ವಿಜಯದಶಮಿಯ ದಿನದಂದು ಮಾಡುವಂತಹ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

ಶ್ರೀ ಸರಸ್ವತಿಪೂಜೆ ಮತ್ತು ಶಸ್ತ್ರಪೂಜೆ

ದಸರಾದಂದು ಸರಸ್ವತಿ ಪೂಜೆಯಿಂದಾಗುವ ಲಾಭ

ದಸರಕ್ಕೆ ಸರಸ್ವತಿತತ್ತ್ವದ ಕ್ರಿಯಾತ್ಮಕ ಪೂಜೆಯಿಂದ ಜೀವಕ್ಕೆ ವ್ಯಕ್ತ ಭಾವದಿಂದ ಅವ್ಯಕ್ತ ಭಾವದಲ್ಲಿ ರೂಪಾಂತರವಾಗಿ ಅದರ ಸ್ಥಿರತೆಯಲ್ಲಿ ಪ್ರವೇಶವಾಗಲು ಸಹಾಯವಾಗುತ್ತದೆ.

ಆಶ್ವಯುಜ ಶುಕ್ಲ ಪಕ್ಷ ದಶಮಿ (೮.೧೦.೨೦೧೯) ಈ ದಿನದಂದು ಬರುವ ದಸರ ಹಬ್ಬದ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿರುವ ಮೊದಲ ಒಂಬತ್ತು ದಿನಗಳ ನವರಾತ್ರಿಯಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಕೂಡಿರುತ್ತವೆ ಮತ್ತು ನಿಯಂತ್ರಣಕ್ಕೊಳ ಪಟ್ಟಿರುತ್ತವೆ. ಅಂದರೆ ಹತ್ತೂ ದಿಕ್ಕುಗಳಲ್ಲಿನ ದಿಕ್ಪಾಲಕರು, ಗಣಗಳು ಮುಂತಾದವರ ಮೇಲೆ ನಿಯಂತ್ರಣ ವಿರುತ್ತದೆ. ಹತ್ತೂ ದಿಕ್ಕುಗಳ ಮೇಲೆ ವಿಜಯವು ದೊರಕಿರುತ್ತದೆ.

ಶಮಿ ಶಮಯತೇ ಪಾಪಂ ಶಮಿ ಲೋಹಿತಕಂಟಕಾ | ಧಾರಿಣ್ಯರ್ಜುನಬಾಣಾನಾಂ ರಾಮಸ್ಯ ಪ್ರಿಯ ವಾದಿನಿ || ಕರಿಷ್ಯಮಾಣಯಾತ್ರಾಯಾಂ ಯಥಾಕಾಲ ಸುಖಂ ಮಯಾ | ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತೇ ||

ಅರ್ಥ : ಶಮಿ ಪಾಪಶಮನ ಮಾಡುತ್ತದೆ. ಶಮಿಯ ಮುಳ್ಳುಗಳು ನಸು ಗೆಂಪಾಗಿರುತ್ತವೆ. ಶಮಿ ರಾಮನಿಗೆ ಪ್ರಿಯವಾದುದನ್ನು ನುಡಿಯುವಂತ ಹದ್ದು, ಅರ್ಜುನನ ಬಾಣ ಧಾರಣೆ ಮಾಡುವಂತಹದ್ದಾಗಿದೆ. ಎಲೈ ಶಮಿಯೇ, ರಾಮನು ನಿನ್ನನ್ನು ಪೂಜಿಸಿದ್ದನು. ನಾನು ಎಂದಿನಂತೆ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ನನ್ನ ಈ ಯಾತ್ರೆ ನಿರ್ವಿಘ್ನ, ಸುಖಕರ ಮಾಡು.

