಕೇಂದ್ರ ಗೃಹಸಚಿವಾಲಯಕ್ಕೆ ಬರೆದ ಪತ್ರದಲ್ಲಿ 2005 ರಿಂದ 2012 ಈ ಅವಧಿಯಲ್ಲಿ 4 ಸಾವಿರದ ಕ್ರೈಸ್ತ ಯುವತಿಯರು `ಲವ್ ಜಿಹಾದ್’ಗೆ ಬಲಿಯಾದರು. ಅವರನ್ನು ಭಯೋತ್ಪಾದನೆಗಾಗಿ ಬಳಸಲಾಯಿತು, ಎಂದು ಹೇಳಿದ್ದಾರೆ.

3. ಇದು ಭಾರತದ `ಸರ್ವಧರ್ಮಸಮಭಾವ’ವಾಗಿದೆ !

ಝಾರಖಂಡದ ಜಮಶೇದಪೂರದ ಬಿಷ್ಟುಪೂರದ ಬೆಲ್ಡೀಹ ಚರ್ಚ ಶಾಲೆಯಲ್ಲಿ 12 ನೇ ತರಗತಿಯ ವಿದ್ಯಾರ್ಥಿಗಳು ಆಟವಾಡುವಾಗ `ಜೈ ಶ್ರೀರಾಮ’ನ ಘೋಷಣೆ ಕೂಗಿದ್ದರಿಂದ ಶಾಲೆಯು 17 ವಿದ್ಯಾರ್ಥಿಗಳಿಗೆ 5 ದಿನಗಳ ಸಲುವಾಗಿ ಅಮಾನತ್ತುಗೊಳಿಸಿತು.

4. ಹಿಂದೂ ರಾಷ್ಟ್ರಬಿಟ್ಟರೆ ಪರ್ಯಾಯವಿಲ್ಲ ಎಂಬ ಸತ್ಯವನ್ನು ತಿಳಿಯಿರಿ !

ಮಂಗಳೂರಿನ ಒಂದು ಮಾಲ್‍ನಲ್ಲಿ ಮಂಜುನಾಥ ಎಂಬ ಹಿಂದೂ ಯುವಕನು ಹಿಂದೂ ರಾಷ್ಟ್ರವನ್ನು ತರುವ ಕುರಿತು ಹೇಳಿಕೆ ನೀಡಿದನೆಂದು ಅವರನ್ನು ಮೊಯಿನುದ್ದೀನ ಸವಫಾನ್, ಅಬ್ದುಲ್ ರಹೀಮ ಮತ್ತು ಇನ್ನೊಬ್ಬ ಮತಾಂಧ ಇವರೆಲ್ಲರು ಥಳಿಸಿದರು.

5. ಭಾರತದ ಪಾಕ್‍ ಪ್ರೇಮಿಗಳು ಈ ಬಗ್ಗೆ ಏಕೆ ಮಾತನಾಡುವುದಿಲ್ಲ ?

`ಚೀನಾದಲ್ಲಿ ಮುಸಲ್ಮಾನರ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಅವರನ್ನು ಗೃಹ ಬಂಧನದಲ್ಲಿಡಲಾಗಿದೆ; ಆದರೆ ಆ ಕುರಿತು ಪಾಕಿಸ್ತಾನಕ್ಕೆ ಅದರ ಬಗ್ಗೆ ಯಾವುದೇ ಚಿಂತೆ ಇಲ್ಲ’, ಎಂಬುದಾಗಿ ಅಮೇರಿಕವು ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಪಾಕಿಸ್ತಾನಕ್ಕೆ ಕಿವಿಹಿಂಡಿದೆ.

6. ಬಕ್ರೀದ್ ಕಾಲದಲ್ಲಿ ನೀಡುವ ಪಶುಬಲಿ ಬಗ್ಗೆ ಏನು ?

ತ್ರಿಪುರಾ ಉಚ್ಚ ನ್ಯಾಯಾಲಯವು ರಾಜ್ಯದಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಕೊಡಲಾಗುವ ಪಶುಬಲಿಯನ್ನು ನಿಷೇಧಿಸಿದೆ. ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲಿನ ಆಲಿಕೆಯ ಸಮಯದಲ್ಲಿ ವಿಭಾಗೀಯಪೀಠವು ಈ ಆದೇಶ ನೀಡಿತು.

7. ಸರಕಾರ ಇಂತಹ ಧಾರಾವಾಹಿಗಳನ್ನು ನಿಷೇಧಿಸಬೇಕು !

ರಾ.ಸ್ವ. ಸಂಘವು `ಪಾಂಚಜನ್ಯ’ ಮಾಸಿಕದಲ್ಲಿ `ಅಮೇಜಾನ್ ಪ್ರೈಮ್ ವಿಡಿಯೋ’ದಲ್ಲಿ ಭಿತ್ತರವಾದ `ದ ಫ್ಯಾಮಿಲಿ ಮ್ಯಾನ್’ ಈ ವೆಬ್‍ಸಿರೀಜನ್ನು ವಿರೋಧಿಸುತ್ತಾ `ಈ ಧಾರಾವಾಹಿಯನ್ನು ದೇಶದ್ರೋಹಿ ಪ್ರವೃತ್ತಿಯಿಂದ ನಿರ್ಮಾಣ ಮಾಡಲಾಗಿದ್ದು ಇದರಲ್ಲಿ ಹಿಂದೂಗಳ ಕುರಿತು ಆಕ್ಷೇಪಾರ್ಹ ಮಾಹಿತಿಯನ್ನು ಬಿತ್ತರಿಸಲಾಗುತ್ತಿದೆ’, ಎಂದು ಹೇಳಿದೆ.