ಶಮಿ ಪೂಜೆ

ಸೀಮೋಲ್ಲಂಘನ, ಶಮಿ ಪೂಜೆ, ಅಪರಾಜಿತಾ ಪೂಜೆ, ಶಸ್ತ್ರಪೂಜೆ

೧. ಸೀಮೋಲ್ಲಂಘನ : ಅಪರಾಹ್ನ ಕಾಲದಲ್ಲಿ (ಮಧ್ಯಾಹ್ನ, ೩ ನೆಯ ಪ್ರಹರದಲ್ಲಿ) ಊರಿನ ಗಡಿಯಾಚೆ ಈಶಾನ್ಯ ದಿಕ್ಕಿನ ಕಡೆಗೆ ಸೀಮೋಲ್ಲಂಘನ ಕ್ಕಾಗಿ ಹೋಗುತ್ತಾರೆ ಮತ್ತು ಶಮಿವೃಕ್ಷ ಅಥವಾ ಮಂದಾರದ ವೃಕ್ಷವಿರುವಲ್ಲಿ ನಿಲ್ಲುತ್ತಾರೆ.

೨. ಶಮಿಪತ್ರವು ತೇಜದ ಉತ್ತಮ ಸಂವರ್ಧಕ ವಾಗಿರುವುದರಿಂದ ಶಮಿಯ ಮರದ ಬಳಿ ಶ್ರೀ ದುರ್ಗಾದೇವಿಯ ಅಪರಾಜಿತಾ ರೂಪದ ಪೂಜೆಯನ್ನು ಮಾಡಲಾಗುತ್ತದೆ : ಶಮಿಯ ಮರದ ಬಳಿ ಶ್ರೀ ದುರ್ಗಾದೇವಿಯ ಅಪರಾಜಿತಾ ಈ ರೂಪದಲ್ಲಿ ಪೂಜೆಯನ್ನು ಮಾಡಲಾಗುತ್ತದೆ; ಕಾರಣ ಶಮಿಪತ್ರ ಇದು ತೇಜದ ಉತ್ತಮ ಸಂವರ್ಧಕವಾಗಿರುವುದರಿಂದ ಅಪರಾಜಿತಾ ಈ ರೂಪದ ಕಾರಂಜಿಯಂತೆ ಪ್ರಕಟವಾದ ಶಕ್ತಿ ದೀರ್ಘಕಾಲ ಸಂಗ್ರಹಿಸಿ ಇಡುವ ಕಾರ್ಯವನ್ನು ಶಮಿಪತ್ರವು ಮಾಡುತ್ತದೆ. ಆದುದರಿಂದ ಈ ಶಮಿಪತ್ರ ಮನೆಯಲ್ಲಿ ಇಟ್ಟು ಈ ಲಹರಿಯ ಲಾಭವನ್ನು ವರ್ಷಪೂರ್ತಿ ಪಡೆಯಲು ಜೀವಕ್ಕೆ ಸಾಧ್ಯವಾಗುತ್ತದೆ. – ಓರ್ವ ವಿದ್ವಾಂಸ (ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರು ‘ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯುತ್ತಾರೆ., ೨೮.೯.೨೦೦೫, ಸಾಯಂಕಾಲ ೬.೧೮ )

ಮಂದಾರವೃಕ್ಷದ ಪೂಜೆ : ಮಂದಾರವೃಕ್ಷದ ಪೂಜೆ ಮಾಡುವುದಿದ್ದಲ್ಲಿ ಮುಂದಿನ ಮಂತ್ರವನ್ನು ಪಠಿಸುತ್ತಾರೆ. ಅಶ್ಮಂತಕ ಮಹಾವೃಕ್ಷ ಮಹಾದೋಷ ನಿವಾರಣ ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್

ಅರ್ಥ : ಎಲೈ ಅಶ್ಮಂತಕ ಮಹಾವೃಕ್ಷವೇ, ನೀನು ಮಹಾದೋಷಗಳ ನಿವಾರಣಕಾರಿಯಾಗಿರುವೆ. ನನ್ನ ಮಿತ್ರರ ದರ್ಶನವನ್ನು ಮಾಡಿಸು ಮತ್ತು ನನ್ನ ಶತ್ರುಗಳನ್ನು ನಾಶ ಮಾಡು. ಅನಂತರ ಆ ವೃಕ್ಷದ ಬುಡದಲ್ಲಿ ಅಕ್ಕಿ, ಅಡಿಕೆ ಮತ್ತು ಬಂಗಾರದ (ಅಥವಾ ತಾಮ್ರದ) ನಾಣ್ಯಗಳನ್ನು ಇಡುತ್ತಾರೆ. ಬಳಿಕ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಅದರ ಬುಡದಲ್ಲಿನ ಸ್ವಲ್ಪ ಮಣ್ಣು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ. ಶಮಿ ಎಲೆಗಳನ್ನಲ್ಲದೇ ಮಂದಾರದ ಎಲೆಗಳನ್ನು ಬಂಗಾರವೆಂದು ದೇವರಿಗೆ ಅರ್ಪಿಸುತ್ತಾರೆ ಮತ್ತು ಆಪ್ತಮಿತ್ರರಿಗೆ ಕೊಡುತ್ತಾರೆ. ಈ ಬಂಗಾರವನ್ನು ಕಿರಿಯರು ಹಿರಿಯರಿಗೆ ಕೊಡಬೇಕು ಎನ್ನುವ ಸಂಕೇತವಿದೆ.

೩. ಅಪರಾಜಿತಾ ಪೂಜೆ : ಶಮಿಯ ಪೂಜೆಯನ್ನು ಮಾಡಿದ ಜಾಗದಲ್ಲಿಯೇ ನೆಲದ ಮೇಲೆ ಅಷ್ಟದಳಗಳನ್ನು ಬರೆದು ಅದರ ಮೇಲೆ ಅಪರಾಜಿತಾ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಮಾಡಿ ಪ್ರಾರ್ಥನೆಯನ್ನು ಮಾಡುತ್ತಾರೆ.

ಹಾರೇಣ ತು ವಿಚಿತ್ರೇಣ ಭಾಸ್ವತ್ಕನಕಮೇಖಲಾ| ಅಪರಾಜಿತಾ ಭದ್ರರತಾ ಕರೋತು ವಿಜಯಂ ಮಮ||

ಅರ್ಥ: ಕೊರಳಿನಲ್ಲಿ ಚಿತ್ರವಿಚಿತ್ರ ಮಾಲೆಯನ್ನು ಧರಿಸಿದ, ಸೊಂಟದಲ್ಲಿ ಹೊಳೆಯುವ ಸುವರ್ಣ ನಡುಪಟ್ಟಿಯಿರುವ ಮತ್ತು ಯಾವಾಗಲೂ ಭಕ್ತರ ಕಲ್ಯಾಣ ಕಾರ್ಯದಲ್ಲಿ ತತ್ಪರಳಾಗಿರುವ ಅಪರಾಜಿತಾ ದೇವಿಯು ನನ್ನನ್ನು ವಿಜಯಿಯನ್ನಾಗಿಸಲಿ. ಕೆಲವು ಕಡೆಗಳಲ್ಲಿ ಸೀಮೋಲ್ಲಂಘನಕ್ಕೆ ಹೊರಡುವ ಮೊದಲೇ ಅಪರಾಜಿತಾದೇವಿಯ ಪೂಜೆಯನ್ನು ಮಾಡುತ್ತಾರೆ.

೪. ಆಯುಧಪೂಜೆ (ಶಸ್ತ್ರಪೂಜೆ) : ಈ ದಿನ ರಾಜರು, ಸಾಮಂತರು, ಸರದಾರರು ತಮ್ಮ ತಮ್ಮ ಶಸ್ತ್ರಗಳನ್ನು ಸ್ವಚ್ಛಗೊಳಿಸಿ, ಸಾಲಾಗಿ ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತರು ಮತ್ತು ಕುಶಲ ಕರ್ಮಿಗಳು ತಮ್ಮತಮ್ಮ ಶಸ್ತ್ರಗಳ ಪೂಜೆಯನ್ನು ಮಾಡುತ್ತಾರೆ. ಕೆಲವರು ಈ ಪೂಜೆಯನ್ನು ನವಮಿಯಂದೂ ಮಾಡುತ್ತಾರೆ.

ರಾಜವಿಧಾನ : ‘ದಸರಾ ವಿಜಯದ ಹಬ್ಬವಾಗಿದ್ದರಿಂದ ಈ ದಿನ ರಾಜರಿಗೆ ವಿಶೇಷ ವಿಧಿ ಹೇಳಲಾಗಿದೆ. ಅಷ್ಟದಳ